ಪೊಲೀಸರೊಂದಿಗೆ ಸೌತ್ ಕೊರೋನಾ ಟಾಸ್ಕ್ ಫೋರ್ಸ್ ರಚಿಸಿದ ತೇಜಸ್ವಿ ಸೂರ್ಯ

Suvarna News   | Asianet News
Published : Mar 30, 2020, 12:49 PM IST
ಪೊಲೀಸರೊಂದಿಗೆ ಸೌತ್ ಕೊರೋನಾ ಟಾಸ್ಕ್ ಫೋರ್ಸ್ ರಚಿಸಿದ ತೇಜಸ್ವಿ ಸೂರ್ಯ

ಸಾರಾಂಶ

ಬೆಂಗಳೂರಿನಲ್ಲಿ ತುರ್ತು ಅಗತ್ಯಗಳನ್ನು ಪೂರೈಸಲು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಬೆಂಗಳೂರು ಪೊಲೀಸರ ಸಹಯೋಗದೊಂದಿಗೆ 25 ಓಲಾ ಕ್ಯಾಬ್ ಜತೆ ಒಪ್ಪಂದ ಮಾಡಿಕೊಂಡಿದ್ಧಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.

ಬೆಂಗಳೂರು(ಮಾ.30): ಕೊರೋನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಹೀಗಿರುವಾಗಲೇ ಕೆಲವು ಕಡೆ ಜನರು ತುರ್ತು ಸೇವೆಗಳನ್ನು ಪಡೆಯಲು ಪರದಾಡುತ್ತಿದ್ದಾರೆ. ಇದರ ಬೆನ್ನಲ್ಲೇ ದಕ್ಷಿಣ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಸೌತ್ ಕೊರೋನಾ ಟಾಸ್ಕ್ ಫೋರ್ಸ್ ರಚಿಸುವ ಮೂಲಕ ವಿನೂತನ ಕಾರ್ಯಕ್ಕೆ ಮುಂದಾಗಿದ್ದಾರೆ.

ರಾಜಕೀಯ ಜಂಜಾಟವನ್ನೆಲ್ಲಾ ಬದಿಗೊತ್ತಿ ರಿಲ್ಯಾಕ್ಸ್ ಮೂಡ್‌ನಲ್ಲಿ ಸಿಂಹ, ಸೂರ್ಯ

ಹೌದು, ತೇಜಸ್ವಿ ಸೂರ್ಯ ಪೊಲೀಸರ ಸಹಯೋಗದೊಂದಿಗೆ ನಗರದಲ್ಲಿ ನಾಗರೀಕರು ತುರ್ತು ಸಂದರ್ಭದಲ್ಲಿ ಸಂಚರಿಸಲು ವಾಹನ ವ್ಯವಸ್ಥೆ ಮಾಡಿದ್ದಾರೆ. 25 ಓಲಾ ಕ್ಯಾಬ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಕೊರೋನಾ ವೈರಸ್ ಹೊರತಾದ ತುರ್ತು ಸೇವೆಗೆ ಜನರಿಗೆ ಒಡಾಡಲು ವ್ಯವಸ್ಥೆ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಆಸ್ಪತ್ರೆ ಹಾಗೂ ತುರ್ತು ಅಗತ್ಯ ಸೇವೆ ಕಲ್ಪಿಸುವುದನ್ನು ಗಮನದಲ್ಲಿಟ್ಟುಕೊಂಡು ಈ ಸೇವೆ ಮಾಡಲು ಮುಂದಾಗಿದ್ದಾರೆ. 

ಹಿರಿಯ ನಾಗರಿಕರು, ಗರ್ಬಿಣಿ ಮಹಿಳೆಯರು ಮತ್ತು ಆರ್ಥಿಕವಾಗಿ ಹಿಂದುಳಿದಿರುವವರು 9946499464 ನಂಬರ್‌ಗೆ ಕರೆ ಮಾಡಬೇಕಾಗಿ  ಸೌತ್ ಕೊರೋನಾ ಟಾಸ್ಕ್ ಫೋರ್ಸ್ ಪ್ರಕಟನೆಯಲ್ಲಿ ತಿಳಿಸಿದೆ. ಪ್ರಮುಖವಾಗಿ ಔಷಧಿ ಸಾಮಗ್ರಿಗಳು, ದಿನ ಬಳಕೆಯ ಅಗತ್ಯ ಸಾಮಾನು-ಸರಂಜಾಮುಗಳು, ಆಹಾರ ಪೊಟ್ಟಣಗಳ ಸರಬರಾಜು, ಮಾನಸಿಕ ಸಮಾಲೋಚನೆ, ಸಾಕು ಪ್ರಾಣಿಗಳಿಗೆ ಆಹಾರ ಪೂರೈಕೆ ಸೇವೆಗಳಿಗೆ ಕರೆ ಮಾಡಬಹುದಾಗಿದೆ. ಇದರ ಜತೆಗೆ 2 ಆಂಬ್ಯುಲೆನ್ಸ್‌ಗಳು ಸೇವೆಗೆ ಸಿದ್ದವಿದ್ದು, ಸಹಾಯವಾಣಿಗೆ ಕರೆ ಮಾಡಿ ಪ್ರಯೋಜನ ಪಡೆದುಕೊಳ್ಳಲು ತಿಳಿಸಿದೆ. 

ಬೆಲೆ ಎಷ್ಟು..?: ಪ್ರತಿ ಕಿಲೋ ಮೀಟರ್‌ಗೆ 15 ರುಪಾಯಿ ನಿಗದಿಪಡಿಸಲಾಗಿದೆ. ಲಾಕ್‌ಡೌನ್ ಅವದಿ ಮುಗಿಯುವ ವರೆಗೂ ಒಲಾ ಯಾವುದೇ ಕಮಿಷನ್ ಪಡೆಯುವುದಿಲ್ಲ ಎಂದು ತಿಳಿಸಿದೆ.

PREV
click me!

Recommended Stories

ಕೋವಿಡ್ ಭಯ ಬೇಡ ಮುನ್ನೆಚ್ಚರಿಕೆ ಇರಲಿ: ಸಚಿವ ಡಾ.ಎಂ.ಸಿ.ಸುಧಾಕರ್
ಮತ್ತೆ ಹೆಚ್ಚಾದ ವೈರಸ್‌ ಕಾಟ: ಮೈಸೂರಿನಲ್ಲಿ ಮಹಾಮಾರಿ ಕೊರೋನಾಗೆ ಮೊದಲ ಬಲಿ