
ಕೈಗಳ ಅಲಂಕಾರಕ್ಕೆ ಮಹಿಳೆಯರು ಹೆಚ್ಚಿನ ಆಸಕ್ತಿ ತೋರುತ್ತಾರೆ. ಕೈ ಬೆರಳುಗಳಿಗೆ ನೇಲ್ ಪಾಲಿಶ್ ಹಚ್ಚಿಕೊಳ್ಳುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಮಹಿಳೆಯವರೆಗೆ ಬಹುತೇಕ ಎಲ್ಲ ಮಹಿಳೆಯರ ಕೈ ಬೆರಳಿನ ಉಗುರಿನಲ್ಲಿ ಚೆಂದದ ನೇಲ್ ಪಾಲಿಶ್ ಕುಣಿಯುತ್ತಿರುತ್ತದೆ. ಈಗಿನ ದಿನಗಳಲ್ಲಿ ಜೆಲ್ ನೇಲ್ ಪೇಂಟ್ ಕ್ರೇಜ್ ಹೆಚ್ಚಿದೆ. ಜೆಲ್ ನೇಲ್ ಪೇಂಟ್ ಮಾಡಿದ ಉಗುರು ಹೆಚ್ಚು ಸುಂದರವಾಗಿ ಕಾಣುತ್ತವೆ.
ಜೆಲ್ ನೇಲ್ (Gel Nail) ಪೇಂಟ್ ಸುಮಾರು ಒಂದು ತಿಂಗಳ ಕಾಲ ಇರುತ್ತದೆ. ಜೆಲ್ ನೇಲ್ ಪೇಂಟ್ ಮೆನಿಕ್ಯೂರ್ (Manicure) ಮಾಡಿದ್ರೆ ಪದೇ ಪದೇ ಮೆನಿಕ್ಯೂರ್ ಮಾಡಿಸಬೇಕಾಗಿಲ್ಲ. ಸಾಮಾನ್ಯ ನೇಲ್ ಪಾಲಿಶ್ ಗಿಂತ ಜೆಕ್ ನೇಲ್ ಪೇಂಟ್ ಆಕರ್ಷಕವಾಗಿರುತ್ತದೆ. ಜೆಲ್ ನೇಲ್ ಪೇಂಟ್ ಎಷ್ಟು ಚೆಂದವೋ ಅಷ್ಟೇ ಅಪಾಯಕಾರಿ. ಉಗುರಿನ ಸಿಪ್ಪೆಸುಲಿಯುವುದು ಮತ್ತು ಮುರಿಯವ ಭಯವಿರುತ್ತದೆ. ಜೆಲ್ ಮೆನಿಕ್ಯೂರ್ ವೇಳೆ ಯುವಿ ಲೈಟ್ ಅಥವಾ ಎಲ್ಇಡಿ ಲೈಟ್ ಬಳಸಲಾಗುತ್ತದೆ. ಈ ಬೆಳಕು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ನಂಬಲಾಗಿದೆ. 20 ನಿಮಿಷಗಳ ಕಾಲ ಯುವಿ ಕಿರಣಗಳಿಗೆ ಒಡ್ಡಿಕೊಂಡ ನಂತರ ಶೇಕಡಾ 20 ರಿಂದ 30ರಷ್ಟು ಜೀವಕೋಶಗಳು ಸಾಯುತ್ತವೆ. ಜೆಲ್ ನೇಲ್ ಪೇಂಟ್ ಮೆನಿಕ್ಯೂರನ್ನು ನಿಯಮಿತವಾಗಿ ಮಾಡಿದ್ರೆ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ ಎಂದು ಅನೇಕ ಸಂಶೋಧನೆಗಳು ಹೇಳಿವೆ. ಇದ್ರಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ನಾವಿಂದು ಹೇಳ್ತೇವೆ.
Dengue Vaccine: ಡೆಂಗ್ಯೂ ಜ್ವರಕ್ಕೆ ಸದ್ಯದಲ್ಲೇ ಬರಲಿದೆ ಮೊದಲ ಸ್ವದೇಶಿ ಲಸಿಕೆ
ಜೆಲ್ ಮೆನಿಕ್ಯೂರ್ ನಿಂದ ಕಾಡುತ್ತಾ ಕ್ಯಾನ್ಸರ್? : ಜೆಲ್ ಮೆನಿಕ್ಯೂರ್ ನಿಂದ ಕ್ಯಾನ್ಸರ್ ಕಾಡೋದಿಲ್ಲ. ಈ ಬಗ್ಗೆ ಯಾವುದೇ ಸೂಕ್ತ ದಾಖಲೆ ಇಲ್ಲ ಎನ್ನುತ್ತಾರೆ ತಜ್ಞರು. ಆದ್ರೆ ಕೆಮಿಕಲ್ ಇರುವ ಕಾರಣ ಇಂಥವುಗಳಿಂದ ದೂರವಿರಲು ತಜ್ಞರು ಸಲಹೆ ನೀಡ್ತಾರೆ. ಜೆಲ್ ಮೆನಿಕ್ಯೂರ್ ನಲ್ಲಿರುವ ಕೆಮಿಕಲ್ ಚರ್ಮದ ಆರೋಗ್ಯವನ್ನು ಹಾಳು ಮಾಡುತ್ತದೆ. ಕೆಲವು ಜೆಲ್ ನೇಲ್ ಪೇಂಟ್‌ಗಳು ಮೆಥಾಕ್ರಿಲೇಟ್ ಮತ್ತು ಬೆಂಜಾಯ್ಲ್ ಪೆರಾಕ್ಸೈಡ್‌ನಂತಹ ರಾಸಾಯನಿಕಗಳನ್ನು ಹೊಂದಿರುತ್ತವೆ. ಜೆಲ್ ನೇಲ್ ಪೇಂಟ್ ಹಚ್ಚುವುದ್ರಿಂದ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಜೆಲ್ ಮೆನಿಕ್ಯೂರ್ ಕ್ಯಾನ್ಸರ್ ಗೆ ಕಾರಣ ಎಂಬುದು ತಪ್ಪಾದ್ರೂ ಅಪರೂಪಕ್ಕೆ ಚರ್ಮದ ಕ್ಯಾನ್ಸರ್ ಗೂ ಇದು ಕಾರಣವಾಗಬಹುದು ಎನ್ನುತ್ತಾರೆ ತಜ್ಞರು. ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಸಾಧನವನ್ನು ತಯಾರಿಸಲಾಗಿದೆ. ಆದ್ರೂ ಅದ್ರ ಬಗ್ಗೆ ಹೆಚ್ಚಿನ ಅಧ್ಯಯನ ನಡೆದಿಲ್ಲ. ಪ್ರಸ್ತುತ ಸಾಧನವು ಮಾನವ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ ಇಲ್ಲವೇ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.
Health Tips : Knee ಸರ್ಜಿರಿ ಆಗಿದ್ಯಾ? ಇಂತ ಕೆಲ್ಸವೆಲ್ಲಾ ಮಾಡೋದು ಬೇಡ ಬಿಡಿ
ಜೆಲ್ ನೇಲ್ ಪೇಂಟ್ ಮೆನಿಕ್ಯೂರ್ ಮಾಡುವ ವೇಳೆ ಎಚ್ಚರವಹಿಸಿ : ಜೆಲ್ ಮೆನಿಕ್ಯೂರನ್ನು ನಿರಂತರವಾಗಿ ಮಾಡಬಾರದು. ಎರಡು, ಮೂರು ತಿಂಗಳಿಗೊಮ್ಮೆ ಜೆಲ್ ಮೆನಿಕ್ಯೂರ್ ಮಾಡೋದನ್ನು ತಪ್ಪಿಸಿ. ನೀವು ಆರು ತಿಂಗಳು ಅಥವಾ ವರ್ಷಕ್ಕೊಮ್ಮೆ ಇದನ್ನು ಮಾಡಬೇಕು. ಉಗುರುಗಳನ್ನು ರಕ್ಷಿಸಲು ಉತ್ತಮ ಗುಣಮಟ್ಟದ ಬೇಸ್ ಕೋಟ್ ಮತ್ತು ಟಾಪ್ ಕೋಟ್ ಬಳಸಿ. ಯಾವುದೇ ರೀತಿಯ ಅಲರ್ಜಿಯನ್ನು ಹೊಂದಿದ್ದರೆ ಜೆಲ್ ನೇಲ್ ಮೆನಿಕ್ಯೂರ್ ಮಾಡಿಕೊಳ್ಳಬೇಡಿ. ಜೆಲ್ ನೇಲ್ ಪಾಲಿಷ್ ಹಚ್ಚುವ ಮೊದಲು ಪ್ಯಾಚ್ ಟೆಸ್ಟ್ ಮಾಡಬೇಕು.ಉಗುರಿಗೆ ಬಣ್ಣ ಅನ್ವಯಿಸುವ ಮೊದಲು ಸಣ್ಣ ಜಾಗಕ್ಕೆ ಜೆಲ್ ನೇಲ್ ಹಚ್ಚಿ ಪರೀಕ್ಷಿಸಿ. 24 ಗಂಟೆಗಳ ಕಾಲ ಕಾಯಿರಿ. ಈ ಸಮಯದಲ್ಲಿ ಚರ್ಮ ಕೆಂಪಾಗುವುದು, ಊತ ಕಾಣಿಸಿಕೊಳ್ಳುವುದು, ತುರಿಕೆ ಮುಂತಾದ ರೋಗಲಕ್ಷಣ ಕಾಣಿಸಿಕೊಂಡ್ರೆ ಜೆಲ್ ಮೆನಿಕ್ಯೂರ್ ಮಾಡಬೇಡಿ. ಯಾವುದೇ ಸಮಸ್ಯೆ ಕಾಣಿಸಿಲ್ಲವೆಂದ್ರೆ ನೀವು ಜೆಲ್ ಮೆನಿಕ್ಯೂರ್ ಗೆ ಒಳಗಾಗಬಹುದು ಎನ್ನುತ್ತಾರೆ ತಜ್ಞರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.