ವಧುವಿನಂತೆ ಡ್ರೆಸ್‌ ಮಾಡಿಕೊಂಡು ಫೋಟೋಶೂಟ್ ಮಾಡಿಸಿದ ಮದುವೆ ಗಂಡು! ಹಿಂಗ್ಯಾಕೆ ಮಾಡಿದ?

By Suvarna News  |  First Published May 20, 2023, 12:04 PM IST

ವೆಡ್ಡಿಂಗ್ ಶೂಟ್‌ನಲ್ಲಿ ಮದುಮಗ ತನ್ನ ಕೈ ಹಿಡಯೋ ಹುಡುಗಿ ಕಡೆ ಆರಾಧನಾ ದೃಷ್ಟಿಯಿಂದ ನೋಡೋದನ್ನ ಕಂಡಿರ್ತೀವಿ. ಆದರೆ ಇಲ್ಲೊಬ್ಬ ಬ್ರೈಡಲ್‌ ಡ್ರೆಸ್ ಮೇಕಪ್‌ನಲ್ಲಿ ಮದುಮಗಳಿಗೇ ಢಿಚ್ಚಿ ಕೊಟ್ಟಿದ್ದಾನೆ. ಅಷ್ಟಕ್ಕೂ ಆತ ಏನಾಗಿದ್ದ.


ಪತ್ರುನಿ ಚಿದಾನಂದ ಶಾಸ್ತ್ರಿ ಅನ್ನೋ ಹೆಸರಿನ ವ್ಯಕ್ತಿಯ ಇನ್‌ಸ್ಟಾಗ್ರಾಂನಲ್ಲಿ ಇಣುಕಿದರೆ ಈತ ಯಾವ ಬಗೆಯ ವ್ಯಕ್ತಿ ಅನ್ನೊ ಕಲ್ಪನೆ ಬರುತ್ತೆ. ಜೆಂಡರ್‌ ಫ್ಲೂಯಿಡ್‌ ಅಂದರೆ ಒಂದೇ ಲಿಂಗಕ್ಕೆ ಅಂಟಿಕೊಳ್ಳದ ವ್ಯಕ್ತಿ. ಆಗಾಗ ಹೆಣ್ಣಿನಂತೆ, ಆಗಾಗ ಗಂಡಿನ ಹಾಗೆ ಇರಬಲ್ಲ ವ್ಯಕ್ತಿ. ಸ್ವಲ್ಪ ತಡವಾಗಿ ಈತನ ಮದುವೆ ಸಂಗತಿ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ ಮದುವೆಗಳಲ್ಲಿ ಹುಡುಗಿ ಅಂದವಾಗಿ ಅಲಂಕರಿಸಿರುತ್ತಾಳೆ. ಹುಡುಗ ಶೇರ್ವಾನಿ ತೊಟ್ಟುಕೊಟ್ಟು ಬರುತ್ತಾನೆ. ಆತನ ಮೇಕಪ್, ಅಂದ ಚಂದದ ಬಗ್ಗೆ ಇತರರು ಗಮನ ಹರಿಸೋದು ಕಡಿಮೆ. ಮೊದಲಿಂದಲೂ ಲಿಂಗ ಸಮಾನತೆ ಬಗ್ಗೆ ದನಿ ಎತ್ತುತ್ತಾ ಬಂದಿದ್ದ ಈ ವ್ಯಕ್ತಿಗೆ ಸಮಾಜ ಎರಡು ಜೆಂಡರ್‌ಗಳ ನಡುವೆ ಸೃಷ್ಟಿಸುವ ಅಂತರ, ಭಿನ್ನತೆ ಬಗ್ಗೆ ಅಸಮಾಧಾನ ಇತ್ತು. ಆ ಬಗ್ಗೆ ಈತ ಪದೇ ಪದೇ ಪ್ರಶ್ನೆ ಮಾಡುತ್ತಲೂ ಇದ್ದ.

ಇಂಥಾ ಹೊತ್ತಲ್ಲೇ ಒಬ್ಬ ಹುಡುಗಿ ಮೇಲೆ ಈತನಿಗೆ ಲವ್‌ ಆಗುತ್ತೆ. ಆಕೆಯ ಜೊತೆಗೆ ಒಂದಿಷ್ಟು ಓಡಾಟದ ಬಳಿಕ ಇಬ್ಬರಿಗೂ ಮದುವೆ ಫಿಕ್ಸ್ ಆಗುತ್ತೆ. ಅಲ್ಲೇ ಒಂದು ಹೊಸ ಐಡಿಯಾ ಇಂಪ್ಲಿಮೆಂಟೇಶನ್‌ಗೆ ಈತ ಮುಂದಾಗ್ತಾನೆ. ಈ ಬಗ್ಗೆ ಆತ ವಿವರಿಸೋದು ಹೀಗೆ..

Tap to resize

Latest Videos

'ಹಿರಿಯರು ಮದುವೆಯ ದಿನಾಂಕವನ್ನು ನಿಗದಿಪಡಿಸಿದರು. ನಂತರದ್ದು ಮದುವೆಯ ಶಾಪಿಂಗ್ ಸಂಭ್ರಮ. ನನ್ನ ಹುಡುಗಿಯ ಕಡೆಯವರು ಅವಳಿಗೆ ಸೊಗಸಾದ ಬ್ರೈಡಲ್ ವೇರ್, ಮೇಕಪ್, ಆಭರಣಗಳ ಖರೀದಿಯಲ್ಲಿ ತೊಡಗಿದರು. ಎಲ್ಲರೂ ಅವಳ ಉಡುಪಿಗೆ, ಅವಳ ಆಭರಣಗಳಿಗೇ ಮಹತ್ವ ನೀಡುತ್ತಿದ್ದರು. ಮದುವೆ ಹುಡುಗನಾದ ನನ್ನ ಉಡುಗೆ ತೊಡುಗೆ, ಮೇಕಪ್ ಬಗ್ಗೆ ಯಾರ ಗಮನವೂ ಇರಲಿಲ್ಲ. ಈ ಬಗ್ಗೆ ಕೇಳಿದರೆ, 'ನಿಂಗೊಂದು ಶೇರ್ವಾನಿ ಕೊಡಿಸೋಣ ಬಿಡು' ಅಂದು ಸುಮ್ಮನಾಗಿ ಬಿಡುತ್ತಿದ್ದರು. ನನಗೆ ಇದು ಸರಿ ಕಾಣಲಿಲ್ಲ. ಇದನ್ನು ನನ್ನ ಹುಡುಗಿಯ ಬಳಿಯೂ ಹೇಳಿದೆ. ಅವಳು ತೆಗೆದ ಬಾಯಿಗೆ ಹಾಗಿದ್ರೆ ನೀವ್ಯಾಕೆ ವಧುವಿನ ಹಾಗೆ ಬ್ರೈಡಲ್ ಉಡುಪು ಧರಿಸಬಾರದು?' ಅಂತ ಕೇಳಿದಳು. ಅವಳದನ್ನು ತಮಾಷೆಗೆ ನನ್ನ ಕಾಲೆಳೆಯಲು ಹೇಳಿದಳೋ ಅಥವಾ ಮನಃಪೂರ್ವಕವಾಗಿ ಹೇಳಿದಳೋ ತಿಳಿಯದು, ಆದರೆ ನನಗೆ ಜಿಗ್ಗನೆ ಐಡಿಯಾ ಹುಟ್ಟಿಕೊಂಡಿತು. ನನ್ನ ಲಿಂಗ ಸಮಾನತೆಯ ಯೋಚನೆಗಳಿಗು ಇದು ಸರಿಹೊಂದುತ್ತದೆ ಅನಿಸಿತು.

ಅಕ್ಕನಿಗೆ ಪ್ರಪೋಸ್ ಮಾಡಿದ, ತಂಗಿಯನ್ನೂ ಮದ್ವೆಯಾದ, ಕಾರಣ ಗೊತ್ತಾದ್ರೆ ದಂಗಾಗ್ತೀರಾ!

ನಾನು ಒಂದು ದಿನದ ಮಟ್ಟಿಗೆ ವಧುವಾದೆ!

ಹೌದು, ವಧುವಿನ ಹಾಗೆ ಅಲಂಕರಿಸಿಕೊಂಡು ಫೋಟೋಶೂಟ್ ಮಾಡಿಸಲು ನಿರ್ಧರಿಸಿದೆ. ಐಡಿಯಾ ಬಂದ ಕೂಡಲೇ ನನ್ನ ಸ್ಟೈಲಿಸ್ಟ್ ಸ್ನೇಹಿತ ಅನಿಕೇತ್‌ನನ್ನು ಸಂಪರ್ಕಿಸಿದೆ, ನಾನು ಈ ಉದಾಹರಣೆಯನ್ನು ಮುಂದಕ್ಕೆ ಇರಿಸಿದೆ. ಶೀಘ್ರದಲ್ಲೇ, ಅದೇ ರೀತಿಯಲ್ಲಿ ನಾನು ಬ್ರೈಡಲ್ ಶೂಟ್(Bridal shoot) ಮಾಡಬೇಕು ಅಂತ ವಿವರಿಸಿದೆ. ಅನಿಕೇತ್ ಪಾಸಿಟಿವ್ ಆಗಿ ಉತ್ಸಾಹದಿಂದ ಪ್ರತಿಕ್ರಿಯೆ ನೀಡಿದರು. ರವೀಂದ್ರನಾಥ ಟ್ಯಾಗೋರ್ ಅವರ ಕವಿತೆಯಲ್ಲಿ ಬರುವ ಪೋತ್ರೋಲೇಖಾ ಪಾತ್ರದಂತೆ ನನ್ನನ್ನು ರೆಡಿ ಮಾಡಲು ಅವರ ಟೀಮ್ ನಿರ್ಧರಿಸಿತು. ಮುಂದಿನ ವಾರಗಳಲ್ಲಿ, ಸಾಯಿಕುಮಾರ್ ಮತ್ತು ರೆಹಾನ್, ಮೇಕಪ್ ಕಲಾವಿದ ವೈಭವ್ ಸನ್ನಿ ಮತ್ತು ಛಾಯಾಗ್ರಾಹಕ ಅನಿಂಧ್ಯಾ ಬಿಸ್ವಾಸ್ ಅವರಿಂದ ರೇನುಸಾ ಎಂಬ ಲೇಬಲ್ ಅನ್ನು ಅನಿಕೇತ್ ಸಂಪರ್ಕಿಸಿದರು ಮತ್ತು ಈ ಚಿತ್ರೀಕರಣವನ್ನು ನಿರ್ವಹಿಸಿದರು. ನಾವು ಅನಿಕೇತ್ ಶಾ ಅವರ ಬ್ರ್ಯಾಂಡ್ ಫ್ಲರ್ಟ್ ಡೈಮಂಡ್‌ನಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಆಭರಣಗಳನ್ನು(Jwellary) ಬಳಸಿದೆವು. ಮತ್ತು ಫೀನಿಕ್ಸ್ ಅರೆನಾದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಿದೆವು.

'ಪುರುಷರು ಏಕೆ ವಧು ಆಗಬಾರದು?'ಎಂಬ ಚಿಂತನೆಯೊಂದಿಗೆ ನಾನು ಮದುವೆಯಾಗಲು ಸಿದ್ಧವಾಗಿರುವ ವಧುವಿನಂತೆ (Bride) ಅಲಂಕರಿಸಲ್ಪಟ್ಟೆ.

ನನ್ನ ವೇಷಭೂಷಣವು ಸಾಂಪ್ರದಾಯಿಕ ಬೆಂಗಾಲಿ ವಧುವಿನಂತಿತ್ತು. ಅದ್ಭುತವಾದ ರೇಷ್ಮೆ(Silk) ಸೀರೆಯೊಂದಿಗೆ ವಿಶೇಷ ಆಭರಣಗಳ ಮೂಲಕ ನನ್ನನ್ನು ಅಲಂಕರಿಸಲಾಗಿತ್ತು.

ಸಂಬಂಧದಲ್ಲಿ ಡೋರ್‌ಮ್ಯಾಟ್ ಆಗಬಾರದು ಅಂದ್ರೆ ಹೇಗಿರಬೇಕು?

ಫೊಟೋಗಳ ಮೊದಲ ಔಟ್‌ಪುಟ್ ಬಂದ ನಂತರ, ನಾನು ಅದನ್ನು ನನ್ನ ಹುಡುಗಿ ಜೊತೆ ಹಂಚಿಕೊಂಡೆ. ನಾನು ಅಷ್ಟು ಸೊಗಸಾಗಿ ಡ್ರೆಸ್ ಮಾಡಿರುವುದನ್ನು ನೋಡಿ ಅವಳು ಗಾಬರಿ ಮತ್ತು ರೋಮಾಂಚನಗೊಂಡಳು, ಮತ್ತು ಹಾಗೆ ಸುತ್ತಾಡಬೇಡಿ ಅಥವಾ ಯಾರಾದರೂ ನಿಮ್ಮನ್ನು ಮದುವೆಯಾಗಲು ಬಯಸಿದರೆ ಕಷ್ಟ ಎಂದು ನಕ್ಕಳು.

ಈ ಫೋಟೋಶೂಟ್‌ ನನ್ನನ್ನು ಹೆಚ್ಚು ಸಂವೇದನಾಶೀಲನನ್ನಾಗಿ (Sensitive) ಮಾಡಿತು. ಅವಳ ಬಗ್ಗೆ ಅರಿತುಕೊಳ್ಳಲೂ ಸಹಾಯ ಮಾಡಿತು' ಎನ್ನುತ್ತಾರೆ ಪತ್ರುನಿ. ಇದಾಗಿ ಕೆಲ ಸಮಯ ಕಳೆದಿದೆ. ಈಗ ಈ ಇಬ್ಬರೂ ಸುಖ ಸಂಸಾರಿಗಳಾಗಿದ್ದಾರೆ.

click me!