ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಶೀಘ್ರವೇ ಅಮ್ಮನಾಗ್ತಿದ್ದಾರೆ. ಸೆಪ್ಟೆಂಬರಲ್ಲಿ ಅವರಿಗೆ ಡೇಟ್ ನೀಡಲಾಗಿದೆ. ಆದ್ರೆ ದೀಪಿಕಾ ಮೇಲೆ ನೆಟ್ಟಿಗರು ಅನುಮಾನ ವ್ಯಕ್ತಪಡಿಸ್ತಿದ್ದಾರೆ. ದೀಪಿದು ರಿಯಲ್ ಅಲ್ಲ ರೀಲ್ ಅಂತಿದ್ದಾರೆ ಜನರು.
ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಮೊದಲ ಬಾರಿ ಅಮ್ಮನಾಗ್ತಿದ್ದಾರೆ. ಅವರ ಹೆರಿಗೆ ದಿನಾಂಕ ಹತ್ತಿರ ಬರ್ತಿದೆ. ಸೆಪ್ಟೆಂಬರಲ್ಲಿ ದೀಪಿಕಾ ಪಡುಕೋಣೆ ಮಗುವಿಗೆ ಜನ್ಮ ನೀಡಲಿದ್ದಾರೆ. ತುಂಬು ಗರ್ಭಿಣಿ ದೀಪಿಕಾ ತಮ್ಮ ಸುಂದರ ಡ್ರೆಸ್ಸಿನಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪಾಪರಾಜಿಗಳ ಕಣ್ಣಿಗೆ ಬಿದ್ದ ದೀಪಿಕಾ, ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ್ರು. ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಪಡುಕೋಣೆ ವಿಡಿಯೋ ವೈರಲ್ ಆಗಿದೆ.
ದೀಪಿಕಾ ಪಡುಕೋಣೆ (Deepika Padukone) ತುಂಬಾ ಎಚ್ಚರಿಕೆ ಹೆಜ್ಜೆಯಿಟ್ಟು ನಡಿತಾ ಇರೋದನ್ನು ನೀವು ನೋಡ್ಬಹುದು. ದೀಪಿಕಾ ಪಡುಕೋಣೆ ಎಷ್ಟೇ ಚೆಂದದ ಡ್ರೆಸ್ ಹಾಕಿಕೊಳ್ಳಲಿ ಟ್ರೋಲರ್ (Troller) ಬಾಯಿಗೆ ಆಹಾರವಾಗ್ತಿದ್ದಾರೆ. ಯಾಕೋ ಅವರು ಗರ್ಭಿಣಿ ಅನ್ನೋದನ್ನು ಜನರಿಗೆ ನಂಬಲು ಸಾಧ್ಯವಾಗ್ತಿಲ್ಲ. ಈ ಹಿಂದೆ ದೀಪಿಕಾ ನಾಟಕವಾಡ್ತಿದ್ದಾರೆ ಎಂಬ ಸಾಕಷ್ಟು ಕಮೆಂಟ್ ಬಂದಿತ್ತು. ಈಗ ಮತ್ತೆ ನೆಟ್ಟಿಗರು ದೀಪಿಕಾ ಬೇಬಿ ಬಂಪ್ ಮೇಲೆ ಕಣ್ಣಿಟ್ಟಿದ್ದಾರೆ.
ದೀಪಿಕಾ ಪಡುಕೋಣೆ ಹೊಟ್ಟೆ ಆಗಾಗ ಬದಲಾಗ್ತಿರೋದು ಏಕೆ ಎಂಬ ಪ್ರಶ್ನೆಯನ್ನು ನೆಟ್ಟಿಗರು ಇಟ್ಟಿದ್ದಾರೆ. ಅವರ ಹೊಟ್ಟೆ ಮತ್ತಷ್ಟು ಚಿಕ್ಕದಾಗ್ತಿದೆಯೇ ವಿನಃ ದೊಡ್ಡದಾಗ್ತಿಲ್ಲ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಹೊಟ್ಟೆ ಬಿಟ್ಟಲ್ಲಿ ದೀಪಿಕಾ ದೇಹದಲ್ಲಿ ಮತ್ತ್ಯಾವ ಗರ್ಭಿಣಿ (Pregnant) ಲಕ್ಷಣವೂ ಕಾಣ್ತಿಲ್ಲ. ದೀಪಿಕಾ ಪಡುಕೋಣೆ ನಿಜವಾಗ್ಲೂ ಗರ್ಭಿಣಿಯಾಗಿದ್ದು ಹೌದಾ ಎನ್ನುವ ಪ್ರಶ್ನೆ ಮಾಡಿದ್ದಾರೆ. ಅವರು ಬಾಡಿಗೆ ತಾಯಿ ಮೂಲಕ ಅಮ್ಮನಾಗ್ತಿದ್ದು, ಬೇಬಿ ಬಂಪ್ ಶೋಗೆ ಅಂತ ಕಟುವಾಗಿ ಕಮೆಂಟ್ ಮಾಡಿದವರ ಸಂಖ್ಯೆ ಕೂಡ ಇದೆ.
ದಂಪತಿಗೆ ಯಾವುದೇ ಸಮಸ್ಯೆ ಇದ್ದರೆ ಮಾತ್ರ ಬಾಡಿಗೆ ತಾಯಿಯ ಮೂಲಕ ಮಕ್ಕಳನ್ನು ಪಡೆಯಬಹುದು. ಇದು ಭಾರತದ ಕಾನೂನು. ವಿದೇಶದಲ್ಲಿ ಈ ಕಾನೂನಿಲ್ಲ. ಹಾಗಾಗಿ ಪ್ರಿಯಾಂಕಾ ಚೋಪ್ರಾ ವಿದೇಶಕ್ಕೆ ಹೋಗಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದಿದ್ದರು. ಆದ್ರೆ ದೀಪಿಕಾ ಪಡುಕೋಣೆಗೆ ಯಾವುದೇ ಸಮಸ್ಯೆ ಇಲ್ಲ. ಅವರು ಆರಾಮವಾಗಿ ಮಗುವನ್ನು ಪಡೆಯಬಹುದು. ಆದ್ರೂ ಅವರು ಬಾಡಿಗೆ ತಾಯಿ ಮೂಲಕ ಮಗು ಪಡೆಯುತ್ತಿದ್ದಾರೆ. ಇದು ತಿಳಿಬಾರದು ಎನ್ನುವ ಕಾರಣಕ್ಕೆ ಗರ್ಭಿಣಿ ಅಂತ ನಾಟಕವಾಡ್ತಿದ್ದಾರೆ. ಒಂದ್ವೇಳೆ ಇದು ಗೊತ್ತಾದ್ರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಮತ್ತೊಬ್ಬರು ದೊಡ್ಡ ಕಮೆಂಟ್ ಮಾಡಿದ್ದಾರೆ.
ಇಷ್ಟೇ ಅಲ್ಲ ದೀಪಿಕಾಪಡುಕೋಣೆ ಹೊಟ್ಟೆ 8 ತಿಂಗಳಲ್ಲೂ 4 ತಿಂಗಳಿನಂತೆ ಕಾಣ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಬಹುತೇಕ ಎಲ್ಲ ನಟಿಯರು ಗರ್ಭಧಾರಣೆ ಸಮಯದಲ್ಲಿ ಬಟ್ಟೆಯಿಲ್ಲದೆ ತಮ್ಮ ಬೇಬಿ ಬಂಪ್ ಫೋಟೋಶೂಟ್ ಮಾಡಿಸ್ತಾರೆ. ದೀಪಿಕಾ ಯಾಕೆ ಮಾಡಿಸಿಲ್ಲ ಎನ್ನುವ ಪ್ರಶ್ನೆಯನ್ನು ನೆಟ್ಟಿಗರು ಇಟ್ಟಿದ್ದಾರೆ.
ಈ ಮಧ್ಯೆ ದೀಪಿಕಾ ಪರ ಬ್ಯಾಟ್ ಬೀಸಿದ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಿದೆ. ದೀಪಿಕಾಪಡುಕೋಣೆ, ಡಯಟ್ ಮೆಂಟೇನ್ ಮಾಡ್ತಾರೆ. ಹೊಟ್ಟೆ ದೊಡ್ಡದಾದಂತೆ ಅವರು ಅದಕ್ಕೆ ತಕ್ಕ ಡ್ರೆಸ್ ಧರಿಸ್ತಾರೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ದೀಪಿಕಾಪಡುಕೋಣೆ ಮುಂಬೈನಲ್ಲಿ ನಿನ್ನೆ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದರು. ಹಸಿರು ಬಣ್ಣದ ಆರಾಮದಾಯಕ ಕುರ್ತಾ ಮತ್ತು ಬಿಳಿ ಪೈಜಾಮ ಧರಿಸಿದ್ದ ದೀಪಿಕಾ ಸುಂದರವಾಗಿ ಕಾಣ್ತಿದ್ದರು. ಅವರ ಸಿಬ್ಬಂದಿ ದೀಪಿಕಾಗೆ ಸಂಪೂರ್ಣ ಬೆಂಬಲ ನೀಡಿದ್ದರು. ಈ ವೇಳೆ ದೀಪಿಕಾ, ಮಗುವೊಂದನ್ನು ಮಾತನಾಡಿಸಿ ಪಾಲಕರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ್ರು.
ದೀಪಿಕಾ ಹಾಗೂ ರಣವೀರ್ ಸಿಂಗ್ ಮಗುವಿನ ಸ್ವಾಗತಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮಗುವಿನ ಜನನದ ನಂತ್ರ ಈ ಜೋಡಿ ಕುಟುಂಬ ಹಾಗೂ ಸ್ನೇಹಿತರಿಗೆ ಉಡುಗೊರೆ ನೀಡಲಿದೆ. ಈ ಉಡುಗೊರೆಯನ್ನು ಕೈನಲ್ಲಿ ತಯಾರಿಸಲಾಗುತ್ತದೆ.