ಕೊರೋನಾ ತಡೆಗೆ ಈ ಜಿಲ್ಲೆಯಲ್ಲಿ 9 ದಿನಗಳ ಲಾಕ್ ಡೌನ್!

By Suvarna News  |  First Published Apr 2, 2021, 7:28 PM IST

ಛತ್ತಿಸಗಡd ದುರ್ಗ್ ಜಿಲ್ಲೆಯಲ್ಲಿ ಏಪ್ರಿಲ್ 6 ರಿಂದ 9 ದಿನಗಳ ಲಾಕಡೌನ್ ಜಾರಿ/ ಛತ್ತಿಸ್ ಘಡ ದುರ್ಗ್ ಜಿಲ್ಲೆಯಲ್ಲಿ 9 ದಿನ ಲಾಕಡೌನ್ | ಕೊರೊನಾ ತಡೆಗಟ್ಟಲು ಸರಕಾರದಿಂದ ದಿಟ್ಟ ಕ್ರಮ | ಏಪ್ರಿಲ್ 6 ರಿಂದ 9 ದಿನಗಳ ಲಾಕಡೌನ್


ಛತ್ತಿಸಗಡ್(ಏ. 02)  ದಿನೇ ದಿನೇ ಹೆಚ್ಚುತ್ತಿರುವ ಕೊrOನಾ ತಡೆಗಟ್ಟಲು ಛತ್ತಿಸಗಡ್ ಸರ್ಕಾರ ದುರ್ಗ್ ಜಿಲ್ಲೆಯಲ್ಲಿ 9 ದಿನಗಳ ಲಾಕಡೌನ್ ಘೋಷಣೆ ಮಾಡಿದೆ. ಏಪ್ರಿಲ್ 6 ರಿಂದ 9 ದಿನಗಳ ಕಾಲ ಜಿಲ್ಲೆಯಲ್ಲಿ ಸಂಪೂರ್ಣ ಲಾಕಡೌನ್ ಇರಲಿದೆ. 

ಕೊರೋನಾ ಹೆಚ್ಚುತ್ತಿರುವ ಕಾರಣ ಜನರು ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು. ಯಾರಾದರೂ ಕೊರೋನಾ ಸೋಂಕಿತರ ಸಂಪರ್ಕದಲ್ಲಿ ಬಂದರೆ ಕೊವಿಡ್ ಪರೀಕ್ಷೆ ಮಾಡಿಕೊಳ್ಳಿ. 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಲಸಿಕೆ ಪಡೆದುಕೊಳ್ಳಿ ಎಂದು ಕಲೆಕ್ಟರ್ ಮನವಿ ಮಾಡಿಕೊಂಡಿದ್ದಾರೆ.

Latest Videos

ಕೊರೋನಾ ಕಂಟ್ರೋಲ್‌ಗೆ ಟಫ್ ರೂಲ್ಸ್;  ಜಿಮ್, ಈಜುಕೋಳ ಬ್ಯಾನ್, ಬಾರ್‌ಗೂ ಹೋಗಂಗಿಲ್ಲ!

ಕೊರೋನಾ ಅಬ್ಬರ ದೇಶದೆಲ್ಲಡೆ ಜೋರಾಗಿಯೇ ಇದೆ. ಹೆಚ್ಚು ಕೊರೊನಾ ಕೇಸ್ ಗಳು ಪತ್ತೆಯಾಗುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಕ್ರಮವಾಗಿ ಒಂದನೇ ಮತ್ತು ಏರಡನೇ ಸ್ಥಾನದಲ್ಲಿವೆ. ಗುರುವಾರ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 43 ಸಾವಿರ ಪ್ರಕರಣಗಳು ದಾಖಲಾಗಿದ್ದು 249 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಒಟ್ಟು 30,865 ಸಕ್ರಿಯ ಕೊರೊನಾ ಪ್ರಕರಣಗಳಿವೆ.. 

ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 4,234 ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 10,01,238ಕ್ಕೆ ಏರಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ 2906 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ 6 ರಿಂದ 9 ನೇ ತರಗತಿಗಳನ್ನು ಬಂದ್ ಮಾಡುವಂತೆ ಸರಕಾರ ಆದೇಶ ಹೊರಡಿಸಿದೆ. ಇನ್ನೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೂಡ ಕೊರೊನಾ ಅಲೆ ಜೋರಾಗಿದೆ. ದೆಹಲಿಯಲ್ಲಿ ಗುರುವಾರ ಒಂದೇ ದಿನ 2,790 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಸದ್ಯಕ್ಕೆ ದೆಹಲಿಯಲ್ಲಿ ಲಾಕಡೌನ್ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ದೆಹಲಿ ಸಿ.ಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. 

ಭಾರತದಲ್ಲಿ ಕಳೆದ 6 ತಿಂಗಳಲ್ಲೇ ಅತ್ಯಂತ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಕಳೆದ 24 ಗಂಟೆಗಳಲ್ಲಿ  ಭಾರತದಲ್ಲಿ 81,466 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಅಕ್ಟೋಬರ್ 2 2020 ರ ನಂತರ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕೊರೊನಾ ಕೇಸ್ ಗಳು ದಾಖಲಾಗಿವೆ. ಭಾರತದಲ್ಲಿನ ಒಟ್ಟು ಕೊರೊನಾ  ಪ್ರಕರಣಗಳ ಸಂಖ್ಯೆ 1,23,03,131 ಗೆ ತಲುಪಿದೆ.

click me!