ನಾಲಿಗೆ ಜಾರಿ ಐಶ್ವರ್ಯ ರೈ ಬಗ್ಗೆ ತಪ್ಪಾಗಿ ಮಾತಾಡಿದೆ... ಪಾಕ್​ ಕ್ರಿಕೆಟಿಗನಿಂದ ಹೀಗೆ ಕ್ಷಮೆ ಕೋರಿಕೆ...

Published : Nov 15, 2023, 11:37 AM IST
ನಾಲಿಗೆ ಜಾರಿ ಐಶ್ವರ್ಯ ರೈ ಬಗ್ಗೆ ತಪ್ಪಾಗಿ ಮಾತಾಡಿದೆ... ಪಾಕ್​ ಕ್ರಿಕೆಟಿಗನಿಂದ ಹೀಗೆ ಕ್ಷಮೆ ಕೋರಿಕೆ...

ಸಾರಾಂಶ

ನಾಲಿಗೆ ಜಾರಿ ಐಶ್ವರ್ಯ ರೈ ಬಗ್ಗೆ ತಪ್ಪಾಗಿ ಮಾತಾಡಿದೆ ಎಂದು ಎಲ್ಲರ ಕ್ಷಮೆ ಕೋರಿದ ಪಾಕ್​ ಮಾಜಿ ಕ್ರಿಕೆಟಿಗ  ಅಬ್ದುಲ್ ರಜಾಕ್.  ಆಗಿದ್ದೇನು?  

ಪಾಕಿಸ್ತಾನದ  ಮಾಜಿ ಕ್ರಿಕೆಟಿಗ ಆಲ್‌ರೌಂಡರ್ ಅಬ್ದುಲ್ ರಜಾಕ್, ನಿನ್ನೆಯಷ್ಟೇ ಬಾಲಿವುಡ್​ ನಟಿ ಐಶ್ವರ್ಯ ರೈ ಅವರ ಕುರಿತಾಗಿ ಅಸಭ್ಯ ಮಾತನಾಡಿದ್ದು, ಪಾಕಿಸ್ತಾನಿಗಳ ಮನೋಸ್ಥಿತಿಯ ಬಗ್ಗೆ ಮತ್ತಷ್ಟು ಟೀಕೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಮಾತ್ರವಲ್ಲದೇ ಸಕತ್​ ಟ್ರೋಲ್​ಗೂ ಒಳಗಾಗಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ತರಾಟೆಗೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಐಶ್ವರ್ಯ ರೈ ಅವರ ಉದಾಹರಣೆ ತೆಗೆದುಕೊಂಡು ಅಸಭ್ಯವಾಗಿ ಮಾತನಾಡಿ ಪೇಚಿಗೆ ಸಿಲುಕಿದ್ದರು.  ನಾನು ಪಿಸಿಬಿ ಉದ್ದೇಶವೇನು ಎಂಬುದರ ಬಗ್ಗೆ ಇಲ್ಲಿ ಮಾತನಾಡುತ್ತಿದ್ದೇನೆ. ಹಿಂದೆ ನಾನು ಆಡುತ್ತಿದ್ದಾಗ ನನ್ನ ನಾಯಕ ಯೂನಿಸ್ ಖಾನ್ ಅವರ ನಿಲುವು ಏನು ಅಂತ ನನಗೆ ಗೊತ್ತಿತ್ತು. ಹೀಗಾಗಿ ನಾನು ಅಲ್ಲಾಹುವಿನ ಕೃಪೆಯಿಂದ ಪಾಕಿಸ್ತಾನ ಕ್ರಿಕೆಟ್‌ಗೆ ಕೊಡುಗೆ ನೀಡಲು ಸಾಧ್ಯವಾಯ್ತು ಎಂದು ಅಬ್ದುಲ್‌ ರಜಾಕ್‌ ಹೇಳಿದ್ದರು. ಸದ್ಯ ಪ್ರಸಕ್ತ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಮತ್ತು ಆಟಗಾರರ ಪ್ರದರ್ಶನಗಳ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ನಮ್ಮ ಆಟಗಾರರನ್ನು ತಿದ್ದಿ, ಅವರನ್ನು ಬೆಳೆಸುವ ಉದ್ದೇಶ ನಮಗಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳುತ್ತಲೇ ಐಶ್ವರ್ಯ ರೈ ಅವರ ವಿಷಯ ಎತ್ತಿದ್ದರು. 

ನಾನು, ಐಶ್ವರ್ಯಾ ರೈ ಅವರನ್ನು ಮದುವೆಯಾಗಿ ನಂತರ ನಮಗೆ ಸುಂದರವಾದ ಮಕ್ಕಳಾಗುತ್ತವೆ ಎಂದು ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಹೀಗಾಗಿ ಸರಿಯಾದ ಉದ್ದೇಶ ಇಟ್ಟುಕೊಳ್ಳಬೇಕು. ಮೊದಲು ನಿಮ್ಮ ಉದ್ದೇಶಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ರಜಾಕ್ ಹೇಳಿದ್ದರು. ಭಾರತದಲ್ಲಿ ನಡೆದ ಐಸಿಸಿ ವಿಶ್ವಕಪ್ 2023 ರಿಂದ ತಂಡವು ಬೇಗನೆ ನಿರ್ಗಮಿಸಿದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಳಗಿನ ಪ್ರಕ್ಷುಬ್ಧತೆಯ ಕುರಿತು ರಜಾಕ್​ ಮಾತನಾಡುತ್ತಿದ್ದರು. ಈ ವೇಳೆ ಅವರು ತಾನು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಯನ್ನು ಮದುವೆಯಾಗಿರುತ್ತಿದ್ದರೆ ಉತ್ತಮ ಮಕ್ಕಳು ಹುಟ್ಟುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ಹೇಳಿಕೆ ಕೊಟ್ಟಿದ್ದರು. 

ಐಶ್ವರ್ಯ ರೈ ಬಗ್ಗೆ ನಾಲಿಗೆ ಹರಿಬಿಟ್ಟ ಪಾಕ್​ ಕ್ರಿಕೆಟಿಗ! ಥೂ.. ನಿಮ್​ ಜನ್ಮಕ್ಕೆ ಎಂದು ನಟಿಯ ಫ್ಯಾನ್ಸ್​ ಕೆಂಡಾಮಂಡಲ

ಅಬ್ದುಲ್ ರಜಾಕ್ ಅವರ ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿತ್ತು. ಇದು ಐಶ್ವರ್ಯ ರೈ ಅವರ ಅಭಿಮಾನಿಗಳನ್ನು ಮಾತ್ರವಲ್ಲದೇ ಪಾಕ್​ ಮನಸ್ಥಿತಿ ವಿರೋಧಿಗಳನ್ನು ಕೆರಳಿಸಿದೆ. ಪಾಕಿಸ್ತಾನದ ಬುದ್ಧಿ ಎಲ್ಲಿ ಬಿಡುತ್ತೀರಾ ಎಂದು ಹಲವರು ಕೆಂಡಾಮಂಡಲವಾಗುತ್ತಿದ್ದಾರೆ.  ಕ್ರಿಕೆಟ್​ ಆಡಳಿತಕ್ಕೂ ಐಶ್ವರ್ಯ ರೈಗೂ ಯಾವುದೇ ಸಂಬಂಧ ಇಲ್ಲ. ಅಂಥದ್ದರಲ್ಲಿ ಬೇರೆ ದೇಶದ, ಬೇರೆ ಧರ್ಮದ ನಟಿಯೊಬ್ಬಳನ್ನು ಮದುವೆಯಾಗಿ ಅವರಿಗೆ ಒಳ್ಳೆಯ ಮಕ್ಕಳು ಹುಟ್ಟುವುದಿಲ್ಲ ಎಂಬ ಬೇಡ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಆಕ್ರೋಶ ಹೊರಹಾಕಿದ್ದರು. ನಿಮ್ಮ ದೇಶದ ನಟಿಯರ ಬಗ್ಗೆ ಮಾತನಾಡಿ, ಬಾಲಿವುಡ್ ನಟಿಯರು ನಿಮಗ್ಯಾಕೆ ಬೇಕು? ನೆಟ್ಟಗೆ ಆಡಲು ಬಾರದ ಪಾಕಿಗಳ ಉದಾಹರಣೆಗೆ ನಿಮಗೆ ಭಾರತದ ನಟಿ ಬೇಕಾಗಿತ್ತಾ ಎಂದು ಪ್ರಶ್ನಿಸಿದ್ದರು. ಒಂದು ವೇಳೆ ನಿಮ್ಮ ದೇಶದ ಮಹಿಳೆಯೊಬ್ಬಳನ್ನು ಉದಾಹರಣೆ ಕೊಟ್ಟು ಭಾರತದ ಕ್ರಿಕೆಟಿಗರು ಹೇಳಿದ್ದರೆ, ಪಾಕಿಸ್ತಾನ ಪ್ರೇಮಿಗಳು ಹೇಗೆಲ್ಲಾ ವರ್ತಿಸುತ್ತಿದ್ದರು ಎಂದುಪ್ರಶ್ನಿಸಿದ್ದರು. 

ಇಷ್ಟಾಗುತ್ತಿದ್ದಂತೆಯೇ ಎಡವಟ್ಟು ಆಗಿರುವುದು  ಅಬ್ದುಲ್ ರಜಾಕ್ ಅವರಿಗೆ ತಿಳಿದಿದೆ. ಕೂಡಲೇ ತಮ್ಮ ಎಕ್ಸ್​ ಖಾತೆಯಲ್ಲಿ ಕ್ಷಮೆ ಕೋರಿದ್ದಾರೆ. ನಾನು ಉದ್ದೇಶಪೂರ್ವಕವಾಗಿ ಐಶ್ವರ್ಯ ರೈ ಅವರ ಕುರಿತು ಮಾತನಾಡಲಿಲ್ಲ. ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಬಗ್ಗೆ ಹೇಳುವ ಭರದಲ್ಲಿ ನಾಲಿಗೆ ತಪ್ಪಿ ಇವರ ಉದಾಹರಣೆ ಕೊಟ್ಟೆ ಎಂದಿರುವ ಅಬ್ದುಲ್​ ರಜಾಕ್​ ಅವರು ಎಲ್ಲರ ಕ್ಷಮೆ ಕೋರಿದ್ದಾರೆ. 

ಮೋದಿಯನ್ನು ಈ ಪರಿ ಜಪಿಸ್ಬೇಡ ಪುಣ್ಯಾತ್ಮ, ಆಸ್ಪತ್ರೆ ಸೇರಬೇಕಾದೀತು... ಪ್ರಕಾಶ್​ ರಾಜ್​ಗೆ ನೆಟ್ಟಿಗರ ತರಾಟೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್