
ಬೆಂಗಳೂರು (ಜ.20): ಬಿಗ್ ಬಾಸ್ ಮನೆಯಲ್ಲಿ ತನ್ನ ನೇರ ಮಾತು ಹಾಗೂ ಮೃದು ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದ ಕಾವ್ಯಾ ಶೈವ, ಈಗ ಮನೆಯಿಂದ ಹೊರಬಂದ ಮೇಲೆ ಜನರ ಪ್ರೀತಿಯ ಅಲೆಗೆ ಮಾರುಹೋಗಿದ್ದಾರೆ. ಆರಂಭದಲ್ಲಿ ಬಿಗ್ ಬಾಸ್ ಅಂಗಳಕ್ಕೆ ಕಾಲಿಡಲು ಹಿಂದೇಟು ಹಾಕಿದ್ದ ಕಾವ್ಯಾ, ಫಿನಾಲೆ ಹಂತದವರೆಗೆ ತಲುಪಿದ್ದು ಈಗ ಇತಿಹಾಸ. ಇನ್ನು ತುಂಬಾ ಮಂದಿಗೆ ಗಮನಸೆಳೆದಿದ್ದು, ಬಿಗ್‌ಬಾಸ್ ಮನೆಯಲ್ಲಿ ಕಾವ್ಯಾ ಅವರ ಕಾಸ್ಟ್ಯೂಮ್. ಸಾಫ್ರದಾಯಿಕ ಉಡುಪಿನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದ ಕಾವ್ಯಾ ಅವರಿಗೆ ಬಿಗ್‌ಬಾಸ್‌ಗಾಗಿ ಖರ್ಚು ಮಾಡಿದ ಹಣವೆಷ್ಟು ಅನ್ನೋ ಪ್ರಶ್ನೆ ಸಂದರ್ಶನದಲ್ಲಿ ಎದುರಾಯಿತು.
ಸಾಮಾನ್ಯವಾಗಿ ಬಿಗ್ ಬಾಸ್ ಹೋಗುವ ಮಹಿಳಾ ಸ್ಪರ್ಧಿಗಳಿಗೆ ಬಟ್ಟೆ, ಆಭರಣಗಳಿಗೇ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ಈ ಬಗ್ಗೆ ಕಾವ್ಯಾ ಅವರಿಗೆ ಪ್ರಶ್ನೆ ಮಾಡಿದಾಗ, "ನಾನು ಜಾಸ್ತಿ ಇನ್ವೆಸ್ಟ್ ಮಾಡಲಿಲ್ಲ. ಮಿತವಾಗಿಯೇ ಖರ್ಚು ಮಾಡಿದ್ದೆ. ಪ್ರತಿ ವಾರ ಡಿಸೈನರ್‌ಗಳು ಹೊಸ ಔಟ್‌ಫಿಟ್ ಕಳಿಸಿಕೊಡುತ್ತಿದ್ದರು. ಹಾಗಾಗಿ ಅಷ್ಟೊಂದು ಹೊರೆಯಾಗಲಿಲ್ಲ" ಎಂದು ಹೇಳುವ ಮೂಲಕ ಖರ್ಚಿನ ಗುಟ್ಟನ್ನು ಬಿಟ್ಟುಕೊಡಲಿಲ್ಲ.
ಇನ್ನು ಬಿಗ್‌ಬಾಸ್‌ಗೂ ಮುನ್ನ ಸಂದರ್ಶನವೊಂದರಲ್ಲಿ ಕಾವ್ಯಾ ಅವರು ತಾವು ಬಿಗ್‌ಬಾಸ್‌ಗೆ ಹೋಗೋದಿಲ್ಲ ಎಂದಿದ್ದರು. ಆದರೆ, ಕೊನೆಗೆ ಮನಸ್ಸು ಬದಲಿಸಿ ದೊಡ್ಮನೆಗೆ ಹೋಗಿದ್ದರು. ಅದಕ್ಕೆ ನಗುತ್ತಲೇ ಉತ್ತರಿಸಿದ ಆಕೆ, 'ನಾನು ಹೋಗಲ್ಲ ಅಂತ ಬಹುಶಃ ಒಂದೇ ಚಾನೆಲ್‌ಗೆ ಹೇಳಿದ್ದೆ. ನಿಜ ಹೇಳಬೇಕೆಂದರೆ, ನನಗೆ ನನ್ನ ಮೇಲೆ ನಂಬಿಕೆ ಇರಲಿಲ್ಲ. ನಾನು ಅಲ್ಲಿ ಹೋಗಿ ಆಟ ಆಡ್ತೀನಾ? ಜನರಿಗೆ ನನ್ನ ಮಾತು ಇಷ್ಟ ಆಗುತ್ತಾ? ಎಂಬ ಡೌಟ್ ಇತ್ತು. ಆದರೆ ಆಮೇಲೆ ಒಂದು ಚಾಲೆಂಜ್ ಆಗಿ ತಗೊಂಡು ಹೋದೆ. ಈಗ ಟಾಪ್ 6 ತಲುಪಿ ಬಂದಿರೋದು ನನಗೇ ದೊಡ್ಡ ಸರ್ಪ್ರೈಸ್ ಆಗಿದೆ. ಆ ನಿರ್ಧಾರದ ಬಗ್ಗೆ ನನಗೆ ಹೆಮ್ಮೆಯಿದೆ" ಎಂದರು.
"ಪ್ರತಿಯೊಬ್ಬರಿಗೂ ಬಿಗ್ ಬಾಸ್ ಹೋಗುವಾಗ ಒಂದು ಗುರಿ ಇರುತ್ತೆ, ನಿಮ್ಮ ಗುರಿ ಸಾಕಾರವಾಯಿತೇ?" ಎಂಬ ಪ್ರಶ್ನೆಗೆ "ಬಿಗ್ ಬಾಸ್‌ನಲ್ಲಿ ಕಪ್ ಗೆಲ್ಲುವುದು ಎಷ್ಟು ಮುಖ್ಯವೋ, ಜನರ ಪ್ರೀತಿ ಗೆಲ್ಲುವುದು ಕೂಡ ಅಷ್ಟೇ ಮುಖ್ಯ. ಇದು ವ್ಯಕ್ತಿತ್ವದ ಆಟ. ನಾನು ಯಾವುದೇ ಪ್ಲಾನ್ ಮಾಡದೆ, ನಾನೇನು ಎಂಬುದನ್ನು ತೋರಿಸಲು ಹೋಗಿದ್ದೆ. ನನ್ನ ವ್ಯಕ್ತಿತ್ವ ಇಷ್ಟವಾದರೆ ಜನ ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆ ಇತ್ತು. ಇಂದು ಕರ್ನಾಟಕದಾದ್ಯಂತ ಜನ ತೋರಿಸುತ್ತಿರುವ ಪ್ರೀತಿ ನೋಡಿದರೆ ನನ್ನ ಗುರಿ ಸಕ್ಸಸ್ ಆಗಿದೆ ಎನಿಸುತ್ತದೆ" ಎಂದು ಸಂತಸ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.