ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಗಂಡನೇ ತನ್ನ ಗರ್ಭಿಣಿ ಹೆಂಡತಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಶಹ್ರಾನ್‌ಪುರದಲ್ಲಿ ನಡೆದಿದೆ.
ಶಹ್ರಾನ್‌ಪುರ: ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಗಂಡನೇ ತನ್ನ ಗರ್ಭಿಣಿ ಹೆಂಡತಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಶಹ್ರಾನ್‌ಪುರದಲ್ಲಿ ನಡೆದಿದೆ. ಮೈದುನನೊಂದಿಗಿನ ಅನೈತಿಕ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ ಪತಿ ಈ ಕೃತ್ಯವೆಸಗಿದ್ದಾನೆ. ಶಹ್ರಾನ್‌ಪುರದಲ್ಲಿರುವ ಹೆಚ್‌ಡಿಎಫ್‌ಸಿ ಎಟಿಎಂ ಒಳಗಡೆ ಈ ಅನಾಹುತ ನಡೆದಿದೆ.
ಘಟನೆಯಲ್ಲಿ ಆರೋಪಿಯ ಕಿರಿಯ ಸಹೋದರನೂ ಆಗಿರುವ ಮೃತ ಗರ್ಭಿಣಿ ಮೈದುನನಿಗೂ ಗಾಯವಾಗಿದೆ. ಹೆಚ್‌ಡಿಎಫ್‌ಸಿ ಎಟಿಎಂನಲ್ಲಿ ಪತ್ನಿಗೆ ಗುಂಡಿಕ್ಕಿದ ಪತಿ ನಂತರ ಸೀದಾ ಮನೆಗೆ ಬಂದಿದ್ದು, ಮನೆಯಲ್ಲಿದ್ದ ತನ್ನ ಸೋದರನ ಮೇಲೆಯೂ ಗುಂಡಿನ ದಾಳಿ ನಡೆಸಿದ್ದಾನೆ. ಮಹಿಳೆ ಗರ್ಭಿಣಿಯಾಗಿದ್ದು, ಆಕೆಯ ಹೊಟ್ಟೆಯಲ್ಲಿರುವ ಮಗು ತನ್ನ ಕಿರಿಯ ಸೋದರನದ್ದು ಎಂಬ ಶಂಕೆಯಲ್ಲಿ ಪತಿ ಈ ಕೃತ್ಯವೆಸಗಿದ್ದಾನೆ.
undefined
ಗಂಡನಿಂದಲೇ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗೆ ಗುಂಡಿಕ್ಕಿ ಹತ್ಯೆ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
ಮುಂಜಾನೆ 8.30 ರಿಂದ 9 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ. ಶಹ್ರಾನ್‌ಪುರದ ಮಂಡಿ ಠಾಣದಲ್ಲಿರುವ ಹೆಚ್‌ಡಿಎಫ್‌ಸಿ ಎಟಿಎಂಗೆ ನುಗ್ಗಿದ ಗಂಡ ಅಲ್ಲಿದ್ದ ತನ್ನ ಪತ್ನಿಯ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ. ಗಂಡನಿಂದಲೇ ಹತ್ಯೆಯಾದ ಪತ್ನಿಯ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆ ಎಟಿಎಂ ಒಳಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಾಣಿಸುತ್ತಿದೆ. ಮೃತ ಮಹಿಳೆಯನ್ನು ಆಲಿಯಾ ಎಂದು ಗುರುತಿಸಲಾಗಿದೆ. ಝಿಶಾನ್ ಕೊಲೆ ಮಾಡಿದ ಗಂಡ.
ಪತ್ನಿ ಮೈದುನನೊಂದಿಗೆ ಅಂದರೆ ತನ್ನ (ಗಂಡನ) ತಮ್ಮನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಅಲ್ಲದೇ ಆತನ ಮಗುವಿಗೆ ಗರ್ಭಿಣಿಯಾಗಿದ್ದಾಳೆ ಎಂದು ಗಂಡನಿಗೆ ಸಂಶಯವಿತ್ತು. ಇವರಿಬ್ಬರ ಆಫೇರ್ ಬಗ್ಗೆ ಆತನಿಗೆ ನಂತರದಲ್ಲಿ ಖಚಿತತೆ ಸಿಕ್ಕಿದ್ದು, ಇದರಿಂದ ಸಿಟ್ಟಿಗೆದ್ದ ಆತ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪತ್ನಿಗೆ ಗುಂಡಿಕ್ಕಿದ್ದಾನೆ ಬಳಿಕ ಮನೆಗೆ ಬಂದು ತನ್ನ ಸೋದರನ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ. ಸೋದರನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಮಹಿಳೆಯ ಮೃತದೇಹವನ್ನು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಎಟಿಎಂನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ.
ನಡುರಾತ್ರಿ ಕಾರಿನಲ್ಲಿ ಬಂದು ನಾಯಿಗಳಿಗೆ ಗುಂಡಿಕ್ಕಿದ ಪಾಪಿ : 20ಕ್ಕೂ ಹೆಚ್ಚು ಬೀದಿ ನಾಯಿಗಳ ಮಾರಣಹೋಮ
ಮೂರು ದಿನಗಳ ಹಿಂದಷ್ಟೇ ರಾಜಸ್ಥಾನದಲ್ಲಿ ಪತಿಯಿಂದ ದೂರವಾಗಿ ವಾಸ ಮಾಡುತ್ತಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ನ್ನು ಆಕೆಯ ಪತಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆ ಮಾಸುವ ಮೊದಲೇ ಉತ್ತರಪ್ರದೇಶದಲ್ಲಿ ಮತ್ತೊಂದು ಇಂತಹದೇ ಘಟನೆ ನಡದಿದೆ.
पति ने ATM में घुसकर पत्नी को गोली मारी मौक़े पर मौत!
अपने भाई को भी उसके घर जाकर मारी गोली
गोली लगने से भाई हुआ घायल,फिलहाल खतरे से बाहर
पुलिस और फोरेंसिक टीम मौके पर
एसपी सिटी ने जानकारी देते हुए बताया कि मामले की जांच पुलिस द्वारा की जा रही है। pic.twitter.com/PGOS8J7s4S
UP : सहारनपुर में बड़ी वारदात। HDFC के ATM के अंदर आलिया नामक महिला की गोली मारकर हत्या। वारदात पति जीशान ने की। इसके बाद वो घर पहुंचा और अपने छोटे भाई को गोली मारी। देवर-भाभी के अवैध संबंध के शक में वारदात की आशंका। pic.twitter.com/3SIlKft4aa
— Sachin Gupta (@SachinGuptaUP)