ವಿಶ್ವದ ಅತ್ಯಂತ ದುಬಾರಿ ವಾಚ್ ಬಿಡುಗಡೆ, ಬೆಲೆ ಬರೋಬ್ಬರಿ 164 ಕೋಟಿ ರೂಪಾಯಿ!

By Suvarna News  |  First Published Mar 28, 2023, 8:21 PM IST

ಸೆಲೆಬ್ರೆಟಿಗಳು, ರಾಜಕಾರಣಿಗಳು ದುಬಾರಿ ವಾಚ್ ಕಟ್ಟಿ ಸುದ್ದಿಯಾಗಿದ್ದಾರೆ. 1 ಕೋಟಿ 2 ಕೋಟಿ ರೂಪಾಯಿ ಬೆಲೆ ವಾಚ್‌ ನೋಡಿ ಹೌಹಾರಿದವರೂ ಇದ್ದಾರೆ. ಇದೀಗ ಪ್ರತಿಷ್ಠಿತ ಕಂಪನಿಯ ವಾಚ್ ಬಿಡುಗಡೆಯಾಗಿದೆ. ಇದರ ಬೆಲೆ ಬರೋಬ್ಬರಿ 164 ಕೋಟಿ ರೂಪಾಯಿ. 


ನ್ಯೂಯಾರ್ಕ್(ಮಾ.28): ದುಬಾರಿ ವಾಚ್ ಕುರಿತು ಈಗಾಗಲೇ ಹಲವು ಬಾರಿ ವಿಶ್ವದಲ್ಲೇ ಸುದ್ದಿಯಾಗಿದೆ. ಸೆಲೆಬ್ರೆಟಿಗಳ ಕೈಯಲ್ಲಿರುವ ಒಂದರೆಡು ಕೋಟಿ ರೂಪಾಯಿ ಬೆಲೆ ವಾಚ್ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರೆ, ರಾಜಕಾರಣಿಗಳ ಕೈಯಲ್ಲಿನ ವಾಚ್ ಸಂಕಷ್ಟಕ್ಕೂ ಕಾರಣವಾಗಿದೆ. ಆದರೆ ಇವೆಲ್ಲವನ್ನೂ ಮೀರಿಸುವ, ವಿಶ್ವದ ಅತ್ಯಂತ ದುಬಾರಿ ವಾಚ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ವಾಚ್ ಬೆಲೆ ಬರೋಬ್ಬರಿ 164 ಕೋಟಿ ರೂಪಾಯಿ. ಈ ವಾಚ್‌ನ್ನು ಅಮೆರಿಕದ ಪ್ರತಿಷ್ಟಿತ ಜ್ಯೂವೆಲ್ಲರಿ ಹಾಗೂ ವಾಚ್ ಕಂಪನಿ ಜಾಕೋಬ್ ಆ್ಯಂಡ್ ಕಂಪನಿ ಬಿಡುಗಡೆ ಮಾಡಿದೆ. 

ಜೀನೆವಾದಲ್ಲಿ ಆಯೋಜಿಸಿದ್ದ ವಾರ್ಷಿಕ ವಾಚ್ ಹಾಗೂ ಅಚ್ಚರಿ ವಸ್ತುಪ್ರದರ್ಶನದಲ್ಲಿ ಈ ವಾಚ್ ಬಿಡುಗಡೆ ಮಾಡಲಾಗಿದೆ. 20 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಈ ವಾಚ್ ತಯಾರಿಸಲು ಜಾಕೋಬ್ ಅ್ಯಂಡ್ ಕಂಪನಿ ಬರೋಬ್ಬರಿ ಮೂರೂವರೆ ವರ್ಷ ತೆಗೆದುಕೊಂಡಿದೆ. ಹಳದಿ ಡೈಮಂಡ್, ಚಿನ್ನದ ಮೂಲಕ ಸಂಪೂರ್ಣ ವಾಚ್ ತಯಾರಿಸಲಾಗಿದೆ. 216.89 ಕ್ಯಾರಟ್ ಡೈಮಂಡ್ ಬಳಸಲಾಗಿದೆ. ಇದು ಕಂಪನಿಯ ಮಾಸ್ಟರ್ ಪೀಸ್ ಎಂದು ಹೆಮ್ಮೆಯಿಂದ ಹೇಳಿಕೊಂಡಿದೆ.

Latest Videos

undefined

'ಪಠಾಣ್' ಸಕ್ಸಸ್‌ಮೀಟ್‌ಗೆ ದುಬಾರಿ ವಾಚ್ ಧರಿಸಿದಿದ್ದ ಶಾರುಖ್; ಬೆಲೆ ಕೇಳಿದ್ರೆ ಅಚ್ಚರಿ ಪಡ್ತೀರಿ

ಡೈಮಂಡ್ ಅತ್ಯಂತ ನಾಜೂಕಿನಿಂದ ಕತ್ತರಿಸಲಾಗಿದೆ. ಈ ವಾಚ್ ಕೇವಲ ಬೆಲೆಯಲ್ಲಿ, ಐಷಾರಾಮಿಯಲ್ಲಿ ಮಾತ್ರವಲ್ಲ, ಅತ್ಯಂತ ಆಕರ್ಷಕವಾಗಿ ತಯಾರಿಸಲಾಗಿದೆ. ಮೊದಲ ನೋಟಕ್ಕೆ ಈ ವಾಚ್ ಎಲ್ಲರನ್ನು ಸೆಳೆಯಲಿದೆ ಎಂದು ಜಾಕೋಬ್ ಆ್ಯಂಡ್ ಕಂಪನಿ ಹೇಳಿದೆ. ಹೌದು ಕಂಪನಿ ಹೇಳಿದಂತೆ ಅತ್ಯಂತ ಆಕರ್ಷಕ ವಿನ್ಯಾಸದಲ್ಲಿ ಈ ವಾಚ್ ತಯಾರಿಸಲಾಗಿದೆ. 

 

Introducing the Billionaire Timeless Treasure, a timepiece that took three and a half years to complete. This extraordinary watch is an unparalleled achievement, made up of 425 Asscher-cut Fancy Yellow and Fancy Intense Yellow diamonds totaling 216.89 carats. pic.twitter.com/b9Qt5oDErK

— Jacob&Co (@_Jacobandco)

 

ಈ ವಾಚ್ ತಯಾರಿಕೆಗೆ ಜಾಕೋಬ್ ಕಂಪನಿ ಬರೋಬ್ಬರಿ 3.5 ವರ್ಷ ಸಮಯ ತೆಗೆದುಕೊಂಡಿದೆ. 25 ಅತ್ಯಂತ ಪ್ರತಿಭಾನ್ವಿತ ಹಾಗೂ ನುರಿತ ತಜ್ಞರು ಕೆಲಸ ಮಾಡಿದ್ದಾರೆ. ಇದರಲ್ಲಿ ಬಳಸಿರುವ ಹಳದಿ ಡೈಮಂಡ್ ಅತ್ಯಂತ ವಿಶೇಷವಾಗಿದೆ. ಸಾಮಾನ್ಯವಾಗಿ ಬಳಿ ಡೈಮಂಡ್ ಎಲ್ಲೆಡೆ ಲಭ್ಯವಿದೆ. ಆದರೆ ಹಳದಿ ಡೈಮಂಡ್ ಅಪರೂಪದಲ್ಲಿ ಅಪರೂಪವಾಗಿದೆ. 

ಜಾಕೋಬ್ ಕಂಪನಿ ದುಬಾರಿ ವಾಚ್ ಬಿಡುಗಡೆ ಮಾಡುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ 260 ಕ್ಯಾರಟ್ ಬಿಳಿ ಡೈಮಂಡ್ ಮೂಲಕ ವಾಚ್ ತಯಾರಿಸಿ ಬಿಡುಗಡೆ ಮಾಡಿತ್ತು. ಇನ್ನು 2018ರಲ್ಲಿ 127 ಕ್ಯಾರಟ್ ಹಳದಿ ಡೈಮಂಡ್ ವಾಚ್ ಬಿಡುಗಡೆ ಮಾಡಿತ್ತು. ಇದರ ಬೆಲೆ 6 ಮಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. 

ಆರೋಗ್ಯ ಟ್ರ್ಯಾಕ್ ಮಾಡಲು Smart Watch ಬಳಸಿ ಆಸ್ಪತ್ರೆ ಸೇರಿದ ಯುವಕ!

ಜಾಕೋಬ್ ಕಂಪನಿ ಇದುವರೆಗೆ 21 ಅತ್ಯಂತ ದುಬಾರಿ ವಾಚ್ ಬಿಡುಗಡೆ ಮಾಡಿದೆ. 2018ರಲ್ಲಿ ಬಾಕ್ಸಿಂಗ್ ಲೆಜೆಂಡ್ ಫ್ಲಾಯ್ಡ್ ಮೇವೆದರ್ ಜಾಕೋಬ್ ಕಂಪನಿಯ ದುಬಾರಿ ವಾಚ್ ಖರೀದಿಸಿದ್ದಾರೆ. ಇನ್ನು ಇನ್ನು ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೋನಾಲ್ಡ್ ಈ ದುಬಾರಿ ವಾಚ್ ಖರೀದಿಸಿದ್ದಾರೆ. ಮೇವೆದರ್ ಹಾಗೂ ರೋನಾಲ್ಡೋ ಖರೀದಿಸಿದ ದುಬಾರಿ ವಾಚ್ ಬೆಲೆ ಸರಿಸುಮಾರ್ 18 ಮಲಿಯನ್ ಅಮೆರಿಕನ್ ಡಾಲರ್.
 

click me!