ದುಬಾರಿ ಕಾರು, ವಾಚ್‌ ಕಲೆಕ್ಷನ್‌ ಅಷ್ಟೇ ಅಲ್ಲ ಅನಂತ್ ಅಂಬಾನಿ ಬಳಿಯಿದೆ ಕೋಟಿ ಕೋಟಿ ಮೌಲ್ಯದ ಬ್ರೂಚ್!

By Vinutha Perla  |  First Published Apr 10, 2024, 9:48 AM IST

ಅನಂತ್ ಅಂಬಾನಿ, ಭಾರತೀಯ ಬಿಲಿಯನೇರ್ ಮುಕೇಶ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿಯ ಕಿರಿಯ ಮಗ. ಲಕ್ಸುರಿಯಸ್ ಲೈಫ್‌ಸ್ಟೈಲ್‌ ಲೀಡ್ ಮಾಡೋ ಅನಂತ್ ಅಂಬಾನಿ ದುಬಾರಿ ಕಾರುಗಳು, ವಾಚ್‌ಗಳ ಸಂಗ್ರಹವನ್ನು ಹೊಂದಿದ್ದಾರೆ. ಮಾತ್ರವಲ್ಲ ಅಂಬಾನಿ ಕಿರಿಯ ಮಗ ಕಾಸ್ಟ್ಲೀ ಬ್ರೂಚರ್‌ಗಳ ಸಂಗ್ರಹವನ್ನೂ ಹೊಂದಿದ್ದಾರೆ ಅನ್ನೋದು ನಿಮ್ಗೊತ್ತಾ?


ಅನಂತ್ ಅಂಬಾನಿ, ಭಾರತೀಯ ಬಿಲಿಯನೇರ್ ಮುಕೇಶ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿಯ ಕಿರಿಯ ಮಗ. 29 ವರ್ಷದ ಉದ್ಯಮಿ ಪ್ರಸ್ತುತ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಇಂಧನ ವ್ಯವಹಾರವನ್ನು ಮುನ್ನಡೆಸುತ್ತಿದ್ದಾರೆ. ಇದು ಮಾತ್ರವಲ್ಲದೆ, ಅನಂತ್ ಅಂಬಾನಿ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ನಿರ್ದೇಶಕರೂ ಆಗಿದ್ದಾರೆ. ಅನಂತ್‌ ಅಂಬಾನಿ ಕೋಟಿ ಕೋಟಿ ಬಿಸಿನೆಸ್ ನಿರ್ವಹಿಸುವುದರ ಜೊತೆಗೆ ಲಕ್ಸುರಿಯಸ್‌ ಲೈಫ್‌ ಲೀಡ್ ಮಾಡುತ್ತಾರೆ. ದುಬಾರಿ ಕಾರುಗಳು, ವಾಚ್‌ಗಳ ಸಂಗ್ರಹವನ್ನು ಹೊಂದಿದ್ದಾರೆ. ಮಾತ್ರವಲ್ಲ ಅಂಬಾನಿ ಕಿರಿಯ ಮಗ ಕಾಸ್ಟ್ಲೀ ಬ್ರೂಚರ್‌ಗಳ ಸಂಗ್ರಹವನ್ನೂ ಹೊಂದಿದ್ದಾರೆ.

ಪ್ಯಾಂಥೆರೆ ಡಿ ಕಾರ್ಟಿಯರ್ ಬ್ರೂಚ್ ರೂ. 1.55 ಕೋಟಿ
ಅಕ್ಟೋಬರ್ 31, 2023ರಂದು, ಜಿಯೋ ವರ್ಲ್ಡ್ ಉದ್ಘಾಟನಾ ಸಮಾರಂಭದಲ್ಲಿ ಅನಂತ್ ಅಂಬಾನಿಯ ಲುಕ್‌ ಎಲ್ಲರ ಗಮನ ಸೆಳೆಯಿತು. ಅಂಬಾನಿ ಮಗ ಈ ಸಂದರ್ಭದಲ್ಲಿ ಸಂಪೂರ್ಣ ಕಪ್ಪು ಸಾಂಪ್ರದಾಯಿಕ ದಿರಿಸಿನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಇವೆಂಟ್‌ನ ಪೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಂದ ತಕ್ಷಣ ಅನಂತ್ ಅಂಬಾನಿಯ ಬ್ರೂಚ್ ಹೈಲೈಟ್ ಆಯಿತು.

Tap to resize

Latest Videos

ಅಬ್ಬಬ್ಬಾ..ಭರ್ತಿ ಮೂರು ದಿನ ಗ್ರ್ಯಾಂಡ್ ಆಗಿ ನಡೆಯಲಿದೆ ಅನಂತ್ ಅಂಬಾನಿ ಬರ್ತ್‌ಡೇ ಪಾರ್ಟಿ, ಸಿದ್ಧತೆ ಹೇಗಿದೆ?

ಬ್ರೂಚ್‌ನಲ್ಲಿ ಆರು ಪಚ್ಚೆಗಳು 453 ವಿಶಿಷ್ಟ ವಜ್ರಗಳು ಮತ್ತು 21 ಓನಿಕ್ಸ್ ಒಳಗೊಂಡಿತ್ತು. ಬಿಳಿ ಚಿನ್ನದಲ್ಲಿ ಮಾಡಿದ ಪ್ಯಾಂಥರ್‌ನ್ನು ಇದು ಒಳಗೊಂಡಿತ್ತು. ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ವಿಶಿಷ್ಟವಾದ 3.26-ಕ್ಯಾರೆಟ್ ಬ್ರೂಚ್‌ನ ಬೆಲೆ 1,86,000 USD ಅಂದರೆ ಭಾರತೀಯ ಕರೆನ್ಸಿಯಲ್ಲಿ ಇದು ಸುಮಾರು 1.55 ಕೋಟಿ ರೂ. ಆಗಿದೆ. 

ಕಾರ್ಟಿಯರ್ ಪ್ಯಾಂಥರ್ ಬ್ರೂಚ್ ರೂ. 1.3 ಕೋಟಿ
ಕಾರ್ಟಿಯರ್ ವಿಶ್ವದ ಅತ್ಯಂತ ದುಬಾರಿ ಬ್ರೂಚ್ ತಯಾರಕರಲ್ಲಿ ಒಬ್ಬರು. ತಮ್ಮ ನಿಶ್ಚಿತಾರ್ಥ ಸಮಾರಂಭದಲ್ಲಿ ಅನಂತ್ ಅಂಬಾನಿ ಸಂಪೂರ್ಣ ಕಪ್ಪು ಕುರ್ತಾ-ಪೈಜಾಮಾವನ್ನು ಧರಿಸಿದ್ದರು. ಈ ಲುಕ್‌ನ್ನು ಸಂಪೂರ್ಣಗೊಳಿಸಲು ನೆಹರೂ ಜಾಕೆಟ್‌ನ್ನು ಧರಿಸಿದ್ದರು. ಈ ಸಂದರ್ಭದಲ್ಲಿ ಪ್ಯಾಂಥರ್ ಆಕಾರದ ಬ್ರೂಚ್ ಎಲ್ಲರ ಗಮನ ಸೆಳೆಯಿತು.

ಅನಂತ್ ಅಂಬಾನಿಯವರ ಪ್ಯಾಂಥರ್-ಆಕಾರದ ಬ್ರೂಚ್ ಅವರ ಹಿರಿಯ ಸಹೋದರ ಆಕಾಶ್ ಅಂಬಾನಿಯಿಂದ ಉಡುಗೊರೆಯಾಗಿತ್ತು. ಇದು 162,000 USD ಮೌಲ್ಯದ್ದಾಗಿತ್ತು. ಅಂದರೆ ಸುಮಾರು 1.3 ಕೋಟಿ ರೂ. ಬೆಲೆ ಬಾಳುತ್ತದೆ. ಇದನ್ನು 18K ಬಿಳಿ ಚಿನ್ನದ ಸೆಟ್‌ನಲ್ಲಿ ಮಾಡಲಾಗಿದೆ. ಬ್ರೂಚ್‌ನಲ್ಲಿ 605 ಕತ್ತರಿಸದ ವಜ್ರಗಳು, ಪ್ಯಾಂಥರ್‌ನ ಮೂಗಿನ ಮೇಲೆ ಒಂದು ಓನಿಕ್ಸ್ ವಜ್ರ, ಎರಡು ಪಚ್ಚೆಗಳು ಮತ್ತು 51 ನೀಲಮಣಿಗಳನ್ನು ಒಳಗೊಂಡಿತ್ತು.

ಶಾಪಿಂಗ್‌ಗೆ 20 ಸೆಕ್ಯುರಿಟಿ, 25 ಕೋಟಿ ರೋಲ್ಸ್ ರಾಯ್ಸ್ ಕಾರಲ್ಲಿ ಫಿಯಾನ್ಸಿ ಜೊತೆ ಹೋದ ಅನಂತ್ ಅಂಬಾನಿ!

ಸಿಂಹದ ಆಕಾರದ ಬ್ರೂಚ್
ಮಾರ್ಚ್ 4, 2024ರಂದು ಗುಜರಾತ್‌ನ ಜಾಮ್ನಾ ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಹಸ್ತಾಕ್ಷರ ಸಮಾರಂಭಲ್ಲೂ ಅನಂತ್ ಅಂಬಾನಿ ವಿಭಿನ್ನ ಬ್ರೂಚ್‌ನಲ್ಲಿ ಮಿಂಚಿದರು. ವಿಶೇಷ ಸಂದರ್ಭಕ್ಕಾಗಿ, ಅನಂತ್ ಬಿಳಿ ಬಣ್ಣದ ಶೇರ್ವಾನಿ ಧರಿಸಿ ಸುಂದರವಾಗಿ ಕಾಣುತ್ತಿದ್ದರು. ಹಳದಿ ವಜ್ರವುಳ್ಳ ಸಿಂಹದ ಆಕಾರದ ಬ್ರೂಚ್ ಗುಜರಾತ್‌ನ ಜಾಮ್‌ನಗರದಲ್ಲಿರುವ ಪ್ರಾಣಿಗಳ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಗೌರವವನ್ನು ನೀಡುವಂತಿತ್ತು.

ಸಿಂಹದ ಆಕಾರದ ಬ್ರೂಚ್‌ನ ಪ್ರಮುಖ ಅಂಶವೆಂದರೆ ಮಧ್ಯಭಾಗದಲ್ಲಿರುವ ದೈತ್ಯ ನೈಸರ್ಗಿಕ ವಜ್ರವು ಮೈಲುಗಳಷ್ಟು ದೂರದಿಂದ ಗುರುತಿಸಲ್ಪಡುತ್ತದೆ. ಅನಂತ್ ಅಂಬಾನಿಯವರ ಸುಂದರವಾದ ಬ್ರೂಚ್ ಅನ್ನು ವಿಶ್ವದ ಅತ್ಯಂತ ಪ್ರಸಿದ್ಧ ಆಭರಣ ವಿನ್ಯಾಸಕರಲ್ಲಿ ಒಬ್ಬರಾದ ಲೋರೆನ್ ಶ್ವಾರ್ಟ್ಜ್ ವಿನ್ಯಾಸಗೊಳಿಸಿದ್ದಾರೆ.

ಬೃಹತ್ ಗಣೇಶ ಬ್ರೂಚ್
ಮಾರ್ಚ್ 1, 2024 ರಂದು ಮದುವೆಗೆ ಮುಂಚಿತವಾಗಿ, ಅನಂತ್ ಅಂಬಾನಿಯವರ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು. ಫೋಟೋದಲ್ಲಿ, ಬಿಲಿಯನೇರ್ ಪೀಚ್-ಹ್ಯೂಡ್ ಕುರ್ತಾ-ಪೈಜಾಮಾವನ್ನು ಧರಿಸಿದ್ದರು.ಅದನ್ನು ಅದೇ ಬಣ್ಣದ ಸುಂದರವಾದ ನೆಹರೂ ಜಾಕೆಟ್‌ನೊಂದಿಗೆ ವಿನ್ಯಾಸಗೊಳಿಸಿದರು. ತನ್ನ ಉಡುಪನ್ನು ಪೂರ್ಣಗೊಳಿಸುವ ಸಲುವಾಗಿ, ಅನಂತ್ ತನ್ನ ನೆಹರೂ ಜಾಕೆಟ್‌ನ ಮೇಲೆ ಭಗವಾನ್ ಗಣೇಶ ಬ್ರೂಚ್‌ ಧರಿಸಿದ್ದರು.

click me!