
ಈಗಿನ ಫ್ಯಾಷನ್ ಜಗತ್ತಿನಲ್ಲಿ ಡೀಪ್ ನೆಕ್ ಡ್ರೆಸ್ ಸಾಮಾನ್ಯ. ಬೆನ್ನು ಅಗಲವಾಗಿ, ಸುಂದರವಾಗಿದ್ದರೆ ಆಕರ್ಷಣೆಯಾಗಿರುತ್ತದೆ. ಚೆಂದದ ಡ್ರೆಸ್ ಅಥವಾ ಡಿಸೈನ್ ಮಾಡಿದ ಬ್ಲೌಸ್ ಧರಿಸಿದಾಗ ಬೆನ್ನು ಎಲ್ಲರ ಗಮನ ಸೆಳೆಯುತ್ತದೆ. ಮುಖ, ಕೈ, ಕಾಲಿನ ಜೊತೆ ಮಹಿಳೆಯರು ಬೆನ್ನಿನ ಆರೈಕೆ ಮಾಡ್ಬೇಕಾಗುತ್ತದೆ.
ಅನೇಕರು ಇದು ಹಿಂದಿರುವ ಭಾಗ ಎನ್ನುವ ಕಾರಣಕ್ಕೆ ಅದನ್ನು ನಿರ್ಲಕ್ಷಿಸುತ್ತಾರೆ. ಶರೀರ (Body) ದ ಮುಂಭಾಗದ ಬಗ್ಗೆ ತೋರುವ ಕಾಳಜಿಯನ್ನು ಬೆನ್ನಿನ ಭಾಗಕ್ಕೆ ತೋರಿಸುವುದು ಕಡಿಮೆ. ಆದ್ದರಿಂದ ಬೆನ್ನು (Back) ಕಪ್ಪಾಗುವುದು ಸಹಜ. ಸುಡುವ ಬಿಸಿಲಿಗೆ ಮೈ ಒಡ್ಡುವುದರಿಂದ ಬೆನ್ನಿನ ಭಾಗ ಸಹಜವಾಗಿಯೇ ಕಪ್ಪಾಗುತ್ತದೆ. ಹೀಗೆ ಕಪ್ಪಾಗುವ ಬೆನ್ನನ್ನು ಸುಲಭವಾಗಿ ಬೆಳ್ಳಗೆ ಮಾಡಬಹುದು. ನಾವಿಂದು ಬೆನ್ನಿನ ಸೌಂದರ್ಯ (Beauty) ಹೇಗೆ ಕಾಪಾಡೋದು ಎಂಬುದನ್ನು ನಿಮಗೆ ಹೇಳ್ತೇವೆ.
FITNESS TIPS: ದಪ್ಪಗಿದ್ರೂ ಫಿಟ್ ಆಗಿದ್ದೀರಾ? ಸಮಾಜದ ಚಿಂತೆ ಯಾಕೇ ಬಿಟ್ಹಾಕಿ
ಬೆನ್ನಿನ ಹೊಳಪು ಹೆಚ್ಚಿಸುತ್ತೆ ಅಲೋವೆರಾ - ನಿಂಬೆ ಹಣ್ಣಿನ ಮಿಶ್ರಶ : ಎರಡು ನಿಂಬೆ ಹಣ್ಣಿನ ರಸವನ್ನು ತೆಗೆದು ಒಂದು ಪಾತ್ರೆಗೆ ಹಾಕಿ.ಈ ನಿಂಬೆ ಹಣ್ಣಿನ ರಸಕ್ಕೆ ಎರಡು ದೊಡ್ಡ ಚಮಚ ತಾಜಾ ಅಲೊವೆರಾ ಜೆಲ್ ಹಾಕಿ. ನಿಂಬು ಮತ್ತು ಅಲೊವೆರಾವನ್ನು ಸರಿಯಾಗಿ ಬೆರೆಸಿ ಬೆನ್ನಿಗೆ ಹಚ್ಚಿಕೊಳ್ಳಿ. 2 ನಿಮಿಷ ಈ ಮಿಶ್ರಣ ಹಾಕಿದ ಬೆನ್ನಿನ ಜಾಗಕ್ಕೆ ಚೆನ್ನಾಗಿ ಮಸಾಜ್ ಮಾಡಿ ನಂತರ ಲೂಫಾ ಸಹಾಯದಿಂದ ಸ್ಕ್ರಬ್ ಮಾಡಿ. ಕೊನೆಯಲ್ಲಿ ಸ್ವಲ್ಪ ಬಿಸಿನೀರಿನಿಂದ ಬೆನ್ನನ್ನು ತೊಳೆಯಿರಿ.
ಕಪ್ಪಾದ ಬೆನ್ನನ್ನು ಬೆಳ್ಳಗಾಗಿಸಲು ಕಡಲೆಹಿಟ್ಟು ಮತ್ತು ನಿಂಬೆರಸ : ಒಂದು ಪಾತ್ರೆಗೆ ಒಂದು ಚಮಚ ಕಡಲೆಹಿಟ್ಟನ್ನು ಹಾಕಿ ಅದಕ್ಕೆ ಒಂದು ನಿಂಬೆಹಣ್ಣಿನ ರಸವನ್ನು ಸೇರಿಸಬೇಕು. ಈ ಕಡಲೆಹಿಟ್ಟಿನ ಮಿಶ್ರಣಕ್ಕೆ ಒಂದು ಚಮಚ ಮೊಸರು ಮತ್ತು ಒಂದು ಚಮಚ ರೋಸ್ ವಾಟರ್ ಅನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಬೆನ್ನಿಗೆ ಹಚ್ಚಿ ಸ್ಕ್ರಬ್ ಮಾಡಿ 5 ನಿಮಿಷ ಹಾಗೇ ಬಿಡಿ. ನಂತ್ರ ಬೆನ್ನನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.
Beauty Tips: ಸ್ಕಿನ್‌ಗೆ ನಿಂಬೆ ರಸ ಬೆಸ್ಟ್ ಹೌದು, ಹಾಗಂಥ ಡೈರೆಕ್ಟ್ ಆಗಿ ಹಚ್ಬಹುದಾ?
ಉತ್ತಮ ಫಲಿತಾಂಶಕ್ಕೆ ಮಸೂರ ಅವರೆ ಮತ್ತು ನಿಂಬೆ ರಸ : ಒಂದು ಪಾತ್ರೆಯಲ್ಲಿ ಮೂರು ದೊಡ್ಡ ಚಮಚ ಮಸೂರ ಅವರೆ ಬೀಜದ ಪೌಡರ್ ಹಾಕಿ. ಅದಕ್ಕೆ ಎರಡು ಚಮಚ ನಿಂಬೆ ರಸ ಬೆರೆಸಿ. ಈ ಮಿಶ್ರಣಕ್ಕೆ ಸ್ವಲ್ಪ ಮೊಸರು ಮತ್ತು ಅಲೊವೆರಾ ಜೆಲ್ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಅದನ್ನು ಬೆನ್ನಿಗೆ ಹಚ್ಚಿ ಸ್ಕ್ರಬ್ ಮಾಡಿ. ಬೆನ್ನಿಗೆ ಹಚ್ಚಿದ ಮಿಶ್ರಣ ಪೂರ್ತಿಯಾಗಿ ಒಣಗುವವರೆಗೆ ಅದನ್ನು ಹಾಗೇ ಬಿಡಿ. ಪೂರ್ತಿಯಾಗಿ ಒಣಗಿದ ಮಿಶ್ರಣವನ್ನು ಒದ್ದೆ ಬಟ್ಟೆಯಿಂದ ಸ್ವಚ್ಛಗೊಳಿಸಿ.
ಬೆನ್ನಿನ ಸೌಂದರ್ಯವನ್ನು (Beauty of Back) ಇಮ್ಮಡಿಗೊಳಿಸಲು ಅಕ್ಕಿ ಹಿಟ್ಟು : ಒಂದು ಪಾತ್ರೆಯಲ್ಲಿ ಮೂರು ಚಮಚ ಅಕ್ಕಿ ಹಿಟ್ಟನ್ನು ಹಾಕಬೇಕು. ಅಕ್ಕಿ ಹಿಟ್ಟಿಗೆ ಮೊಸರು, ಒಂದು ನಿಂಬೆ ಹಣ್ಣಿನ ರಸ ಸೇರಿಸಿ ಬೆರೆಸಬೇಕು. ಈ ಮಿಶ್ರಣವನ್ನು ಬೆನ್ನಿಗೆ ಸವರಿ ಹತ್ತು ನಿಮಿಷ ಹಾಗೇ ಇರಲು ಬಿಡಿ. ನಂತ್ರ ಒದ್ದೆಯಾದ ಕೈಗಳಿಂದ ಬೆನ್ನನ್ನು ಸ್ಕ್ರಬ್ ಮಾಡಿ ನೀರಿನಿಂದ ಚೆನ್ನಾಗಿ ತೊಳೆಯಿರಿ.
ನಿಂಬೆ ಹಣ್ಣು (Lemon) ಬಳಸುವ ವೇಳೆ ಎಚ್ಚರವಿರಲಿ :
• ಬೆನ್ನಿನ ಸೌಂದರ್ಯ ಹೆಚ್ಚಿಸಲು ನೀವು ನಿಂಬೆ ಹಣ್ಣನ್ನು ಬಳಕೆ ಮಾಡ್ತಿದ್ದು, ನಿಂಬೆ ಹಚ್ಚಿದ ನಂತ್ರ ಚರ್ಮದಲ್ಲಿ ತುರಿಕೆ ಕಾಣಿಸಿಕೊಂಡರೆ ತಕ್ಷಣವೇ ಬೆನ್ನನ್ನು ತೊಳೆಯಿರಿ.
• ಚರ್ಮದ ಟ್ಯಾನಿಂಗ್ ತುಂಬ ಆಳವಿದ್ದರೆ ಚಿಕಿತ್ಸೆಯ ಮೊದಲು ತಜ್ಞರನ್ನು ಸಂಪರ್ಕಿಸಿ.
• ಮೊದಲು ಬೆನ್ನಿನ ಸ್ವಲ್ಪ ಭಾಗಕ್ಕೆ ಹಚ್ಚಿ ನಂತರ ಪೂರ್ತಿ ಬೆನ್ನಿಗೆ ಹಚ್ಚುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.