ಹರಪನಹಳ್ಳಿ: ಮದುವೆ ಆಗೋದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ

By Kannadaprabha NewsFirst Published Aug 26, 2021, 1:01 PM IST
Highlights

*  ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ನಡೆದ ಘಟನೆ
*  ಕಾಮುಕನನ್ನ ಬಂಧಿಸಿದ ಪೊಲೀಸರು
*  ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅತ್ಯಾಚಾರ 
 

ಹರಪನಹಳ್ಳಿ(ಆ.26):  ಪವನಪುರದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹೊಸದುರ್ಗ ತಾಲೂಕು ಮಲ್ಲಪ್ಪನಹಳ್ಳಿ ಗ್ರಾಮದ ವ್ಯಕ್ತಿಯನ್ನು ಇಲ್ಲಿಯ ಪೊಲೀಸರು ಬಂಧಿಸಿರುವ ಘಟನೆ ಬುಧವಾರ ಜರುಗಿದೆ.

ತಾಲೂಕಿನ ಪವನಪುರದ 21 ವರ್ಷದ ಯುವತಿ ಮೇಲೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಲ್ಲಪನಹಳ್ಳಿ ಗ್ರಾಮದ 24 ವರ್ಷದ ಡಿ. ಚಿರಂಜೀವಿ ಎಂಬ ವ್ಯಕ್ತಿ 2019ರಲ್ಲಿ ಪಾವನಪುರದ ತಮ್ಮ ಸಂಬಂಧಿಕರ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಅತ್ಯಾಚಾರ ವೆಸಗಿದ್ದಾನೆ ಎಂದು ಹೇಳಲಾಗುತ್ತಿದೆ. 

ಮೈಸೂರು ಸಾಮೂಹಿಕ ಅತ್ಯಾಚಾರ: ಕೀಚಕರ ಶೋಧಕ್ಕಿಳಿದ ಖಾಕಿ ಪಡೆ

ನಂತರ ಮದುವೆ ಆಗುವುದಾಗಿ ಸಮಾಧಾನ ಮಾಡಿ ಆಗಾಗ ದೈಹಿಕ ಸಂಪರ್ಕ ಬೆಳೆ​ಸಿ​ದ. ನಾಲ್ಕೂವರೆ ​ತೊ​ಲೆ ಬಂಗಾರ ಮತ್ತು 1.50 ಲಕ್ಷ ಪಡೆದು ಮದುವೆಯಾಗದೆ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತ ಯುವತಿ ನೀಡಿದ ದೂರನ್ನು ಅರಸಿಕೇರಿ ಪೊಲೀಸ್‌ ಠಾಣೆಯಲ್ಲಿ ಪಿಎಸ್‌ಐ ಕಿರಣ ಕುಮಾರ ದಾಖಲಿಸಿಕೊಂಡಿದ್ದಾರೆ. ಆರೋಪಿ ಚಿರಂಜಿವಿ ಅವರನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
 

click me!