ಬಾಂಗ್ಲಾದೇಶದಿಂದ ಕಾಪಿ ಮಾಡುವಷ್ಟು ಬಡವಾಯ್ತಾ ಬಾಲಿವುಡ್? ಸಿಕಂದರ್ ಹಾಡಿಗೆ ಭಾರಿ ಟೀಕೆ

Published : Mar 22, 2025, 05:28 PM ISTUpdated : Mar 22, 2025, 05:34 PM IST
ಬಾಂಗ್ಲಾದೇಶದಿಂದ ಕಾಪಿ ಮಾಡುವಷ್ಟು ಬಡವಾಯ್ತಾ ಬಾಲಿವುಡ್? ಸಿಕಂದರ್ ಹಾಡಿಗೆ ಭಾರಿ ಟೀಕೆ

ಸಾರಾಂಶ

ಹಾಲಿವುಡ್‌ನಿಂದ ಕಾಪಿ ಹೊಡೆದ್ರೂ ಪರ್ವಾಗಿಲ್ಲ, ಆದರೆ ಬಾಂಗ್ಲಾದೇಶದಿಂದ ಕಾಪಿ ಮಾಡುವಷ್ಟು ಬಡವಾಯ್ತಾ ಬಾಲಿವುಡ್? ಈ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದರೆ. ಕಾರಣ ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಚಿತ್ರದ ಈ ಹಾಡು.  

ಮುಂಬೈ(ಮಾ.22) ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈದ್ ಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಲೇ ಚಿತ್ರದ ಟೇಲರ್, ಹಾಡುಗಳು ಬಿಡುಗಡೆಯಾಗಿದೆ. ಸತತ ಸೂಪರ್ ಹಿಟ್ ಚಿತ್ರ ನೀಡುತ್ತಿರುವ ರಶ್ಮಿಕಾ ಮಂದಣ್ಣ ಈ ಚಿತ್ರದ ನಾಯಕಿ. ಹೀಗಾಗಿ ಈ ಚಿತ್ರವೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿದೆ ಅನ್ನೋ ಲೆಕ್ಕಾಚಾರಗಳು ಹೆಚ್ಚಾಗುತ್ತಿದೆ. ಆದರೆ ಸಿಕಂದರ್ ಚಿತ್ರದ ಮೂಲಕ ಬಾಲಿವುಡ್ ಕೂಡ ಭಾರಿ ಟೀಕೆಗೆ ಗುರಿಯಾಗಿದೆ. ಕಾರಣ ಸಿಕಂದರ್ ಚಿತ್ರದ ಹಾಡು. ಹೌದು, ಇತ್ತೀಚೆಗೆ ಚಿತ್ರ ತಂಡ ಬಿಡುಗಡೆ ಮಾಡಿದ ಜೊಹರ ಝಬಿ ಹಾಡು ಭಾರಿ ವಿವಾದಕ್ಕೆ ಕುರಿಯಾಗಿದೆ. ಈ ಹಾಡಿನ ಮೂಲಕ ಬಾಲಿವುಡ್ ಮಾನ ಮೂರು ಕಾಸಿಗೆ ಹರಾಜಾಗಿದೆ.

ಮಾರ್ಚ್ 30 ರಂದು ಸಿಕಂದರ್ ಸಿನಿಮಾ ಬಿಡುಗಡೆಯಾಗುತ್ತಿದೆ. ಇದರ ಜೊಹರ ಝಬಿ ಹಾಡು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಲ್ಮಾನ್ ಖಾನ್ ತಮ್ಮ ಸಿಗ್ನೇಚರ್ ಸ್ಟೆಪ್ಸ್ ಮೂಲಕ ಅಬ್ಬರಿಸಿದರೆ, ರಶ್ಮಿಕಾ ಮಂದಣ್ಣ ತಮ್ಮ ಡ್ಯಾನ್ಸ್ ಮೂಲಕ ಅಭಿಮಾನಿಗಳ ರಂಜಿಸುವ ಪ್ರಯತ್ನ ಮಾಡಿದ್ದಾರೆ. ಎ ಮುರುಗದಾಸ್ ನಿರ್ದೇಶನದ ಈ ಚಿತ್ರದ ಜೊಹರ ಝಬಿ ಹಾಡಿನ ಕುರಿತು ನೆಟ್ಟಿಗರು ಟೀಕಿಸಿದ್ದಾರೆ. ಬಾಂಗ್ಲಾದೇಶದ ಹಾಡನ್ನೇ ಕಾಪಿ ಮಾಡಿ ಬಾಲಿವುಡ್‌ನಲ್ಲಿ ಬಳಸಲಾಗಿದೆ ಅನ್ನೋ ಟೀಕೆಯನ್ನು ನೆಟ್ಟಿಗರು ಮಾಡಿದ್ದಾರೆ. ಇಷ್ಟೇ ಅಲ್ಲ ಬಾಂಗ್ಲಾದೇಶದ ಹಾಡು ಹಾಗೂ ಸಿಕಂದರ್ ಹಾಡಿನ ಎರಡೂ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಟೀಕಿಸಿದ್ದಾರೆ.

ಸಲ್ಮಾನ್ ಖಾನ್ ಸಿಕಂದರ್ ರಿಮೇಕ್ ಸಿನೆಮಾವೇ? ದಕ್ಷಿಣದ ಚಿತ್ರದಿಂದ ಕಥೆ ಕದಿಯಲಾಗಿದೆಯೇ?

ಬಾಂಗ್ಲಾದೇಶ ಸಿನಿಮಾ ಹೀರೋ ಶಕೀಬ್ ಖಾನ್ ಅಭಿನಯದ ಚಿತ್ರ 2023ರಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದ ಹಾಡನ್ನು ಯಥವತ್ತಾಗಿ ಸಿಕಂದರ್ ಸಿನಿಮಾದಲ್ಲಿ ಬಳಸಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ  ಟೀಕೆ ವ್ಯಕ್ತವಾಗಿದೆ. ಚಿತ್ರದ ಹಾಡು, ಸೀಕ್ವೆನ್ಸ್, ಹೀರೋ ಡ್ರೆಸ್ ಕೂಡ ಬದಲಿಸಲಿಲ್ಲ. ಯಥವಾತ್ತಾಗಿ ಕಾಪಿ ಮಾಡಲಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ಡ್ಯಾನ್ಸ್ ಸ್ಟೆಪ್ಸ್, ಕಾಸ್ಚ್ಯೂಮ್, ಥೀಮ್, ಬ್ಯಾಕ್‌ಗ್ರೌಂಡ್ ಸೇರಿದಂತೆ ಎಲ್ಲವನ್ನೂ ಸಿಕಿಂದರ್ ಚಿತ್ರ ಕಾಪಿ ಮಾಡಿ ಬಳಸಿಕೊಂಡಿದೆ ಎಂದು ಟೀಕಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ: ಅಷ್ಟಕ್ಕೂ ಯಾರು ಆ ಹೀರೋ?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?