ಮಾಧವನ್​ ಜತೆ ನಟಿಸಿರುವುದನ್ನು ನೆನಪಿಸಿಕೊಂಡ್ರೆ 20 ವರ್ಷವಾದ್ರೂ ಭಯವಾಗ್ತಿದೆ: ದಿಯಾ

Published : Oct 13, 2023, 06:29 PM ISTUpdated : Oct 14, 2023, 11:09 AM IST
ಮಾಧವನ್​ ಜತೆ ನಟಿಸಿರುವುದನ್ನು ನೆನಪಿಸಿಕೊಂಡ್ರೆ 20 ವರ್ಷವಾದ್ರೂ ಭಯವಾಗ್ತಿದೆ: ದಿಯಾ

ಸಾರಾಂಶ

2001ರಲ್ಲಿ ತೆರೆ ಕಂಡ ರೆಹನಾ ಹೈ ತೇರೆ ದಿಲ್​ ಮೇ ಚಿತ್ರದಲ್ಲಿ ಆರ್​. ಮಾಧವನ್​ ಜತೆ ನಟಿಸಿರುವುದನ್ನು ನೆನಪಿಸಿಕೊಂಡ್ರೆ 20 ವರ್ಷವಾದ್ರೂ ಭಯವಾಗ್ತಿದೆ ಎಂದ ನಟಿ ದಿಯಾ. ಅವರು ಹೇಳಿದ್ದೇನು?   

2001ರಲ್ಲಿ ತೆರೆ ಕಂಡ ನಟ ಆರ್.ಮಾಧವನ್ ಮತ್ತು ನಟಿ ದಿಯಾ ಮಿರ್ಜಾ ಅವರ ರೆಹನಾ ಹೈ ತೇರೆ ದಿಲ್​ ಮೇ ಚಿತ್ರದ ಸೀಕ್ವಲ್​ಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಸೂಪರ್​ಹಿಟ್ ಚಲನಚಿತ್ರ ಎಂದು ಎನಿಸಿಕೊಂಡಿದ್ದ ಈ ಚಿತ್ರದ ಸೀಕ್ವಲ್​ ತೆರೆಗೆ ಬರುವ ಸಿದ್ಧತೆ ನಡೆದಿರುವ ಬೆನ್ನಲ್ಲೇ ಈ ಚಿತ್ರದ ತಮ್ಮ ಪಾತ್ರದ ಬಗ್ಗೆ ನಟಿ ದಿಯಾ ಮಿರ್ಜಾ ಮಾತನಾಡಿದ್ದಾರೆ. ಈ ಚಿತ್ರವನ್ನು ನೆನಪಿಸಿಕೊಂಡರೆ ಇಂದಿಗೂ ನನಗೆ ಭಯವಾಗುತ್ತದೆ ಎಂದಿರುವ ನಟಿ, ಮಾಧವನ್​ ಜೊತೆಗಿನ ದೃಶ್ಯಗಳು ಭಯ ಬೀಳಿಸುತ್ತವೆ, ಅದು ನನಗೆ ಅಷ್ಟು ಅನುಕೂಲವಾಗಿರಲಿಲ್ಲ ಎಂದಿದ್ದಾರೆ. ಈ ಚಿತ್ರದಲ್ಲಿ ನಟ ಆರ್.ಮಾಧವನ್ ಅವರು 'ಮಡ್ಡಿ' ಪಾತ್ರದಲ್ಲಿ ನಟಿಸಿದ್ದರೆ, ದಿಯಾ ರೀನಾ ಪಾತ್ರದಲ್ಲಿ ನಟಿಸಿದ್ದರು. ಇದೀಗ ಮಾಧವನ್​ ಅವರ ಮಡ್ಡಿ ಪಾತ್ರದ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದು, ಇಂದಿಗೂ ಭಯವಾಗುತ್ತದೆ ಎಂದಿದ್ದಾರೆ.

 'ರೆಹನಾ ಹೈ ತೇರೆ  ದಿಲ್ ಮೇ' ಚಿತ್ರ 2001 ರಲ್ಲಿ ಬಿಡುಗಡೆಯಾಯಿತು. ದಿಯಾ ಮಿರ್ಜಾ ಮತ್ತು ಆರ್. ಮಾಧವನ್ ಅವರ ಈ ರೊಮ್ಯಾಂಟಿಕ್ ಚಿತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ಚಿತ್ರದಲ್ಲಿ ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿತ್ತು. ಒಂದೆಡೆ ದಿಯಾ ಮಿರ್ಜಾಳ ಮುಗ್ಧತೆಗೆ ಅಭಿಮಾನಿಗಳು ಮನಸೋತರೆ ಮತ್ತೊಂದೆಡೆ ಆರ್. ಮಾಧವನ್ ಅವರ ನಟನೆ ಪ್ರೇಕ್ಷಕರಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿತು. ಚಿತ್ರ ಬಿಡುಗಡೆಯಾಗಿ ಎರಡು ದಶಕ ಕಳೆದಿದೆ, ಈಗ ದಿಯಾ ಮಿರ್ಜಾ ಚಿತ್ರದ ಪರಿಕಲ್ಪನೆಯ ಬಗ್ಗೆ ಮಾತನಾಡಿದ್ದಾರೆ ಮತ್ತು ನನಗೆ ಇನ್ನೂ ಭಯವಾಗುತ್ತಿದೆ ಎಂದಿದ್ದಾರೆ.  ಚಿತ್ರದಲ್ಲಿ ನಟ ಆರ್ ಮಾಧವನ್ ಅವರ 'ಮಡ್ಡಿ' ಪಾತ್ರದ ಬಗ್ಗೆ ದಿಯಾ ಮಿರ್ಜಾ ಪ್ರತಿಕ್ರಿಯಿಸಿದ್ದು,  ಇಂದಿಗೂ  'ಮಡ್ಡಿ' ಪಾತ್ರದ ಭಯವಿದೆ ಮತ್ತು ಅದರ ಭಯದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಮಗಳ ವಯಸ್ಸಿನವಳ ಜೊತೆ ಲಿಪ್​ಲಾಕ್​, ರೊಮ್ಯಾನ್ಸ್​ ಮಾಡಲು ನಾಚಿಕೆ ಆಗಲ್ವಾ? ನಟಿ ರತ್ನಾ ಕ್ಲಾಸ್​

ಅಷ್ಟಕ್ಕೂ ಈ ಚಿತ್ರದಲ್ಲಿ, ಮಡ್ಡಿ ರೀನಾಳನ್ನು ಪ್ರೀತಿಸುತ್ತಿರುತ್ತಾನೆ. ಆದರೆ ರೀನಾಳ ಮದುವೆ ವಿದೇಶದಲ್ಲಿರುವ ರಾಜೀವ್​ (ಸೈಫ್​ ಅಲಿ ಖಾನ್​) ಎನ್ನುವವರ ಜೊತೆ ನಡೆಯುತ್ತದೆ ಎಂಬುದು ಮಡ್ಡಿಗೆ ತಿಳಿಯುತ್ತದೆ. ಹೇಗಾದರೂ ಮಾಡಿ ಈ ಮದುವೆಯನ್ನು ತಪ್ಪಿಸಿ, ತಾನು ರೀನಾಳನ್ನು ಮದುವೆಯಾಗುವ ಪ್ಲ್ಯಾನ್​ ಮಾಡುತ್ತಾನೆ. ರಾಜೀವ್​ನನ್ನು ರೀನಾ ಮತ್ತು ಕುಟುಂಬಸ್ಥರು ನೋಡಿರುವುದಿಲ್ಲ ಎನ್ನುವ ಸತ್ಯ ತಿಳಿದ ಮಡ್ಡಿ, ತಾನೇ ರಾಜೀವ್​ ಎಂದು ರೀನಾಳಿಗೆ ಪರಿಚಯ ಮಾಡಿಕೊಳ್ಳುತ್ತಾನೆ. ಇಬ್ಬರ ನಡುವೆ ಪ್ರೀತಿ ಚಿಗುರುತ್ತದೆ. ಅಷ್ಟರಲ್ಲಿ ತಾನು ಮಾಡುತ್ತಿರುವುದು ತಪ್ಪು ಎಂದು ತಿಳಿದ ಮಡ್ಡಿ ನಿಜಾಂಶವನ್ನು ರೀನಾಳಿಗೆ ಹೇಳುವಷ್ಟರಲ್ಲಿಯೇ ರಾಜೀವ ವಿದೇಶದಿಂದ ಬರುತ್ತಾನೆ. ರೀನಾಳಿಗೆ ತಾವು ಇಷ್ಟು ದಿನ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸಿದ್ದು, ಆತ ಮೋಸ ಮಾಡಿದ್ದು ತಿಳಿದು ಸಿಟ್ಟಾಗುತ್ತಾಳೆ. ಕೊನೆಗೆ ಆ ರಾಜೀವ   ಶಾಲಾ ದಿನಗಳಲ್ಲಿ ಬದ್ಧ ವೈರಿಯಾಗಿದ್ದವನೇ ಎಂದು ಮಡ್ಡಿಗೆ ತಿಳಿಯುತ್ತದೆ. ರಾಜೀವನನ್ನು ಮಡ್ಡಿ ಹೊಡೆಸುತ್ತಾನೆ. ಆದರೆ ಕೊನೆಗೆ ಪಶ್ಚಾತ್ತಾಪವಾಗಿ ತನ್ನ ಪ್ರೇಯಸಿ ಮತ್ತು ರಾಜೀವನನ್ನು ಬಿಟ್ಟು ವಿದೇಶಕ್ಕೆ ಹೋಗಲು ರೆಡಿಯಾಗುತ್ತಾನೆ.

ಈ ನಡುವೆಯೇ ತಾನು ಮಡ್ಡಿಯನ್ನೇ ಪ್ರೀತಿಸುತ್ತಿರುವುದಾಗಿ ರೀನಾಳಿಗೆ ಅನ್ನಿಸಲು ಶುರುವಾಗುತ್ತದೆ. ಇದು ರಾಜೀವನಿಗೂ ತಿಳಿಯುತ್ತದೆ. ಕೊನೆಗೆ ಅವರಿಬ್ಬರೂ ಪ್ರೀತಿ ಮಾಡುತ್ತಿರುವ ಕಾರಣ, ತಾನು ತ್ಯಾಗ ಮಾಡಲು ನಿರ್ಧರಿಸಿ ಇಬ್ಬರನ್ನೂ ಒಂದು ಮಾಡುವುದೇ ಸ್ಟೋರಿ. ಆದರೆ ಈ ಚಿತ್ರದಲ್ಲಿ ಮಡ್ಡಿ ಪಾತ್ರಧಾರಿ ತನ್ನನ್ನು ಹಿಂಬಾಲಿಸಿಕೊಂಡು ಬರುವ ಚಿತ್ರಣ ಇಂದಿಗೂ ಭೀತಿ ಹುಟ್ಟಿಸುತ್ತಿದೆ ಎಂದಿದ್ದಾರೆ ದಿಯಾ.  ಈ ಪಾತ್ರವು ಅವನ ಮೇಲೆ ಆಳವಾದ ಪ್ರಭಾವ ಬೀರಿತು ಎಂದಿದ್ದಾರೆ. ಮಾಧವನ್​ ಅವರ ಪಾತ್ರ ಅಷ್ಟು ನೈಜತೆಯಿಂದ ಕೂಡಿತ್ತು. ಅದರಿಂದ ಹೊರಬರಲು ಸಾಧ್ಯವಾಗ್ತಿಲ್ಲ. ಆತ ಹಿಂಬಾಲಿಸಿಕೊಂಡು ಬರುವ ದೃಶ್ಯ ನೆನಪಿಸಿಕೊಂಡರೆ ಮೈ ಝುಂ ಎನ್ನುತ್ತದೆ ಎಂದಿದ್ದಾರೆ. 
GHOST: ಶಿವರಾಜ್​ಕುಮಾರ್​ ಚಿತ್ರಕ್ಕೆ 'ನಾನು ನಂದಿನಿ' ವಿಕ್ಕಿ ಈ ಪರಿ ಎಂಟ್ರಿನಾ? ವಿಡಿಯೋ ನೋಡಿ ಸೂಪರ್​ ಎಂದ ಫ್ಯಾನ್ಸ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?