ಪ್ರತೀ ತಿಂಗಳು ಖರ್ಚಿಗೆ ಹಣ ಬೇಕೆಂದು ಕೇಳುತ್ತಿದ್ದರು. ಇಂದು ಬೆಳಿಗ್ಗೆ ಮನೆಯಲ್ಲಿ ಜಗಳ ಆಗಿದೆ. ಈ ಸಂದರ್ಭದಲ್ಲಿ ಬೋಪಣ್ಣ ಜಮ್ಮಾ ಕೋವಿಯಿಂದ ಸೀತಮ್ಮಳಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ವರದಿ: ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಜು.20): ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದವರು, ಹದಿನೆಂಟು ವರ್ಷದ ಸುಖ ಸಂಸಾರ ನಡೆಸಿದ್ದವರು. ಅವರಿಬ್ಬರ ಪ್ರೀತಿಗೆ ಮುದ್ದಾದ ಇಬ್ಬರು ಹೆಣ್ಣುಮಕ್ಕಳು ಸಾಕ್ಷಿಯಾಗಿದ್ದರು. ಆದರೆ ಪ್ರೀತಿಸಿ ಮದುವೆಯಾಗಿ ಸಂಸಾರ ನಡೆಸಿದ್ದವನೇ ಅದೇಕೋ ಶನಿವಾರ ಬೆಳಿಗ್ಗೆಯೇ ಪತ್ನಿಯ ಎದೆಗೆ ಗುಂಡಿಟ್ಟಿದ್ದಾನೆ. ಹಾಗಾದರೆ ಪ್ರೀತಿಯ ಸಂಸಾರದಲ್ಲಿ ಬಿರುಗಾಳಿ ಬೀಸಿದ್ದೇಕೆ ಎನ್ನುವುದೇ ನಿಗೂಢ.
ಅವರದು ಸುಂದರ ಸಂಸಾರದ ಕುಟುಂಬ. ಹೇಳಿ ಕೇಳಿ ಮೊದಲೇ ಪ್ರೀತಿಸಿ ಮದುವೆಯಾದ ಗಂಡ ಹೆಂಡತಿಗೆ ಎರಡು ಮುದ್ದಾದ ಮಕ್ಕಳು. ಯಾವುದಕ್ಕೂ ಕೊರತೆ ಎನ್ನುವುದೇ ಇರಲಿಲ್ಲ. ಸುತ್ತಲೂ ಹಚ್ಚ ಹಸಿರಿನಾ ಸುಂದರ ತೋಟ. ಅದರೊಳಗೊಂದು ಪುಟ್ಟದಾದ ಸುಂದರ ಮನೆ. ಒಂದು ರೀತಿಯಲ್ಲಿ ಕನ್ನಡದ ಕವಿ ಸರ್ವಜ್ಞ ಹೇಳಿದಂತೆ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಬದುಕು ಕಣ್ರೀ ಇವರದು. ಅತ್ಯಂತ ಸಂತೋಷದಿಂದಲೇ ಖುಷಿ ಖುಷಿಯಾಗಿ ಬದುಕು ದೂಡುತ್ತಿದ್ದರಂತೆ. ಎಸ್ ನೋಡ್ರಿ ಇಬ್ಬರು ಅದೆಷ್ಟು ಸುಂದರವಾಗಿದ್ದಾರೆ ಅಂತ. ನೋಡಿದ್ರೆ ಯಾರಿಗಾದರೂ ವಾಹ್ವ್ ಮೇಡ್ಫಾರ್ ಈಚ್ ಅದರ್ ಎನ್ನುವಂತಿದ್ದಾರೆ. ಹೀಗೆ ನೋಡಲು ಸುರ ಸುಂದರಿ, ಸುರದ್ರೂಪಿಯಾಗಿರುವ ಈಕೆ ಎಂತವರನ್ನೂ ಒಂದು ಕ್ಷಣ ಸೆಳೆದು ಬಿಡುವ ಸೌಂದರ್ಯದ 36 ವರ್ಷದ ಶಿಲ್ಪ. ಪತಿ ಬೋಪಣ್ಣನಿಂದ ಹತ್ಯೆಯಾಗಿ ಹೋಗಿದ್ದಾಳೆ.
ಹುಬ್ಬಳ್ಳಿ: ತಂದೆಯನ್ನೇ ಕೊಂದ ಪಾಪಿ ಮಗ..!
ಪ್ರೀತಿಸಿ ಮದುವೆಯಾದ ಗಂಡನಿಂದಲೆ ಕೊಲೆಯಾಗಿ ಹೋಗಿದ್ದಾಳೆ ಎಂದರೆ ಗಂಡನಿಗೆ ಅದೆಂತಹ ದ್ವೇಷ ಇರಬಹುದೋ ಏನೋ ಗೊತ್ತಿಲ್ಲ. ಪ್ರೀತಿಸಿ ಮದುವೆಯಾಗಿದ್ದ ಇವರಿಬ್ಬರ ನಡುವೆ ಕಳೆದ ಕೆಲವು ವರ್ಷಗಳ ಹಿಂದಿನಿಂದಲೂ ಮಾತ್ರ ಅದೇಕೋ ಮುನಿಸು ಶುರುವಾಗಿತ್ತಂತೆ. ಆಗಿಂದಾಗ್ಗೆ ಜಗಳವೂ ಆಗುತ್ತಿತ್ತಂತೆ. ಅದು ಎಷ್ಟರ ಮಟ್ಟಿಗೆ ಅಂದರೆ ಇಬ್ಬರು ಜೊತೆಗೆ ಬದುಕಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿತ್ತಂತೆ. ಅದನ್ನು ಹತ್ಯೆಯಾದ ಶಿಲ್ಪಾಳ ಅಕ್ಕನ ಗಂಡ ನವೀನ್ ಹೇಳಿದ್ದಾರೆ.
ಪ್ರೀತಿಸಿ ಮದುವೆಯಾಗಿ, ಪ್ರೀತಿಯಿಂದ ಬದುಕಿದ್ದವರ ನಡುವೆ ಅದ್ಯಾಕೋ ವಿರಸ ಆರಂಭವಾಗಿತ್ತು. ಆ ವಿರಸವೇ ಇಂದು ಶಿಲ್ಪಾ ಹೀಗೆ ಭೀಕರವಾಗಿ ಹತ್ಯೆಯಾಗುವಂತೆ ಮಾಡಿದೆ. ಹೌದು ಇಬ್ಬರ ನಡುವೆ ವಿರಸ ಆರಂಭವಾಗಿದ್ದರಿಂದ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದರೂ ಸಂಸಾರ ಮಾತ್ರ ಬೇರೆ ಬೇರೆಯಾಗಿತ್ತಂತೆ. ತಾನು ನಿನ್ನೊಂದಿಗೆ ಬದುಕುವುದಿಲ್ಲ ಎಂದು ಹೇಳಿ ವಿಚ್ಛೇದನ ಬೇಕು ಜೊತೆಗೆ ನನಗೆ ಜೀವನಾಂಶ ನೀಡಿ ಅಂತ ಕೋರ್ಟ್ ಮೆಟ್ಟಿಲೇರಿದ್ದಳಂತೆ. ಇದೆಲ್ಲವೂ ಆರೋಪಿ ಬೋಪಣ್ಣನನ್ನು ಕೆರಳಿಸಿಬಿಟ್ಟಿತ್ತಂತೆ. ಮೃತ ಶಿಲ್ಪಾರಿಗೆ ಶುಕ್ರವಾರ ರಾತ್ರಿ ಅದ್ಯಾವುದೋ ಒಂದು ಫೋನ್ ಕರೆ ಬಂದಿತ್ತಂತೆ. ಇದಾದ ಬಳಿಕ ಇಬ್ಬರ ನಡುವೆ ಇದೇ ವಿಷಯಕ್ಕೆ ಗಲಾಟೆಯೂ ನಡೆದಿತ್ತು ಎನ್ನುವ ಗುಸುಗುಸು ಕೇಳಿ ಬಂದಿದೆ.
ಇನ್ನು ಶನಿವಾರ ಬೆಳಿಗ್ಗೆ ಎಂದಿನಂತೆ ತನ್ನ ಮನೆಯಲ್ಲಿ ಶಿಲ್ಪಾ ಅಡುಗೆ ಮಾಡುವುದಕ್ಕೆ ಮುಂದಾಗಿದ್ದರು. ಅಷ್ಟರಲ್ಲೇ ಹಿಂದಿನಿಂದ ಬಂದಿದ್ದ ತಂಡ ಬೋಪಣ್ಣ ತನ್ನ ಬಳಿ ಇರುವ ಸಿಂಗಲ್ ನಳಿಕೆಯ ಜಮ್ಮಾ ಕೋವಿಯನ್ನು ತೆಗೆದುಕೊಂಡು ಶೂಟ್ ಮಾಡಿಯೇ ಬಿಟ್ಟಿದ್ದಾನೆ. ಹೀಗಾಗಿ ಶಿಲ್ಪಾ ಅಡುಗೆ ಕೋಣೆಯಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದು ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಶಿಲ್ಪಾಳ ಮನೆಗೆ ಬಂದ ಸಹೋದರಿಯರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ವಿರಾಜಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ.
ಬಿಟ್ಟು ಹೋದ ಗಂಡನ ಹೆದರಿಸಲು ಮಗುವಿನ ಮೇಲೆ ತಾಯಿಯ ಕ್ರೌರ್ಯ : ವೈರಲ್ ವೀಡಿಯೋ ಬಗ್ಗೆ ಪೊಲೀಸರು ಹೇಳಿದ್ದೇನು?
ಪತ್ನಿಯ ಎದೆಗೆ ಗುಂಡಿಟ್ಟು ಹತ್ಯೆ ಮಾಡಿದ ಪತಿ ಬೋಪಣ್ಣ ಎಲ್ಲಿಯೂ ಓಡಿ ಹೋಗದೆ, ತಾನೇ ಕೋವಿ ಸಮೇತ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸದ್ಯ ಆತನನ್ನು ಬಂಧಿಸಿರುವ ಪೊಲೀಸರು ಆತನ ಬಳಿ ಇರುವ ಕೋವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಬಳಿಕವಷ್ಟೇ ನಿಜವಾಗಿಯೂ ಹತ್ಯೆಗೆ ಅಸಲಿ ಕಾರಣವೇನು? ಎನ್ನುವುದು ಗೊತ್ತಾಗಬೇಕಾಗಿದೆ.
ವಿರಾಜಪೇಟೆ ಸಮೀಪದಲ್ಲಿರುವ ಆರ್ಜಿಯ ಮಲಬಾರ್ ರಸ್ತೆಯಲ್ಲಿ ಸ್ವಂತ ಸರ್ವೀಸ್ ಸ್ಟೇಷನ್ ಹೊಂದ್ದಿದ್ದ ಬೋಪಣ್ಣ ಕೋಪದ ಕೈಗೆ ಬುದ್ದಿಯನ್ನು ಕೊಟ್ಟು ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಹೀಗೆ ದಾರುಣವಾಗಿ ಹತ್ಯೆ ಮಾಡಿರುವುದಕ್ಕೆ ಸಂಬಂಧಿಕರು, ಸಾರ್ವಜನಿಕರು ಶಪಿಸುತ್ತಿದ್ದಾರೆ. ಶಿಲ್ಪಾಳ ಇಬ್ಬರು ಹೆಣ್ಣು ಮಕ್ಕಳ ಪೈಕಿ ಒಬ್ಬಳು ಪ್ರಥಮ ಪಿಯುಸಿ ಹಾಗೂ ಎರಡನೇ ಮಗಳು ಏಳನೇ ತರಗತಿ ಓದುತ್ತಿದ್ದಾರೆ. ತಾಯಿ ಶಿಲ್ಪಾ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದರೆ, ತಂದೆ ಜೈಲು ಸೇರುವಂತೆ ಆಗಿದೆ. ಏನೂ ತಪ್ಪು ಮಾಡದ ಇಬ್ಬರು ಹೆಣ್ಣುಮಕ್ಕಳು ಈಗ ತಬ್ಬಲಿಗಳಾಗಿದ್ದಾರೆ.