ಮುಕೇಶ್ ಅಂಬಾನಿ ಬಳಿ 170 ಐಷಾರಾಮಿ ಕಾರಿದೆ. ಆದರೆ ಒಂದು ಕೊರಗು ಮಾತ್ರ ಕಾಡುತ್ತಲೇ ಇದೆ. ಮುಕೇಶ್ ತಂದೆ ಬಳಸಿದ ಐಕಾನಿಕ್ ಕ್ಯಾಡಿಲ್ಯಾಕ್ ಕಾರು ಮಾತ್ರ ಮುಕೇಶ್ ಅಂಬಾನಿ ಬಳಿ ಇಲ್ಲ. ಈ ಕಾರು ದಕ್ಷಿಣ ಭಾರತದ ಖ್ಯಾತ ನಟನ ಬಳಿ ಇದೆ.
ಮುಂಬೈ(ಆ.09) ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆಯ ಗ್ಯಾರೇಜ್‌ನಲ್ಲಿ ಬರೋಬ್ಬರಿ 170 ಐಷಾರಾಮಿ ಕಾರುಗಳಿದೆ. ವಿಶ್ವದ ಅತ್ಯಂತ ದುಬಾರಿ ಕಾರುಗಳು ಮುಕೇಶ್ ಅಂಬಾನಿ ಬಳಿ ಇದೆ. ಆದರೆ ಬೆಂಟ್ಲೆ, ಮರ್ಸಿಡೀಸ್, BMW, ಫೆರಾರಿ, ಬುಗಾಟಿ ಸೇರಿದಂತೆ ಕೋಟಿ ಕೋಟಿ ಬೆಲೆಬಾಳುವ ಕಾರುಗಳಿದೆ. ಆದರೆ ಮುಕೇಶ್ ಅಂಬಾನಿಗೆ ಒಂದು ಕೊರಗು ಮಾತ್ರ ಪದೇ ಪದೇ ಕಾಡುತ್ತಲೇ ಇದೆ. ಅತೀ ದೊಡ್ಡ ಕಾರು ಸಂಗ್ರಹದಲ್ಲಿ ತನ್ನ ತಂದೆ ಬಳಸಿದ ಐಕಾನಿಕ ಕ್ಯಾಡಿಲ್ಯಾಕ್ ಕಾರು ಮಾತ್ರ ಇಲ್ಲ. ವಿಶೇಷ ಅಂದರೆ ಈ ಕಾರು ದಕ್ಷಿಣ ಭಾರತದ ಖ್ಯಾತ ನಟ ಮೋಹನ್ ಲಾಲ್ ಬಳಿ ಇದೆ.
ಮುಕೇಶ್ ಅಂಬಾನಿ 1,500 ಕೋಟಿ ರೂಪಾಯಿ ಮೌಲ್ಯದ ಆ್ಯಂಟಿಲಿಯಾ ಮನೆಯಲ್ಲಿ ಕಾರು ಸಂಗ್ರಹಕ್ಕೆ ಕೆಲ ಮಹಡಿಗಳನ್ನು ಮೀಸಲಿಡಲಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಅದೆಷ್ಟೋ ಬೆಲೆಬಾಳುವ ಕಾರನ್ನು ಮುಕೇಶ್ ಅಂಬಾನಿ ಕ್ಷಣಾರ್ಧದಲ್ಲಿ ಖರೀದಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ತನ್ನ ತಂದೆ, ರಿಲಯನ್ಸ್ ಗ್ರೂಪ್ ಸಂಸ್ಥಾಪಕ ಧೀರೂಬಾಯಿ ಅಂಬಾನಿ ಬಳಸಿದ ಐಕಾನಿಕ್ ಸೆಡಾನ್ ಕಾರು ಕ್ಯಾಡಿಲ್ಯಾಕ್ ಕಾರು ಮಾತ್ರ ತನ್ನ ಕಾರು ಸಂಗ್ರಹದಲ್ಲಿ ಇಲ್ಲ,
ಇಶಾ ಅಂಬಾನಿ ಬಳಿ ಇದೆ ಬಣ್ಣ ಬದಲಿಸುವ ರೋಲ್ಸ್ ರಾಯ್ಸ್ ಕಲ್ಲಿನಾನ್, ಇದು ಭಾರತದ ಮೊದಲ ಮ್ಯಾಜಿಕ್ ಕಾರು!
ಈ ಕ್ಯಾಡಿಲ್ಯಾಕ್ ಕಾರು 1958ರ ಮಾಡೆಲ್ ಕಾರಾಗಿದೆ. ಹಲವು ಕಾಲದ ವರೆಗೆ ಈ ಕಾರನ್ನು ಧೀರೂಬಾಯಿ ಅಂಬಾನಿ ಬಳಸಿದ್ದಾರೆ. ಬಳಿಕ ಈ ಕಾರು ಮಾರಾಟಕ್ಕಿಡಲಾಗಿತ್ತು. ಈ ವೇಳೆ ನಟ ಮೋಹನ್ ಲಾಲ್ ಮಾವ(ಪತ್ನಿಯ ತಂದೆ), ಮಲೆಯಾಳಂ ಸಿನಿಮಾದ ನಿರ್ಮಾಕ ಕೆ ಬಾಲಾಜಿ ಖರೀದಿಸಿದ್ದರು. ಸಿನಿಮಾದಲ್ಲಿ ಬಳಸಲು ಈ ಕಾರು ಖರೀದಿಸಲಾಗಿತ್ತು. ಹೀಗಾಗಿ ಚೆನ್ನೈನಲ್ಲಿ ಈ ಕಾರನ್ನು ಇಡಲಾಗಿತ್ತು. ಹಲವು ಚಿತ್ರಗಳಲ್ಲಿ ಈ ಕಾರು ಬಳಸಲಾಗಿದೆ. ಮತ್ತಷ್ಟು ಹಳೆಯದಾದ ಈ ಕಾರು ಸಂಪೂರ್ಣ ಹಾಳಾಗಿತ್ತು.
ಇದೇ ವೇಳೆ ಮೋಹನ್ ಲಾಲ್ ಈ ಕಾರನ್ನು ಚೆನ್ನೈನಿಂದ ಕೇರಳಕ್ಕೆ ತಂದು ಸಂಪೂರ್ಣವಾಗಿ ಪುನರ್‌ಸ್ಥಾಪಿಸಲಾಗಿತ್ತು. ಕ್ಯಾಡಿಲ್ಯಾಡ್ ಕಾರನ್ನು ರಿಸ್ಟೋರ್ ಮಾಡಿದ ಮೋಹನ್ ಲಾಲ್, ಹೊಸ ಬಣ್ಣ ಸೇರಿದಂತೆ ಕಾರಿಗೆ ಹೊಸತನ ನೀಡಲಾಗಿತ್ತು. ಇದೀಗ ಈ ಕಾರು ಉತ್ತಮ ಕಂಡೀಷನ್‌ನಲ್ಲಿದೆ. ಈಗಲೂ ಮೋಹನ್ ಲಾಲ್ ಈ ಕಾರನ್ನು ಕೆಲ ಸಂದರ್ಭಗಳಲ್ಲಿ ಬಳಸುತ್ತಾರೆ. ವಿಂಟೇಜ್ ಕಾರಾಗಿರುವ ಕಾರಣ ಈ ಕಾರಿಗೆ ಭಾರಿ ಬೇಡಿಕೆ ಇದೆ. ಮೋಹನ್‌ಲಾಲ್ ಕೂಡ ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ.
ಅಬ್ಬಬ್ಬಾ..ಅಂಬಾನಿ ಕುಟುಂಬದ ಜೊತೆ ಬೆಂಗಾವಲು ಬರೋ ಕಾರಿನ ಬೆಲೆ ಕೋಟಿ ಕೋಟಿ ಮೀರುತ್ತೆ!