ಲಾಕ್‌ಡೌನ್‌ಗೆ ಭಾರತೀಯರು ಸ್ಪಂದಿಸಿದ ರೀತಿ ಬಹಳ ಖುಷಿ, ಆನಂದ ಕೊಟ್ಟಿದೆ!

By Suvarna NewsFirst Published Jun 1, 2020, 4:59 PM IST
Highlights

ದೇಶಾದ್ಯಂತ ಆವರಿಸಿರುವ ಕೊರೋನಾ ಮಹಾಮಾರಿನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಲಾಕ್‌ಡೌನ್ ಹೇರಿದೆ. ಈ ಮಾರಕ ಕೊರೋನಾದಿಂದಾಗಿ ಜನರ ಜೀವನ ಶೈಲಿಯೂ ಸಂಪೂರ್ಣ ಬದಲಾಗಿದೆ. ಅನಗತ್ಯ ಓಡಾಟಕ್ಕೆ ಬ್ರೇಕ್ ಬಿದ್ದಿದ್ದು, ಜನರು ಮನೆಯಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಹೀಗಿರುವಾಗ ನಮ್ಮ ಜನ ನಾಯಕರು ಹೇಗೆ ಸಮಯ ಕಳೆಯುತ್ತಿದ್ದಾರೆ ಎಂಬ ಕುರುತು ಸಂದರ್ಶನ ನಡೆಸಿದ್ದು, ಅವರೇ ಖುದ್ದು ತಮ್ಮ ದಿನಚರಿಯನ್ನು ವಿವರಿಸಿದ್ದಾರೆ. ಕರ್ನಾಟಕದಿಂದ ಆಯ್ಕೆದಯಾದ ರಾಜ್ಯಸಭೆಗೆ ಸದಸ್ಯ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಸಂದರ್ಶನ: ಡೆಲ್ಲಿ ಮಂಜು

1. ನಿಮಗೆ ಕೊರೊನಾ ಕಲಿಸಿದ ಪಾಠ ?

ಜೀವನದಲ್ಲಿ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯೋದರಿಂದ ಸಿಗುವ ಆನಂದ, ಸಂತೋಷ  ಹೇಗಿರುತ್ತೆ ? ಅನ್ನೋದು ಕೊರೊನಾ ಕಲಿಸಿದ ಮೊದಲ ಪಾಠ. ಹಿಂದೆ (ಐಪಿಎಸ್ ಅಧಿಕಾರಿಯಾಗಿದ್ದಾಗ) ನನ್ನ ವೃತ್ತಿ ಜೀವನದಲ್ಲೂ ಕೂಡ ಕುಟುಂಬಕ್ಕೂ ಸಮಯ ನೀಡದೆ ಕೆಲಸ ಮಾಡ್ತಿದ್ವಿ. ಇದೊಂದು ರೀತಿ ಸುವರ್ಣಾವಕಾಶ ತರ ಇತ್ತು.

2. ನೀವು ಕೊರೊನಾದಿಂದ ಕಲಿತ ವೈಯಕ್ತಿಕ ಪಾಠ ಏನು?

ಸಮಸ್ಯೆಗಳು ಯಾರ ನಿಯಂತ್ರಣದಲ್ಲಿ ಇರೋದಿಲ್ಲ. ಪ್ರಕೃತಿಯ ನಿಯಂತ್ರಣದಲ್ಲಿ ಇರ್ತಾವೆ. ಆಗಾಗ ಬರ್ತಾ ಇರುತ್ತವೆ. ಅಂಥಂಥ ಸಮಸ್ಯೆಗಳಿಗೆ ಅನುಗುಣವಾಗಿ ನಾವು ಮುನ್ನೆಚ್ಚರಿಕೆ ಕ್ರಮ ತಗೊಂಡು, ನಾವು ಯಾವ ರೀತಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಅನ್ನೋದು ದೊಡ್ಡ ಪಾಠ ಆಯ್ತು.

ಅದರ ವಿರುದ್ಧ ಹೋಗ್ತಿವಿ. ನಮಗೆ ಎಲ್ಲಾ ಗೊತ್ತು. ಅದು ಏನು ಮಾಡಲ್ಲ ಅಂಥ ಮೊಂಡು ತನದಲ್ಲಿ ಯಾವುದು ಮಾಡೋಕೆ ಸಾಧ್ಯವಿಲ್ಲ ಅನ್ನೋದು ಮನವರಿಕೆನೂ ಆಯ್ತು.

3. ಲಾಕ್‌ಡೌನ್ ಸಮಯವನ್ನು ನೀವು ಹೇಗೆ ಕಳೆದ್ರಿ?

ಏನೇನು ಕೆಲಸ ಮಾಡಲಿಕ್ಕೆ ಅಸಾಧ್ಯ ವಾಗಿತ್ತೋ ಅವೆಲ್ಲವೂ ಮಾಡಿ ಮುಗಿಸಿದೆ. ಒಂದಷ್ಟು ಬರವಣಿಗೆ ಮಾಡಿದೆ. ಒಂದಷ್ಟು ಒಳ್ಳೆಯ ಪುಸ್ತಕ ಓದಿದೆ. ನನಗಾಗಿ ನನ್ನ ಸಮಯ ಮೀಸಲು ಮಾಡಿಕೊಳ್ಳಲಿಕ್ಕೂ ಆಯ್ತು. ಇನ್ನೊಂದು ಒಳ್ಳೆಯ ವಿಷ್ಯ ವೆಂದ್ರೆ ಲಾಕ್ ಡೌನ್ ಕರೆಗೆ ಇಂಡಿಯಾದ ಜನರು ಸ್ಪಂದಿಸಿದ ರೀತಿ  ಬಹಳ ಖುಷಿ, ಆನಂದ ಎರಡೂ ಕೊಡ್ತು.

4. ಲಾಕ್ ಡೌನ್ ನಿಂದ ನಿಮ್ಮ ಜೀವನದಲ್ಲಿ ಆದ ಬದಲಾವಣೆ?

ನನ್ನ ಆರೋಗ್ಯ ಸುಧಾರಿಸ್ತು ವೈಯಕ್ತಿಕವಾಗಿ. ಇನ್ನು ರಾಜಕಾರಣದ ವಿಚಾರವಾಗಿ ಹೇಳೋದಾದ್ರೆ, ಜನರಿಗೆ ಕಷ್ಟ, ತೊಂದರೆ ಎನ್ನುವಾಗ ಸಮಾಜದ ಇತರರೊಂದಿಗೆ ಕೈ ಜೋಡಿ ನಾವು ಯಾವರೀತಿ ಸ್ಪಂದಿಸಬಹುದು. ಜೊತೆಗೆ ಸರ್ಕಾರಗಳ ಅನೇಕ ಯೋಜನೆಗಳು ಇವೆ.
ಇವುಗಳ ಜಾರಿ, ವಾಸ್ತವವಾಗಿ ಅದರಿಂದ ಉಂಟಾಗುವ ಸಮಸ್ಯೆಗಳು ತಿಳಿಯೋದರ ಜೊತೆ ಸರ್ಕಾರ ಅಥವಾ ಪಾರ್ಟಿ ಮಟ್ಟದಲ್ಲಿ ತಿಳಿಸೋಕೂ ಸಹಾಯ ಆಯ್ತು.

5. ನೀವು ಗಮನಿಸಿದ ಅಥವಾ ಇನ್ನೂ ಈ ಕ್ಷೇತ್ರಗಳಲ್ಲಿ ಕೆಲಸ ಮಾಡಲೇ ಬೇಕು ಎಂಬ ಎರಡು ಪ್ರಮುಖ ಸಮಸ್ಯೆಗಳು?

ಒಂದು, ಆರೋಗ್ಯ ಸಮಸ್ಯೆ. ಬಹುಶ; ಎಲ್ಲಾ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಬೇಕು. ಅನುದಾನ ಹೆಚ್ಚು ನಿಗದಿ ಮಾಡಬೇಕು. ಯಾಕಂದ್ರೆ ಕೊರೊನಾ ನೋಡದ ಮೇಲೆ ಯಾವಾಗ ಏನು ಬರುತ್ತೋ ಏನು. ಎರಡನೆಯದ್ದು, ಇಂಥ ಸಮಸ್ಯೆಗಳು ಬಂದಾಗ ಜನರು ಯಾವ ರೀತಿ ಸ್ಪಂದಿಸುತ್ತಾರೆ ಅನ್ನೋದು ಗೊತ್ತಾಯ್ತು. ಇದರಿಂದಾಗಿ ಇನ್ನೂ ಉತ್ತಮವಾಗಿ ಹೇಗೆ ಸ್ಪಂದಿಸಬಹುದು ಅನ್ನೋದು ಮನದಟ್ಟಾಯ್ತು.

click me!