ನಿರ್ದೇಶಕ ರೂಮಿಗೆ ಕರೆದಾಗ ವಿದ್ಯಾ ಬಾಲನ್ ಮಾಡಿದ್ದೇನು? ಸಿನಿರಂಗದ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ

Published : Mar 11, 2023, 01:49 PM IST
ನಿರ್ದೇಶಕ ರೂಮಿಗೆ ಕರೆದಾಗ ವಿದ್ಯಾ ಬಾಲನ್ ಮಾಡಿದ್ದೇನು? ಸಿನಿರಂಗದ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ

ಸಾರಾಂಶ

ಬಾಲಿವುಡ್ ಖ್ಯಾತ ನಟಿ ವಿದ್ಯಾ ಬಾಲನ್ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾರಂಗದ ಕರಾಳ ಮುಖ ಬಿಚ್ಚಿಟ್ಟಿದ್ದಾರೆ. 

ಬಾಲಿವುಡ್ ಖ್ಯಾತ ನಟ ವಿದ್ಯಾ ಬಾಲನ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ಬೆತ್ತಲಾಗಿ ನ್ಯೂಸ್ ಪೇಪರ್ ಹಿಡಿದು ಕುಳಿತಿದ್ದ ವಿದ್ಯಾ ಬಾಲನ್ ಇದೀಗ ಕಾಸ್ಟಿಂಗ್ ಕೌಚ್ ವಿಚಾರ ಬಹಿರಂಗ ಪಡಿಸಿದ್ದಾರೆ. ತನಗೂ ಕಾಸ್ಟಿಂಗ್ ಕೌಚ್ ಅನುಭವವಾಗಿತ್ತು ಎಂದು ವಿದ್ಯಾ ಬಾಲನ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 20 ವರ್ಷಗಳಿಗೂ ಹೆಚ್ಚು ಕಾಲ ಸಿನಿಮಾಗಳಲ್ಲಿ ಸಕ್ರೀಯರಾಗಿರು ವಿದ್ಯಾ ಬಾಲನ್ ಇದೀಗ ಸಿನಿಮಾರಂಗದ ಕೆಟ್ಟ ಮುಖ ತೆರೆದಿಟ್ಟಿದ್ದಾರೆ. ಇತ್ತೀಚೆಗಷ್ಟೆ ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವಿದ್ಯಾ ಬಾಲನ್, ಖ್ಯಾತ ನಿರ್ದೇಶಕ ನೀಡಿದ ಕಿರುಕುಳದ ಬಗ್ಗೆ ರಿವೀಲ್ ಮಾಡಿದ್ದಾರೆ.

ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ವಿದ್ಯಾ ಬಾಲನ್ ಸಿನಿಮಾರಂಗದಲ್ಲಿ ಎದುರಿಸಿದ ಅಗ್ನಿಪರೀಕ್ಷೆ ಬಗ್ಗೆ ಮಾತನಾಡಿದ್ದಾರೆ. ತಾನು ಯಾವಾಗಲು ಅದೃಷ್ಟಶಾಲಿ ಎಂದಿರುವ ವಿದ್ಯಾ ಒಮ್ಮೆ ನಿರ್ದೇಶಕರಿಂದ ಆದ ಅಹಿತಕರ ಘಟನೆಯನ್ನು ವಿವರಿಸಿದರು. ನಿರ್ದೇಶಕರೊಬ್ಬರು ಮಾತನಾಡಬೇಕೆಂದು ಹೋಟೆಲ್ ಕೋಣೆಗೆ ಬರಬೇಕೆಂದು ಒತ್ತಾಯ ಮಾಡಿದ ಘಟನೆ ಬಹಿರಂಗ ಪಡಿಸಿದರು. 

'ನನಗೆ ನಿಜವಾಗಿಯೂ ಕಾಸ್ಟಿಂಗ್ ಕೌಚ್ ಅನುಭವವಾಗಿಲ್ಲ. ಈ ವಿಚಾರದಲ್ಲಿ ನಾನು ತುಂಬಾ ಲಕ್ಕಿ. ನಾನು ತುಂಬಾ ಭಯಾನಕ ಕಥೆಗಳನ್ನು ಕೇಳಿದ್ದೀನಿ. ನನ್ನ ಹೆತ್ತವರಿಗೂ ತುಂಬಾ ಭಯವಿತ್ತು. ಏಕೆಂದರೆ ನಾನು ಸಿನಿಮಾ ಕುಟುಂಬದಿಂದ ಬಂದವಳಲ್ಲ. ನಾನು ಸಿನಿಮಾ ಸೇರುವುದು ಕುಟುಂಬದಲ್ಲಿ ವಿರೋಧವಿತ್ತು. ಆದರೆ ನನಗೆ ಒಂದು ಘಟನೆ ಅನುಭವವಾಗಿದೆ. ನಾನು ಸಹಿ ಹಾಕಿದ್ದ ಸಿನಿಮಾವೊಂದರ ಚಿತ್ರೀಕರಣ ಸಲುವಾಗಿ ನಿರ್ದೇಶಕರ ಜೊತೆ ಮೀಟಿಂಗ್ ಇತ್ತು. ನಾನು ಜಾಹೀರಾತು ಚಿತ್ರೀಕರಣಕ್ಕಾಗಿ ಚೆನ್ನೈಗೆ ಹೋಗಿದ್ದೆ. ನಾನು ನಿರ್ದೇಶಕನ್ನು ಭೇಟಿಯಾದೆ. ನನ್ನ ರೂಮಿಗೆ ಹೋಗಿ ಮಾತಾಡೋಣ ಎಂದು ಹೇಳಿದರು' ಎಂದು ವಿದ್ಯಾ ಬಹಿರಂಗ ಪಡಿಸಿದರು. 

ಪ್ರತಿ ತಿಂಗಳು ನನ್ನ ಹೊಟ್ಟೆ ಹುಡುಕ್ಬೇಡಿ; ಪ್ರೆಗ್ನೆಂಟ್ ಎಂದವರ ವಿರುದ್ಧ ವಿದ್ಯಾ ಬಾಲನ್ ಕಿಡಿ

'ನನಗೆ ಅರ್ಥವಾಗಿಲ್ಲ. ನಾನು ಒಬ್ಬಳೆ ಇದ್ದೆ ಎನ್ನುವುದು. ಆದರೆ ನಾನು ಬುದ್ಧಿವಂತಿಕೆಯಿಂದ ನಡೆದುಕೊಂಡೆ. ನಾನು ಅವರ ಕೋಮೆಗೆ ಹೋದಾಗ ಬಾಗಿಲನ್ನು ತೆರೆದಿಟ್ಟು ಒಳಗೆ ಹೋದೆ. ಅದು ಅವರಿಗೆ ಗೊತ್ತಾಯಿತು. ಇದು ಕಾಸ್ಟಿಂಗ್ ಕೌಚ್ ಅನುಭವ ಎಂದು ನಾನು ನಂಬಲ್ಲ. ಯಾಕೆಂದರೆ ಯಾವುದೇ ಪ್ರಸ್ತಾಪ ಮಾಡಿಲ್ಲ, ಸ್ವಯಂ ರಕ್ಷಣೆ ಮಾಡಿಕೊಳ್ಳು ಮಾಡಿಕೊಳ್ಳಲು ಪ್ರಾರಂಭಿಸಿದೆ. ಆದರೆ ನಾನು ಆಸ ಸಿನಿಮಾದಿಂದ ಹೊರಬಂದೆ' ಎಂದು ಹೇಳಿದರು. 

ಬೆತ್ತಲಾಗಿ ನ್ಯೂಸ್ ಪೇಪರ್‌ ಹಿಡಿದು ಕುಳಿತ ವಿದ್ಯಾ ಬಾಲನ್; 'ಡರ್ಟಿ ಪಿಕ್ಚರ್' ಎಂದು ಕಾಲೆಳೆದ ನೆಟ್ಟಿಗರು

ನಟಿ ವಿದ್ಯಾ ಬಾಲನ್ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಪರಿಣೀತಾ, ಇಷ್ಕಿಯಾ, ನೋ ಒನ್ ಕಿಲ್ಡ್ ಜೆಸ್ಸಿಕಾ, ಕಹಾನಿ, ದಿ ಡರ್ಟಿ ಪಿಕ್ಚರ್‌ನಂತಹ ಅನೇಕ ಮೆಚ್ಚುಗೆ ಪಡೆದ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈ ಸಿನಿಮಾಗಳು ವಿದ್ಯಾ ಅವರಿಗೆ ಅತೀ ಹೆಚ್ಚು ಖ್ಯಾತಿತಂದು ಕೊಟ್ಟ ಸಿನಿಮಾಗಳಾಗಿವೆ. ವಿದ್ಯಾ ಇತ್ತೀಚೆಗೆ ನಟಿಸಿದ ಬಯೋಪಿಕ್ ಶಕುಂತಲಾ ದೇವಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿಲ್ಲ. ಸದ್ಯ ಎರಡು ಸಿನಿಮಾಗಳಲ್ಲಿ ವಿದ್ಯಾ ಬ್ಯುಸಿಯಾಗಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್