
ಬೆಂಗಳೂರು (ಜ.20): ಬಿಗ್‌ಬಾಸ್ ಫಿನಾಲೆ ಮುಗಿದು ಎರಡು ದಿನಗಳಾಗಿವೆ. ವಿನ್ನರ್ ಗಿಲ್ಲಿ ನಟ ಮಳವಳ್ಳಿಗೆ ಹೋದವರು ನಾಪತ್ತೆಯಾಗಿದ್ದಾರೆ. ಇನ್ನೂ ಕೂಡ ಅವರು ಯಾವ ಮಾಧ್ಯಮಗಳಿಗೂ ಸಿಕ್ಕಿಲ್ಲ. ಇದರ ನಡುವೆ ಫಿನಾಲೆಯಲ್ಲಿದ್ದ 6 ಜನರ ಪೈಕಿ ಬಹುತೇಕ ಎಲ್ಲರೂ ಮಾಧ್ಯಮಗಳ ಜೊತೆ ಮಾತನಾಡಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇಂದು ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿ ಕಾವ್ಯಾ ಶೈವ, ಧನುಷ್ ಹಾಗೂ ಧ್ರುವಂತ್ ಅವರ ಸಂದರ್ಶನ ಪ್ರಕಟವಾಗಿವೆ. ಕಾವ್ಯಾ ಶೈವ ತಮ್ಮ ಮಾತಿನಲ್ಲಿ ಗಿಲ್ಲಿ ಜೊತೆಗಿನ ಸ್ನೇಹ ಶಾಶ್ವತವಾಗಿ ಮುಂದುವರಿಸೋದಾಗಿ ಹೇಳಿದ್ದು, ಭವಿಷ್ಯದಲ್ಲಿ ಆತನ ಜೊತೆ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದಿದ್ದಾರೆ.
ಇನ್ನೊಂದೆಡೆ ಬಿಗ್‌ಬಾಸ್ ಮುಗಿದ ನಂತರವೂ ಧ್ರುವಂತ್ ಹಾಗೂ ಅಶ್ವಿನಿ ಗೌಡ ಅವರಿಗೆ ಗಿಲ್ಲಿಯೇ ಟಾರ್ಗೆಟ್ ಆಗಿದ್ದಾರೆ. ಬಿಗ್‌ಬಾಸ್ ವಿನ್ನರ್ ಘೋಷಣೆ ಆದ ಬಳಿಕ ಗಿಲ್ಲಿಗೆ ಅಭಿನಂದನೆ ಸಲ್ಲಿಸಿದ ಇವರಿಬ್ಬರೂ ನಂತರದ ಸಂದರ್ಶನದಲ್ಲಿ ಗಿಲ್ಲಿ ಬಡವನ ವೇಷ ಹಾಕಿಕೊಂಡು ಬಿಗ್‌ಬಾಸ್ ಗೆದ್ದಿದ್ದಾರೆ ಅನ್ನೋ ಅರ್ಥದಲ್ಲಿ ಮಾತನಾಡಿದ್ದಾರೆ. ಇವರ ಈ ಮಾತುಗಳೀಗ ಚರ್ಚೆಗೆ ಗ್ರಾಸವಾಗಿದೆ. "ಬಡವರ ಮಕ್ಕಳು ಬೆಳಿಬೇಕು ಎನ್ನುವುದು ನಟ ಡಾಲಿ ಧನಂಜಯ್ ಅವರ ಡೈಲಾಗ್. ಆದರೆ ಇಲ್ಲಿ ಪ್ರಶ್ನೆ ಗಿಲ್ಲಿ ನಿಜವಾಗಿಯೂ ಬಡವನಾ ಎಂಬುದು. ನಿಜವಾದ ಬಡವ ಮತ್ತು ಬಡವನಂತೆ ಕಾಣಿಸಿಕೊಳ್ಳುವ ಗೆಟಪ್ ಎರಡೂ ಒಂದೇ ಅಲ್ಲ" ಎಂದು ಹೇಳಿದ್ದರು. ಇದು ಚರ್ಚೆಯ ವಿಚಾರವಾಗಿತ್ತು.
ಗಿಲ್ಲಿ ಬಡವನ ಗೆಟಪ್‌ನಲ್ಲಿ ವಿನ್ನರ್ ಆದರು ಎಂದ ಅಶ್ವಿನಿ ಗೌಡ, "ಗಿಲ್ಲಿಯನ್ನು ಬಡವ ಎಂದು ಕರೆಯುವುದು ತಪ್ಪು. ಬಡತನವನ್ನು ಯಾವತ್ತೂ ಸ್ಟ್ರಾಟಜಿ ಕಾರ್ಡ್ ಆಗಿ ಬಳಸಬಾರದು. ಬಹುಶಃ ಗಿಲ್ಲಿಯ ಈ ಗೆಟಪ್ ಮತ್ತು ಅವರ ಆಟ ಜನರಿಗೆ ಇಷ್ಟವಾಗಿರಬಹುದು" ಎಂದು ಹೇಳಿದ್ದರು.
ಇನ್ನು ಇದೇ ವಿಚಾರದ ಬಗ್ಗೆ ಮಾತನಾಡಿರುವ ಬಿಗ್‌ಬಾಸ್ 12 ಸ್ಪರ್ಧಿ ಧ್ರುವಂತ್, ಗಿಲ್ಲಿ ಎಲ್ಲಿಯೂ ತಾನು ಬಡವ ಎಂದು ಹೇಳಿಕೊಂಡಿಲ್ಲ. ಆದರೆ, ತೋರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
'ನಾನು ಬರೀ ಬನಿಯನ್, ಚಡ್ಡಿ ಹಾಕೊಂಡು ಇದ್ರೆ ನೀವೇನು ಶ್ರೀಮಂತ ಅಂತೀರಾ? ಗಿಲ್ಲಿ ಬಳಿ ಎಂಜಿ ಹೆಕ್ಟರ್ ಗಾಡಿ ಇದೆ. ಹೊಸ ಗಾಡಿಗೆ 24 ಲಕ್ಷ ಮೇಲೆ ಇದೆ. ಸೆಕೆಂಡ್ ಹ್ಯಾಂಡ್ ಗಾಡಿ ಅಂದೇ ತಿಳಿದುಕೊಳ್ಳೋಣ 14 ಲಕ್ಷ ಇರಬಹುದು. ಅದರಲ್ಲಿ ಓಡಾಡ್ತಾರೆ ಆತ ಹೆಂಗೆ ಬಡವ ಆಗ್ತಾನೆ. ಒಂದು ಎತ್ತು ಇಟ್ಕೊಂಡು, ಹೊಲ ಕೂಡ ಇಲ್ಲ. ಬೇರೆಯವರ ಹೊಲದಲ್ಲಿ ದುಡಿಮೆ ಮಾಡ್ತಾರೆ. ಪ್ರತಿ ದಿನ ಕೂಲಿ ಬಂದರೆ ಅವರಿಗೆ ಊಟ. ನಮ್ಮ ಮನೆಯಲ್ಲೂ ಚಿಕ್ಕ ತೋಟ ಇದೆ. ಅಲ್ಲಿ ಕೆಲಸಕ್ಕೆ ಬರ್ತಾರೆ ಅವರು. ಅವರಿಗೆ ಒಂದು ಮನೆಗೆ ಕೂಡ ಇಷ್ಟ ಇದೆ. ಬದುಕು ಕಟ್ಟಿಕೊಳ್ಳೋಕೆ ಊರಿಂದ ಊರಿಗೆ ವಲಸೆ ಬರ್ತಾರೆ. ಇವರು ಬಡವರು. ಮಕ್ಕಳಿಗೆ ಶಿಕ್ಷಣ ಕೊಡೋಕೆ ಆಗಲ್ಲ. ಮಕ್ಕಳನ್ನೂ ಕೆಲಸಕ್ಕೆ ಕಳಿಸ್ತಾ ಇರ್ತಾರೆ ಅವರು ಬಡವರು ಎಂದು ಧ್ರುವಂತ್ ಹೇಳಿದ್ದಾರೆ.
ಗಿಲ್ಲಿ ಇದ್ಯಾವುದೂ ಅಲ್ಲ. ಗಿಲ್ಲಿ ಏನು ಸ್ಟೇಟ್‌ಮೆಂಟ್ ಕೊಡ್ತಾ ಇದ್ದಾರೆ. ಎಂಜಿ ಹೆಕ್ಟರ್ ಗಾಡಿಯಲ್ಲಿ ಓಡಾಡ್ತಾರೆ. ಬಡವ ಅಂತಾ ಹೇಳ್ತಾರೆ. ಅವರ ತಂದೆಯ ಬಗ್ಗೆ ಗೌರವ ಇದೆ. ಅವರು ಬಹಳ ಕಷ್ಟಪಟ್ಟಿದ್ದಾರೆ. ಅದನ್ನು ನಾನು ಒಪ್ಪಿಕೊಳ್ತೆನೆ. ಬಡವ ಅನ್ನೋ ಸಿಂಪತಿ ಕಾರ್ಡ್‌ನ ಯೂಸ್ ಮಾಡಿದ್ದಾನೆ. ಬಡವರ ಮಕ್ಕಳು ಬೆಳಿಬೇಕು ಅನ್ನೋದು ಇದನ್ನ ನಾನು ಒಪ್ಪಲ್ಲ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.