ಮಗಳ ವಯಸ್ಸಿನವಳ ಜೊತೆ ಲಿಪ್​ಲಾಕ್​, ರೊಮ್ಯಾನ್ಸ್​ ಮಾಡಲು ನಾಚಿಕೆ ಆಗಲ್ವಾ? ನಟಿ ರತ್ನಾ ಕ್ಲಾಸ್​

By Suvarna News  |  First Published Oct 13, 2023, 5:55 PM IST

ಮಗಳ ವಯಸ್ಸಿನ ಹೀರೋಯಿನ್​ ಜೊತೆ ರೊಮ್ಯಾನ್ಸ್​ ಮಾಡಲು ನಾಚಿಕೆ ಆಗಲ್ವಾ ಎಂದು ನಟಿ ರತ್ನಾ ಪಾಠಕ್​ ಕೆಲ ನಟರಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. 
 


ಈಗಂತೂ ಚಲನಚಿತ್ರಗಳಲ್ಲಿ ರೊಮ್ಯಾನ್ಸ್​, ಲಿಪ್​ಲಾಕ್​ ಎಲ್ಲವೂ ಮಾಮೂಲಾಗಿದೆ. ಆದರೆ, ಈಗ ಆಗುತ್ತಿರುವುದು ಏನೆಂದರೆ, ಕೆಲವು ನಾಯಕ ನಟರು 50-60 ವಯಸ್ಸಾದರೂ ನಾಯಕರಾಗಿಯೇ ಮುಂದುವರೆಯುತ್ತಿದ್ದಾರೆ. ಈಗ ತಾನೇ ಸಿನಿಮಾಕ್ಕೆ ಎಂಟ್ರಿ ಕೊಡುವ 20-25 ವಯಸ್ಸಿನ ಯುವತಿಯರು ನಾಯಕಿಯಾಗುತ್ತಿದ್ದಾರೆ. ಒಂದರ್ಥದಲ್ಲಿ ಹೇಳುವುದಾದರೆ, ಮಗಳ ವಯಸ್ಸಿನವಳು ಆ ನಾಯಕನಿಗೆ ನಾಯಕಿಯಾಗಿರುತ್ತಾಳೆ. ಹೊಸ ನಟಿಯರು ಕೂಡ ಸಿನಿರಂಗದಲ್ಲಿ ನೆಲೆಯೂರಲು ದೊಡ್ಡ ದೊಡ್ಡ ಸ್ಟಾರ್​ ನಟರ ಜೊತೆ ನಟಿಸುವ ಆಸೆಯನ್ನೂ ವ್ಯಕ್ತಪಡಿಸಿದರೆ, ಇನ್ನು ನಟರು ಸುಮ್ಮನೇ ಬಿಡುತ್ತಾರೆಯೆ? ಇದೇ ಕಾರಣಕ್ಕೆ ಮಗಳ ವಯಸ್ಸಿನ ನಟಿಯರ ಜೊತೆ ಲಿಪ್​ಲಾಕ್​, ಇಂಟಿಮೇಟ್​ ಸೀನ್​, ಚುಂಬನ ದೃಶ್ಯ, ರೊಮ್ಯಾನ್ಸ್​ ಎಲ್ಲವೂ ಸರ್ವೇ ಸಾಮಾನ್ಯ ಎನಿಸಿಬಿಟ್ಟಿದೆ.

ಇದರ ಬಗ್ಗೆ ಹಿರಿಯ ಬಾಲಿವುಡ್​ ನಟಿ  ರತ್ನಾ ಪಾಠಕ್ ಷಾ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ 'ಧಕ್ ಧಕ್' ಚಿತ್ರದಲ್ಲಿ ನಟಿಸುತ್ತಿರುವ ನಟಿ,  ಸಿನಿಮಾ ಪ್ರಚಾರದ ವೇಳೆ ಸಂದರ್ಶನದಲ್ಲಿ ಮಾತನಾಡುತ್ತಾ ಈ ಬಗ್ಗೆ ವಿಷಾದಿಸಿದ್ದಾರೆ.  ಈ ಬಗ್ಗೆ ಏನು ಮಾತನಾಡಬೇಕು ಎನ್ನುವುದು ಗೊತ್ತಿಲ್ಲ. ತಮ್ಮ ಮಗಳಿಗಿಂತ ಚಿಕ್ಕ ವಯಸ್ಸಿನ ನಟಿಯರ ಜೊತೆ ನಟಿಸೋಕೆ ಅವರಿಗೆ ನಾಚಿಕೆ ಆಗುತ್ತಿಲ್ಲ. ಹಾಗಿರುವಾಗ ನಾನೇನು ಮಾತನಾಡಲಿ? ನಾನು ಹೇಳುವುದಕ್ಕೆ ಏನಿಲ್ಲ. ಅಂದರೆ ಈ ಬಗ್ಗೆ ಮಾತನಾಡಲು ನನಗೆ ನಾಚಿಕೆ ಎನಿಸುತ್ತದೆ ಎಂದಿದ್ದಾರೆ. ಖಂಡಿತ ಮುಂದೊಂದು ದಿನ ಬದಲಾವಣೆ ಆಗುತ್ತದೆ. ಮಹಿಳೆಯರು ಇಂದು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಅವರು ಚಿತ್ರರಂಗದಲ್ಲೂ ಅದ್ಭುತಗಳನ್ನು ಮಾಡಬಲ್ಲರು. ಅವರಿಗೆ ಹಿರಿಯ ನಟರ ಅಗತ್ಯ ಇಲ್ಲ ಎನಿಸುವ ಕಾಲ ಬಂದೇ ಬರುತ್ತದೆ. ಅದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಆದರೆ ಖಂಡಿತ ನಡೆಯುತ್ತದೆ ಎಂದಿದ್ದಾರೆ. 

Tap to resize

Latest Videos

ANIMAL: ವಿಮಾನದಲ್ಲೇ ರಶ್ಮಿಕಾ- ರಣಬೀರ್​ ಕಪೂರ್​ ಈ ಪರಿ ರೊಮ್ಯಾನ್ಸ್! ಉಫ್​ ಎಂದ ಫ್ಯಾನ್ಸ್​...

 ಕೆಲವು ನಟರು ತಮಗಿಂತ ಕಿರಿಯ ನಟಿಯರೊಂದಿಗೆ ಲವರ್‌ ಅಥವಾ ಪತಿಯ ಪಾತ್ರದಲ್ಲಿ ನಟಿಸಲು ಇಷ್ಟಪಡುವುದಿಲ್ಲ. ಇತ್ತೀಚೆಗೆ ತಮಿಳು ನಟ ವಿಜಯ್‌ ಸೇತುಪತಿ ಇದೇ ವಿಚಾರಕ್ಕೆ ಸುದ್ದಿಯಾಗಿದ್ದರು. ವಿಜಯ್‌ ಸೇತುಪತಿ 2021ರಲ್ಲಿ ತೆರೆ ಕಂಡ 'ಉಪ್ಪೆನ' ಚಿತ್ರದಲ್ಲಿ ಕೃತಿ ಶೆಟ್ಟಿಗೆ ತಂದೆ ಪಾತ್ರದಲ್ಲಿ ನಟಿಸಿದ್ದರು. ಆದರೆ ನಂತರ ನಿರ್ಮಾಪಕರೊಬ್ಬರು ವಿಜಯ್‌ ಸೇತುಪತಿ ಹೊಸ ಚಿತ್ರಕ್ಕೆ ನಾಯಕಿಯನ್ನಾಗಿ ಕೃತಿಯನ್ನು ಆರಿಸಿದ್ದರು. ಮಗಳ ವಯಸ್ಸಿನ ನಟಿಯೊಂದಿಗೆ ನಾನು ನಟಿಸುವುದಿಲ್ಲ ಎಂದು ವಿಜಯ್‌ ಸೇತುಪತಿ ಕಡ್ಡಿ ತುಂಡಾದಂತೆ ಹೇಳಿದ್ದರು. ಆದರೆ ಹಲವು ನಟರು ಈ ರೀತಿ ಇಲ್ಲ. ವಯಸ್ಸಿಗೇನು ಎನ್ನುವ ಅವರು, ಮಗಳ ವಯಸ್ಸಿನವಳ ಜೊತೆ ಯಥೇಚ್ಛವಾಗಿ ರೊಮ್ಯಾನ್ಸ್​ನಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದಕ್ಕೇ ನಟಿ ಖಂಡಿಸಿದ್ದಾರೆ.

ರತ್ನಾ ಪಾಠಕ್‌, ಖ್ಯಾತ ಬಾಲಿವುಡ್‌ ನಟ ನಾಸಿರುದ್ದೀನ್‌ ಶಾ ಅವರ ಪತ್ನಿ. ನಾಸಿರುದ್ದೀನ್‌ ಶಾ ಮುಸ್ಲಿಂ ಸಮುದಾಯಕ್ಕೆ ಸೇರಿದರೆ ರತ್ನಾ ಹಿಂದೂ. ಇವರಿಬ್ಬರದ್ದೂ ಪ್ರೇಮ ವಿವಾಹ. 1983ರಲ್ಲಿ ತೆರೆ ಕಂಡ ಮಂಡಿ ಸಿನಿಮಾ ಮೂಲಕ ರತ್ನಾ ಬಾಲಿವುಡ್‌ನಲ್ಲಿ ಕೆರಿಯರ್‌ ಆರಂಭಿಸಿದರು.  'ಧಕ್ ಧಕ್' ಚಿತ್ರದಲ್ಲಿ ರತ್ನಾ ಪಾಠಕ್ ಶಾ ಜೊತೆ ದಿಯಾ ಮಿರ್ಜಾ, ಫಾತೀಮಾ ಸನಾ ಶೇಕ್, ಸಂಜನಾ ಸಂಘಿ ನಟಿಸಿದ್ದಾರೆ. ಇದೊಂದು ಮೋಟಾಕ್ ಸೈಕಲ್ ಅಡ್ವೆಂಚರ್ ಸಿನಿಮಾ ಆಗಿದ್ದು 65ರ ಹರಯದಲ್ಲೂ ರತ್ನ ಬೈಕ್ ಚಲಾಯಿಸಿ ಕಾಣಿಸಿಕೊಂಡಿದ್ದಾರೆ.  65ನೇ ವಯಸ್ಸಿನಲ್ಲಿ ಆ ಅವಕಾಶ ಸಿಗುತ್ತದೆ ಎಂದುಕೊಂಡಿರಲಿಲ್ಲ. ಸಾಕಷ್ಟು ಜನ ನನಗೆ ಬೈಕ್ ಚಲಾಯಿಸಲು ತರಬೇತಿ ನೀಡಿದರು ಎಂದಿದ್ದಾರೆ ನಟಿ. 

ನೀವು ಕಾಮ ಪ್ರಚೋದಕ ಚಿತ್ರವನ್ನೇ ಮಾಡೋದ್ಯಾಕೆ ಎಂದು ಏಕ್ತಾ ಕಪೂರ್​ಗೆ ಪ್ರಶ್ನೆ ಕೇಳಿದ್ರೆ ಹೀಗೆ ಹೇಳೋದಾ?

click me!