Asianet Suvarna News Asianet Suvarna News

ಗಂಡನಿಂದಲೇ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗೆ ಗುಂಡಿಕ್ಕಿ ಹತ್ಯೆ: ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಗಂಡನಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರನ್ನು ಪತಿಯೇ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ, ಈ ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬೆಚ್ಚಿ ಬೀಳಿಸುತ್ತಿದ್ದೆ.

Social media influencer Anamika Bishnoi shot dead by husband in Rajasthan Bikaner Horrific scene caught on CCTV akb
Author
First Published Feb 27, 2024, 10:20 AM IST

ಬಿಕ್ನೇರ್‌: ಗಂಡನಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಒಬ್ಬರನ್ನು ಪತಿಯೇ ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಈ ಆಘಾತಕಾರಿ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಬೆಚ್ಚಿ ಬೀಳಿಸುತ್ತಿದ್ದೆ. ಅನಾಮಿಕಾ ಬಿಷ್ಣೋಯ್ ಗಂಡನಿಂದಲೇ ಹತ್ಯೆಯಾದ ಸೋಶಿಯಲ್ ಮೀಡಿಯಾ ಸ್ಟಾರ್. ಇನ್ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಅನಾಮಿಕಾ ಬಿಷ್ಣೋಯ್ ಹೊಂದಿದ್ದರು.  ರಾಜಸ್ಥಾನದ ಫಲೋಡಿಯಲ್ಲಿ ಈ ದುರಂತ ನಡೆದಿದ್ದು, ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವೀಡಿಯೋದಲ್ಲಿ ಕಾಣಿಸುವಂತೆ ಅನಾಮಿಕಾ ಬಿಷ್ಣೋಯ್ ತನ್ನ ಕಚೇರಿಯಲ್ಲಿ ಕುಳಿತಿದ್ದು, ಅಲ್ಲಿಗೆ ಬಂದ ಪತಿ ತೀರಾ ಸಮೀಪದಿಂದಲೇ ಆಕೆಯ ಮೇಲೆ 3 ರಿಂದ 4 ಸಾರಿ ಗುಂಡು ಹಾರಿಸಿದ್ದು, ಗುಂಡಿನ ದಾಳಿಯಿಂದ ಅನಾಮಿಕಾ ಕುತ್ತಿಗೆ ಸೊಂಟ ತಲೆಗೆ  ಗಂಭೀರ ಗಾಯವಾಗಿದ್ದು ಅವರು ಸಾವನ್ನಪ್ಪಿದ್ದಾರೆ. ಹೀಗೆ ಪತ್ನಿಯನ್ನು ಭಯಾನಕವಾಗಿ ಹತ್ಯೆ ಮಾಡಿದ ವ್ಯಕ್ತಿಯನ್ನು ಮಹಿರಾಮ್ ಎಂದು ಗುರುತಿಸಲಾಗಿದೆ. ಪತಿಯಿಂದ ದೂರಾಗಿವ ವಾಸ ಮಾಡುತ್ತಿದ್ದ ಅನಾಮಿಕಾ, ರಾಜಸ್ಥಾನದ ಫಲೋಡಿಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಶಾಪಿಂಗ್ ಸೆಂಟರ್ ಅನ್ನು ಹೊಂದಿದ್ದರು. ತಮ್ಮ ಈ ಶಾಪ್‌ನಲ್ಲಿ ಕುಳಿತಿದ್ದಾಗಲೇ ಅಲ್ಲಿಗೆ ಬಂದ ಪತಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. 

ನಟ ಅಕ್ಷಯ್ ಕುಮಾರ್ ಒಡೆತನದಲ್ಲಿದ್ದ ಮನೆ ಖರೀದಿಸಿದ 24 ಹರೆಯದ ಸೋಷಿಯಲ್ ಮೀಡಿಯಾ ಪ್ರಭಾವಿ ಯುವತಿ!


ವೀಡಿಯೋದಲ್ಲಿ ಕಾಣಿಸುವಂತೆ ಈ ಶಾಪ್‌ಗೆ ಭೇಟಿ ನೀಡುವ ಆಕೆಯ ಪತಿ ಮಹಿರಾಮ್ ಹಾಗೂ ಆಕೆಯ ಮಧ್ಯೆ ಮೊದಲಿಗೆ ಪರಸ್ಪರ ವಾಗ್ವಾದ ಶುರುವಾಗಿದೆ. ಮಹಿಳೆ ಅಲ್ಲಿಂದ ಹೊರಟು ಹೋಗುವಂತೆ ಕೈ ಸನ್ನೆಯಲ್ಲೇ ಆತನಿಗೆ ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಆದರೆ ಕುಪಿತಗೊಂಡ ಆತ ಆಕೆಯ ಮೇಲೆ ಗುಂಡು ಹಾರಿಸಿ ಅಲ್ಲಿಂದ ಹೊರಟು ಹೋಗುತ್ತಾನೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಪೊಲೀಸರ ಪ್ರಕಾರ ಪತಿ ಪತ್ನಿ ಮಧ್ಯೆ ಕೌಟುಂಬಿಕ ಕಲಹವಿದ್ದು, ಪತ್ನಿ ದಾಖಲಿಸಿದ ವರದಕ್ಷಿಣೆ ಕೇಸ್‌ನ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

94 ಲಕ್ಷದ ಕೆಲಸ ಬಿಟ್ಟು, ನೀವೆಷ್ಟು ಸಂಪಾದಿಸ್ತೀರಿ? ಎಂದು ಜನರನ್ನು ಕೇಳುತ್ತಲೇ ಮಿಲೇನಿಯರ್ ಆದ ಜೋಡಿ
 

 

 

Follow Us:
Download App:
  • android
  • ios