ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಕಂಠಿ ಫೈಟಿಂಗ್ ಶೂಟಿಂಗ್ ವೇಳೆ ಆಗಿದ್ದೇನು? ತೆರೆಮರೆ ಹಿಂದಿನ ವಿಡಿಯೋ ವೈರಲ್ ಆಗಿದೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಈಗ ಸತ್ತೋಗಿರುವ ಸ್ನೇಹಾಳ ಹೃದಯ ಈಗಿರುವ ಸ್ನೇಹಾಳಲ್ಲಿ. ಇನ್ನೇನು ಈ ಸ್ನೇಹಾಳ ಮೇಲೆ ಕಂಠಿ ಪ್ರೀತಿ ತೋರಿಸೋದೊಂದೇ ಬಾಕಿ. ಆದರೆ ಇದುವರೆಗೆ ಸ್ನೇಹಾಳನ್ನು ಕಂಡರೆ ಕಂಠಿ ಗುರ್ ಎನ್ನುತ್ತಲೇ ಇದ್ದಾನೆ. ಅದೇ ಇನ್ನೊಂದೆಡೆ ಪತ್ನಿ ಸ್ನೇಹಾ ಸಾವಿನ ನೋವಿನಿಂದ ಆತ ಇಂದೂ ಹೊರಕ್ಕೆ ಬಂದಿಲ್ಲ. ಒಂದೆಡೆ ಪತ್ನಿ ಸಾವು, ಇನ್ನೊಂದೆಡೆ ಜೀವಕ್ಕಿಂತ ಹೆಚ್ಚಾಗಿರುವ ಅಮ್ಮ ಆಸ್ಪತ್ರೆಯಲ್ಲಿ ಸಾವು ನೋವಿನ ನಡುವೆ ಹೋರಾಡುತ್ತಿದ್ದಾಳೆ. ಇದರಿಂದ ಕಂಠಿಗೆ ಆಘಾತವಾಗಿದೆ. ಒಳ್ಳೆಯವರಿಗೆ ಕಾಲವಿಲ್ಲ ಎಂದುಕೊಂಡು ಮೊದಲಿನ ಕಂಠಿ ಆಗುತ್ತೇನೆ ಎಂದು ಪಣ ತೊಟ್ಟಿದ್ದಾನೆ.
ಅಷ್ಟಕ್ಕೂ ಮೊದಲಿನ ಕಂಠಿ ರೌಡಿಯಾಗಿದ್ದ. ಕೆಟ್ಟವರಿಗೆ ಕೆಟ್ಟವನಾಗಿ, ಒಳ್ಳೆಯವರಿಗೆ ಒಳ್ಳೆಯವನೇ ಆಗಿದ್ದ. ಆದರೆ ರೌಡಿ ಎಂಬ ಬಿರುದನ್ನೂ ಪಡೆದುಕೊಂಡಿದ್ದ. ಬಡ್ಡಿ ಬಂಗಾರಮ್ಮನ ಮಗನಾಗಿರೋ ಕಂಠಿ ಕೆಟ್ಟದ್ದನ್ನು ಕಂಡರೆ ಸಿಡಿದೇಳುತ್ತಿದ್ದ. ಆದರೆ ಅದನ್ನು ನಿಭಾಯಿಸುತ್ತಿದ್ದ ರೀತಿ ಮಾತ್ರ ರೌಡಿಸಂ ಮೂಲಕ. ಅದೇ ಕಾರಣಕ್ಕೆ ಸ್ನೇಹಾಳಿಗೆ ಕಂಠಿ ಕಂಡರೆ ಬಹು ಕೋಪವಿತ್ತು. ಆದರೆ ಇವರಿಬ್ಬರೂ ಕುತೂಹಲದ ಸನ್ನಿವೇಶದಲ್ಲಿ ದಂಪತಿಯಾಗಬೇಕಾಯ್ತು. ಕಂಠಿ ಒಳ್ಳೆಯವನು ಎಂದುಕೊಂಡಿದ್ದ ಸ್ನೇಹಾಗೆ ಆತ ರೌಡಿ ಎನ್ನುವುದು ತಿಳಿದು ಕೋಪ ಮಾಡಿಕೊಂಡಿದ್ದಳು. ಕ್ರಮೇಣ ಕಂಠಿ ಆ ಹಳೆಯ ಅವತಾರದಿಂದ ಪತ್ನಿಗಾಗಿ ಹೊರಕ್ಕೆ ಬಂದಿದ್ದ. ಆದರೆ ಆಕೆಯ ಸಾವಿನ ಬಳಿಕ ಮತ್ತೆ ಕೆಟ್ಟವರಿಗೆ ರೌಡಿಯಾಗಿಯೇ ಬದಲಾಗಿದ್ದಾನೆ.
ತಾಳಿ ಕಟ್ಟೋ ಟೈಂನಲ್ಲಿ ಪಂಚೆ ಬಿದ್ದೋದ್ರೆ ಏನ್ ಮಾಡ್ತೀರಾ ಕೇಳಿದ್ರೆ ವಿಜಯ್ ಸೂರ್ಯ ತರ್ಲೆ ಉತ್ತರ ಕೇಳಿ!
ಇದೀಗ ಫೈಟಿಂಗ್ ದೃಶ್ಯ ಮತ್ತೆ ಸೀರಿಯಲ್‌ನಲ್ಲಿ ಮಾಮೂಲಾಗಿದೆ. ಆದರೆ ಫೈಟಿಂಗ್ ದೃಶ್ಯ ಹೇಗೆ ಮಾಡಲಾಗುತ್ತದೆ. ತೆರೆ ಮರೆಯ ಹಿಂದಿನ ಕಥೆ ಹೇಗಿರುತ್ತೆ ಎನ್ನುವ ವಿಡಿಯೋ ವೈರಲ್ ಆಗಿದೆ. ಡಿವಿ ಡ್ರೀಮ್ಸ್ ಇದನ್ನು ಶೇರ್ ಮಾಡಿಕೊಂಡಿದೆ. ಇದರಲ್ಲಿ ಸ್ನೇಹಾಳ ರಕ್ಷಣೆಗೆ ಕಂಠಿ ಬರುತ್ತಾನೆ. ಆಗ ನಡೆದ ಫೈಟಿಂಗ್ ದೃಶ್ಯ ಆಗಿದೆ. ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಫೈಟಿಂಗ್ ದೃಶ್ಯ ಇರುವಾಗ ಧೂಳು ಏಳುವುದು ಸಹಜ. ಆದರೆ ಇದನ್ನು ಕೃತಕವಾಗಿ ಸೃಷ್ಟಿಸಿರಲಾಗುತ್ತದೆ. ಅದನ್ನು ಹೇಗೆ ಸೃಷ್ಟಿ ಮಾಡುತ್ತಾರೆ, ಫೈಟಿಂಗ್ ದೃಶ್ಯ ಮಾಡುವಾಗ ಅದೆಷ್ಟು ಬಾರಿ ಆಕ್ಷನ್,- ಕಟ್ ಹೇಳುತ್ತಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದು.
ಒಂದು ದೃಶ್ಯಕ್ಕೆ ಎಷ್ಟು ಕಷ್ಟಪಡುತ್ತಾರೆ. ಹಾಗೂ ಶೂಟಿಂಗ್ ಹಿಂದೆ ಅದೆಷ್ಟು ಜನರ ಸಹಕಾರ ಇರುತ್ತದೆ, ಅವರು ಹೇಗೆ ಕಷ್ಟಪಡುತ್ತಾರೆ, ಒಂದುಸೀರಿಯಲ್ ಅನ್ನು ಜನರ ಮುಂದೆ ಇಡಲು ತೆರೆಮರೆಯ ಹಿಂದಿರುವ ಕೈಗಳು ಎಷ್ಟುಎನ್ನುವುದನ್ನೂ ಇದರಲ್ಲಿ ನೋಡಬಹುದಾಗಿದೆ.
ಪುಟ್ಟಕ್ಕನ ಮಕ್ಕಳು ನೋಡಿದ ಅಜ್ಜಿಗೆ ಹಾರ್ಟ್ ವೀಕ್, ಭಾಗ್ಯಲಕ್ಷ್ಮಿ ಮಾತ್ರ ತೋರಿಸ್ಬೇಡಿ ಅಂದ್ರು ಮತ್ತೊಬ್ಬರು!