ಎಷ್ಟೇ ಮುನಿಸಿದ್ರೂ ಈ ಕಾರಣಕ್ಕ ಡಿವೋರ್ಸ್‌ ನೀಡೋಲ್ವಂತೆ ಅಭಿಷೇಕ್‌ - ಐಶ್!

By Roopa Hegde  |  First Published Aug 9, 2024, 6:40 PM IST

ಬಾಲಿವುಡ್ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್  ಡಿವೋರ್ಸ್ ವಿಷ್ಯ ಸಖತ್ ಸುದ್ದಿಯಲ್ಲಿದೆ. ಒಮ್ಮೆ ಕೊಡ್ತಾರೆ, ಇನ್ನೊಮ್ಮೆ ಕೊಡಲ್ಲ ಎನ್ನುವ ಚರ್ಚೆ ಮಧ್ಯೆ ಈಗ ಅಭಿಮಾನಿಗಳು ರಿಲ್ಯಾಕ್ಸ್ ಆಗುವ ಸುದ್ದಿ ಬಂದಿದೆ. 
 


ಬಿಗ್ ಬಿ ಕುಟುಂಬದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಹೊಸದೇನಲ್ಲ. ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವ ಮಾತಿಗೆ ಅನೇಕ ಸಾಕ್ಷ್ಯ ಸಿಗ್ತಿದೆ. ಅನಂತ್ ಅಂಬಾನಿ ಮದುವೆ, ಐಶ್ವರ್ಯ ರೈ ಲಂಡನ್ ಪ್ರವಾಸ ಈಗ ಅಭಿಷೇಕ್ ಪ್ಯಾರಿಸ್ ಪ್ರವಾಸ. ಕಳೆದ ಮೂರ್ನಾಲ್ಕು ತಿಂಗಳಿಂದ ಸೂಪರ್ ಹಿಟ್ ಜೋಡಿ ಒಟ್ಟಿಗೆ ಎಲ್ಲೂ ಕಾಣಿಸಿಕೊಂಡಿಲ್ಲ. ಎಲ್ಲ ಕಾರ್ಯಕ್ರಮವನ್ನು, ಪ್ರವಾಸವನ್ನು ಸಿಂಗಲ್ ಆಗಿ ಅಡೆಂಟ್ ಮಾಡಿದ್ರೂ ಇಬ್ಬರ ಮಧ್ಯೆ ವಿಚ್ಛೇದನ ಆಗ್ತಿಲ್ಲ. ಇಷ್ಟು ದಿನ ಐಶ್ವರ್ಯ ಮತ್ತು ಅಭಿಷೇಕ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ಮಾತಿತ್ತು. ಆದ್ರೀಗ ಅವರು ಒಂದೇ ಒಂದು ಕಾರಣಕ್ಕೆ ಡಿವೋರ್ಸ್ ಪಡೆಯೋದಿಲ್ಲ ಎನ್ನುವ ಸುದ್ದಿ ಹರಡಿದೆ. 

ಐಶ್ವರ್ಯ (Aishwarya) ರೈ ಮತ್ತು ಅಭಿಷೇಕ್ (Abhishek) ವಿಚ್ಛೇದನ ಪಡೆಯದಿರಲು ಕಾರಣ : ಮದುವೆ, ಮಕ್ಕಳು ಎಂಬ ವಿಷ್ಯ ಬಂದಾಗ ಮೊದಲು ಮನೆ, ಕುಟುಂಬದ ಹಿನ್ನಲೆಯನ್ನು ಜನರು ನೋಡ್ತಾರೆ. ಬಿಗ್ ಬಿ (Big B) ಅಮಿತಾಬ್ ಬಚ್ಚನ್ ಮನೆಯಲ್ಲೂ ಐಶ್ ಮತ್ತು ಅಭಿ ವಿಚ್ಛೇದನ ಪಡೆಯದಿರಲು ಇದೇ ಕಾರಣ. ಈವರೆಗೆ ಕುಟುಂಬದಲ್ಲಿ ಒಂದೇ ಒಂದು ಡಿವೋರ್ಸ್ ಆಗಿಲ್ಲ. ಈಗ ಆ ಲಕ್ಷ್ಮಣ ರೇಖೆಯನ್ನು ದಾಟಲು ಮಾಜಿ ವಿಶ್ವಸುಂದರಿ ಹಾಗೂ ಬಿಗ್ ಬಿ ಮಗನಿಗೆ ಇಷ್ಟವಿಲ್ಲ. ಕುಟುಂಬಕ್ಕಾಗಿ ಇವರು ವಿಚ್ಛೇದನ ನಿರ್ಧಾರದಿಂದ ಹೊರಗೆ ಬಂದಿದ್ದಾರೆ. ಕುಟುಂಬಕ್ಕಾಗಿ ಈ ತ್ಯಾಗ ಮಾಡ್ತಿದ್ದಾರೆ. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವಿದ್ರೂ ವಿಚ್ಛೇದನ ಪಡೆಯದಿರಲು ನಿರ್ಧರಿಸಿದ್ದಾರೆ. 

Tap to resize

Latest Videos

ನಿವೇದಿತಾ ಸೆಕ್ಸಿ ವಿಡಿಯೋ: ನೀನೇ ಕಣಮ್ಮಾ ಕನ್ನಡದ ಮುಂದಿನ ತೃಪ್ತಿ ಡಿಮ್ರಿ ಎನ್ನೋದಾ ಟ್ರೋಲಿಗರು?

ಅಮಿತಾಬ್ ಕೂಡ ಮಾಡಿದ್ರು ತ್ಯಾಗ..! : ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಜಯಾ ಬಚ್ಚನ್ ಮದುವೆ ಆದ್ಮೇಲೆ ಅಮಿತಾಬ್ ಬಾಳಲ್ಲಿ ರೇಖಾ ಆಗಮನವಾಗಿತ್ತು. ಅಮಿತಾಬ್, ರೇಖಾ ಪ್ರೀತಿಯಲ್ಲಿ ಬಿದ್ದಿದ್ದರು. ಜಯಾರಿಗೆ ವಿಚ್ಛೇದನ ನೀಡಿದ್ರೆ ಕುಟುಂಬಕ್ಕೆ ಕೆಟ್ಟ ಹೆಸರು ಬರುತ್ತೆ ಎನ್ನುವ ಕಾರಣಕ್ಕೆ ಅಮಿತಾಬ್, ರೇಖಾ ಬಿಟ್ಟು ಜಯಾರನ್ನು ಆಯ್ಕೆ ಮಾಡಿಕೊಂಡಿದ್ದರು.

ಶ್ವೇತಾ ಜೀವನದಲ್ಲೂ ಬಂದಿತ್ತು ಇಂಥ ಘಟ್ಟ : ಅಮಿತಾಬ್ ಮಗಳು ಶ್ವೇತಾ ಹಾಗೂ ಅವರ ಪತಿ ನಿಖಿಲ್ ಮಧ್ಯೆಯೂ ಒಮ್ಮೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಅಭಿಷೇಕ್ ಬಚ್ಚನ್ ಹಾಗೂ ಕರೀಷ್ಮಾ ಕಪೂರ್ ನಿಶ್ಚಿತಾರ್ಥ ಮುರಿದು ಬಿದ್ದಾಗ ಶ್ವೇತಾ ಹಾಗೂ ನಿಖಿಲ್ ಮಧ್ಯೆ ಬಿರುಕು ಕಾಣಿಸಿಕೊಂಡಿತ್ತು. ಈ ಟೈಂನಲ್ಲಿ ಕೂಡ ಕುಟುಂಬದ ಗೌರವಕ್ಕಾಗಿ ಶ್ವೇತಾ ಹಾಗೂ ನಿಖಿಲ್ ತಮ್ಮ ಸಂಸಾರ ಸರಿ ಮಾಡ್ಕೊಂಡಿದ್ದರೆ ಹೊರತು ವಿಚ್ಛೇದನ ನಿರ್ಧಾರಕ್ಕೆ ಬಂದಿರಲಿಲ್ಲ.

ಈಗ ಅಭಿಷೇಕ್ ಹಾಗೂ ಐಶ್ವರ್ಯ ರೈ ಬಚ್ಚನ್ ಸರದಿ. ಹಿರಿಯರೆಲ್ಲ ಕುಟುಂಬಕ್ಕಾಗಿ ತಮ್ಮ ಭಾವನೆ ಹಿಡಿತದಲ್ಲಿಟ್ಟುಕೊಂಡಿದ್ರೆ ಅದೇ ದಾರಿಯಲ್ಲಿ ಅಭಿ – ಐಶ್ ಸಾಗುತ್ತಿದ್ದಾರೆ. ಇಬ್ಬರ ಮಧ್ಯೆ ಸಮಸ್ಯೆ ಇದ್ಯಾ ಇಲ್ಲ ಅತ್ತೆ ಜಯಾ – ಸೊಸೆ ಐಶ್ ಮಧ್ಯೆ ಭಿನ್ನಾಭಿಪ್ರಾಯವಿದ್ಯಾ ಮಾಹಿತಿಯಿಲ್ಲವಾದ್ರೂ ಇಬ್ಬರು ಬೇರೆಯಾಗ್ತಾರೆ ಎಂಬ ಸುದ್ದಿಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ.

ಇದೇ ಮೊದಲ ಬಾರಿಗೆ ಐ ಲವ್​ ಯೂ ಕೇಳಿಸಿಕೊಂಡ ಆರ್ಯವರ್ಧನ್​ ಗುರೂಜಿ! ಡಿಕೆಡಿ ವೇದಿಕೆಯಲ್ಲಿ ಕಮಾಲ್​

ಡಿವೋರ್ಸ್ ನೀಡ್ತಾರೆ, ಇಲ್ಲ ಎನ್ನುವ ಆಟ ಅನೇಕ ದಿನಗಳಿಂದ ನಡೀತಾನೆ ಇದೆ. ಮಾಧ್ಯಮಗಳು ಈ ಬಗ್ಗೆ ವರದಿ ಮಾಡ್ತಾನೆ ಇವೆ. ಆದ್ರೆ ಐಶ್ –ಅಭಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅದಕ್ಕೆ ಪ್ರತಿಕ್ರಿಯ ನೀಡುವ ಗೋಜಿಗೂ ಹೋಗಿಲ್ಲ. ಅಭಿಷೇಕ್ ಸದ್ಯ ಪ್ಯಾರಿಸ್ ಒಲಂಪಿಕ್ಸ್ ನೋಡೋದ್ರಲ್ಲಿ ಬ್ಯುಸಿಯಾಗಿದ್ದು, ಇಂಡಿಯಾ ಬಾವುಟ ಹಿಡಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

click me!