ಬಾಲಿವುಡ್‌ನ ಈ ಟಾಪ್‌ಸ್ಟಾರ್ ಪ್ರಸ್ತುತ 6000 ಕೋಟಿ ರೂ.ಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಆದರೆ ಸಿನಿಮಾ ಕೆರಿಯರ್ ಆರಂಭಿಸುವ ಮುನ್ನ ಅವರು ಹಲವಾರು ಸಂಕಷ್ಟ ಅನುಭವಿಸಿದ್ದರು.ಮನೆ ಬಾಡಿಗೆ ಪಾವತಿಸಾಗದೆ ರಸ್ತೆಯಲ್ಲಿ ಮಲಗಿದ್ದರು. ಸ್ಕೂಲ್ ಫೀಸ್ ಕಟ್ಟದ ಕಾರಣ ಶಾಲೆಯಿಂದ ಹೊರಹಾಕಲ್ಪಟ್ಟಿದ್ದರು.
ಭಾರತೀಯ ಚಿತ್ರರಂಗದಲ್ಲಿ ಸದ್ಯ ಸೂಪರ್‌ಸ್ಟಾರ್ ಆಗಿರುವ ಅದೆಷ್ಟೋ ನಟ-ನಟಿಯರು ತಮ್ಮ ಕಷ್ಟದ ದಿನಗಳಲ್ಲಿ ಜೀವನ ನಿರ್ವಹಿಸಲು ಹಲವಾರು ಕೆಲಸಗಳನ್ನು ನಿರ್ವಹಿಸಿದ್ದರು. ವೈಟರ್, ಡ್ರೈವರ್, ಮಾಡೆಲ್ ಹೀಗೆ ಏನೇನೋ ಆಗಿದ್ದರು. ಆದ್ರೆ ಈ ಸೂಪರ್ ಸ್ಟಾರ್ ಆಕ್ಟಿಂಗ್ ಕೆರಿಯರ್ ಆರಂಭಿಸುವ ಮುನ್ನ ಸ್ಕೂಲ್ ಫೀಸ್ ಕಟ್ಟದ ಕಾರಣ ಶಾಲೆಯಿಂದ ಹೊರ ಹಾಕಲ್ಪಟ್ಟಿದ್ದರು. ರಸ್ತೆಯಲ್ಲೂ ಮಲಗಿದ್ದರು. ಈಗ ಭಾರತೀಯ ಚಲನಚಿತ್ರೋದ್ಯಮವನ್ನು ಆಳುತ್ತಿರುವ ರಜನಿಕಾಂತ್, ಬೊಮನ್ ಇರಾನಿ, ನವಾಜುದ್ದೀನ್ ಸಿದ್ದಿಕಿ ಮತ್ತು ಹೀಗೆ ಹಲವಾರು ನಟರು ಬಡತನದಿಂದಲೇ ಬಂದವರು. ಇವತ್ತು ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಹಾಗೆಯೇ ಬಾಲಿವುಡ್‌ನ ಈ ಟಾಪ್‌ಸ್ಟಾರ್ ಪ್ರಸ್ತುತ 6000 ಕೋಟಿ ರೂ.ಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಆದರೆ ಸಿನಿಮಾ ಕೆರಿಯರ್ ಆರಂಭಿಸುವ ಮುನ್ನ ಅವರು ಹಲವಾರು ಸಂಕಷ್ಟ ಅನುಭವಿಸಿದ್ದರು.
ಒಮ್ಮೆ ರಸ್ತೆಗಳಲ್ಲಿ ಮಲಗಿದ್ದವರು, ಈಗ ಭಾರತದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದನ್ನು ಹೊಂದಿದ್ದಾರೆ. ಅವರು ಬೇರೆ ಯಾರೂ ಅಲ್ಲ ಕಿಂಗ್ ಖಾನ್ ಶಾರುಖ್ ಖಾನ್. ಈ ಹಿಂದೆ, ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ, ಶಾರೂಕ್ ಖಾನ್, ಬಾಲ್ಯದಲ್ಲಿ ಶುಲ್ಕವನ್ನು ಪಾವತಿಸಲು ಸಾಧ್ಯವಾಗದೆ ಶಾಲೆಯಿಂದ ಹೊರಹಾಕಲ್ಪಟ್ಟ ವಿಷಯವನ್ನು ಬಹಿರಂಗಪಡಿಸಿದ್ದರು.
undefined
ಟಾಯ್ಲೆಟ್ ಕ್ಲೀನ್ ಮಾಡ್ತಿದ್ದ ವ್ಯಕ್ತಿಯೀಗ ಸೂಪರ್‌ಸ್ಟಾರ್; ಚಿತ್ರವೊಂದಕ್ಕೆ ಭರ್ತಿ 100 ಕೋಟಿ ಸಂಭಾವನೆ!
ಬಾಡಿಗೆ ಕಟ್ಟಲಾಗದೆ ರಸ್ತೆಯಲ್ಲೇ ದಿನ ಕಳೆದ ಕಿಂಗ್‌ಖಾನ್
'ನಾನು ಹಣದ ಬಗ್ಗೆ ಮಾತನಾಡುವುದನ್ನು ದ್ವೇಷಿಸುತ್ತೇನೆ. ನಾನು ಈಗ ಕೋಟಿ ಕೋಟಿ ಸಂಪಾದಿಸಿದ್ದೇನೆ. ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದ್ದೇನೆ. ಆದರೆ ನಾನು ಬಡ ಕುಟುಂಬದಿಂದ ಬಂದವನು. ಹೊತ್ತಿನ ತುತ್ತಿಗೂ ಪರದಾಡಿದ್ದೆ. ನನ್ನ ತಂದೆಗೆ ದುಬಾರಿ ಹಣ ತೆತ್ತು ಇಂಜೆಕ್ಷನ್ ಕೊಡಲು ಸಾಧ್ಯವಾಗದ ಕಾರಣ ಅವರು ಮೃತಪಟ್ಟರು. ಎಂದು ಶಾರೂಕ್ ಖಾನ್ ತಿಳಿಸಿದ್ದರು. 'ನಮ್ಮ ಕುಟುಂಬದಲ್ಲಿ ತುಂಬಾ ಬಡತನವಿತ್ತು. ಊಟಕ್ಕೆ ದಾಲ್ ಸಾಕಾಗದ ಕಾರಣ ಅದಕ್ಕೆ ತುಂಬಾ ನೀರನ್ನು ಸೇರಿಸಿ ನಾವೆಲ್ಲರೂ ತಿನ್ನುತ್ತಿದ್ದೆವು. ಶಾಲೆಯ ಫೀಸ್ ಕಟ್ಟಲು ಅಪ್ಪ-ಅಮ್ಮ ಹಾಸಿಗೆಯ ಕೆಳಗಿದ್ದ ಒಂದೊಂದು ರೂಪಾಯಿಯನ್ನು ಒಟ್ಟು ಮಾಡುತ್ತಿದ್ದರು. ಮಾತ್ರವಲ್ಲ ಮನೆಯ ಬಾಡಿಗೆ ಕಟ್ಟದ ಕಾರಣ ನಮ್ಮನ್ನು ಮನೆಯಿಂದಲೂ ಹೊರ ಹಾಕಿದರು. ನಾನು ರಸ್ತೆಯಲ್ಲೂ ಮಲಗಿದ್ದೆ' ಎಂದು ಶಾರೂಕ್ ಖಾನ್ ಹೇಳಿದ್ದರು.
ಎಷ್ಟು ಹಣವಿದ್ದರೂ ಅದನ್ನು ತಿನ್ನಲಾಗುವುದಿಲ್ಲ
ನಾನು ಇಂಡಸ್ಟ್ರಿಗೆ ಬರುವ ಪ್ರತಿಯೊಬ್ಬರಿಗೂ ಮನೆ ಖರೀದಿಸುವಂತೆ ಹೇಳುತ್ತೇನೆ. ಯಾಕೆಂದರೆ ಪ್ರತಿಯೊಬ್ಬರಿಗೂ ಮನೆ ಎಷ್ಟು ಅಗತ್ಯವಾಗಿದೆ ಎಂದು ನನಗೆ ಗೊತ್ತಿದೆ. ಕಷ್ಟದ ಸಮಯದಲ್ಲಿ ಒಂಟಿಯಾಗಿ ಕುಳಿತು ಅತ್ತು ಬಿಡಲಾದರೂ ನಮಗೆ ನಮ್ಮದೇ ಮನೆ ಬೇಕಾಗುತ್ತದೆ. ಮನೆ ಕಟ್ಟಿದ ನಂತರ ಮತ್ತೆ ಏನನ್ನಾದರೂ ಖರೀದಿಸುತ್ತಾ ಹೋಗಬಹುದು' ಎಂದು ಶಾರೂಕ್ ಖಾನ್ ಹೇಳಿದ್ದಾರೆ. ಎಷ್ಟೇ ಹಣವಿದ್ದರೂ ನಮಗೆ ಹಣವನ್ನು ತಿನ್ನಲು ಸಾಧ್ಯವಾಗುವುದಿಲ್ಲ, ನೀವು ಬೆಳ್ಳಿಯ ತಟ್ಟೆಯಲ್ಲಿ ತಿನ್ನಬಹುದು. ಆದರೆ ಆಹಾರದ ರುಚಿಯಲ್ಲಿ ಬದಲಾವಣೆಯಾಗುವುದಿಲ್ಲ. ನಾನು ಇವತ್ತಿಗೂ ಅದೇ ಆಹಾರವನ್ನು ತಿನ್ನುತ್ತೇನೆ, ಅದೇ ಬಟ್ಟೆಯನ್ನು ಧರಿಸುತ್ತೇನೆ. ನನ್ನ ಬಳಿ ನಾಲ್ಕು ಜೊತೆ ಜೀನ್ಸ್ ಇದೆ. ಜನರು ನನ್ನ ಬಗ್ಗೆ ಹಲವಾರು ರೀತಿ ಯೋಚಿಸಬಹುದು. ಆದರೆ ನಾನು ಇವತ್ತಿಗೂ ನಾನು 20 ವರ್ಷಗಳ ಹಿಂದೆ ಇದ್ದಂತೆಯೇ ಇದ್ದೇನೆ' ಎಂದಿದ್ದಾರೆ.
ಶಾರೂಕ್ ಖಾನ್ ಒಟ್ಟು ಆಸ್ತಿ ಮೌಲ್ಯ ಬರೋಬ್ಬರಿ 6000 ಕೋಟಿ ರೂ.
ಶಾರುಖ್ ಖಾನ್ ಈಗ ತಮ್ಮ ಕುಟುಂಬದೊಂದಿಗೆ ಮನ್ನತ್ ಎಂಬ ಅತ್ಯಂತ ದುಬಾರಿ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ಚಿತ್ರಕ್ಕೆ 100 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಪ್ರಸ್ತುತ ಇವರ ಆಸ್ತಿ 6000 ಕೋಟಿ ರೂಪಾಯಿ ನಿವ್ವಳ ಮೌಲ್ಯವನ್ನು ಹೊಂದಿದೆ.
ಶಾರೂಕ್ ಖಾನ್ ಅಭಿನಯದ ಇತ್ತೀಚಿನ ಚಿತ್ರ ಪಠಾಣ್ ಬಾಕ್ಸಾಫೀಸಿನಲ್ಲಿ 1000 ಕೋಟಿಗಳನ್ನು ಸಂಗ್ರಹಿಸಿತು. ಇತ್ತೀಚಿಗೆ ಬಿಡುಗಡೆಯಾದ ಜವಾನ್, ಅವರ ಸ್ವಂತ ದಾಖಲೆಯನ್ನು ಮುರಿದು ಬಾಕ್ಸ್ ಆಫೀಸ್‌ನಲ್ಲಿ ವಿಶ್ವದಾದ್ಯಂತ 1100 ಕೋಟಿ ರೂ. ಹೆಚ್ಚು ಕಲೆಕ್ಷನ್ ಮಾಡಿದೆ. ನಟ ರಾಜ್‌ಕುಮಾರ್ ಹಿರಾನಿ ಅವರ ಬಹು ನಿರೀಕ್ಷಿತ ಚಿತ್ರ ಡುಂಕಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದಲ್ಲಿ ತಾಪ್ಸಿ ಪನ್ನು ಮತ್ತು ವಿಕ್ಕಿ ಕೌಶಲ್ ಕೂಡಾ ನಟಿಸಿದ್ದಾರೆ. ಡಿಸೆಂಬರ್ 22ರಂದು ಡುಂಕಿ ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.