ದೇವರು ನನಗೆ ಒಳ್ಳೆ ಧ್ವನಿ ಕೊಟ್ಟಿದ್ದಾನೆ, ಮಗಳಿಗಾಗಿ ಹಾಡ್ತೀನಿ; ನಟಿ ಅಲಿಯಾ ಭಟ್

Published : Mar 11, 2023, 04:00 PM IST
ದೇವರು ನನಗೆ  ಒಳ್ಳೆ ಧ್ವನಿ ಕೊಟ್ಟಿದ್ದಾನೆ, ಮಗಳಿಗಾಗಿ ಹಾಡ್ತೀನಿ; ನಟಿ ಅಲಿಯಾ ಭಟ್

ಸಾರಾಂಶ

ಬಾಲಿವುಡ್ ನಟಿ ಆಲಿಯಾ ಭಟ್ ದೇವರು ತನಗೆ ಉತ್ತಮ ಧ್ವನಿ ನೀಡಿದ್ದಾನೆ ಮಗಳಿಗಾಗಿ ಹಾಡುತ್ತೇನೆ ಎಂದು ಹೇಳಿದ್ದಾರೆ.  

ಬಾಲಿವುಡ್ ಸ್ಟಾರ್ ಅಲಿಯಾ ಭಟ್ ಮಗಳು ರಹಾ ಆರೈಕೆಯಲ್ಲಿ ಬ್ಯುಸ್ಯಿಗಿದ್ದಾರೆ. ಮಗಳಿಗೆ ಜನ್ಮ ನೀಡಿ ಕೆಲವೇ ತಿಂಗಳಲ್ಲಿ ಆಲಿಯಾ ವರ್ಕೌಟ್, ಯೋಗ ಅಂತ ಬ್ಯುಸಿಯಾಗಿದ್ದರು. ಇದೀಗ ಮತ್ತೆ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದು ಸದ್ಯ ಚಿತ್ರೀಕರಣದಲ್ಲಿದಲ್ಲಿದ್ದಾರೆ. ಮಗಳ ಜೊತೆ ಆಲಿಯಾ ಕಾಶ್ಮೀರ್‌ಗೆ ಹಾರಿದ್ದಾರೆ. ಕಾಶ್ಮೀರದಲ್ಲಿ ಆಲಿಯಾ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದ ಚಿತ್ರೀಕಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅಲಿಯಾ ಮಗಳಿಗಾಗಿ ಸಂಗೀತ ಕಲೆಯನ್ನು ಹೊರಹಾಕಿದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಆಲಿಯಾ ಭಟ್ ಉತ್ತಮ ನಟಿ ಎನ್ನುವುದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗೆ ಉತ್ತ ಸಿಂಗರ್ ಕೂಡ. ಈಗಾಗಲೇ ಕೆಲವು ಸಿನಿಮಾಚಗಳ ಹಾಡಿಗೆ ಧ್ವನಿ ನೀಡಿದ್ದಾರೆ. ಹೈವೇ ಮತ್ತು ಹಂಪ್ಟಿ ಶರ್ಮಾ ಕಿ ದುಲ್ಹನಿಯಾ ಸಿನಿಮಾಗಳ ಹಾಡಿಗೆ ಧ್ವನಿ ನೀಡಿದ್ದಾರೆ. 
   
ಇದೀಗ ಆಲಿಯಾ ತನ್ನ ಮಗಳು ರಾಹಾಗಾಗಿ ಹಾಡುತ್ತಿದ್ದಾರೆ. ಈ ಬಗ್ಗೆ ಆಲಿಯಾ ಬಾಂಬೆ ಟೈಮ್ಸ್ ಜೊತೆ ಮಾತನಾಡಿದ್ದಾರೆ. 'ನಾನು ನನ್ನ ಸಹೋದರಿ ಶಹೀನ್ ಭಟ್‌ಗೆ ಹೇಳುತ್ತಿದ್ದೆ, ನನ್ನ ಮಗಳಿಗೆ ಹಾಡಲು ದೇವರು ನನಗೆ ಉತ್ತಮ ಧ್ವನಿ ನೀಡಿದ್ದಾನೆ. ನಾನು ಅನೇಕ ಹಾಡುಗಳನ್ನು ಕೇಳುತ್ತೇನೆ ಮತ್ತು ಹಾಡುತ್ತೇನೆ' ಎಂದು ಹೇಳಿದ್ದಾರೆ.

ಆಲಿಯಾ ಭಟ್ ಶೈಕ್ಷಣಿಕ ಅರ್ಹತೆ ಬಗ್ಗೆ ವ್ಯಂಗವಾಡಿದ ಸೋನಾಕ್ಷಿ ಸಿನ್ಹಾ!

ನಾನೇ ಹಾಡುಗಳನ್ನು ರಚಿಸುತ್ತೇನೆ ಮತ್ತು ಹೊಸ ಹೊಸ ಟ್ಯೂನ್‌ಗಳನ್ನು ಹಾಕುತ್ತೇನೆ. ನಾನು ಸಂಗೀತ ನಿರ್ದೇಶಕಳಾಗಬಹುದು ಎಂದು ಭಾವಿಸುತ್ತೇನೆ. ನನಗೆ ಹಾಡುಗಳನ್ನು ಸಂಯೋಜಿಸಲು ಸಾಧ್ಯವಾಗದ ಕಾರಣ ನಾನು ಹಾಡನ್ನು ಹೇಳುತ್ತೇನೆ. ಎಲ್ಲವೂ ಸಹಜವಾಗಿ ಬರುತ್ತೆ ನನಗೆ. ನಾನು ಹೊಸತನದ ಹಾಡುಗಳನ್ನು ಹಾಡುವುದನ್ನು ನೀವು ನೋಡುತ್ತೀರಿ. ತನ್ನ ಮಗುವನ್ನು ಮನರಂಜಿಸಲು ತಾಯಿ ಏನು ಮಾಡಬಹುದು' ಎಂದು ಹೇಳಿದ್ದಾರೆ.

ಮಧ್ಯರಾತ್ರಿ ಪತ್ನಿ ಫೋಟೋ ಕ್ಲಿಕ್ಕಿಸಿದ ರಣಬೀರ್ ಕಪೂರ್; ಅಲಿಯಾ ಭಟ್ ಹೇಳಿದ್ದೇನು?

 ಅಲಿಯಾ ಸದ್ಯ ಕರಣ್ ಜೋಹರ್ ಅವರ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮಗುವಿಗೆ ಜನ್ಮ ನೀಡುವ ಮೊದಲೇ ಆಲಿಯಾ ಈ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದರು. ಗರ್ಭಿಣಿಯಾದ ಕಾರಣ ಅರ್ಧಕ್ಕೆ ನಿಲ್ಲಿಸಿದ್ದರು. ಇದೀಗ ಮತ್ತೆ ಶೂಟಿಂಗ್ ಆರಂಭಿಸಿದ್ದಾರೆ. ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ. ಈ ಸಿನಿಮಾ ಶೂಟಿಂಗ್ ಜೊತೆಗೆ ಹಾಲಿವುಡ್ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಇನ್ನೂ ಫರ್ಹಾನ್ ಅಖ್ತರ್ ಜೀ ಲೇ ಝರಾ ಸಿನಿಮಾದಲ್ಲೂ ಆಲಿಯಾ ನಟಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?