
ತುಸು ಹರಿದು ಹೋದ ಬಟ್ಟೆಗಳನ್ನು ಜನರು ಹಾಕುವುದಿಲ್ಲ, ಹರಿದ ಬಟ್ಟೆಗಳು ದಾರಿದ್ರ್ಯದ ಸಂಕೇತ ಎಂದೇ ಬಹುತೇಕರು ಭಾವಿಸುತ್ತಾರೆ. ಹೀಗಾಗಿ ತುಸು ಹರಿದರು ಮೊದಲೆಲ್ಲಾ ಜನ ಬಟ್ಟೆಯನ್ನು ಮತ್ತೆ ಹೊಲಿದು ಹಾಕುತ್ತಿದ್ದರು. ಆದರೆ ಕಾಲ ಬದಲಾಗಿದೆ. ಬಟ್ಟೆ ಹರಿದು ಹೋದರೆ ತಿಪ್ಪೆಗೆಸೆದು ಬಿಡುತ್ತಾರೆ. ಅಥವಾ ನೆಲೊರೆಸುವುದಕ್ಕೆ ಬಳಸುತ್ತಾರೆ. ಒಂದು ಬಟ್ಟೆ ಕೊಳ್ಳಲಾಗದಷ್ಟು ಬಡವರು ಇತ್ತೀಚೆಗೆ ಬಹಳ ಕಡಿಮೆ. ಹಾಗೆಯೇ ತಿನ್ನಲೂ ಅನ್ನ ಇಲ್ಲದಿದ್ದರೂ ಜನ ಇಂದು ಶೋಕಿ ಮಾಡೋದು ಬಿಡಲ್ಲ, ದಿನಕ್ಕೊಂದು ಬಟ್ಟೆ ಹಾಕೊಂಡು ಫ್ಯಾಷನ್ ಮಾಡುವವರೇ ಹೆಚ್ಚು. ಫ್ಯಾಷನ್ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿರುತ್ತದೆ. ಆದರೆ ತೂತು ತೂತಾದ ಚಿಂದಿ ಚಿತ್ರನ್ನಾವಾದ ಬಟ್ಟೆಗಳು ಇಂದಿನ ಹೈಕ್ಲಾಸ್ ಜನರ ಫ್ಯಾಷನ್ ಆಗಿದೆ. ಅದೇ ರೀತಿ ಬಾಲಿವುಡ್ ನಟಿಯೊಬ್ಬಳು ಧರಿಸಿರುವ ಬಟ್ಟೆಯೊಂದು ಈಗ ಸಾಕಷ್ಟು ವೈರಲ್ ಆಗಿದೆ.
ಅಂದಹಾಗೆ ಈ ವಿಡಿಯೋದಲ್ಲಿ ಕಾಣಿಸ್ತಿರೋದು ಬಾಲಿವುಡ್ ನಟಿ ಹುಮಾ ಖುರೇಷಿ, ಗ್ಯಾಂಗ್ಸ್ ಆಫ್ ವಾಸೆಯ್‌ಪುರ್, ತ್ರಿಷ್ಣಾ, ಬದ್ಲಾಪುರ್, ಹೈವೇ, ಜಾಲಿ ಎಲ್‌ಎಲ್‌ಬಿ 2 ಮುಂತಾದ ಸಿನಿಮಾಗಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಾಲಿವುಡ್ ನಟಿ ಹುಮಾ ಖುರೇಷಿ ಏರ್‌ಪೋರ್ಟ್ ಲುಕ್ ಇದಾಗಿದೆ. ಮುಂದಿನಿಂದ ನೋಡುತ್ತಿದ್ದವರಿಗೆ ಹುಮಾ ಖುರೇಷಿ ಫ್ಯಾಷನ್ ಐಕಾನ್‌ನಂತೆಯೇ ಕಾಣುತ್ತಾರೆ. ತಲೆಮೇಲೆ ಟೋಫಿ, ಕಪ್ಪು ಕೂಲಿಂಗ್ ಗ್ಲಾಸ್, ಬಿಳಿ ಲಾಂಗ್ ಟೀಶರ್ಟ್, ಬ್ಲೂ ಜೀನ್ಸ್ ತೊಟ್ಟು ಕೈಯಲ್ಲಿ ಮೊಬೈಲ್ ಹಿಡಿದು ಪಪಾರಾಜಿಗಳಿಗೆ ಹಾಯ್ ಮಾಡ್ತಿರುವ ಹುಮಾ ಸೌಂದರ್ಯಕ್ಕೇನು ಕಡಿಮೆ ಇಲ್ಲ ಬಿಡಿ. ಆದರೆ ಕ್ಯಾಮರಾಗಳಿಗೆ ಪೋಸ್ ಕೊಟ್ಟು ಆಕೆ ಹಿಂದೆ ತಿರುಗುತ್ತಿದ್ದಂತೆ ಶಾಕ್ ಆಗುವ ಸರದಿ ನೋಡುಗರದಾಗಿದೆ.
ಹೌದು ಮುಂದಿನ ಎಷ್ಟು ಚೆನ್ನಾಗಿ ಕಾಣಿಸ್ತಿದ್ರೋ ಅಷ್ಟೇ ದುಪ್ಪಟ್ಟು ಖರಾಬ್ ಆಗಿ ಅವರು ಹಿಂದೆ ತಿರುಗಿದಾಗ ಕಂಡಿದೆ. ಇದಕ್ಕೆ ಕಾರಣವಾಗಿದ್ದು, ಅವರ ಬಿಳಿ ಬಣ್ಣದ ಟೀಶರ್ಟ್ ಹಿಂಭಾಗ, ನೀವು ಕಿತ್ತೋಗಿರುವ ಜೀನ್ಸ್ ಪ್ಯಾಂಟ್ ಹಾಕೊಂಡು ಯುವಕ ಯುವತಿಯರು ಓಡಾಡೋದನ್ನಾ ನೋಡಿರ್ತಿರಿ. ಆದರೆ ಹುಮಾ ಖುರೇಷಿ ಟೀ ಶರ್ಟ್ ಹಿಂಭಾಗ ಸಂಪೂರ್ಣವಾಗಿ ಕಿತ್ತು ಚಿಂದಿ ಚಿತ್ರಾನ್ನದ ರೀತಿ ಕಾಣಿಸ್ತಿದೆ. ಪಪಾರಾಜಿಗಳಿಗೆ ಪೋಸ್ ಕೊಟ್ಟು ನಟಿ ಏರ್‌ಪೋರ್ಟ್ ಒಳಗೆ ಸಾಗುತ್ತಿದ್ದಂತೆ ಶಾಕ್ ಆಗೋ ಸರದಿ ಹಿಂಬದಿ ಇದ್ದವರದ್ದಾಗಿತ್ತು. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದವರು ನೂರಾರು ರೀತಿಯ ಕಾಮೆಂಟ್ ಮಾಡಿದ್ದಾರೆ. ಇವರನ್ನು ಶ್ರೀಮಂತರು ಎಂದು ಕರೆಯುವುದಾದರೆ ನಾನು ಬಡವಳಾಗಿಯೇ ಇರುವೆ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈಕೆ ನಮಗಿಂತಲೂ ಬಡವಿಯಂತೆ ಕಾಣಿಸ್ತಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಶ್ರೀಮಂತರು ಧರಿಸಿದರೆ ಅದು ಫ್ಯಾಷನ್ ಬಡವರು ಧರಿಸಿದರೆ ಅವರು ಭಿಕ್ಷಕರು ಜನರ ಮನಸ್ಥಿತಿಯಲ್ಲಿ ಈ ರೀತಿ ವ್ಯತ್ಯಾಸವಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಿಂಬದಿಯಿಂದ ನೋಡಿದರೆ ಬಾಂಬ್ ಹಾಕಿ ಬ್ಲಾಸ್ಟ್ ಆದಂತೆ ಕಾಣ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹರಿದ ಕಿತ್ತೊದಂತಿರುವ ಬಟ್ಟೆಗಳನ್ನು ಚಪ್ಪಲಿಗಳನ್ನು ಫ್ಯಾಷನ್ ಎನ್ನುವುದರಲ್ಲಿ ಐಷಾರಾಮಿ ಫ್ಯಾಷನ್ ಬ್ರಾಂಡ್ ಬ್ಯಾಲೆನ್ಸಿಯಾಗ ಪ್ರಸಿದ್ಧಿ ಪಡೆದಿದೆ. ಬ್ಯಾಲೆನ್ಸಿಯಾಗ ಈ ಹಿಂದೆಯೂ ಇಂತಹ ಹಲವು ರೀತಿಯ ಚಿತ್ರವಿಚಿತ್ರ ಎನಿಸುವ ಫ್ಯಾಷನ್‌ಗಳನ್ನು ಈ ಹಿಂದೆಯೂ ಬಿಡುಗಡೆ ಮಾಡಿತ್ತು, ಹಾಲಿವುಡ್, ಬಾಲಿವುಡ್ ಸೆಲೆಬ್ರಿಟಿಗಳು, ಇದು ಬ್ರಾಂಡ್ ಎನ್ನುವ ಕಾರಣಕ್ಕೆ ತಮ್ಮತನ ಮರೆತು ಇದನ್ನು ಧರಿಸಿ ಇದನ್ನು ಪ್ರಮೋಟ್ ಮಾಡ್ತಿರ್ತಾರೆ. ಅದೇನೆ ಇರಲಿ ಹುಮಾ ಖುರೇಷಿ ಬಟ್ಟೆ, ಫ್ಯಾಷನ್ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ..
ಇದನ್ನೂ ಓದಿ: ಕುವೆಂಪು ಅವರ ಮಲೆಮಗಳಲ್ಲಿ ಮದುಮಗಳು ಕಾದಂಬರಿ ನೆನಪಿಸಿದ ಮಲೆನಾಡ ವಿಡಿಯೋ
ಇದನ್ನೂ ಓದಿ: ಕಾಲ ಬದಲಾಗಿದೆ ಮನಸ್ಥಿತಿ ಬದಲಾಗಿಲ್ಲ: ದಲಿತ ಮಕ್ಕಳಿಗೆ ದಾರಿ ನಿರಾಕರಿಸಿದ ವೃದ್ಧ ಮಹಿಳೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.