ಸುಮ್ಮನೆ ವರ್ಕೌಟ್ ಶುರು ಮಾಡಿದ ನಟಿ ಸೋನಾಕ್ಷಿ 35 ಕೆಜಿ ತೂಕ ಇಳಿಸಿಕೊಂಡು ಸಲ್ಮಾನ್ ಖಾನ್ ಸಿನಿಮಾದಲ್ಲಿ ಆಫರ್ ಪಡೆದಿದ್ದಾರೆ.
ಬಾಲಿವುಡ್ ಬೋಲ್ಡ್ ನಟಿ ಸೋನಾಕ್ಷಿ ಸಿನ್ಹಾ 33ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಜೊತೆ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಒಂದೆರಡು ಮ್ಯೂಸಿಕ್ ಆಲ್ಬಂನಲ್ಲಿ ನಟಿಸಿ ಬಣ್ಣದ ಪ್ರಪಂಚದಲ್ಲಿ ಸಾಕಷ್ಟು ಸರ್ಕಸ್ ಮಾಡಿದ್ದಾರೆ. ಈ ಜರ್ನಿಯಲ್ಲಿ ಸೋನಾಕ್ಷಿಗೆ ಬಿಗ್ ರಿಸ್ಕ್ ಅನ್ಸಿದ್ದು ತೂಕ ಇಳಿಸಿಕೊಳ್ಳುವುದು. ತಮ್ಮ ವೇಟ್ ಲಾಸ್ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ.
'ಲಾಕ್‌ಡೌನ್ ಸಮಯದಲ್ಲಿ ಸಿನಿಮಾ ಸಹಿ ಮಾಡಿದೆ ಆಗ ತೂಕ ಇಳಿಸಿಕೊಳ್ಳಬೇಕಿತ್ತು ಆದರೆ ಅಷ್ಟರಲ್ಲಿ ಡಬಲ್ ಎಕ್ಸೆಲ್ ಸಿನಿಮಾ ಸಹಿ ಮಾಡಿದಕ್ಕೆ 10 ರಿಂದ 12 ಕೆಜಿ ತೂಜ ಹೆಚ್ಚಿಸಿಕೊಂಡೆ ಈಗ ಮತ್ತೊಮ್ಮೆ ಇಳಿಸಿಕೊಳ್ಳುತ್ತಿರುವೆ. ನನ್ನ ಫಿಟ್ನೆಸ್ ಜರ್ನಿ ರೋಲರ್ ಕೋಸ್ಟರ್ ರೀತಿಯಲ್ಲಿದೆ. ತೂಕ ಹೆಚ್ಚಾಗುವುದು ತುಂಬಾನೇ ಸುಲಭ ನನಗೆ ಸುಮ್ಮನೆ ಆಹಾರ ವಾಸನೆ ತೆಗೆದುಕೊಂಡೆ ದಪ್ಪಗಾಗುವೆ. ಕಾಲೇಜ್‌ನಲ್ಲಿ ಫ್ಯಾಷನ್ ಡಿಸೈನಿಂಗ್ ಮಾಡಿಕೊಂಡು ಖುಷಿಯಾಗಿದ್ದೆ ಆಗ ಜಿಮ್‌ಗೆ ಹೋಗುವುದು ಒಂದು ಟ್ರೆಂಡ್ ಆಗಿತ್ತು ಜಿಮ್ ಸೇರಿಕೊಂಡ ದಿನ ಥ್ರೆಡ್‌ಮಿಲ್‌ನಲ್ಲಿ ಓಡಲು ಶುರು ಮಾಡಿದೆ ಆಗ 3 ನಿಮಿಷವೂ ಇರಲು ಆಗಲಿಲ್ಲ ಆಗ ಮನಸ್ಸಿಗೆ ನೋವಾಯ್ತು ವರ್ಕೌಟ್ ಮಾಡಿ 2 ವರ್ಷದಲ್ಲಿ 35 ಕೆಜಿ ತೂಕ ಇಳಿಸಿಕೊಂಡೆ ಮುರು ಕ್ಷಣವೇ ಸಲ್ಮಾನ್ ಖಾನ್ ಡಬಾಂಗ್ ಸಿನಿಮಾ ಆಫರ್ ಬಂತ್ತು' ಎಂದು ಶಿಲ್ಪಾ ಶೆಟ್ಟಿ ಫಿಟ್ನೆಸ್ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ಮೊದ್ಲೇ ದಪ್ಪ ಅದ್ರೂ ಈ ಬ್ಯಾಗಿ ಬಟ್ಟೆ ಬೇಕಾ?: ಏಪೋರ್ಟ್‌ನಲ್ಲಿ ಸೋನಾಕ್ಷಿ
'95 ಕೆಜಿಯಿಂದ 60ಕೆಜಿ ಆಗುವುದು ಸುಲಭದ ಮಾತಲ್ಲ. ಆರಂಭದಲ್ಲಿ 5 ಕೆಜಿ ತೂಕ ಇಳಿದಾಗ ಖುಷಿ ಅಯ್ತು ಆನಂತರ 10 ಕೆಜಿ ಇಳಿದಾಗ ಮತ್ತೆ ಖುಷಿ ಆಯ್ತು ಯಾವಾಗ 60 ಕೆಜಿ ಮುಟ್ಟಿದೆ ಫುಲ್ ಫಿಟ್ ಆಗಿ ಬಿಟ್ಟೆ. ನನಗೆ ಅಡುಗೆ ಮಾಡಲು ಬರುವುದಿಲ್ಲ ಬರೀ ತಿನ್ನುವುದು ಒಂದು ವೇಳೆ ನಾನು ಅಡುಗೆ ಮಾಡುವುದಕ್ಕೆ ಶುರು ಮಾಡಿದರೆ ಖಂಡಿಯಾ ಹೊರಗಡೆ ಏನೂ ತಿನ್ನುವುದಿಲ್ಲ. ಲಿಫ್ಟ್ ಇಲ್ಲದೆ ಆದಷ್ಟು ಓಡಾಡುವುದಕ್ಕೆ ಶುರು ಮಾಡುವೆ. ಪಬ್ಲಿಕ್‌ನಲ್ಲಿ ಓಡಾಡುವಾಗ ನಾನು ನನ್ನ ಗಾಡಿ ಬಿಟ್ಟು ಓಡಾಡಿಕೊಂಡು ಬರುವ ಪಬ್ಲಿಕ್ ಗಾಡಿ ಬಳಸುವೆ' ಎಂದು ಸೋನಾಕ್ಷಿ ಹೇಳಿದ್ದಾರೆ.
'ಕೊರೋನಾ ಲಾಕ್‌ಡೌನ್ ಸಮಯದಲ್ಲಿ ನಾನು ಖುಷಿಯಾಗಿದ್ದೆ ಸಾಮಾನ್ಯವಾಗಿ ನಾನು ಮನೆಯಲ್ಲಿ ಇರಲು ಇಷ್ಟ ಪಡುವ ವ್ಯಕ್ತಿ ಹೀಗಾಗಿ ಮಾನಸಿಕ ನೆಮ್ಮದಿ ಮೇಲೆ ಹೆಚ್ಚಿನ ಗಮನ ಕೊಟ್ಟಿರುವೆ. ಸುಮ್ಮನೆ ಕುಳಿತುಕೊಂಡು ಬುಕ್ ಓಡುವುದು ಚೆನ್ನಾಗಿ ಮಲಗಿದೆ. ಯಾವ ಪಾರ್ಟಿ ಮಾಡುವ ಅಗತ್ಯವಿಲ್ಲ ಯಾವ ಅವಾರ್ಡ್ ಕಾರ್ಯಕ್ರಮಗಳು ಇರಲಿಲ್ಲ ಹೀಗಾಗಿ ನಾನು ನಾನಾಗಿ ನೆಮ್ಮದಿಯಾಗಿದ್ದೆ. ಸುಲಭವಾಗಿರುವ ವರ್ಕೌಟ್ ಮಾಡುವುದಕ್ಕೆ ತುಂಬಾ ಇಷ್ಟ ಪಡುವೆ ಆದರೆ ಪರಿಣಾಮ ಜಾಸ್ತಿ ಬರುತ್ತದೆ. ವರ್ಕೌಟ್ ಹೊರತು ಪಡಿಸಿದರೆ ನನಗೆ ಕ್ರಿಕೆಟ್, ಸ್ವಿಮ್ಮಿಂಗ್, ಫುಟ್‌ಬಾಲ್ ಆಡುವುದಕ್ಕೆ ತುಂಬಾ ಇಷ್ಟ ಪಡುವೆ. ದೊಡ್ಡ ಬಜೆಟ್ ಸಿನಿಮಾಗೆ ಮೂರು ತಿಂಗಳುಗಳ ಕಾಲ ವರ್ಕೌಟ್ ಮಾಡುವುದಕ್ಕೆ ಆಗಲ್ಲ' ಎಂದಿದ್ದಾರೆ ಸೋನಾಕ್ಷಿ.