ಬಿಗ್‌ಬಾಸ್ ಮುಗ್ತಿದ್ದಂತೆ ಸುದೀಪ್, ಚಕ್ರವರ್ತಿ ಚಂದ್ರಚೂಡ ವಿರುದ್ಧ ಕಮಿಷನರ್‌ಗೆ ದೂರು!

Published : Jan 21, 2026, 12:03 PM IST
Chakravarthy Chandrachud Varasdara

ಸಾರಾಂಶ

ನಟ ಕಿಚ್ಚ ಸುದೀಪ್ ಮತ್ತು ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ ವಿರುದ್ಧ ಕಾಫಿ ತೋಟದ ಮಾಲೀಕರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. 'ವಾರಸ್ದಾರ' ಧಾರಾವಾಹಿ ಚಿತ್ರೀಕರಣದ ಒಪ್ಪಂದದಂತೆ ಹಣ ಪಾವತಿಸದೆ ವಂಚಿಸಿದ್ದಾರೆ ಮತ್ತು ತೋಟಕ್ಕೆ ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೆಂಗಳೂರು: ಚಂದನವನದ ನಟ ಕಿಚ್ಚ ಸುದೀಪ್ ಮತ್ತು ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ಕಾಫಿ ತೋಟದ ಮಾಲೀಕರು ದೂರು ಸಲ್ಲಿಕೆ ಮಾಡಿದ್ದಾರೆ. ಚಕ್ರವರ್ತಿ ಚಂದ್ರಚೂಡ ಬಿಗ್‌ಬಾಸ್ ಶೋನ ಮಾಜಿ ಸ್ಪರ್ಧಿ ಮತ್ತು ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಧಾರಾವಾಹಿ ಚಿತ್ರೀಕರಣಕ್ಕಾಗಿ ಒಪ್ಪಂದ ಮಾಡಿಕೊಂಡು ಕಾಫಿ ತೋಟ ಪಡೆದುಕೊಂಡಿದ್ದರು. ಧಾರಾವಾಹಿ ಚಿತ್ರೀಕರಣ ಅರ್ಧಕ್ಕೆ ನಿಂತಿದ್ದರಿಂದ ಒಪ್ಪಂದದ ಪ್ರಕಾರ ಹಣ ಪಾವತಿಸದೇ ವಂಚಿಸಿದ್ದಾರೆ ಎಂದು ತೋಟದ ಮಾಲೀಕರು ಆರೋಪಿಸಿದ್ದಾರೆ.

ಹಣ ನೀಡದೇ ವಂಚಿಸಿದ್ದಾರೆ ಎಂದು ಆರೋಪಿಸಿರುವ ಕಾಫಿ ತೋಟದ ಮಾಲೀಕರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರೀಕರಣಕ್ಕಾಗಿ ಕಾಫಿ ತೋಟ ಮತ್ತು ಮರಗಳನ್ನು ನಾಶ ಮಾಡಿರುವ ಆರೋಪವೂ ಕೇಳಿ ಬಂದಿದೆ.

ಕಾಫಿ ತೋಟ ಮತ್ತು ಮನೆಯಲ್ಲಿನ ಚಿತ್ರೀಕರಣಕ್ಕಾಗಿ ಒಪ್ಪಂದ

ಈ ಕುರಿತು ಮಾತನಾಡಿರುವ ಕಾಫಿ ತೋಟದ ಮಾಲೀಕ ದೀಪಕ್, ನಮ್ಮೊಂದಿಗೆ ಎರಡು ವರ್ಷಕ್ಕಾಗಿ ಮಾಡಿಕೊಳ್ಳಲಾಗಿತ್ತು. ವಾರಸ್ದಾರ ಧಾರಾವಾಹಿಗಾಗಿ ನಮ್ಮ ಮನೆ ಮತ್ತು ಕಾಫಿ ತೋಟದಲ್ಲಿ ಚಿತ್ರೀಕರಣ ಮಾಡುವ ಒಪ್ಪಂದವಾಗಿತ್ತು. ಶೂಟಿಂಗ್ ಆರಂಭವಾದ ಕೆಲವೇ ದಿನಗಳಲ್ಲಿ ಚಿತ್ರೀಕರಣ ಸ್ಥಗಿತಗೊಂಡಿತ್ತು ಎಂದು ಹೇಳಿದ್ದಾರೆ.

60ರ ಪೈಕಿ ನೀಡಿದ್ದು 10 ಲಕ್ಷ ರೂಪಾಯಿ

ಈ ಹಿಂದೆ ನಮ್ಮ ನಡುವಿನ ಒಪ್ಪಂದದ ಪ್ರಕಾರ 95 ಲಕ್ಷ ರೂಪಾಯಿ ನೀಡಬೇಕೆಂದು ಸುದೀಪ್ ಮತ್ತು ಚಕ್ರವರ್ತಿ ಚಂದ್ರಚೂಡ ವಿರುದ್ಧ ದೂರು ದಾಖಲಿಸಿದ್ದೆ. ಆ ಸಂದರ್ಭದಲ್ಲಿ ಸುದೀಪ್ ಅವರು 60 ಲಕ್ಷ ರೂಪಾಯಿ ನೀಡುವ ಭರವಸೆಯನ್ನು ನೀಡಿದ್ದರಿಂದ ದೂರು ಹಿಂಪಡೆದುಕೊಂಡಿದ್ದೆ. ಅಂದು 10 ಲಕ್ಷ ರೂಪಾಯಿಯ ಚೆಕ್ ನೀಡಿದ ಸುದೀಪ್ ಅವರು ಬಾಕಿ ಮೊತ್ತ ನೀಡದೇ ವಂಚಿಸಿದ್ದಾರೆ ಎಂದು ದೀಪಕ್ ಆರೋಪಿಸಿದ್ದಾರೆ.

ಹಣ ನೀಡದ ಹಿನ್ನೆಲೆ ಮತ್ತೊಮ್ಮೆ ನಟ ಕಿಚ್ಚ ಸುದೀಪ್ ಮತ್ತು ಮ್ಯಾನೇಜರ್ ಚಕ್ರವರ್ತಿ ಚಂದ್ರಚೂಡ ವಿರುದ್ಧ ಮತ್ತೊಮ್ಮೆ ದೂರು ದಾಖಲಿಸಿರೋದಾಗಿ ದೀಪಕ್ ಹೇಳಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ವಾರಸ್ದಾರ ಧಾರಾವಾಹಿ ಪ್ರಸಾರವಾಗಿತ್ತು.

ಇದನ್ನೂ ಓದಿ: ಮಾರ್ಕ್ ಸುದೀಪ್ ಆಡಿದ ಮಾತುಗಳನ್ನು ಡಿಕೋಡ್ ಮಾಡಿದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ

ವಾರಸ್ದಾರ ಧಾರಾವಾಹಿ

ಚಿಕ್ಕಮಗಳೂರು ತಾಲೂಕಿನ ಬೈಗೂರು‌ ಗ್ರಾಮದಲ್ಲಿ ವಾರಸ್ದಾರ ಧಾರಾವಾಹಿ ಚಿತ್ರೀಕರಣ ನಡೆಸಲಾಗಿತ್ತು. ಕಿಚ್ಚ ಸುದೀಪ್ ಧಾರಾವಹಿ ನಿರ್ಮಾಣ ಮಾಡಿದ್ದು, ಚಿತ್ರೀಕರಣಕ್ಕೆ ದೀಪಕ್ ‌ಮಯೂರ್ ಅವರ ಮನೆಯನ್ನು ಬಾಡಿಗೆ ಪಡೆದುಕೊಳ್ಳಲಾಗಿತ್ತು. ಈ ಧಾರಾವಾಹಿಯಲ್ಲಿ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಚಿತ್ರಾಲಿ ಮತ್ತು ಯಗ್ನಾ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು. ಹೆಣ್ಣುಮಗು ಜನಿಸಿದಾಗ ಗ್ರಾಮದ ವಾರಸ್ದಾರಿಕೆಯ ಹಕ್ಕನ್ನು ಕಳೆದುಕೊಳ್ಳಬಾರದೆಂದು ತಾಯಿ ಹೆಣ್ಣು ಮಗುವನ್ನು ಗಂಡು ಎಂದು ಸುಳ್ಳು ಹೇಳುತ್ತಾರೆ. ಈ ಸುಳ್ಳಿನ ಸುತ್ತ ಕಥೆ ಸಾಗುತ್ತದೆ.

ಇದನ್ನೂ ಓದಿ: BBK 12: ಕುರುಬ Vs ಗೌಡ: ವೋಟಿಂಗ್‌ನಲ್ಲಿ ಜಾತಿ ರಾಜಕಾರಣಕ್ಕೆ ಕ್ಯಾಕರಿಸಿ ಉಗಿದ ಬಿಗ್‌ಬಾಸ್ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪ್ರಿಯಾಂಕಾ ಯಶಸ್ಸಿನಿಂದಾಗಿ ಮಗನಿಗೆ ಸರಿಯಾದ ಆರೈಕೆ ಸಿಗಲಿಲ್ಲ, ಒಬ್ಬಂಟಿಯಾಗೇ ಬೆಳೆದ: ತಾಯಿ ಮಧು ಚೋಪ್ರಾ ಬೇಸರ
ಹೊತ್ತಿ ಉರಿದ ಹಾಲಿವುಡ್.. ಟೇಲರ್ ಸ್ವಿಫ್ಟ್-ಬ್ಲೇಕ್ ಲೈವ್ಲಿಗೆ 'ಮೀನ್ ಗರ್ಲ್ಸ್' ಪಟ್ಟ;ಇದೆಂಥಾ ದುರ್ಗತಿ ನೋಡಿ..!