ಐಶ್ವರ್ಯ ರೈ ವಿಡಿಯೋ ವೈರಲ್‌: ಈಕೆ ಸೊಕ್ಕಿನ ಮುದ್ದೆ, ಹೊಟ್ಟೆಕಿಚ್ಚು ಹೆಚ್ಚೆಂದ ನೆಟ್ಟಿಗರು

By Suvarna News  |  First Published Jul 14, 2023, 3:43 PM IST

ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಹಳೆಯ ವಿಡಿಯೋ ಒಂದು ವೈರಲ್‌ ಆಗಿದ್ದು, ಅದರಲ್ಲಿ ಅವರು ಮಾತನಾಡಿದ್ದನ್ನು ನೋಡಿ ನೆಟ್ಟಿಗರು ಸಕತ್‌ ಟ್ರೋಲ್‌ ಮಾಡುತ್ತಿದ್ದಾರೆ. 
 


ಐಶ್ವರ್ಯಾ ರೈ ಬಚ್ಚನ್ (Aishwarya Rai ) ಕೆಲ ದಶಕಗಳಿಂದ ಬಾಲಿವುಡ್‌ ಆಳುತ್ತಿರುವ ನಟಿ. ವಯಸ್ಸು 49 ಆದರೂ ಆಕೆಯ ವರ್ಚಸ್ಸು, ಸೌಂದರ್ಯ ಇನ್ನೂ ಕುಗ್ಗಿಲ್ಲ. ಅದಕ್ಕೆ ಕಾರಣ, ಅವರ ಮೇಕಪ್‌ ಎಂದು ಹೇಳುತ್ತಿದೆಯಾದರೂ ಫಿಟ್‌ನೆಟ್‌ ಹಾಗೂ ಸೌಂದರ್‍ಯವನ್ನು ಐಶ್ವರ್ಯಾ ಕಾಪಾಡಿಕೊಂಡು ಬಂದಿದ್ದಾರೆ ಎನ್ನುವುದೂ ಸುಳ್ಳಲ್ಲ. ಈಗಲೂ ಬಾಲಿವುಡ್‌ನ ಬ್ಯೂಟಿ ಕ್ವೀನ್‌ ಎಂದಾಕ್ಷಣ ಹಲವರ ಕಣ್ಣ ಮುಂದೆ ಬರುವುದು ಇದೇ ನಟಿಯ ಮುಖ. ವಿಶ್ವ ಸುಂದರಿ, ಭುವನ ಸುಂದರಿಯರಾಗಿ ಇದಾಗಲೇ  ಭಾರತದ ಕೆಲವು ಸುಂದರಿಯರು ವಿಜೇತರಾಗಿದ್ದರೂ ಸೌಂದರ್‍ಯದ ವಿಷಯ ಬಂದಾಗ ಐಶ್ವರ್ಯ ರೈ ಅವರ ಹೆಸರೇ ಎಲ್ಲರ ಬಾಯಲ್ಲ ನಲಿದಾಡುತ್ತದೆ. ಒಮ್ಮೆ ಕೀರ್ತಿ ಬಂದರೆ ಅದು ಹಲವರಿಗೆ ನೆತ್ತಿಗೇರುತ್ತದೆ ಎನ್ನುವ ಮಾತಿದೆ. ಈ ಮಾತು ನಟಿ ಐಶ್ವರ್ಯ ಅವರಿಗೂ ಅನ್ವಯ ಆಗತ್ತಾ ಎನ್ನುವ ಚರ್ಚೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಶುರುವಾಗಿದೆ.

ಹೌದು. ಇಂಥದ್ದೊಂದು ಚರ್ಚೆ ಹುಟ್ಟುಹಾಕಿರುವುದು ಐಶ್ವರ್ಯ ರೈ ಅವರ ಹಳೆಯ ವಿಡಿಯೋ ಒಂದರಿಂದ. ಕೆಲ ವರ್ಷಗಳ ಹಿಂದಿನ ವಿಡಿಯೋ ಮತ್ತೆ ಮುನ್ನೆಲೆಗೆ ಬಂದಿದ್ದು, ಐಶ್ವರ್ಯ ರೈ ಸಕತ್‌ ಟ್ರೋಲ್‌ ಆಗುತ್ತಿದ್ದಾರೆ. ತಮ್ಮನ್ನು ಬಿಟ್ಟರೆ ಬಾಲಿವುಡ್‌ನಲ್ಲಿ ಚೆನ್ನಾಗಿ ನಟಿಸುವವರು ಯಾರೂ ಇಲ್ಲ ಎಂಬ ಅರ್ಥದಲ್ಲಿ ಇವರು ನಡೆದುಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಇವರ ಮೇಲೆ ಬಂದಿದ್ದು, ಹಳೆದ ವಿಡಿಯೋ ನೋಡಿದವರು ಟ್ರೋಲ್‌ ಮಾಡುತ್ತಿದ್ದಾರೆ. ಅಷ್ಟಕ್ಕೂ ಇದು 2015ರ ವಿಡಿಯೋ (Vedio) ಎನ್ನಲಾಗಿದೆ. ಇದರಲ್ಲಿ ಸಂದರ್ಶನವೊಂದರಲ್ಲಿ ಐಶ್ವರ್ಯ ರೈ ಪಾಲ್ಗೊಂಡಿದ್ದರು. ಅಲ್ಲಿ ಅವರಿಗೆ ನಿಮ್ಮ ಅಭಿನಯವನ್ನು ಬಿಟ್ಟು ಬೇರೆ ಯಾವ ನಟಿಯರ ಅಭಿನಯವನ್ನು ನೀವು ಆನಂದಿಸುತ್ತೀರಿ ಎನ್ನುವ ಪ್ರಶ್ನೆ ಕೇಳಲಾಗಿದೆ. ಇಂಥ ಪ್ರಶ್ನೆ ಯಾವುದೇ ನಟ ಅಥವಾ ನಟಿಗೆ ಎದುರಾದರೂ ಅವರು ತಕ್ಷಣ ಇನ್ನೊಬ್ಬ ನಟರ ಹೆಸರು ಹೇಳುತ್ತಿದ್ದರು. ನಟಿ ಐಶ್ವರ್ಯ ಕೂಡ ಹೆಸರು ಹೇಳಿದ್ದಾರೆ. ಅವರೆ ಅವರು ಹೇಳಿದ್ದು, ಹಾಲಿವುಡ್‌ ನಟಿಯರ ಹೆಸರನ್ನು. ಯಾವ ನಟಿಯರ ನಟನೆ ಇಷ್ಟ ಎಂದಾಕ್ಷಣ ಐಶ್ವರ್ಯ ಹೇಳಿದ ಹೆಸರು ಮೆರಿಲ್ ಸ್ಟ್ರೀಪ್, ಕೇಟ್ ಬ್ಲಾಂಚೆಟ್. ಇದೇ ಈಗ ಟ್ರೋಲ್‌ಗೆ ಕಾರಣವಾಗಿದೆ.

Tap to resize

Latest Videos

Aishwarya Rai: ಹಿಟ್‌ ಫಿಲ್ಮ್ಸ್‌ ಕೊಡುತ್ತಿದ್ರೂ ಐದು ಚಿತ್ರಗಳಿಂದ ಐಶ್ವರ್ಯ ರೈ ಅವ್ರನ್ನ ಹೊರದಬ್ಬಿದ್ದೇಕೆ?
 
ಇದಕ್ಕೆ ಕಾರಣ, ಬಾಲಿವುಡ್‌ನ (Bollywood) ಯಾವುದೇ ನಟಿಯರ ಹೆಸರನ್ನು ಐಶ್ವರ್ಯಾ ರೈ ಹೇಳಲಿಲ್ಲ ಎನ್ನುವ ಕಾರಣಕ್ಕೆ. ಬಾಲಿವುಡ್‌ ಹೋಗಲಿ, ಕೊನೆಯ ಪಕ್ಷ ಭಾರತದ ಯಾವುದೇ ನಟಿಯರ ಹೆಸರನ್ನು ಹೇಳಬಹುದಿತ್ತು. ಅದನ್ನು ಬಿಟ್ಟು ಹಾಲಿವುಡ್‌ ನಟಿಯರ ಹೆಸರು ಹೇಳಿದ್ದು, ಇದು ಈಕೆಯ ಸೊಕ್ಕನ್ನು ತೋರಿಸುತ್ತದೆ ಎಂದು ಹಲವರು ಟ್ರೋಲ್‌ ಮಾಡುತ್ತಿದ್ದಾರೆ. ಐಶ್ವರ್ಯ ಅವರ  ದೃಷ್ಟಿಯಲ್ಲಿ ಭಾರತೀಯ ನಟಿಯರು ಯಾರೂ ಚೆನ್ನಾಗಿ ನಟಿಸುವುದಿಲ್ಲವೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ತಮ್ಮದೇ ವಯಸ್ಸಿನ ನಟಿಯರ ಹೆಸರು ಹೇಳಲು ಇಷ್ಟವಿಲ್ಲದಿದ್ದರೆ ಹಿಂದಿನ ಹಿರಿಯ ನಟಿಯರ ಹೆಸರನ್ನು ಆಕೆ ತೆಗೆದುಕೊಳ್ಳಬಹುದಿತ್ತು. ಅದನ್ನೂ ಆಕೆ ಮಾಡಲಿಲ್ಲ, ಇದು ಆಕೆಗೆ ಇರುವ ಅಹಂ ತೋರಿಸುತ್ತದೆ ಎಂದು ಟ್ರೋಲ್‌ ಮಾಡಲಾಗುತ್ತಿದೆ.

ಐಶ್ವರ್ಯ ಅವರ ಇನ್ನೊಂದು ಮಾತು ಕೂಡ ನೆಟ್ಟಿಗರನ್ನು ಕೆರಳಿಸಿದೆ. ಇಲ್ಲಿಯ ಯಾವ ನಟಿಯರ ಚಿತ್ರವನ್ನು ನೀವು ನೋಡಲು ಬಯಸುತ್ತೀರಿ ಎಂದಾಗ ಐಶ್ವರ್ಯ ‘ಹಲವು ಹಳೆಯ ನಟಿಯರಿದ್ದಾರೆ, ಹೆಸರು ಹೇಳಿಕೊಂಡು ಇಲ್ಲಿ ಕುಳಿತರೆ ಶಾಶ್ವತವಾಗಿ ಇಲ್ಲೇ ಕೂರುತ್ತೇನೆ’ ಎಂದು ಉತ್ತರಿಸಿದ್ದು, ಇದು ಅಹಂಕಾರದ ಪರಮಾವಧಿ ಎಂದಿದ್ದಾರೆ ಟ್ರೋಲಿಗರು.   ಈಕೆ ಈಗಲೂ ಹೀಗೆಯೇ. ತಮ್ಮನ್ನು ಬಿಟ್ಟು  ಯಾರನ್ನೂ ಇಷ್ಟಪಡುವುದಿಲ್ಲ ಎಂದು ಹಲವರು ಕಮೆಂಟ್‌ನಲ್ಲಿ ಹೇಳುತ್ತಿದ್ದಾರೆ. ಈಕೆಗೆ ಬೇರೆ ನಟಿಯರ ಮೇಲೆ ಸದಾ ಅಸೂಯೆಯಿದ್ದು, ಯಾವಾಗಲೂ ಅಸುರಕ್ಷಿತವಾಗಿಯೇ ಇರುತ್ತಾರೆ (jealous and insecure) ಎಂದಿದ್ದಾರೆ. ಈಕೆ ಸೊಕ್ಕಿನ ಮುದ್ದೆ, ಕೊಬ್ಬಿದ ಕೋಳಿ ಎಂದು ಹಲವರು ಹೇಳುತ್ತಿದ್ದಾರೆ. 

ಸೊಸೆ ಬಗ್ಗೆ ಕೀಳು ಕಮೆಂಟ್: ರೊಚ್ಚೆಗೆದ್ದ ಐಶ್ವರ್ಯಾ ಅತ್ತೆ ಜಯಾ ಬಚ್ಚನ್

click me!