ಸ್ನಾನ ಮಾಡದ ಹನುಮಂತುಗೆ 3 ಸಾವಿರದ ಚಡ್ಡಿ ಜೊತೆ ಭರ್ಜರಿ ಗಿಫ್ಟ್! ಕುಣಿದು ಕುಪ್ಪಳಿಸಿದ ಬಿಗ್‌ಬಾಸ್ ಸ್ಪರ್ಧಿಗಳು

By Suchethana D  |  First Published Nov 22, 2024, 3:47 PM IST

ಬಿಗ್‌ಬಾಸ್ ಮನೆಯಲ್ಲಿ ಸ್ನಾನ ಮಾಡದ  ಹನುಮಂತುಗೆ ಸುದೀಪ್‌ ಗಿಫ್ಟ್‌ ಕಳುಹಿಸಿದ್ದಾರೆ. ಈ ಉಡುಗೊರೆಯಲ್ಲಿ ಏನೇನಿವೆ? 
 


ಬಿಗ್‌ಬಾಸ್‌ನಲ್ಲಿ ಹನುಮಂತು ಸದ್ಯ ಬಹುತೇಕ ವೀಕ್ಷಕರ ಕ್ರಷ್ ಆಗಿದ್ದಾರೆ. ಅವರ ಮುಗ್ಧ ಮಾತು ಹಲವರಿಗೆ ಇಷ್ಟವಾಗುತ್ತಿವೆ. ಕುರಿ ಕಾಯುವ ಕಾರಣ, ತಾನೊಬ್ಬ ಅತಿ ಬಡವ ಎಂದು ಹೇಳುತ್ತಲೇ ಹನುಮಂತು ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಇದೀಗ ಅವರಿಗೆ ಭರ್ಜರಿ ಗಿಫ್ಟ್‌ ಸಿಕ್ಕಿದೆ. ಅವರ ಸಂತೋಷಕ್ಕೆ ಪಾರವೇ ಇಲ್ಲವಾಗಿದೆ. ಈ ಗಿಫ್ಟ್‌ ನೋಡಿ, ಬಿಗ್‌ಬಾಸ್‌ ಸ್ಪರ್ಧಿಗಳೂ ಕುಣಿದು ಕುಪ್ಪಳಿಸಿದ್ದಾರೆ. ಅಷ್ಟಕ್ಕೂ ಇದೇನಿದು ಗಿಫ್ಟ್‌? ಯಾಕೆ ಬಂತು? ಕೊಟ್ಟದ್ದು ಯಾರು ಎಂಬೆಲ್ಲಾ ಪ್ರಶ್ನೆಗೆ ಈ ಶೋ ವೀಕ್ಷಕರಿಗೆ ಇದಾಗಲೇ ಉತ್ತರವೂ ಸಿಕ್ಕಿರಬಹುದು. ಹೌದು. ಹನುಮಂತುಗೆ ಬಂದದ್ದು ದುಬಾರಿ ಬೆಲೆಬಾಳುವ ಬಟ್ಟೆಗಳು. ಇದನ್ನು ಕಳುಹಿಸಿರುವುದು ಖುದ್ದು ಸುದೀಪ್‌ ಅವರು. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಹೈಲೈಟ್‌ ಆಗಿರುವುದು ಮೂರು ಸಾವಿರ ರೂಪಾಯಿಯ ಚಡ್ಡಿ! ಇದನ್ನು ಎತ್ತಿ ಎತ್ತಿ ತೋರಿಸಿ ಬಿಗ್‌ಬಾಸ್ ಸ್ಪರ್ಧಿಗಳು ಖುಷಿ ಪಟ್ಟಿದ್ದಾರೆ.

ಅಷ್ಟಕ್ಕೂ ಈ ಉಡುಗೊರೆ ಹಿಂದೆ ಕಾರಣವೂ ಇದೆ. ಅದೇನೆಂದ್ರೆ, ಹನುಮಂತು ಪ್ರತಿದಿನ ಸ್ನಾನ ಮಾಡುತ್ತಿರಲಿಲ್ಲ.  ಅದು ಉಳಿದ ಸ್ಪರ್ಧಿಗಳ ಕಿರಿಕಿರಿಗೂ ಕಾರಣವಾಗಿತ್ತು.  ಎಲ್ಲರೂ  ನೀನು ಸ್ನಾನ ಮಾಡು ಅಂತನೇ ಹೇಳುತ್ತಿದ್ದರು. ಇದೇ ವಿಚಾರ ಕಿಚ್ಚ ಸುದೀಪ್ ಪಂಚಾಯ್ತಿಯಲ್ಲೂ ಬಂದಿತ್ತು. ಆಗ ಸುದೀಪ್   ಯಾಕೆ ಸ್ನಾನ ಮಾಡಲ್ಲ ಎಂದು ಪ್ರಶ್ನಿಸಿದ್ದರು.  ಆಗ ಹನುಮಂತು  ನೋವಿನಿಂದ ಬಟ್ಟೆ ಇಲ್ಲ ಸರ್. ತಂದಿರೋದೇ ಕಡಿಮೆ. ಅದಕ್ಕೆ ಜಳಕ ಮಾಡಲ್ಲ ಎಂದಿದ್ದರು. ಅಲ್ಲಿಗೆ ಸುದೀಪ್‌ ಸೈಲೆಂಟ್‌ ಆಗಿ ಬೇರೆ ಟಾಪಿಕ್ ಮಾತನಾಡಿದ್ದರು. ಇದರ ಬೆನ್ನಲ್ಲೇ ಈಗ ದುಬಾರಿ ಬ್ರಾಂಡೆಡ್‌ ಬಟ್ಟೆಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ಬ್ರಾಂಡೆಂಡ್‌ ಬಟ್ಟೆಗಳು, ಹೊಸ ಚೆಡ್ಡಿ, ಲುಂಗಿಯನ್ನು   ಕಳುಹಿಸಲಾಗಿದೆ.  

Tap to resize

Latest Videos

undefined

ಪುಟ್ಟಕ್ಕನ ಮಕ್ಕಳು ನೋಡಿದ ಅಜ್ಜಿಗೆ ಹಾರ್ಟ್ ವೀಕ್, ಭಾಗ್ಯಲಕ್ಷ್ಮಿ ಮಾತ್ರ ತೋರಿಸ್ಬೇಡಿ ಅಂದ್ರು ಮತ್ತೊಬ್ಬರು!

ಇದನ್ನು ನೋಡಿ ಹನುಮಂತ ಅವರು ಭಾವುಕರಾಗಿ  ನನಗೆ ಇದನ್ನ ನಂಬೋದಕ್ಕೆ ಆಗುತ್ತಿಲ್ಲ. ಅಷ್ಟೊಂದು ಖುಷಿ ಆಗುತ್ತಾ ಇದೆ. ಥ್ಯಾಂಕ್ಯು ಸಾರ್ ಧನ್ಯವಾದಗಳು ಎಂದಿದ್ದಾರೆ.  ಇದರ ಬೆಲೆಗಳನ್ನು ಎಲ್ಲರೂ ಟ್ಯಾಗ್‌ನಲ್ಲಿ ನೋಡಿ ಹೇಳುತ್ತಿದ್ದಾರೆ. ಹೊಸ ಶರ್ಟ್‌, ಹೊಸ ಬಟ್ಟೆಗಳ ಜೊತೆಗೆ ಚೆಡ್ಡಿಯನ್ನೂ ಕಳುಹಿಸಿದ್ದಾರೆ. ಚೆಡ್ಡಿಯನ್ನು ನೋಡಿ, ಮೂರು ಸಾವಿರ ಚೆಡ್ಡಿ ಅಂತ ಹೇಳಿ ಎಲ್ಲರೂ ನಕ್ಕು, ನಕ್ಕು ಸುಸ್ತಾಗುವಂತೆ ಮಾಡಿದ್ದಾರೆ. 

ಇದರ ಜೊತೆಗೆ,  ಒಂದು ಕವನವನ್ನೂ ಬರೆದು ಕಳುಹಿಸಿದ್ದಾರೆ. ಅದನ್ನು  ಚೈತ್ರಾ ಕುಂದಾಪುರ ಓದಿದ್ದಾರೆ.  ಇದನ್ನು ಓದಿ ಹನುಮಂತು ಭಾವುಕರಾಗಿದ್ದಾರೆ. ಅದರಲ್ಲಿ ಸ್ನಾನ ಮಾಡುವುದು, ಹೊಸ ಬಟ್ಟೆ ಹಾಕುವುದು ಎಲ್ಲರೂ ಸೇರಿದೆ. ಕವನ ಓದಿದ ಎಲ್ಲರೂ ಫುಲ್‌ ಖುಷಿಯಾಗಿದ್ದಾರೆ. ಆದರೆ ಬಟ್ಟೆಗಳನ್ನು ನೋಡಿದ ಹನುಮಂತು ಸಂತಸಕ್ಕೆ ಮಾತ್ರ ಪಾರವೇ ಇಲ್ಲವಾಗಿದೆ. ಇದರ ಜೊತೆ ಹನುಮಂತು ನಿತ್ಯವೂ ಇನ್ನು ಸ್ನಾನ ಮಾಡುತ್ತಾರೆ ಎನ್ನುವ ಕಾರಣಕ್ಕೆ ಉಳಿದ ಸ್ಪರ್ಧಿಗಳಿಗೂ ಖುಷಿಯಾಗಿದೆ. 

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಕಂಠಿ ಫೈಟಿಂಗ್‌ ಶೂಟಿಂಗ್‌ ವೇಳೆ ಆಗಿದ್ದೇನು? ತೆರೆಮರೆ ಹಿಂದಿನ ಕಥೆಯಿದು...

 

click me!