ನಟ ಯಶ್ ಅವರು ʼಟಾಕ್ಸಿಕ್ʼ ಸಿನಿಮಾದ ರಿಲೀಸ್ ದಿನಾಂಕವನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ.
ಎರಡು ಸಿನಿಮಾಗಳ ಮೂಲಕ ಸಾವಿರ ಕೋಟಿ ರೂಪಾಯಿ ಬಾಚಿರುವ ʼರಾಕಿಂಗ್ ಸ್ಟಾರ್ʼ ಯಶ್ ಮುಂದಿನ ಸಿನಿಮಾ ʼಟಾಕ್ಸಿಕ್ʼ ಯಾವಾಗ ರಿಲೀಸ್ ಆಗಲಿದೆ ಎಂದು ದೇಶ ಅಷ್ಟೇ ಅಲ್ಲದೆ ವಿಶ್ವಯೇ ಎದುರು ನೋಡುತ್ತಿದೆ. ಒಂದು ಸಿನಿಮಾಕ್ಕೆ ವರ್ಷಗಳ ಕಾಲ ಟೈಮ್ ತಗೊಳ್ತಿರುವ ಯಶ್ ಈಗ ʼಟಾಕ್ಸಿಕ್ʼ ಸಿನಿಮಾದ ದಿನಾಂಕ ಘೋಷಣೆ ಮಾಡಿದ್ದಾರೆ.
ಈ ಸಿನಿಮಾ ರಿಲೀಸ್ ದಿನಾಂಕ ಯಾವಾಗ?
2015 ಮಾರ್ಚ್ 19ರಂದು ʼಟಾಕ್ಸಿಕ್ʼ ಸಿನಿಮಾ ರಿಲೀಸ್ ಆಗಲಿದೆಯಂತೆ. ಸೋಶಿಯಲ್ ಮೀಡಿಯಾದಲ್ಲಿ ಅವರೇ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇಡೀ ವಿಶ್ವದಾದ್ಯಂತ ಈ ಸಿನಿಮಾ ರಿಲೀಸ್ ಆಗಲಿದೆ. ಭಾರತದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣಲಿದೆ. ಮುಂದಿನ ವರ್ಷ ಮಾರ್ಚ್ 19ರಂದು ಯುಗಾದಿ ಹಬ್ಬ ಇದೆ.
ಟಾಕ್ಸಿಕ್ ಬಳಿಕ ಕಾಂತಾರ-2 ಸಿನಿಮಾ ತಂಡದಿಂದಲೂ ಅರಣ್ಯ ನಿಯಮ ಉಲ್ಲಂಘನೆ?
ವಿಭಿನ್ನ ಹೇರ್‌ಸ್ಟೈಲ್
ಸಿನಿಮಾ ಮೇಕಿಂಗ್ ವಿಚಾರದಲ್ಲಿಯೇ ಸಾಕಷ್ಟು ಸದ್ದು ಸುದ್ದಿ ಮಾಡಿತ್ತು. ಮಲಯಾಳಂ ಭಾಷೆಯ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಈ ಸಿನಿಮಾಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದಲ್ಲಿ ಭಾರತೀಯ ನಟ-ನಟಿಯರು, ಹಾಲಿವುಡ್ ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಆಗರ್ಭ ಶ್ರೀಮಂತ ಅನಂತ್ ಅಂಬಾನಿ ಮದುವೆಯಲ್ಲಿ ನಟ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಜೊತೆ ಭಾಗಿಯಾಗಿದ್ದರು. ಆ ವೇಳೆ ಅವರು ‘ಟಾಕ್ಸಿಕ್’ ಸಿನಿಮಾಕ್ಕಾಗಿ ಮಾಡಿಕೊಂಡ ಕೇಶವಿನ್ಯಾಸ ರಿವೀಲ್ ಆಗಿತ್ತು. ಈ ಬಗ್ಗೆ ಹೇರ್ ಸ್ಟೈಲಿಸ್ಟ್ ಅಲೆಕ್ಸ್ ವಿಜಯಕಾಂತ್ ಮಾತನಾಡಿದ್ದರು.
ಯಶ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್, ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದೂಡಿಕೆ?
ಎಲ್ಲೆಲ್ಲಿ ಶೂಟಿಂಗ್ ಮಾಡಲಾಗಿದೆ?
‘ಟಾಕ್ಸಿಕ್’ ಸಿನಿಮಾದಲ್ಲಿ ನಟ ಯಶ್ ಅವರು ʼಸ್ಟೈಲಿಷ್ʼ ಡಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಗೋವಾ ಹಿನ್ನೆಲೆಯಲ್ಲಿ ಡ್ರಗ್ ಮಾಫಿಯಾ ಸುತ್ತ ಸುತ್ತುವ ಕತೆಯುಳ್ಳ ಈ ಸಿನಿಮಾಕ್ಕೆ ಈಗಾಗಲೇ ಶೂಟಿಂಗ್ ಶುರುವಾಗಿದೆ. ಬೆಂಗಳೂರು, ಗೋವಾ, ಲಂಡನ್, ಶ್ರೀಲಂಕಾದಲ್ಲಿ ಸಿನಿಮಾ ಶೂಟಿಂಗ್ ಮಾಡಲಾಗುವುದಂತೆ. ಯಶ್ ಅವರ ಡಾನ್ ಪಾತ್ರದ ಅನೇಕ ದೃಶ್ಯಗಳ ಶೂಟಿಂಗ್ ಲಂಡನ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ 60, 70ರ ದಶಕದಲ್ಲಿ ನಡೆಯುವ ಗೋವಾದ ಡ್ರಗ್ ಮಾಫಿಯಾದ ಕತೆ ಇದೆ ಎನ್ನಲಾಗಿದೆ.
ನಾಲ್ಕು ವರ್ಷಗಳ ಬಳಿಕ ತೆರೆ ಮೇಲೆ ಕಾಣಿಸಿಕೊಂಡ್ರು!
2022 ಏಪ್ರಿಲ್ 14ರಂದು ʼಕೆಜಿಎಫ್ 2ʼ ಸಿನಿಮಾ ರಿಲೀಸ್ ಆಗಿತ್ತು. ಇದಾಗಿ ಸರಿಯಾಗಿ ನಾಲ್ಕು ವರ್ಷಗಳ ಬಳಿಕ ಯಶ್ ಅವರು ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ʼರಾಮಾಯಣʼ ಸಿನಿಮಾದಲ್ಲಿ ನಟಿಸಲು ಆಫರ್ ಬಂದಿತ್ತು ಎನ್ನಲಾಗಿದೆ. ಬಾಲಿವುಡ್‌ನಿಂದ ನಟ ಯಶ್‌ಗೆ ದೊಡ್ಡ ಮಟ್ಟದಲ್ಲಿ ಸಂಭಾವನೆ ನೀಡಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಈ ಬಗ್ಗೆ ಅವರೇ ಮಾಹಿತಿ ನೀಡಬೇಕಿದೆ.