ಬೆಂಗಳೂರಿಂದ ತಿರುಮಲಕ್ಕೆ ಬಂದ ಮಹಿಳೆ ಬ್ಲೌಸ್‌ನಲ್ಲಿ ತಿರುಪತಿ ತಿಮ್ಮಪ್ಪ ದೇವರ ಕಸೂತಿ

By Vinutha PerlaFirst Published Jun 4, 2023, 5:21 PM IST
Highlights

ಮಹಿಳೆಯರಿಗೆ ಫ್ಯಾಶನ್‌ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಇದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಹೀಗಾಗಿಯೇ ಎಲ್ಲಾ ರೀತಿಯ ಟ್ರೆಂಡ್ ಟ್ರೈ ಮಾಡ್ತಾನೆ ಇರ್ತಾರೆ. ಬ್ಲೌಸ್‌ನಲ್ಲೂ ಚಿತ್ರ-ವಿಚಿತ್ರ ಅನ್ನೋ ಡಿಸೈನ್‌ಗಳು ಬರ್ತವೆ. ಹಾಗೆಯೇ ಇಲ್ಲೊಬ್ಬ ಮಹಿಳೆ ಬ್ಲೌಸ್‌ನಲ್ಲಿ ತಿರುಪತಿ ತಿಮ್ಮಪ್ಪನ ಚಿತ್ರ ಕಸೂತಿ ಮಾಡಿಸಿದ್ದು, ಎಲ್ಲೆಡೆ ವೈರಲ್ ಆಗ್ತಿದೆ. 

ಬೆಂಗಳೂರಿಂದ ತಿರುಮಲಕ್ಕೆ ಬಂದ ಮಹಿಳೆಯ ಬ್ಲೌಸ್‌​​ ಮೇಲೆ ತಿಮ್ಮಪ್ಪನ ಚಿತ್ರ ಕಸೂತಿ ಬಿಡಿಸಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಮಹಿಳೆಯೊಬ್ಬರು ತಿರುಮಲ ವೆಂಕಟೇಶ್ವರ ಸ್ವಾಮಿಯ ಚಿತ್ರದ ವಿನ್ಯಾಸ ಇರುವ ಬ್ಲೌಸ್​​ ಧರಿಸಿದ್ದಾರೆ. ಈ ವೇಳೆ ದೇವರ ದರ್ಶನಕ್ಕೆ ಬಂದಿದ್ದ ಭಕ್ತರ ಗಮನ ಸೆಳೆದಿದ್ದಾರೆ. ಬೆಂಗಳೂರಿಗೆ ಸೇರಿದ ಡಾಕ್ಟರ್ ಗೀತಾಪ್ರಿಯ ಎಂಬವರು ವಿಶೇಷ ವಿನ್ಯಾಸವಿರುವ ಬ್ಲೌಸ್​​ ಧರಿಸಿ ಬಂದಿದ್ದಾರೆ. ವೆಂಕಟೇಶ್ವರ ಸ್ವಾಮಿಯ ಭಕ್ತೆಯಾಗಿರುವ ಗೀತಾ ಅವರು ವರ್ಷಕ್ಕೆ ಎರಡು ಮೂರು ಬಾರಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೀತಾಪ್ರಿಯ ಅವರು ನಾನು ವೆಂಕಟೇಶ್ವರ ಸ್ವಾಮಿಯ ಭಕ್ತೆ ಎಂದು ಹೇಳಿಕೊಂಡಿದ್ದಾರೆ. 

ಬೆಂಗಳೂರಿನ ಮಹಿಳಾ ಭಕ್ತೆಯೊಬ್ಬರು (Devotee) ತಮ್ಮ ರವಿಕೆ ಮೇಲೆ ತಿರುಮಲ ತಿಮ್ಮಪ್ಪನ ಚಿತ್ರವನ್ನು ಕಸೂತಿ (Embroidery) ಮಾಡಿ ದೇವರ ದರ್ಶನಕ್ಕೆ ಬಂದರು. ದರ್ಶನದ ನಂತರ ದೇವಸ್ಥಾನದ (Temple) ಮುಂಭಾಗದಲ್ಲಿ ವಿಡಿಯೋ ಚಿತ್ರೀಕರಿಸಲಾಯಿತು. ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಕ್ತರು ಮಹಿಳೆ ಮತ್ತು ಆಕೆಯ ರವಿಕೆಯನ್ನು (Blouse) ಆಸಕ್ತಿಯಿಂದ ವೀಕ್ಷಿಸಿದರು. ಆದರೆ ಕೆಲವು ಭಕ್ತರು ಬ್ಲೌಸ್‌ನಲ್ಲಿ ದೇವರ ಮೂರ್ತಿಯ ಕಸೂತಿ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ಟೈಲಿಶ್ ಲುಕ್ ಗಾಗಿ ಲೆಹೆಂಗಾ ಜೊತೆ ಈ ರೀತಿ ಬ್ಲೌಸ್ ಕ್ಯಾರಿ ಮಾಡಿ

35 ಸಾವಿರ ಖರ್ಚು ಮಾಡಿ ರವಿಕೆ ಹೊಲಿದ ದಂಪತಿ
 ಬೆಂಗಳೂರಿನ ಡಾ.ಗೀತಪ್ರಿಯ ವರ್ಷಕ್ಕೆ ಎರಡ್ಮೂರು ಬಾರಿ ತಿರುಮಲಕ್ಕೆ ಭೇಟಿ ನೀಡುತ್ತಾರೆ. ತಿರುಮಲ ವೆಂಕಟೇಶ್ವರ ಸ್ವಾಮಿಯ ಮೇಲೆ ತನಗೆ ಅಪಾರ ಭಕ್ತಿ ಇದೆ ಎಂದು ಹೇಳುತ್ತಾರೆ. ಇತ್ತೀಚೆಗೆ ಆಕೆ ರೂ. 12 ಸಾವಿರ ನೀಡಿ ಸೀರೆ (Saree) ಖರೀದಿಸಿದ್ದಾರೆ. ಅದಕ್ಕಾಗಿ ರೂ. 35 ಸಾವಿರ ವೆಚ್ಚದಲ್ಲಿ ರವಿಕೆ ಹೊಲಿಯಲಾಗಿದೆ. ತಿಮ್ಮಪ್ಪ ಸ್ವಾಮಿಯ ರೂಪವನ್ನು ತೋರಿಸುವಂತೆ ರವಿಕೆಯ ಹಿಂಭಾಗವನ್ನು ಮಾಡಲಾಗಿದೆ.

ಗೀತಪ್ರಿಯಾ ವಿವಿಧ ಬಣ್ಣದ ಮಣಿಗಳು ಮತ್ತು ದಾರಗಳನ್ನು ಬಳಸಿ ತಮ್ಮ ರವಿಕೆಯನ್ನು ಸ್ವಾಮಿಯ ಆಕಾರದಲ್ಲಿ ಕಸೂತಿ ಮಾಡಿಸಿದ್ದಾರೆ. ಭುಜಗಳ ಮೇಲೆ ಶಂಕು ಚಕ್ರನಾಮಗಳನ್ನು ಮಾಡಲಾಗಿದೆ. ಆದರೆ, ಈ ರವಿಕೆ ವಿನ್ಯಾಸಕ್ಕೆ (Design) ಕೆಲ ಭಕ್ತರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವೆಂಕಟೇಶ್ವರ ಸ್ವಾಮಿ ಎಂದರೆ ವಿಪರೀತ ಭಕ್ತಿ ಎಂದು ಹೇಳುವ ಅವರು, ಸ್ವಾಮಿ ಅವರ ಚಿತ್ರವನ್ನು ರವಿಕೆ ಮೇಲೆ ಕಸೂತಿ ಮಾಡಿ ಧರಿಸಿದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

Blouse Designs: ಮದ್ವೆ ಸೀಸನ್ ಶುರು, ರಶ್ಮಿಕಾ ಸ್ಟೈಲಿಷ್ ಬ್ಲೌಸ್ ಡಿಸೈನ್ಸ್ ಇಲ್ಲಿವೆ

ಮಂಗಳವಾರ (ಮೇ 30) ಶ್ರೀವರ ದರ್ಶನ ಮುಗಿಸಿ ದೇವಸ್ಥಾನದ ಹೊರಗೆ ಬಂದಿದ್ದ ಗೀತಪ್ರಿಯ ಅವರು ದೇವಸ್ಥಾನದ ಮುಂದೆ ವಿಡಿಯೋ ಕೂಡ ತೆಗೆದುಕೊಂಡಿದ್ದಾರೆ. ವೀಡಿಯೊವನ್ನು ಇನ್‌ಸ್ಟಾ ರೀಲ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ವೈರಲ್ ಆಗಿತ್ತು.

click me!