Dam Doom Daiyya: ಮ್ಯೂಸಿಕ್‌ ವಿಡಿಯೋ ಕಲ್ಪನೆ ಬಗ್ಗೆ ಮಾತನಾಡಿದ JayK & ಟೀಮ್‌!

By Santosh Naik  |  First Published Jul 5, 2023, 6:38 PM IST

JayK ಡ್ಯಾಮ್ ಡೂಮ್ ದೈಯಾ ಎಂಬ ಸಿಂಗಲ್‌ಅನ್ನು ಹೊರತಂದಿದ್ದಾರೆ, ಇದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಏಷ್ಯಾನೆಟ್‌ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಂಡವು ಈ ಸಿಂಗಲ್‌ ರಚನೆಯಾದ ಬಗ್ಗೆ ಹಲವು ವಿವರಗಳನ್ನು ನೀಡಿತು.


ಮುಂಬೈ (ಜು.5):  'ಡ್ಯಾಮ್ ಡೂಮ್ ದೈಯಾ' ಸಿಂಗಲ್‌ನೊಂದಿಗೆ ಸಂಗೀತ ಜಗತ್ತಿಗೆ ಕಾಲಿಡುವ ಮೂಲಕ ಟೆಕ್ಕಿ JayK ಗಮನಸೆಳೆದಿದ್ದಾರೆ. ವಿವಿಧ ತಾಂತ್ರಿಕ ಸಂಗತಿಗಳ ಹಿಂದಿನ ಪ್ರೇರಕ ಶಕ್ತಿಯಾಗಿರುವುದರಿಂದ, ಮನುಷ್ಯನಿಗೆ ಇನ್ನೂ ಏನಾದರೂ ಇದೆ ಎಂದು ನಮಗೆ ಮನವರಿಕೆ ಮಾಡುವ ಅವರ ಹೊಸ ಅವತಾರವನ್ನು ನಾವು ನೋಡುತ್ತಿದ್ದೇವೆ.  'ಡ್ಯಾಮ್ ಡೂಮ್ ದೈಯಾ' ಲೈಕಾ ಪ್ರೊಡಕ್ಷನ್ಸ್‌ನೊಂದಿಗೆ ಹಿಂದಿ, ತಮಿಳು ಮತ್ತು ಇಂಗ್ಲಿಷ್‌ಗಳ ನಡುವೆ ಪರ್ಯಾಯವಾಗಿ ಸಂಪೂರ್ಣವಾಗಿ ಹೊಸ ಬಹು-ಭಾಷಾ ಸಿಂಗಲ್ಸ್‌ಅನ್ನು ಪರಿಚಯಿಸಿದೆ. ಈ ಮ್ಯೂಸಿಕ್ ವೀಡಿಯೋದಲ್ಲಿ, ತಂದೆಯ ಪಾತ್ರ ನಿರ್ವಹಿಸಿರುವ ಜೇಕೇ, ತನ್ನ ಮಗುಳು ವಯಸ್ಕಳಾಗಿ ಬೆಳೆಯುತ್ತಿರುವ ವಿವರಗಳನ್ನು ತೋರಿಸುತ್ತದೆ. ಇಡೀ ತಂಡದೊಂದಿಗೆ ಏಷ್ಯಾನೆಟ್‌ ನ್ಯೂಸ್‌ ಇತ್ತೀಚೆಗೆ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿತ್ತು. ಅದರೊಂದಿಗೆ ಸಿಂಗಲ್‌ನ ಹಲವು ವಿವರಗಳನ್ನು ನೀಡಿತು.

ಸರಳ ಮಾತುಕತೆಯಲ್ಲಿ,ಜೇಕೇ ಅವರಿಗೆ ಹೊಸ ವ್ಯಕ್ತಿತ್ವ ಹೇಗೆ ರೂಪುಗೊಂಡಿತು ಎನ್ನುವ ಬಗ್ಗೆ ಮಾತನಾಡಿಸಿದೆವು. ಇದಕ್ಕೆ ಉತ್ತರಿಸಿದ ಅವರು, "ನಾನು ಹುಟ್ಟಿದಾಗಿನಿಂದ, ನಾನು ಸಂಗೀತ ಪ್ರೇಮಿ. ಸಂಗೀತ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ನಾನು ಸಂಗೀತಗಾರರ ಕುಟುಂಬದಿಂದ ಬಂದವನು. ನನ್ನ ತಂದೆ ವಿಜ್ಞಾನಿ ಆದರೆ ಅವರು ಹಾಡುಗಾರಿಕೆ ಇಷ್ಟವಿತ್ತು. ನನಗೆ ಎಂಬಿಎ ಪದವೀಧರರಾಗಿರುವ ಸೋದರ ಸಂಬಂಧಿಗಳಿದ್ದಾರೆ. ಅವರೂ ಕೂಡ ಹಾಡುತ್ತಾರೆ. ನಾನು ಯಾವಾಗಲೂ ಸಂಗೀತ ಮತ್ತು ಸಂಗೀತಗಾರರಿಂದ ಸುತ್ತುವರೆದಿದ್ದೇನೆ. ನಾನು ಇದನ್ನು ಬಹಳ ಬೇಗನೇ ಮಾಡಬೇಕಿತ್ತು' ಎಂದರು.

ಈ ಹಾಡನ್ನು ಪ್ರಸ್ತುತ ಪಡಿಸಿದ ಬಗ್ಗೆ ಮಾತನಾಡಿದ ಟೀಮ್‌, “ಕಳೆದ ವರ್ಷ ನಾವು ಮ್ಯೂಸಿಕ್ ವೀಡಿಯೋ ಮಾಡಬೇಕೆಂದು ನಿರ್ಧರಿಸಿದಾಗ ನಾವೆಲ್ಲರೂ ಒಟ್ಟಾಗಿದ್ದೆವು. ನಾನು ಸಂಗೀತ ವೀಡಿಯೊ ನಿರ್ದೇಶಕರನ್ನು ಹುಡುಕಬೇಕಾಗಿತ್ತು. ಝಿಮಿಂಗ್ (ನಿರ್ದೇಶಕರು) ಯೋಜನೆಗೆ ಒಪ್ಪಿಗೆ ನೀಡಿದ ಬಗ್ಗೆ, ಅವರು ಪ್ರತಿಕ್ರಿಯಿಸಿದರು, 'ಯೋಜನೆಯನ್ನು ಜಾರಿ ಮಾಡುವ ಮೊದಲು, ನೀವು ಯಾವಾಗಲೂ ಜನರನ್ನು ನೋಡುತ್ತೀರಿ ಮತ್ತು ಜೇಕೆ ಉತ್ತಮ ಸಹಯೋಗಿ ಮತ್ತು ಕೆಲಸ ಮಾಡಲು ಮೋಜಿನ ವ್ಯಕ್ತಿಯಾಗಿ ತೋರುತ್ತಿದ್ದರು' ಎಂದರು.

ಇನ್ನು ತಮ್ಮ ಮಗಳನ್ನು ಈ ಪ್ರಾಜೆಕ್ಟ್‌ನಲ್ಲಿ ಸೇರಿಸಿದ ಬಗ್ಗೆಯೂ ಅವರು ಮಾತನಾಡಿದರು. 'ಆಕೆಗೆ ಈ ಪ್ರಾಜೆಕ್ಟ್‌ನಲ್ಲಿ ಸೇರಿಸಿಕೊಳ್ಳಲು ಸಾಕಷ್ಟು ಶ್ರಮ ಪಡಬೇಕಾಯಿತು. ಅದರೆ, ಒಮ್ಮೆ ಆಕೆ ಇದನ್ನು ಮೆಚ್ಚಿನ ಬಳಿಕ ಸಂಪೂರ್ಣವಾಗಿ ಅದರಲ್ಲಿ ತೊಡಗಿಕಂಡಿದ್ದಳು. ಆಕೆ ತುಂಬಾ ಪ್ರತಿಭಾವಂತೆ. ಕೆಲವೇ ಗಂಟೆಗಳಲ್ಲಿ ಸ್ಟುಡಿಯೋಗೆ ಹೋದ ಆಕೆ, ಒಂದಷ್ಟು ಗಂಟೆ ಇದ್ದು ತನ್ನ ಹಾಡಿನ ಭಾಗವನ್ನು ಪೂರ್ತಿ ಮಾಡಿದ್ದಳು. ಆಕೆಯನ್ನು ವಿಡಿಯೋದಲ್ಲೂ ಬಳಸಿಕೊಳ್ಳಲು ತೀರ್ಮಾನ ಮಾಡಿದ್ದೆವು. ಆದರೆ, ಅದನ್ನು ಆಕೆ ತಿರಸ್ಕರಿಸಿದ್ದಳು' ಎಂದು ಜೇಕೇ ನಗುತ್ತಲೇ ಹೇಳಿದರು. ಅದರೊಂದಿಗೆ ಸಂಗೀತ ವೀಡಿಯೋಗೆ ಜೀವ ತುಂಬಿದ ಪ್ರಕ್ರಿಯೆಯನ್ನೂ ತಂಡವು ಬಹಿರಂಗಪಡಿಸಿತು. ಇದೊಂದು ಸಾಮೂಹಿಕ ಪ್ರಯತ್ನವಾಗಿತ್ತು ಎಂದು ಝಿಮಿಂಗ್‌ ಹೇಳಿದ್ದಾರೆ.

Latest Videos

undefined

ಅಮೇರಿಕದ ಮ್ಯೂಸಿಕ್ ವೀಡಿಯೋದಲ್ಲಿ 'ಕವಚ' ಸುಂದರಿ ಇತಿ ಆಚಾರ್ಯ

ಇನ್ನು ವಿಡಿಯೋಗೆ ಬಳಸಲಾದ ಸ್ಥಳದ ಬಗ್ಗೆಯೂ ಝಿಮಿಂಗ್‌ ಮಾತನಾಡಿದ್ದಾರೆ. 'ಇದು ನಮ್ಮ ಇಡೀ ಕೆಲಸದ ಪ್ರ್ಯಾಕ್ಟಿಕಲ್‌ ವಿಚಾರವಾಗಿತ್ತು.  ನಮಗೆ ಲಿಮಿಟೆಡ್‌ ಬಜೆಟ್‌ಗಳಿದ್ದವು.  ಹಾಗಾಗಿ ಹೆಚ್ಚಿನ ಶೂಟ್‌ಗಳ ಜೇಕೇ ಅವರ ಮನೆಯ ಅಕ್ಕಪಕ್ಕದಲ್ಲಿಯೇ ನಡೆದಿತ್ತು ಎಂದಿದ್ದಾರೆ. ಅದರೊಂದಿಗೆ ಕ್ಲಬ್‌ ದೃಶ್ಯದ ಲೊಕೇಷನ್‌ ಕೂಡ ಇದೆ. ಅದರೊಂದಿಗೆ ಇನ್ನೊಂದು ಕ್ಲಬ್‌ ಕೂಡ ನಮ್ಮನ್ನು ಸ್ವಾಗತಿಸಿತು' ಎಂದಿದ್ದಾರೆ.

Oo Antava Song: ಪುಷ್ಪ ಹಾಡಿನಿಂದ ಸಮಂತಾ ಪ್ರಪಂಚದಲ್ಲೇ ನಂ.1

click me!