ಕ್ಯಾನ್ಸರ್ ಬಂದು ಅಪ್ಪ ತೀರಿಕೊಂಡರು, 15 ವರ್ಷದ ಶಾರುಖ್ ಖಾನ್ ಮುಂಬೈ ರಸ್ತೆಯಲ್ಲಿ ಮಲಗಿದ್ದರು; ಕಿಂಗ್ ಖಾನ್ ಸ್ಟೋರಿ ವೈರಲ್!

By Shriram Bhat  |  First Published Nov 15, 2023, 4:26 PM IST

ಫೌಜಿ ಶೋ ಮಾಡುತ್ತಿದ್ದ ನಟ ಶಾರುಖ್‌ ಖಾನ್ ಅವರಿಗೆ 3 ವರ್ಷದ ಬಳಿಕ ಬಾಲಿವುಡ್ ಸಿನಿಮಾವೊಂದರಲ್ಲಿ ವಿಲನ್ ರೋಲ್ ಸಿಕ್ಕಿತು. ಅದು ಅವರನ್ನು ಬಾಲಿವುಡ್ ನಟ ಎಂಬ ಹಣೆಪಟ್ಟಿ ಹೊರಲಷ್ಟೇ ಸಹಾಯಕವಾಯ್ತು. ಆದರೆ, 1995 ರಲ್ಲಿ ಶಾರುಖ್ ಖಾನ್ ಹಾಗೂ ಕಾಜಲ್ ಜೋಡಿಯ 'Dilwale Dulhania Le Jayenge ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರ ಸೂಪರ್ ಹಿಟ್ ಆಯ್ತು.


ಬಾಲಿವುಡ್ ಕಿಂಗ್ ಖಾನ್ ಎಂದೇ ಖ್ಯಾತರಾಗಿರುವ ನಟ ಶಾರುಖ್‌ ಖಾನ್ ಅವರು ಇಂದು ಜಗತ್‌ಪ್ರಸಿದ್ಧ ನಟ. ಆದರೆ, ಶಾರುಖ್ ಬಾಲ್ಯ ಹೇಗಿತ್ತು? ಬಡತನವೇ, ಶ್ರೀಮಂತಿಕೆಯಿತ್ತೇ? ಎಲ್ಲವೂ ಕೆಲವರಿಗೆ ಗೊತ್ತಿರುವ ಹಲವರಿಗೆ ಗೊತ್ತಿಲ್ಲದ ಅರೆಬರೆ ಸೀಕ್ರೆಟ್ ಸಂಗತಿ. ಶಾರುಖ್ ಖಾನ್ ಹುಟ್ಟಿದ್ದು ನವೆಂಬರ್ 2, 1965 ರಂದು ಕೆಳಮಧ್ಯಮದ ವರ್ಗದ ಕುಟುಂಬವೊಂದರಲ್ಲಿ. ಬಾಲ್ಯದಲ್ಲಿ ಅವರ ಮನೆಯಲ್ಲಿ ಬಡತನ ಹಾಸುಹೊಕ್ಕಾಗಿತ್ತು. ಅವರ ತಂದೆ ರೆಸ್ಟೋರೆಂಟ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ದುಡಿಮೆ ಶಾರುಖ್‌ ಖಾನ್ ಬಾಲ್ಯದ ಶಿಕ್ಷಣಕ್ಕೆ ಅಂತೂ ಇಂತೂ ಸಾಕು ಎಂಬಂತಿತ್ತು. 

ವಿಧಿಯ ಲೀಲೆ ಎಂಬಂತೆ, ಶಾರುಖ್ 15 ವರ್ಷದವರಿದ್ದಾಗ ಅವರ ತಂದೆ ಕ್ಯಾನ್ಸರ್‌ನಿಂದ ತೀರಿಕೊಂಡರು. ಶಾರುಖ್ ಸ್ವತಃ ದುಡಿಯಲೇಬೇಕಾಯ್ತು. ಅವರು 15 ವರ್ಷದ ಹುಡುಗನಿದ್ದಾಗಲೇ ಕೆಲಸ ಹುಡುಕಿ ಹೊರಟರು. ನಾಟಕ, ಟಿವಿ ಶೋಗಳಲ್ಲಿ ಅವಕಾಶಕ್ಕಾಗಿ ಅಲೆದರು. ಆ ಸಮಯದಲ್ಲಿ ಮುಂಬೈನ ರಸ್ತೆ ಬದಿಯಲ್ಲಿ ಖಾಲಿ ಹೊಟ್ಟೆಯಲ್ಲಿ ಮಲಗುತ್ತಿದ್ದರು. ಸೊಳ್ಳೆ, ತಿಗಣೆಗಳ ಜತೆಯಲ್ಲೇ ವಾಸ ಮಾಡುವ ಅನಿವಾರ್ಯತೆ ಅವರಿಗಿತ್ತು. ಡ್ರಾಮಾ, ನಟನೆಯಲ್ಲಿ ಅದೆಷ್ಟು ಆಸಕ್ತಿಯಿದ್ದರೂ ಅವರಿಗೆ ಅದರಲ್ಲಿ ಯಾವುದೇ ಚಾನ್ಸ್  ಸಿಗಲಿಲ್ಲ. ತುಂಬಾ ಪ್ರಯಾಸದ ಬಳಿಕ ಶಾರುಖ್ ತಮ್ಮ ಮೊದಲ ಟಿವಿ ಶೋ 'ಫೌಜಿ (Fauji)'ಗೆ ಕೆಲಸ ಮಾಡುವ ಭಾಗ್ಯ ಪಡೆದುಕೊಂಡರು.

Latest Videos

undefined

ಸಂಗೀತಾ ಶೃಂಗೇರಿ ನಟಿಯಾಗುವ ಮೊದಲಿನ ರಹಸ್ಯ ರಿವೀಲ್; ಈಕೆ ಶಾರದಾಂಬೆ ಸನ್ನಿಧಿಯ ಕುವರಿ! 

ಫೌಜಿ ಶೋ ಮಾಡುತ್ತಿದ್ದ ನಟ ಶಾರುಖ್‌ ಖಾನ್ ಅವರಿಗೆ 3 ವರ್ಷದ ಬಳಿಕ ಬಾಲಿವುಡ್ ಸಿನಿಮಾವೊಂದರಲ್ಲಿ ವಿಲನ್ ರೋಲ್ ಸಿಕ್ಕಿತು. ಅದು ಅವರನ್ನು ಬಾಲಿವುಡ್ ನಟ ಎಂಬ ಹಣೆಪಟ್ಟಿ ಹೊರಲಷ್ಟೇ ಸಹಾಯಕವಾಯ್ತು. ಆದರೆ, 1995 ರಲ್ಲಿ ಶಾರುಖ್ ಖಾನ್ ಹಾಗೂ ಕಾಜಲ್ ಜೋಡಿಯ 'Dilwale Dulhania Le Jayenge ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೆ' ಚಿತ್ರ ಸೂಪರ್ ಹಿಟ್ ಆಯ್ತು. ಆ ಬಳಿಕ ನಟ ಶಾರುಖ್ ಖಾನ್ ಬಾಲಿವುಡ್‌ನಲ್ಲಿ ನಾಯಕನಟರಾಗಿ ನಟಿಸಲು ಪ್ರಾರಂಭಿಸಿದರು. ಆ ಬಳಿಕ ನಟ ಶಾರುಖ್ ಅದೃಷ್ಟವೇ ಬದಲಾಯಿತು. 

ಮಗಳು ಸಂತೋಷ ತಂದ್ಳು, ಮಗ ಸಂಪತ್ತು ತಂದ; ಟಗರು ಪಲ್ಯ ನಟಿ ಅಮೃತಾ ಪ್ರೇಮ್‌, ನೆನಪಿರಲಿ ಪ್ರೇಮ್‌ ಎಕ್ಸ್‌ಕ್ಲೂಸಿವ್ ಇಂಟರ್‌ವ್ಯೂ

ಈಗಂತೂ ಮತ್ತೆ ಶಾರೂಕ್ ಖಾನ್ ಜಮಾನಾ ಎಂಬಂತಾಗಿದೆ. 'ಪಠಾಣ್' ಸೂಪರ್ ಹಿಟ್ ಆದ ಬಳಿಕ, ಮತ್ತೊಂದು ಚಿತ್ರ 'ಜವಾನ್' ಸೂಪರ್ ಹಿಟ್ ದಾಖಲಿಸಿದೆ. ಈಗ ನಟ ಶಾರುಖ್ ಖಾನ್ ಮುಟ್ಟಿದ್ದೆಲ್ಲವೂ ಚಿನ್ನ ಎಂಬಂತಾಗಿದೆ. ಸದ್ಯ ಶಾರುಖ್ ಖಾನ್ ಅವರನ್ನು ಬಾಲಿವುಡ್‌ನ ನಂಬರ್ ಒನ್ ಸ್ಟಾರ್ ಎನ್ನಬಹುದು. ಆದರೆ, ಅಂದು ಬಾಲ್ಯದಲ್ಲಿ ನಟ ಶಾರುಖ್ ಖಾನ್ ತುಂಬಾ ಕಷ್ಟಪಟ್ಟಿದ್ದರು. ಬಡತನದಲ್ಲಿ ಬೆಂದು ನೊಂದು ಸಾಧಿಸಿ ಇಂದು ಶಾರುಖ್ ಖಾನ್ ಏರಿರುವ ಎತ್ತರ ಎಂಥವರಿಗೂ ಮಾದರಿ ಎನ್ನಬಹುದು. ಹಲವು ವರ್ಷಗಳ ಹಿಂದೆ ಸ್ವಲ್ಪ ಹಿನ್ನೆಲೆಗೆ ಸರಿದಿದ್ದ ನಟ ಶಾರುಖ್ ಈಗ ಮತ್ತೆ ಪುಟಿದೆದ್ದಿದ್ದಾರೆ. 

click me!