ಕನ್ನಡ ಚಿತ್ರರಂಗದ ಹೊಸ ಫಸಲು: ಕಾಫಿನಾಡಿನ ಗ್ಲಾಮರಸ್ ‘ನಿಧಿ’

By Web DeskFirst Published Nov 9, 2018, 1:26 PM IST
Highlights

ಚಿತ್ರರಂಗದಲ್ಲಿ ಕೊಡಗಿನ ಬೆಡಗಿಯರದ್ದು ಸಿಂಹಪಾಲು. ಅವರ ಪೈಕಿ ಹೊಸದಾಗಿ ಬಂದವರು ನಿಧಿ ಕುಶಾಲಪ್ಪ. ಕಲಾವಿದೆ ಎನ್ನುವುದಕ್ಕಿಂದ ಗ್ಲಾಮರಸ್ ಲುಕ್ ಮೂಲಕವೇ ಹೆಚ್ಚು ಸುದ್ದಿ ಆದವರು ನಿಧಿ. ವರ್ಷ ತೆರೆಗೆ ಬಂದ  ಕುಮಾರಿಎಫ್ 21’ ಚಿತ್ರ ಹೆಚ್ಚು ಸುದ್ದಿ ಆಗಿದ್ದೇ ಅವರ ಹಾಟ್ ಲುಕ್ ಮೂಲಕ. ನಾಯಕಿ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗಿದ್ದು ನನ್ನ ಲವ್ ಟ್ರ್ಯಾಕ್ ಚಿತ್ರದ ಮೂಲಕ. ಆನಂತರಪ್ರೀತಿ ಪ್ರೇಮಹಾಗೂ  ‘ಕುಮಾರಿ ಎಫ್ 21’ ಚಿತ್ರಗಳು ತೆರೆ ಕಂಡಿವೆ. ಹೆಸರಿಗೆ ತಕ್ಕಂಕೆ ನಿಧಿ ಸೌಂದರ್ಯದ ನಿಧಿಯೂ ಹೌದು. ಹಾಗಂತ ಅದೊಂದೇ ಕಾರಣಕ್ಕೆ ಅವರಿಗೇನು ಕೈ ತುಂಬಾ ಆರ್ ಸಿಕ್ಕಿಲ್ಲ. ಬೆಳ್ಳಿತೆರೆ ಎಂಟ್ರಿಯ ಎರಡ್ಮೂರು ವರ್ಷದಲ್ಲಿ ನಿಧಿ ಅಭಿನಯಿಸಿದ್ದು ಮೂರು ಚಿತ್ರಗಳು ಮಾತ್ರ. ಅವರೇ ಹೇಳುವ ಹಾಗೆ, ಗ್ಲಾಮರ್ ಇದ್ದರೆ ಸಾಲದು ಗ್ರಾಮರ್ ಕೂಡ ಮುಖ್ಯ.

1. ಕೊಡಗು ಹುಡುಗಿ ನಾನು. ಹುಟ್ಟಿದ್ದು, ಬೆಳೆದಿದ್ದೆಲ್ಲವೂ ವೀರಾಜಪೇಟೆ. ಓದಿದ್ದು ಮಾತ್ರ ಮಂಗಳೂರು. ಸೆಂಟ್ ಎಲೋಸಿಯಸ್ ಕಾಲೇಜಿನಲ್ಲಿ ಸಮೂಹ ಮಾಧ್ಯಮ ಪದವಿ ಮುಗಿದಿದೆ.

2. ಸಿನಿಮಾಕ್ಕೆ ಬಂದಿದ್ದು ಆಕಸ್ಮಿಕ. ಹಾಗಂತ ಆಸಕ್ತಿ ಇರಲಿಲ್ಲ ಅಂತೇನು ಅಲ್ಲ.ಕಾಲೇಜು ದಿನಗಳಲ್ಲೇ ನಟಿ ಆಗ್ಬೇಕು ಅನ್ನೋ ಆಸೆಯಿತ್ತು. ಅದ್ಯಾಕೆ ಶುರುವಾಗಿತ್ತೋ ನಾ ಕಾಣೆ. ಯಾಕಂದ್ರೆ, ನಂಗೇನು ಅಂತಹ ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲ. ಸಿನಿಮಾ ನೋಡುತ್ತಲೇ ಶುರುವಾದ ಕನಸು ಅದು. ಮಾಸ್ ಕಮ್ಯುನಿಕೇಷನ್ ಪದವಿ ಮುಗಿಸಿ, ಹೊರ ಬರುವ ಹೊತ್ತಿಗೆ ಅದು ನನಸಾಗಿದ್ದಕ್ಕೆ ನನ್ನ ಫ್ರೆಂಡ್ ಕಾರಣ. ಆತ ಆಗಲೇ ಡೈರೆಕ್ಟರ್ ಆಗಿದ್ದ. ಆತನ ಮೂಲಕ ‘ನನ್ನ ಲವ್ ಟ್ರ್ಯಾಕ್’ ಸಿನಿಮಾದ ಅವಕಾಶ ಬಂತು. ಅಲ್ಲಿಂದ ಶುರುವಾಯಿತು ಈ ಸಿನಿ ಜರ್ನಿ.

3. ಕ್ಯಾಮರಾ ಮುಂದೆ ಅಭಿನಯಿಸಿ ಗೊತ್ತಿಲ್ಲದಿದ್ದರೂ, ಸಿನಿಮಾದ ಬಗ್ಗೆ ಒಂದಷ್ಟು ನಾಲ್ಡೇಜ್ ಇತ್ತು. ಓದಿದ್ದು ಸಮೂಹ ಮಾಧ್ಯಮ ಅಲ್ವಾ? ಅಲ್ಲಿ ಕ್ಯಾಮರಾ, ಎಡಿಟಿಂಗ್, ಲೈಟ್ಸ್ ಅಂತೆಲ್ಲ ಒಂದಷ್ಟು ಕಲಿತಿದ್ದೆ. ಅದು ಮೊದಲ ಸಿನಿಮಾಕ್ಕೆ ಹೆಲ್ಪ್ ಆಯಿತು. ಆದ್ರೆ ನಟನೆ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಟೀಮ್ ಚೆನ್ನಾಗಿತ್ತು. ಕಾತೀರ್ ಚಿತ್ರದ ನಿರ್ದೇಶಕ. ಆಗಲೇ ಅವರು ಕಾಲಿವುಡ್‌ನಲ್ಲಿ ಒಂದಷ್ಟು ಹೆಸರು ಮಾಡಿದ್ದರು. ಮಣಿರತ್ನಂ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರಂತೆ. ಸಿನಿಮಾದ ಬಗ್ಗೆ ಅವರಿಗೆ ಜ್ಞಾನ ಇದ್ದ ಕಾರಣ ನನಗೇ ಅಷ್ಟೇನು ಕಷ್ಟ ಆಗಲಿಲ್ಲ. ಅವರಿಂದಲೇ ಒಂದಷ್ಟು ಕಲಿತು ಕೊಳ್ಳುವಂತಾಯಿತು.

4. ಇಂಥದ್ದೇ ಪಾತ್ರ ಬೇಕು ಅಂತ ಕೇಳುವಷ್ಟು ನಾನಿನ್ನು ಬೆಳೆದಿಲ್ಲ. ಆದರೂ ಈ ಮೂರು ಸಿನಿಮಾಗಳಲ್ಲಿ ನಾನು  ನೋಡಿ, ತಿಳಿದಂತೆ ನಟನೆಗೆ ಹೆಚ್ಚು ಅವಕಾಶ ಇರುವಂತಹ ಪಾತ್ರಗಳು ಬೇಕು. ನಟನೆ ಇದ್ದರೆ ಸಿನಿಮಾದ ಅವಕಾಶಗಳು ಬರುತ್ತವೆ. ಸದ್ಯಕ್ಕೀಗ ನಾನು ಎದುರು  ನೋಡುತ್ತಿರುವುದು ನಟನೆಗೆ ಅವಕಾಶವಿರುವಂತಹ ಪಾತ್ರಗಳನ್ನೇ.

5. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಂದ್ರೆ ನಂಗೆ ತುಂಬಾನೆ ಇಷ್ಟ. ಹಿಂದಿ ನಟಿ ಆಗಿ, ಹಾಲಿವುಡ್ ಮಟ್ಟಕ್ಕೆ ಅವರು ಬೆಳೆದ ರೀತಿಯೇ ಅದ್ಭುತ. ಹಾಗಂತ ಅವರೇ ನನ್ನ ರೋಲ್ ಮಾಡೆಲ್ ಅಂತಲ್ಲ, ಅದು ಇನ್ಸ್ಪಿರೇಷನ್ ಅಂತ ಹೇಳಬಹುದು.

-ದೇಶಾದ್ರಿ ಹೊಸ್ಮನೆ

click me!