Beauty Tips: ಕಡಲೆ ಹಿಟ್ಟಿಗೆ ಅಪ್ಪಿತಪ್ಪಿಯೂ ಈ ಪದಾರ್ಥ ಬೆರೆಸ್ಬೇಡಿ, ಚೆಂದ ಕಾಣೋ ಬದಲು ಯಡವಟ್ಟಾಗುತ್ತೆ!

By Suvarna News  |  First Published Apr 6, 2024, 2:15 PM IST

ಮುಖದ ಸೌಂದರ್ಯಕ್ಕೆ ಮನೆ ಮದ್ದನ್ನು ಬಳಸುವವರಿದ್ದಾರೆ. ಆದ್ರೆ ಎಲ್ಲ ಮನೆ ಮದ್ದು ಎಲ್ಲ ಚರ್ಮಕ್ಕೆ ಹೊಂದಿಕೆಯಾಗೋದಿಲ್ಲ. ಕೆಲ ಪದಾರ್ಥ ಚರ್ಮಕ್ಕೆ ಹಾನಿಯುಂಟುಮಾಡೋ ಸಾಧ್ಯತೆ ಹೆಚ್ಚಿರುತ್ತೆ. ಕಡಲೆಹಿಟ್ಟು ಕೂಡ ಕೆಲವೊಮ್ಮೆ ಸೈಡ್ ಇಫೆಕ್ಟ್ ಕೊಡೋದಿದೆ.


ಬೇಸಿಗೆಯಲ್ಲಾಗಿ, ಇಲ್ಲವೇ ಚಳಿಗಾಲ ಇರಲಿ ಚರ್ಮದ ಆರೈಕೆಗೆ ವಿಶೇಷ ಗಮನ ಹರಿಸಬೇಕಾಗುತ್ತೆ. ಮಹಿಳೆಯರು ಮಾತ್ರವಲ್ಲ ಈಗಿನ ದಿನಗಳಲ್ಲಿ ಪುರುಷರು ಕೂಡ ತಮ್ಮ ಸೌಂದರ್ಯ ವೃದ್ಧಿಸಿಕೊಳ್ಳಲು ಪಾರ್ಲರ್ ಮೊರೆ ಹೋಗ್ತಾರೆ. ಇನ್ನು ಕೆಲವರು ಮನೆಯಲ್ಲಿರುವ ಪದಾರ್ಥ ಬಳಸಿಕೊಂಡೇ ನೈಸರ್ಗಿಕವಾಗಿ ಸುಂದರ ತ್ವಚೆ ಪಡೆಯುವ ಪ್ರಯತ್ನ ನಡೆಸುತ್ತಾರೆ. ಚರ್ಮದಲ್ಲಿ ನಾನಾ ವಿಧಗಳಿವೆ. ಒಣ ಚರ್ಮ, ಎಣ್ಣೆಯುಕ್ತ ಚರ್ಮ, ಮಿಶ್ರ ಚರ್ಮವನ್ನು ಜನರು ಹೊಂದಿರುತ್ತಾರೆ. ಅವರ ಚರ್ಮಕ್ಕೆ ತಕ್ಕಂತೆ ಬ್ಯೂಟಿ ಪ್ರಾಡಕ್ಟ್ ಬಳಕೆ ಮಾಡ್ಬೇಕು. ನೈಸರ್ಗಿಕ ಸೌಂದರ್ಯ ವರ್ದಕ ಬಳಸುವ ವೇಳೆಯೂ ನಿಮ್ಮ ಚರ್ಮ ಯಾವುದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಎಲ್ಲ ಚರ್ಮಕ್ಕೆ ಎಲ್ಲ ಮನೆ ಮದ್ದು ಸೂಕ್ತವಲ್ಲ. ಅದು ಅಡ್ಡಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. 

ಮುಖ (Face) ದ ಸೌಂದರ್ಯಕ್ಕೆ ಅನೇಕರು ಕಡಲೆ ಹಿಟ್ಟನ್ನು ಬಳಸುತ್ತಾರೆ. ಮುಖವನ್ನು ಸೋಪಿನ ಬದಲು ಕಡಲೆ ಹಿಟ್ಟಿನಲ್ಲಿ ಸ್ವಚ್ಛಗೊಳಿಸುವವರಿದ್ದಾರೆ. ಇದು ಒಳ್ಳೆಯದು. ಕಡಲೆಹಿಟ್ಟು ಚರ್ಮ (Skin) ಕ್ಕೆ ಪ್ರಯೋಜನಕಾರಿ. ಕಡಲೆ ಹಿಟ್ಟಿನಲ್ಲಿರುವ ಪೋಷಕಾಂಶಗಳು ಚರ್ಮವನ್ನು ಆರೋಗ್ಯಗೊಳಿಸಿ, ಕಾಂತಿಯನ್ನು ಹೆಚ್ಚಿಸುತ್ತದೆ.  ನೀವು ನಿತ್ಯ ಕಡಲೆ ಹಿಟ್ಟನ್ನು ಮುಖಕ್ಕೆ ಹಚ್ಚುವುದ್ರಿಂದ ಚರ್ಮದ ಮೇಲ್ಮೈಯಲ್ಲಿರುವ ಸತ್ತ ಜೀವಕೋಶಗಳು, ಕೊಳಕು ಮತ್ತು ಕಲ್ಮಶ ಹೊರ ಹೋಗುತ್ತದೆ. ಮೊಡವೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಇದಲ್ಲದೆ ಮುಖದ ಬಣ್ಣದಲ್ಲಿ ಸುಧಾರಣೆಯಾಗುತ್ತದೆ. 

Latest Videos

undefined

ಶ್ರಾವಣಿ ಸುಬ್ರಹ್ಮಣ್ಯ: ಶ್ರೀವಲ್ಲಿ ರಿಯಲ್ ಲೈಫಲ್ಲಿ ಸಖತ್ ಸ್ಟೈಲಿಶ್, ಇವಳನ್ನೇ ಹೀರೋಯಿನ್ ಮಾಡಿ ಅಂತಿದ್ದಾರೆ ನೆಟ್ಟಿಗರು!

ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ ಕಡಲೆ ಹಿಟ್ಟನ್ನು ಅಗತ್ಯವಾಗಿ ಬಳಸಿ. ಕಡಲೆ ಹಿಟ್ಟು ಚರ್ಮದಲ್ಲಿರುವ ಎಣ್ಣೆಯನ್ನು ಹೀರುತ್ತದೆ. ಎಣ್ಣೆಯಿಂದ ಬರುವ ಹೆಚ್ಚುವರಿ ಹೊಳಪನ್ನು ತಡೆಯುತ್ತದೆ. ತ್ವಚೆಯು ಹೊಳಪು ಪಡೆಯಲು ಕಡಲೆ ಹಿಟ್ಟು ಸಹಕಾರಿ. ಚರ್ಮದ ಮೇಲಿರುವ  ಕಪ್ಪು ಕಲೆ, ಪಿಗ್ಮೆಂಟೇಶನ್ (Pigmentaion) ತೊಡೆದು ಹಾಕುತ್ತದೆ. ಚರ್ಮದ ಬಣ್ಣವನ್ನು (Skin Complexion) ಸಮತೋಲನಗೊಳಿಸುತ್ತದೆ. ಚರ್ಮವು ನಯಗೊಳ್ಳುತ್ತದೆ. ಎಲ್ಲ ಚರ್ಮಕ್ಕೆ ಕಡಲೆ ಹಿಟ್ಟು (Gram Flour) ಹೊಂದಿಕೆಯಾಗುತ್ತದೆ. ಸೆನ್ಸಿಟಿವ್ ಸ್ಕಿನ್ ಗೆ ಕೂಡ ಇದು ಪ್ರಯೋಜನಕಾರಿ. 

ಕಡಲೆ ಹಿಟ್ಟಿಗೆ ಇದನ್ನು ಬೆರೆಸಿ ಬಳಸಿ : ನೀವು ಕಡಲೆ ಹಿಟ್ಟಿಗೆ ಅರಿಶಿನ ಬೆರೆಸಿ ಹಚ್ಚಿಕೊಳ್ಳಬೇಕು. ಅರಿಶಿನ ಉರಿಯೂತ ನಿವಾರಕ (Anti-Inflamatory) ಹಾಗೂ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ನೀವು ಕಡಲೆ ಹಿಟ್ಟಿಗೆ ಅರಿಶಿನ ಬೆರೆಸಿ ಮುಖಕ್ಕೆ ಹಚ್ಚುವುದ್ರಿಂದ ಮುಖ ನೈಸರ್ಗಿಕ ಹೊಳಪು ಪಡೆಯುತ್ತದೆ. 

ಕಡಲೆ ಹಿಟ್ಟಿಗೆ ರೋಸ್ ವಾಟರ್ ಬೆರೆಸಿ ನೀವು ಫೇಸ್ ಮಾಸ್ಕ್ ತಯಾರಿಸಬಹುದು. ಇದು ಹೈಡ್ರೇಟಿಂಗ್ ಅಂಶ ಹೊಂದಿದೆ. ಚರ್ಮದ ಪಿಹೆಚ್ ಮಟ್ಟವನ್ನು ಕಾಪಾಡುತ್ತದೆ.  ನೀವು ಕಡಲೆ ಹಿಟ್ಟಿನ ಜೊತೆ ಮೊಸರು ಬೆರೆಸಿ ಫೇಸ್ ಮಾಸ್ಕ್ ತಯಾರಿಸಬಹುದು. ಅಲೋವೇರಾ, ನಿಂಬೆರಸ ಕೂಡ ಕಡಲೆ ಹಿಟ್ಟಿನ ಜೊತೆ ಒಳ್ಳೆಯ ಫಲಿತಾಂಶ ನೀಡುತ್ತದೆ. 

ಕಡಲೆ ಹಿಟ್ಟಿಗೆ ಇದನ್ನು ಬೆರೆಸಬೇಡಿ : ಮೊದಲೇ ಹೇಳಿದಂತೆ ಎಲ್ಲ ಪದಾರ್ಥಗಳನ್ನು ಕಡಲೆ ಹಿಟ್ಟಿನಲ್ಲಿ ಬೆರೆಸಿದ್ರೆ ಸೂಕ್ತವಲ್ಲ. ಇದು ಚರ್ಮದ ಮೇಲೆ ಅಡ್ಡಪರಿಣಾಮ ಬೀರುತ್ತದೆ.  ನೀವು ಕೆಮಿಕಲ್ ಎಕ್ಸ್‌ಫೋಲಿಯಂಟ್‌, ಆಲ್ಫಾ ಹೈಡ್ರಾಕ್ಸಿ ಆಸಿಡ್ ಅಥವಾ ಬೀಟಾ ಹೈಡ್ರಾಕ್ಸಿ ಆಸಿಡ್‌ನಂತಹ ರಾಸಾಯನಿಕವನ್ನು ಕಡಲೆ ಹಿಟ್ಟಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಬಾರದು. 

ಬೆಂಗಳೂರಿನ ಚೀಪ್‌ ಅಂಡ್‌ ಬೆಸ್ಟ್ ಶಾಪಿಂಗ್‌ ಸ್ಥಳಗಳಿವು, ಇಲ್ಲಿ ಎಲ್ಲವೂ ಅಗ್ಗ

ಒರಟಾಗಿರುವ ಪದಾರ್ಥವನ್ನು ಕಡಲೆ ಹಿಟ್ಟಿನಲ್ಲಿ ಬೆರೆಸಿ ಬಳಸಬೇಡಿ. ಇದು ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. ಚರ್ಮಕ್ಕೆ ಕಿರಿಕಿರಿಯುಂಟು ಮಾಡುವ ಸಾಧ್ಯತೆ ಇರುತ್ತದೆ. ಕಡಲೆ ಹಿಟ್ಟನ್ನು ಆಲ್ಕೋಹಾಲ್ ಗೆ ಬೆರೆಸಿ ಮುಖಕ್ಕೆ ಹಚ್ಚಬಾರದು. ಇದು ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುತ್ತದೆ. ಚರ್ಮ ಒಣಗಲು ಇದು ಕಾರಣವಾಗುತ್ತದೆ. ಇದು ನೈಸರ್ಗಿಕ ಸೌಂದರ್ಯವರ್ಧಕವಾದ್ರೂ ಕೆಲ ಚರ್ಮದ ಮೇಲೆ ಅಡ್ಡಪರಿಣಾಮವುಂಟಾಗಬಹುದು. ಹಾಗಾಗಿ ಸಣ್ಣ ಸಮಸ್ಯೆ ಕಾಣಿಸಿದ್ರೂ ವೈದ್ಯರನ್ನು ಭೇಟಿಯಾಗಿ. 

click me!