
ಸಿನಿಮಾ ನಟ ನಟಿಯರನ್ನು ಕಂಡಾಗ ಅಭಿಮಾನಿಗಳು ಫೋಟೋಗಾಗಿ ಮುಗಿ ಬೀಳುವುದು ಸಾಮಾನ್ಯವಾಗಿದೆ. ಈ ವೇಳೆ ಸೆಲೆಬ್ರಿಟಿಗಳು ನಟರು ಎನಿಸಿಕೊಂಡವರು ಕಿರಿಕಿರಿಗೊಳಗಾಗುತ್ತಾರೆ. ಕೆಲವರು ಹೀಗೆ ಫೋಟೋ ತೆಗೆಸಿಕೊಳ್ಳಲು ಬಂದವರ ಮೇಲೆಯೇ ಹಲ್ಲೆ ಮಾಡಿದ ಘಟನೆ ಈ ಹಿಂದೆಯೂ ಹಲವು ಬಾರಿ ನಡೆದಿದೆ. ಕೆಲ ನಟರು ಫೋಟೋ ತೆಗೆದುಕೊಳ್ಳಲು ಬಂದ ಅಭಿಮಾನಿಯ ಕೆನ್ನೆಗೆ ಬಾರಿಸಿ ಬಳಿಕ ಕ್ಷಮೆ ಕೇಳಿದ ಘಟನೆಯೂ ನಡೆದಿದೆ. ಅದೇ ರೀತಿ ಈಗ ಖಳನಟನ ಪಾತ್ರದಲ್ಲೇ ಹೆಸರುವಾಸಿಯಾಗಿರುವ ಬಾಲಿವುಡ್ ನಟ ನಾನಾ ಪಾಟೇಕರ್ ಸರದಿ. ತನ್ನೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಬಂದ ಬಾಲಕನೋರ್ವನ ತಲೆಗೆ ಹೊಡೆದು ನಟ ನಾನಾ ಪಾಟೇಕರ್ ಓಡಿಸಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ ವೀಡಿಯೋ ನೋಡಿದ ಜನ ನಟನ ಆಕ್ರೋಶ ಹೊರ ಹಾಕಿದ್ದಾರೆ..
ಭಾರತದ ಸಮಾಚಾರ್ ಎಂಬ ಪೇಜ್ ಈ 11 ಸೆಕೆಂಡ್‌ಗಳ ವೀಡಿಯೋ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಹೆಗಲ ಮೇಲೆ ಕೆಂಪು ಬಣ್ಣದ ಟವೆಲ್ ಹಾಕಿಕೊಂಡು ಕಪ್ಪು ಟೀ ಶರ್ಟ್ ಧರಿಸಿ ಹಿಂಬದಿಯಿಂದ ಹುಡುಗನೋರ್ವ ಓಡಿ ಬಂದು ನಾನಾ ಪಾಟೇಕರ್ ಜೊತೆ ತನ್ನ ಮೊಬೈಲ್ ಫೋನ್‌ನಿಂದ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಇದರ ನಿರೀಕ್ಷೆ ಇಲ್ಲದ ಪಾಟೇಕರ್‌ಗೆ ಒಮ್ಮೆಗೆ ಪಿತ್ತ ನೆತ್ತಿಗೇರಿದ್ದು, ಆತನ ತಲೆಗೆ ತಮ್ಮ ಕೈನಿಂದಲೇ ಹಿಂಭಾಗದಿಂದ ಜೋರಾಗಿ ಹೊಡೆದು ದೂರ ತಳ್ಳಿದ್ದಾರೆ. ಅಷ್ಟರಲ್ಲಿ ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ (ಬಹುಶಃ ಪಾಟೇಕರ್ ಬಾಡಿಗಾರ್ಡ್ ) ಈ ಬಾಲಕನನ್ನು ಅಲ್ಲಿಂದ ಎಳೆದು ದೂರ ಕಳುಹಿಸಿದ್ದಾನೆ.
ನನಗೇನೇ ಆದ್ರೂ ನಾನಾ ಪಟೇಕರ್, ಬಾಲಿವುಡ್ ಮಾಫಿಯಾ ಕಾರಣ; ಮತ್ತೆ ಸಿಡಿದೆದ್ದ ತನುಶ್ರೀ ದತ್ತ
ವಾರಾಣಾಸಿಯಲ್ಲಿ ಸಿನಿಮಾವೊಂದರ ಶೂಟಿಂಗ್ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ನಾನಾ ಪಾಟೇಕರ್ ವರ್ತನೆ ಬಗ್ಗೆ ಜನ ಆಕ್ರೋಶ ಹೊರಹಾಕಿದ್ದಾರೆ. ಒಬ್ಬ ಸಿನಿಮಾ ಹೀರೋ ನಿಜ ಜೀವನದಲ್ಲಿ ಹೀರೋ ಆಗಿರುವುದು ಕಡಿಮೆ ಹೀಗಿರುವಾಗ ಜನ ಏಕೆ ಇಂತವರಿಂದ ಏಟು ತಿನ್ನುವುದಕ್ಕೋಸ್ಕರ ಬರುತ್ತಾರೋ ತಿಳಿಯದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಜನರು ದಿನಾ ಸೆಲೆಬ್ರಿಟಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಏಟು ತಿನ್ನುತ್ತಾರೆ ಇದೆಲ್ಲವೂ ಗೊತ್ತಿದ್ದು, ಇಷ್ಟೊಂದು ಸೆಲ್ಫಿ ಹುಚ್ಚು ಏಕೆ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಹಣದ ಅಮಲು ಇವರಿಗೆ ಸಿಟ್ಟು ತರಿಸುತ್ತದೆ ಎಂದು ಮತ್ತೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ. ಇಂತಹವರಿಗೂ ಅಭಿಮಾನಿಗಳಿರುತ್ತಾರಾ ಎಂದು ಮತ್ತೊಬ್ಬರು ಕೇಳಿದ್ದಾರೆ. ಇವರ ಸಿನಿಮಾಗಳಿಗೂ ಥಿಯೇಟರ್‌ಗಳಲ್ಲಿ ಇದೇ ರೀತಿಯ ಪೆಟ್ಟು ಬೀಳಬೇಕು ಆಗ ಇವರಿಗೆ ಅಭಿಮಾನಿಗಳ ಬೆಲೆ ತಿಳಿಯುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
Nana Patekar Birthday: ನಾನಾ ಪಾಟೇಕರ್ ಸರಳ ಜೀವನ ನೆಡೆಸಲು ಕಾರಣವೇನು ಗೊತ್ತಾ?
ಇವರು ವ್ಯಾಕ್ಸಿನ್ ವಾರ್ ಸಿನಿಮಾ ನೆಲಕಚ್ಚಿದ ನಂತರ ಹೀಗಾಗಿದ್ದಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ವೀಡಿಯೋ ನೋಡಿದ ಅನೇಕರು ನಾನಾ ಪಾಟೇಕರ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಾನಾ ಪಾಟೇಕರ್ ವಿರುದ್ಧ ಮೀಟೂ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿತ್ತು. ನಟಿ ತನುಶ್ರೀ ದತ್ ಇವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದೇ ವಿಚಾರವಾಗಿ 2018ರಲ್ಲಿ ಇವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಇನ್ನು ಈ ನಾನಾ ಪಾಟೇಕರ್ ಕೊನೆಯದಾಗಿ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.