ಒಂದಾನೊಂದು ಕಾಲದಲ್ಲಿ ಐಶ್ವರ್ಯಾದಿಂದ ಮೆರಿತಿದ್ದ ಪ್ಲೇಬಾಯ್ ಪೋಸ್ಟರ್‌ನಲ್ಲಿ ರೂಪದರ್ಶಿಯಾಗಿದ್ದ ಬನ್ನಿ ನನ್ನೆಟ್ಟೆ ಹ್ಯಾಮಂಡ್ ಲೋಶಿಯಾವೊ ಎಂಬಾಕೆ ಈಗ ಒಂದೊತ್ತಿನ ಊಟಕ್ಕೂ ಪರದಾಡ್ತಿದ್ದಾಳಂತೆ.
ನ್ಯೂಯಾರ್ಕ್: ಕಾಲ ಹೇಗೆ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಂದು ಶ್ರೀಮಂತರಾಗಿದ್ದವರು ನಾಳೆ ಬಡವರಾಗಬಹುದು, ಬಡವರಾಗಿರುವವವರು ರಾತ್ರೋ ರಾತ್ರಿ ಶ್ರೀಮಂತರಾಗಬಹುದು. ಶ್ರಮದಿಂದ ಅದೃಷ್ಟವನ್ನು ಬದಲಿಸಬಹುದು ಎಂದು ಹೇಳಬಹುದಾದರೂ ಕೆಲವರಿಗೆ ಶ್ರಮವಿಲ್ಲದೇ ಅದೃಷ್ಟ ಹಣ ಆಸ್ತಿ ಅಂತಸ್ತು ಒಲಿದ ನಿದರ್ಶನಗಳಿವೆ. ಹಾಗೆಯೇ ಶ್ರಮದ ನಂತರವೂ ಕೂಡ ಎಲ್ಲವನ್ನು ಕಳೆದುಕೊಂಡ ಜನರಿದ್ದಾರೆ. ಹೀಗಾಗಿ ಕೆಲವು ವಿಚಾರಗಳು ಊಹೆಗೆ ನಿಲುಕದ್ದು, ಅದೇ ರೀತಿ ಈಗ ಒಂದಾನೊಂದು ಕಾಲದಲ್ಲಿ ಐಶ್ವರ್ಯಾದಿಂದ ಮೆರಿತಿದ್ದ ಪ್ಲೇಬಾಯ್ ಪೋಸ್ಟರ್‌ನಲ್ಲಿ ರೂಪದರ್ಶಿಯಾಗಿದ್ದ ಬನ್ನಿ ನನ್ನೆಟ್ಟೆ ಹ್ಯಾಮಂಡ್ ಲೋಶಿಯಾವೊ ಎಂಬಾಕೆ ಈಗ ಒಂದೊತ್ತಿನ ಊಟಕ್ಕೂ ಪರದಾಡ್ತಿದ್ದಾಳಂತೆ.
ಅಮೆರಿಕಾದ ಪುರುಷರ ಮ್ಯಾಗಜೀನ್ ಆಗಿದ್ದ ಪ್ಲೇಬಾಯ್‌ನಲ್ಲಿ ರೂಪದರ್ಶಿಯಾಗಿದ್ದ ಬನ್ನಿ ನನ್ನೆಟ್ಟೆ ಹ್ಯಾಮಂಡ್ ಲೋಶಿಯಾವೊ ಒಂದಾನೊಂದು ಕಾಲದಲ್ಲಿ ಆಕೆಯ ಶ್ರೀಮಂತ ಪತಿಯ ಜೊತೆ ದೊಡ್ಡದಾದ ಐಷಾರಾಮಿ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಅಲ್ಲದೇ ಜೀವಂತ ಬಾರ್ಬಿ ಡಾಲ್ ರೀತಿ ಕಾಣುವುದಕ್ಕಾಗಿ ಈಕೆ ಒಂದು ಕಾಲದಲ್ಲಿ 3.5 ಕೋಟಿ ವ್ಯಯಿಸಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಳು. ಹಲವು ಪ್ಲಾಸ್ಟಿಕ್ ಸರ್ಜರಿಗಳು ಬಾಡಿ ಫಿಲ್ಲರ್‌ಗಳು ಆಕೆಯನ್ನು ಜೀವಂತ ಬಾರ್ಬಿ ಡಾಲ್ ಆಗಿಸಿದ್ದವು. ಆದರೆ ಇಂದು ಆಕೆಗೆ ಮನೆ ಬಿಡಿ ಉಳಿಯಲು ಸರಿಯಾದ ನೆಲೆ ಇಲ್ಲ ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ ಎಂದು ಅವಲತ್ತುಕೊಂಡಿದ್ದಾಳೆ ಈ ಸುಂದರಿ. ಇದಕ್ಕೆಲ್ಲಾ ಕಾರಣವಾಗಿದ್ದು, ಶ್ರೀಮಂತ ಗಂಡನೊಂದಿಗೆ ಆಕೆಯ ವಿಚ್ಛೇದನ. ಗಂಡನೊಂದಿಗಿನ ವಿಚ್ಛೇದನದಿಂದಾಗಿ ಆಕೆಗೆ ಸಣ್ಣದೊಂದು ಸ್ಟುಡಿಯೋ ಬಿಟ್ಟರೆ ಮಲಗಲೊಂದು ಮ್ಯಾಟ್ ಬಿಟ್ಟು ಬೇರೇನೂ ಇಲ್ಲದಂತಾಗಿದೆ.
ಬಾರ್ಬಿ ಡಾಲ್ ಆಗಿ ಬದಲಾದ ಹಾಟ್ ಬ್ಯೂಟಿ ದಿಶಾ; ಮಿನಿ ಡ್ರೆಸ್ ಫೋಟೋ ವೈರಲ್
ವಿಚ್ಛೇದನದ ನಂತರ ಆಕೆಗೆ ತನ್ನ ಆಡಂಬರದ ಜೀವನ ಶೈಲಿಗೆ ಹಣವಿಲ್ಲದಾಗಿದೆಯಂತೆ. ತನ್ನ ಉಗುರುಗಳಿಗೆ ಮ್ಯಾನಿಕ್ಯೂರ್ ಮಾಡಿಲ್ಲ ಬಟೊಕ್ಸ್ ಇಂಜೆಕ್ಷನ್ ಅನ್ನು ಪಡೆದಿಲ್ಲ( ಬೊಟೊಕ್ಸ್ ಚುಚ್ಚುಮದ್ದುಗಳು ಸ್ನಾಯುವನ್ನು ಸೀಮಿತ ಸಮಯದವರೆಗೆ ಚಲಿಸದಂತೆ ಚರ್ಮದಲ್ಲಿ ನೆರಿಗೆ ಬರದಂತೆ ತಡೆಯುವ ಚುಚ್ಚುಮದ್ದು. ಸಾಮಾನ್ಯವಾಗಿ ಇದನ್ನು ಮುಖದ ಮೇಲೆ ಸುಕ್ಕುಗಳನ್ನು ಸುಗಮಗೊಳಿಸಲು ಬಳಸಲಾಗುತ್ತದೆ.) ಜೊತೆಗೆ ಆಕೆಯ ಐಷಾರಾಮಿ ಹಾಗೂ ಅದ್ದೂರಿ ಜೀವನ ಶೈಲಿಯಲ್ಲಾದ ಬದಲಾವಣೆ ಆಕೆಗೆ ಆಘಾತ ಉಂಟು ಮಾಡಿದೆಯಂತೆ.
ತನ್ನ ವಿಚ್ಛೇದನಕ್ಕೂ ಮೊದಲು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಬನ್ನಿ ನನ್ನೆಟ್ಟೆ ಹ್ಯಾಮಂಡ್ ಲೋಶಿಯಾವೊ, ಕಳೆದ 17 ವರ್ಷಗಳಿಂದ ಆಕೆ ತನ್ನ ಹಣದಿಂದ ಯಾವುದೇ ಬಿಲ್‌ಗಳನ್ನು ಪಾವತಿ ಮಾಡಿಲ್ಲವಂತೆ ಹಾಗೆಯೇ ಐಷಾರಾಮಿಯಾದ 4 ಕಾರುಗಳು ಆಕೆಯ ಸೇವೆ ಮಾಡುತ್ತಿದ್ದವಂತೆ. ಆದರೆ ಪ್ರಸ್ತುತ 6 ಮಕ್ಕಳ ತಾಯಿಯಾಗಿರುವ ಆಕೆ ಈಗ ತನ್ನ ಸ್ವಂತ ದುಡಿಮೆಯಿಂದ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾಳಂತೆ.
ಆರು ಮಕ್ಕಳಿರುವ ತನ್ನ ಕುಟುಂಬವನ್ನು ಬೆಂಬಲಿಸುತ್ತಾ ಜೀವನ ಮಾಡುವ ಹತಾಶ ಪ್ರಯತ್ನದಲ್ಲಿ ಲೊಶಿಯಾವೊ ಇದ್ದು, ಕೆಲವು ಅಭಿಮಾನಿಗಳು ಆಕೆಯ ನೆರವಿಗೆ ಬಂದಿದ್ದು, ಅವರ ನೆರವಿನಿಂದ ತಾನು ತನ್ನ ಮಕ್ಕಳನ್ನು ನೋಡಿಕೊಳ್ಳಬಹುದು ಎಂದು ಹೇಳಿಕೊಂಡಿದ್ದಾಳೆ. ಈ ಹಿಂದೆ ಅಡಲ್ಟ್ ಕಂಟೆಂಟ್‌ಗೆ ಸಂಬಂಧಿಸಿದಂತೆ ಆಕೆ ತನಗೆ ಬಂದ ಆಫರ್ ಅನ್ನು ನಿರಾಕರಿಸಿದ್ದಳು. ತಾನು ಸ್ವಂತದ್ದಾಗಿ ಏನನ್ನಾದರೂ ನಿರ್ಮಿಸಬೇಕು ಎಂಬ ಕಾರಣದಿಂದ ಈ ಪ್ರಪೋಸಲ್ ಅನ್ನು ನಿರಾಕರಿಸಿದ್ದಾಗಿ ಆಕೆ ಹೇಳಿಕೊಂಡಿದ್ದಳು.
Barbie Doll ಬಾರ್ಬಿ ರೀತಿ ಕಾಣಲು 53 ಲಕ್ಷ ರೂ ಖರ್ಚು, ಸಂಬಂಧ ಮುರಿದ ಕುಟುಂಬಸ್ಥರು!
ಪ್ರಸ್ತುತ ಲೊಶಿಯಾವೊ ಸ್ಥಳೀಯ ರೆಸ್ಟೋರೆಂಟ್ ಒಂದರಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದಾಳಂತೆ. ರೂಪದರ್ಶಿಯಾಗಿ ಅವರು ಹಲವು ಬಾರಿ ಪ್ಲೇ ಬಾಯ್ (Playboy) ಮ್ಯಾಗ್‌ಜೀನ್ ಮುಖಪುಟವನ್ನು ಅಲಂಕರಿಸಿದ್ದರು. ಅಲ್ಲದೇ 2018ರಲ್ಲಿ ಪ್ಲೇಮೇಟ್ (Playmate) ಆಫ್ ದ ಇಯರ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.