ತಮ್ಮ ಪತ್ನಿಯರು ನಟಿಯ ಹಾಗೆ ಇರಬೇಕು ಎಂದು ಹಲವರು ಹೇಳುತ್ತಿದ್ದರೆ, ನಟಿಯರಿಗೆ ಮದುವೆಯೆನ್ನುವುದು ಮರೀಚಿಕೆಯಾಗಿಬಿಟ್ಟಿದೆ ಎಂದಿದ್ದಾರೆ ನಟಿ ಕೃತಿ ಸನೊನ್. ಅವರು ಹೇಳಿದ್ದೇನು?
ಬಾಲಿವುಡ್ ಬ್ಯೂಟಿ ಕೃತಿ ಸನೊನ್ (Kriti Sanon) ಮತ್ತು ಟಾಲಿವುಡ್ ಸ್ಟಾರ್ ಪ್ರಭಾಸ್ ಮದುವೆ ಸುದ್ದಿ ಕೆಲ ತಿಂಗಳುಗಳಿಂದ ಭಾರಿ ಚರ್ಚೆಯ ವಸ್ತುವಾಗಿದೆ. ಇವರಿಬ್ಬರು ಅಭಿನಯಿಸಿರೋ ಆದಿಪುರುಷ್ ಸಿನಿಮಾ ಪೋಸ್ಟರ್‌ಯಿಂದ ಹಿಡಿದು ಟ್ರೈಲರ್‌ವರೆಗೂ ಭಾರಿ ಪ್ರಚಾರವಾಗಿತ್ತು. ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು ಇವರಿಬ್ಬರ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಇಬ್ಬರೂ ಸೈಲೆಂಟ್ ಆಗಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಕೂಡ ಶುರುವಾಗಿದೆ. ಇತ್ತೀಚಿಗೆ ನಡೆದ ಪ್ರೆಸ್‌ಮೀಟ್‌ವೊಂದರಲ್ಲಿ ಪ್ರಭಾಸ್‌ನ ಮದುವೆ ಆಗುವುದಾಗಿ ಕೃತಿ ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದರು. ಆದರೆ ಇದರ ಹೊರತಾಗಿಯೂ ಇವರ ಮದುವೆಯ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ. ಅದರಲ್ಲಿಯೂ ‘ಬಾಹುಬಲಿ’ ಸಿನಿಮಾದ ಬಳಿಕ ಪ್ರಭಾಸ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ. ಬಾಲಿವುಡ್‌ನಲ್ಲೂ ಪ್ರಭಾಸ್ ಬೇಡಿಕೆ ಕಂಡುಕೊಂಡಿದ್ದಾರೆ.
ಇದರ ಬಳಿಕ ಪ್ರಭಾಸ್ (Prabhas) ನಟಿ ಕೃತಿ ಸನೊನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ಮಾಲ್ದೀವ್ಸ್‌ನಲ್ಲಿ ಇವರ ಎಂಗೇಜ್‌ಮೆಂಟ್ ನಡೆಯಲಿದೆ ಎಂದೆಲ್ಲಾ ಸುದ್ದಿಯಾಗಿತ್ತು. ಕೊನೆಗೂ ಲವ್ ಹಾಗೂ ಎಂಗೇಜ್‌ಮೆಂಟ್ ಗಾಸಿಪ್ ಬಗ್ಗೆ ಪ್ರಭಾಸ್ ತಂಡ ಸ್ಪಷ್ಟನೆ ನೀಡಿ, ಪ್ರಭಾಸ್ ಹಾಗೂ ಕೃತಿ ಸನೊನ್ ಜಸ್ಟ್ ಫ್ರೆಂಡ್ಸ್. ಅವರಿಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂಬ ಸುದ್ದಿ ಶುದ್ಧ ಸುಳ್ಳು ಎಂದಿತ್ತು.
ಒಟ್ಟಿನಲ್ಲಿ ಇಬ್ಬರು ಜಸ್ಟ್ ಫ್ರೆಂಡ್ಸೋ, ಇನ್ನೇನೋ, ಮತ್ತೇನೋ ಎಂಬ ಬಗ್ಗೆ ಕಾಲವೇ ಉತ್ತರಿಸಬೇಕಿದೆ. ಇದರ ನಡುವೆಯೇ ಮದುವೆಗೆ ಸಂಬಂಧಿಸಿದಂತೆ ಕೃತಿ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಇದು ಅವರ ವೈಯಕ್ತಿಯ ಮದುವೆಯ ಮಾತಲ್ಲ, ಬದಲಿಗೆ ಸಿನಿ ತಾರೆಯರ ಅದರಲ್ಲಿಯೂ ನಾಯಕಿಯರ ಮದುವೆಯ ಬಗ್ಗೆ ನೋವಿನ ಮಾತುಗಳನ್ನಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಿನಿ ಸೆಲಬ್ರಿಟಿಗಳ ಬದುಕೇ ವಿಭಿನ್ನವಾದದ್ದು, ಅವರು ಅನೇಕ ಸವಾಲುಗಳನ್ನು ಎದುರಿಸುತ್ತಲೇ ಇರಬೇಕು. ಜೊತೆಗೆ ಗಾಸಿಪ್ಗಳೂ (Gossip) ಬೆನ್ನು ಬಿಡುವುದಿಲ್ಲ. ತಮ್ಮ ಪತ್ನಿಯಾಗುವವಳು ಆ ಹೀರೊಯಿನ್ ಥರ ಇರಬೇಕು, ಆಕೆಯ ಹಾಗೆ ತೆಳ್ಳಗೆ, ಬೆಳ್ಳಗೆ, ಸುಂದರ ಇರಬೇಕು. ಅವಳಂತೆ ಮೂಗು, ಬಾಯಿ ಹೊಂದಿರಬೇಕು ಹೀಗೆಲ್ಲಾ ಹೇಳುವ ಪುರುಷರೇ ಜಾಸ್ತಿ. ಆದರೆ ನಿಜವಾಗಿಯೂ ನಟಿಯರಿಗೆ ಮದುವೆಯಾಗುವುದು ಎಷ್ಟು ಕಷ್ಟ ಎಂಬುದನ್ನು ಕೃತಿ ಹೇಳಿದ್ದಾರೆ.
ಪ್ರಭಾಸ್‌ನ ಮದುವೆ ಆಗ್ತೀನಿ: ಬಹಿರಂಗವಾಗಿ ಒಪ್ಪಿಕೊಂಡ ಕೃತಿ ಸನೊನ್, ಗಾಸಿಪ್‌ಗೆ ಬ್ರೇಕ್!
ಕೃತಿ ಹೇಳಿರುವಂತೆ, 'ಹೆಣ್ಣು ಮಕ್ಕಳು ಚಿತ್ರರಂಗಕ್ಕೆ ಹೋದರೆ ಹಾಳಾಗುತ್ತಾರೆ ಎಂಬ ಕಲ್ಪನೆ ಇಂದಿಗೂ ಕೂಡ ಬೇರುಬಿಟ್ಟಿದೆ. ಹೀಗಾಗಿಯೇ ಯಾರೂ ಹೆಣ್ಣು ಮಕ್ಕಳನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ' ಎಂದು ಕೃತಿ ಸನೋನ್ ಹೇಳಿದ್ದಾರೆ. ಸಿನಿಮಾದಲ್ಲಿ ಬೇರೂರಬೇಕು ಎಂದು ಹೆಣ್ಣುಮಕ್ಕಳು ಯಾವ ಮಟ್ಟಿಗಾದರೂ ಇಳಿಯುತ್ತಾರೆ ಎನ್ನುವ ಮಾತು ಇಂದು, ನಿನ್ನೆಯದ್ದಲ್ಲ. ಇದರ ಜೊತೆಜೊತೆಗೇನೇ ಇತ್ತೀಚಿನ ದಿನಗಳಲ್ಲಿ ಹಲವು ನಟಿಯರು ತಮ್ಮ ಮೇಲಾಗಿರುವ ಲೈಂಗಿಕ ದೌರ್ಜನ್ಯ, ಕಾಸ್ಟ್ ಕೌಚಿಂಗ್ (Cast Couching) ಕುರಿತ ಭಯಾನಕ ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ. ನಿರ್ದೇಶಕರು, ನಿರ್ಮಾಪಕರು ಕೆಲವೊಮ್ಮೆ ನಟರು ತಮ್ಮನ್ನು ಹೇಗೆ ಬಳಸಿಕೊಳ್ಳಲು ಪ್ರಯತ್ನಿಸಿದರು ಎಂಬ ಬಗ್ಗೆ ಕಹಿ ನೆನಪುಗಳನ್ನು ತೆರೆದಿಟ್ಟಿದ್ದಾರೆ. ಆದ್ದರಿಂದ ದೊಡ್ಡ ದೊಡ್ಡ ನಟಿಯರ ಹಿಂದೆ ಇಂಥದ್ದೇ ಬಾಳು ಇದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುವುದು ಸಹಜ.
ಅದನ್ನೇ ಈಗ ನಟಿ ಕೃತಿ ಹೇಳಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ನಟಿಯಾಗಿ ಮುಂದುವರೆಯುವುದನ್ನು ಕರಿಯರ್ ಆಗಿ ಯಾರೂ ನೋಡುವುದಿಲ್ಲ. ಆ ಕಾರಣಕ್ಕೆ ನಾಯಕಿಯರನ್ನು ಮದುವೆಯಾಗಲು ಯಾರೂ ಮುಂದೆ ಬರುವುದಿಲ್ಲ ಎಂದು ಇವರು ಹೇಳಿದ್ದಾರೆ. ಮದುವೆಯಾದರೂ ಅನೇಕರು ಯೋಚಿಸುತ್ತಲೇ ಇರುತ್ತಾರೆ. ಇದಕ್ಕಾಗಿಯೇ ಅನೇಕ ಹೀರೋಯಿನ್ ಗಳು ಮದುವೆಯಾಗಿಲ್ಲ, ಕೆಲವರಿಗೆ ಮದುವೆ ಎನ್ನೋದು ಮರೀಚಿಕೆ ಎಂದಿರುವ ಕೃತಿ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಅನೇಕ ಸ್ನೇಹಿತರು ಇದೇ ರೀತಿಯ ಕಮೆಂಟ್ಗಳನ್ನು ಮಾಡುವುದನ್ನು ಕೇಳಿದ್ದೇನೆ ಎಂದಿದ್ದಾರೆ. ನಾಯಕಿಯರು ಮದುವೆಯಾಗುವುದು ಕಷ್ಟವಾಗಿದೆ ಎಂದು ದುಃಖ ತೋಡಿಕೊಂಡಿದ್ದಾರೆ.
Alia Bhatt ಉತ್ತಮ ಪತ್ನಿ ಹೌದೋ, ಅಲ್ವೊ? ಶಾಕಿಂಗ್ ಹೇಳಿಕೆ ಕೊಟ್ಟ ಪತಿ ರಣಬೀರ್
ಇತ್ತೀಚೆಗಷ್ಟೇ ಕೃತಿ ಸನನ್ ಕೆಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ ವಿಜಯ್ ದೇವರಕೊಂಡ ಹೆಸರನ್ನು ಹೊರತಂದಿದ್ದರು. ಸ್ವಯಂವರ ಕೊಟ್ಟರೆ ಆ ಸ್ವಯಂವರದಲ್ಲಿ ಮೂವರು ವೀರರು ಇರಲೇ ಬೇಕು ಎನ್ನುವ ಸುದ್ದಿ ವೈರಲ್ ಆಗಿತ್ತು. ವಿಜಯ್ ದೇವರಕೊಂಡ ಜೊತೆಗೆ ಯುವ ನಾಯಕ ಕಾರ್ತಿಕ್ ಆರ್ಯನ್ ಮತ್ತು ಮತ್ತೊಬ್ಬ ನಾಯಕ ಆದಿತ್ಯ ರಾಯ್ ಕಪೂರ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು. ಇನ್ನು ಕೃತಿ ಅವರ ಸಿನಿಮಾ ಬದುಕಿನ ಕುರಿತು ಹೇಳುವುದಾದರೆ, ಇವರು ಮಹೇಶ್ ಬಾಬು ಅಭಿನಯದ ಸುಕುಮಾರ್ ನಿರ್ದೇಶನದ ಒನ್-ನೇನೊಕ್ಕಡಿನೆ ಚಿತ್ರದ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದವರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸು ಕಾಣದಿದ್ದರೂ, ಕೃತಿಗೆ ಉತ್ತಮ ಮನ್ನಣೆ ಸಿಕ್ಕಿದೆ.