ಕೆಸರಿನಲ್ಲರಳಿದ ಕಮಲ: ಐಷಾರಾಮಿ ಬ್ಯೂಟಿ ಬ್ರಾಂಡ್‌ಗೆ ಮಾಡೆಲ್‌ ಆದ ಸ್ಲಂ ಹುಡುಗಿ

By Anusha KbFirst Published May 22, 2023, 2:14 PM IST
Highlights

ಐಷಾರಾಮಿ ಬ್ರಾಂಡ್‌ವೊಂದು ಈಗ ಸ್ಲಂನಲ್ಲಿ ಬೆಳೆದ ಹುಡುಗಿಯೊಬ್ಬಳಿಗೆ ಮಾಡೆಲ್ ಆಗುವ ಅವಕಾಶ ಕಲ್ಪಿಸಿದ್ದು, ಆ 14ರ ಹರೆಯದ ಬಾಲೆ ಅದರಲ್ಲಿ ಯಶಸ್ವಿಯೂ ಆಗಿದ್ದಾಳೆ. ಆಕೆಯೇ ಮಲೀಶಾ ಖರ್ವಾ.

ಮುಂಬೈ: ಬಹುತೇಕ ಐಷಾರಾಮಿ ಬ್ರಾಂಡ್‌ಗಳು ಈಗಾಗಲೇ ಫೇಮಸ್ ಆಗಿರುವ ನಟಿಯರನ್ನು ಮಾಡೆಲ್‌ಗಳನ್ನು ತಮ್ಮ ಪ್ರಚಾರದ ರಾಯಭಾರಿಗಳಾಗಿ ಮಾಡುತ್ತಾರೆ.  ಆದರೆ ಈಗ 'ದ ಯುವತಿ ಕಲೆಕ್ಷನ್' ಎಂಬ ಐಷಾರಾಮಿ ಬ್ರಾಂಡ್‌ ಈಗ ಸ್ಲಂನಲ್ಲಿ ಬೆಳೆದ ಹುಡುಗಿಯೊಬ್ಬಳಿಗೆ ಮಾಡೆಲ್ ಆಗುವ ಅವಕಾಶ ಕಲ್ಪಿಸಿದ್ದು, ಆ 14ರ ಹರೆಯದ ಬಾಲೆ ಅದರಲ್ಲಿ ಯಶಸ್ವಿಯೂ ಆಗಿದ್ದಾಳೆ. ಆಕೆಯೇ ಮಲೀಶಾ ಖರ್ವಾ,  14 ವರ್ಷದ ಈಕೆ ಐಷಾರಾಮಿ ಸೌಂದರ್ಯ ಬ್ರಾಂಡ್‌ಗೆ ಮಾಡೆಲ್ ಆಗಿದ್ದಾಳೆ. 

2020 ರಲ್ಲಿ ಮುಂಬೈನಲ್ಲಿ ಹಾಲಿವುಡ್ ನಟ ರಾಬರ್ಟ್ ಹಾಫ್‌ಮನ್ ಅವರ ಕಣ್ಣಿಗೆ ಮಲೀಶಾ ಕಂಡಿದ್ದಳು.  ಅವರು ನಂತರ ಆ ಹುಡುಗಿಗಾಗಿ ಗೋ ಫಂಡ್ ಮಿ ಎಂಬ ಫಂಡ್ ರೈಸಿಂಗ್ ಪೇಜ್‌ ಶುರು ಮಾಡಿದ್ದರು. ಪ್ರಸ್ತುತ ಈ 14 ವರ್ಷ ವಯಸ್ಸಿನ ಮಲೀಶಾ ಇನ್ಸ್ಟಾಗ್ರಾಮ್‌ನಲ್ಲಿ  ಎರಡು ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇವರು ಆಗಾಗ ತಾವು ಹಾಕುವ ಪೋಸ್ಟ್‌ಗಳಿಗೆ  #princessfromtheslum ಎಂಬ ಹ್ಯಾಶ್‌ಟ್ಯಾಗ್‌ನ್ನು ಹಾಕುತ್ತಾರೆ. ಇತ್ತೀಚೆಗೆ ಮಲೀಶಾ ಅವರು ಹಲವು ವಸ್ತುಗಳಿಗೆ ಮಾಡೆಲಿಂಗ್ ಮಾಡಿದ್ದು, 'ಲೈವ್ ಯುವರ್ ಫೇರಿಟೇಲ್' ಎಂಬ ಕಿರುಚಿತ್ರದಲ್ಲಿಯೂ ನಟಿಸಿದ್ದಾರೆ. 

Kriti Sanon: ಮಾಡೆಲಿಂಗ್‌​ ದಿನ ಅಳ್ತಾ ಮನೆಗೆ ಬಂದಿದ್ದೆ ಎಂದ ಕೃತಿಗೆ ಆಗಿದ್ದೇನು?

ಈಗ, ಈಕೆ ಫಾರೆಸ್ಟ್ ಎಸೆನ್ಷಿಯಲ್ಸ್‌ನ ಹೊಸ ಅಭಿಯಾನವಾದ 'ಯುವತಿ ಸೆಲೆಕ್ಷನ್‌'ಗೆ ರಾಯಭಾರಿ ಆಗಿದ್ದಾರೆ,  ಇದು ಯುವ ಮನಸ್ಸುಗಳನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿರುವ ಸಾಮಾಜಿಕ ಕಾರ್ಯವಾಗಿದೆ.  ಏಪ್ರಿಲ್‌ನಲ್ಲಿ, ಬ್ರ್ಯಾಂಡ್ Instagram ನಲ್ಲಿ ಮಲೀಶಾ (Maleesha Kharwa) ಇರುವ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಮಲೀಶಾ ತನ್ನ ಮಾಡೆಲಿಂಗ್ ಫೋಟೋಗಳನ್ನು ಹೊಂದಿರುವ ಅಂಗಡಿಗೆ ಪ್ರವೇಶಿಸುವುದನ್ನು ತೋರಿಸುತ್ತಿದೆ.  ವಿಡಿಯೋದಲ್ಲಿ ಮಲೀಶಾಳ ನಗುಮುಖ ಎಲ್ಲರನ್ನು ಸೆಳೆಯುತ್ತದೆ.  ಕನಸುಗಳು ನಿಜವಾಗಿಯೂ ನನಸಾಗುತ್ತವೆ ಎಂಬುದಕ್ಕೆ ಮಲೀಶಾ ಕಥೆಯು ಸುಂದರವಾದ ಸಾಕ್ಷಿಯಾಗಿದೆ. ಏಕೆಂದರೆ ಇದು ನಿಮ್ಮ ಕನಸುಗಳು ವಿಚಾರ ಎಂದು ಫಾರೆಸ್ಟ್ ಎಸೆನ್ಷಿಯಲ್ಸ್ (Forest Essentials) ವೀಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದೆ. 

ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದು, 5 ಮಿಲಿಯನ್‌ಗೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ.  4 ಲಕ್ಷಕ್ಕೂ ಅಧಿಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಅನೇಕರು ಮಲೀಶಾಳನ್ನು ಹೊಗಳಿದ್ದಾರೆ.  ಅವಳು ತನ್ನ ಯಶಸ್ಸನ್ನು ಸವಿಯುವುದನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ. ಆಕೆಗೆ ಭವಿಷ್ಯದಲ್ಲಿ ಹೆಚ್ಚಿನ ಅವಕಾಶ ಹಾಗೂ ಆಶೀರ್ವಾದ ಯಶಸ್ಸು ಸಿಗಲಿ ಎಂದು  ಒಬ್ಬರು ವೀಕ್ಷಕರು ಬರೆದಿದ್ದಾರೆ. ಇದನ್ನು ನೋಡಿ ತುಂಬಾ ಸಂತೋಷವಾಯಿತು ಮತ್ತುಈಕೆಯನ್ನು ಮಾಡೆಲ್ ಆಗಿಸಿದ ಬ್ರ್ಯಾಂಡ್‌ಗೆ ಚಪ್ಪಾಳೆ. ನಮ್ಮ ದೇಶದಲ್ಲಿ ಕಂದು ಬಣ್ಣದ  ಹುಡುಗಿಯರನ್ನು ಸೌಂದರ್ಯ ಬ್ರಾಂಡ್‌ಗಳನ್ನು ಪ್ರಚಾರ ಮಾಡಲು ಎಂದಿಗೂ ಪರಿಗಣಿಸುತ್ತಿರಲಿಲ್ಲ, ಈಗ ಸಮಯ ಬದಲಾಗಿದೆ  ಅವಳು ತುಂಬಾ ಸುಂದರವಾಗಿದ್ದಾಳೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಯಪ್ಪಾ..ಮಹಿಳೆಯರ ಒಳ ಉಡುಪಿನ ಜಾಹೀರಾತಿಗೆ ಪುರುಷರು!

ಇಲ್ಲಿ ತುಂಬಾ ಪಾಸಿಟಿವಿಟಿ ಇದೆ. ಆಕೆಯ ನಗು ತುಂಬಾ ಚೆನ್ನಾಗಿದೆ. ಇದು ಪ್ರತಿಯೊಬ್ಬ ಜನ ಸಾಮಾನ್ಯನಿಗೆ ಸಂಬಂಧಿಸಿದ ಮುಖವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಏತನ್ಮಧ್ಯೆ, ವೋಗ್ ಇಂಡಿಯಾಗೆ (Vogue India) ನೀಡಿದ ಸಂದರ್ಶನದಲ್ಲಿ, ಫಾರೆಸ್ಟ್ ಎಸೆನ್ಷಿಯಲ್ಸ್‌ನ (Forest Essentials) ಸಂಸ್ಥಾಪಕಿ ಮತ್ತು ಮುಖ್ಯ ವ್ಯವಸ್ಥಾಪಕ ನಿರ್ದೇಶಕಿ ಮೀರಾ ಕುಲಕರ್ಣಿ ಮಾತನಾಡಿ, ನಾವು ನಮ್ಮ ಯುವತಿ ಕಲೆಕ್ಷನ್‌  ಮೂಲಕ  ನಾವು ಕೇವಲ ಮಲೀಶಾಗೆ ಮಾತ್ರ ಬೆಂಬಲಿಸುತ್ತಿಲ್ಲ. ನಾವು  ಯುವ ಮನಸ್ಸುಗಳನ್ನು ಸಶಕ್ತಗೊಳಿಸಲು ಪಾಠಶಾಲೆಗೆ ಕೊಡುಗೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

Aishwarya Sheoran: ಮಾಡೆಲಿಂಗ್ ನಲ್ಲಿ ಮಿಂಚುತ್ತಿದ್ದಾಕೆ ಏಕಾಏಕಿ ಅಧಿಕಾರಿಯಾಗಿ ಸ್ಫೂರ್ತಿ ತುಂಬಿದಾಗ...

 
 
 
 
 
 
 
 
 
 
 
 
 
 
 

A post shared by @forestessentials

 

click me!