ನೋ ಅಂದರೆ ಇಲ್ಲ.. ರೇಪ್ ಆರೋಪಿಗೆ ಜಾಮೀನು ಇಲ್ಲ!

By Suvarna NewsFirst Published May 7, 2021, 4:19 PM IST
Highlights

ಪಿಂಕ್, ವಕೀಲ್ ಸಾಬ್ ಚಿತ್ರಗಳನ್ನು ನೋಡಿದ್ದವರಿಗೆ ಈ ಪ್ರಕರಣ ಬೇಗ ಅರ್ಥವಾಗಬಹುದು/  ನೋ ಅಂದರೆ ನೋ.. ಇಲ್ಲ, ಸಾಧ್ಯವಿಲ್ಲ ಎಂದೇ ಅರ್ಥ/ ಅತ್ಯಾಚಾರದ ಆರೋಪಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ

ಶಿಮ್ಲಾ(ಮೇ 07) ಪಿಂಕ್, ವಕೀಲ್ ಸಾಬ್ ಚಿತ್ರಗಳನ್ನು ನೋಡಿದ್ದವರಿಗೆ ಈ ಪ್ರಕರಣ ಬಹುಬೇಗ ಅರ್ಥವಾಗಬಹುದು. ನೋ ಮೀನ್ಸ್ ನೋ.. ಅಲ್ಲಿಂದ ಮುಂದಕ್ಕೆ ಇಲ್ಲ!

17 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.   ಶಿಮ್ಲಾದಿಂದ 90  ಕೀಮಿ ದೂರದ ರಾಜಗಢದ ಠಾಣೆಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಬಾಲಕಿಯೊಬ್ಬರು ಅತ್ಯಾಚಾರದ ದೂರು ದಾಖಲಿಸಿದ್ದರು.

ಯುವತಿ ಬಸ್ ಗಾಗಿ ಕಾಯುತ್ತಿದ್ದಾಗ ಅಲ್ಲಿಗೆಬ ಬಂದ ಪರಿಚಯದ ವ್ಯಕ್ತಿ ಆಕೆಯನ್ನು ತನ್ನ  ಜೀಪ್ ನಲ್ಲಿ ಡ್ರಾಪ್ ಮಾಡುತ್ತೇನೆ ಎಂದು ಕರೆದುಕೊಂಡು ಹೋಗಿದ್ದ. ಆಕೆಯನ್ನು ಜೀಪ್ ಗೆ ಹತ್ತಿಸಿಕೊಂಡ ನಂತರ ಲಾಂಗ್ ರೈಡ್ ನೆಪದಲ್ಲಿ  ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ.

ಹೆಂಗಸರ ಕಂಡರೆ ಸಾಕು ಲುಂಗಿ ಎತ್ತಿ ಕಟ್ಟುತ್ತಿದ್ದ!

ತನ್ನ ಮೇಲೆ ದೌರ್ಜನ್ಯ ಆಗಿತ್ತಿದ್ದಾಗ  ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ತನ್ನನ್ನು ಮದುವೆಯಾಗು ಎಂದು ಆರೋಪಿ ಇದೇ ವೇಳೆ ಒತ್ತಡ ಹೇರಿದ್ದಾನೆ. ಇದಕ್ಕೂ ಆಕೆ ಒಪ್ಪಿಕೊಳ್ಳದಿದ್ದಾಗ ಕೃತ್ಯ ಮೆರೆದು ಮಧ್ಯ ರಸ್ತೆಯಲ್ಲಿ ಆಕೆಯನ್ನು ಎಸೆದು ಹೋಗಿದ್ದಾನೆ. ನಂತರ ತಾಯಿಯೊಂದಿಗೆ ಠಾಣೆಗೆ ತೆರಳಿ ಬಾಲಕಿ ದೂರು ಸಲ್ಲಿಸಿದ್ದಾರೆ.

ಇಲ್ಲ ಎಂದರೆ ಇಲ್ಲ ಅಷ್ಟೆ, ಆಕೆಯನ್ನು ಮುಟ್ಟಲು ಯತ್ನಿಸಿದಾಗಲೇ ಬಾಲಕಿ ಪ್ರತಿರೋಧ ವ್ಯಕ್ತಮಾಡಿರುವುದು ಗೊತ್ತಾಗುತ್ತಿದೆ. ಹಾಗಾಗಿ ಆರೋಪಿಗೆ ಬೇಲ್ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ  ಚಿತ್ಕಾರ್ ಹೇಳಿದ್ದಾರೆ.

ಲೈಂಗಿಕ ಶಿಕ್ಷಣವನ್ನು ಪಠ್ಯದಲ್ಲಿ ಅಳವಡಿಕೆ ಮಾಡಬೇಕು. ಆಗ ಇಂಥ ದೌರ್ಜನ್ಯದ ವಿರುದ್ಧ ಎಲ್ಲರೂ ಮುಂದೆ ಬಂದು ದನಿ ಎತ್ತುತ್ತಾರೆ ಎಂಬ ಅಭಿಪ್ರಾಯವನ್ನು ಹೇಳಿದ್ದಾರೆ.

click me!