'ಜವಾನ್' ಪಾತ್ರದ ತಯಾರಿಗೆ ಯಶ್ ಸಿನಿಮಾ ನೋಡಿರುವುದಾಗಿ ಬಹಿರಂಗ ಪಡಿಸಿದ ಶಾರುಖ್ ಖಾನ್

By Shruthi KrishnaFirst Published Jul 14, 2023, 3:19 PM IST
Highlights

'ಜವಾನ್' ಪಾತ್ರದ ತಯಾರಿಗೆ ದಕ್ಷಿಣ ಭಾರತದ ಅನೇಕ ಸ್ಟಾರ್ ಕಲಾವಿದರ ಸಿನಿಮಾ ನೋಡಿರುವುದಾಗಿ ಶಾರುಖ್ ಖಾನ್ ಹೇಳಿದ್ದಾರೆ. ಕನ್ನಡದ ಸ್ಟಾರ್ ಯಶ್ ಸಿನಿಮಾ ಕೂಡ ನೋಡಿದ್ದೇನೆ ಎಂದು ಎಸ್ ಆರ್ ಕೆ ಬಹಿರಂಗ ಪಡಿಸಿದ್ದಾರೆ. 

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸದ್ಯ ಜವಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಜವಾನ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಾರುಖ್ ಖಾನ್ ಮತ್ತೆ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪಠಾಣ್ ಸೂಪರ್ ಸಕ್ಸಸ್ ಬಳಿಕ ಕಿಂಗ್ ಖಾನ್ ಮತ್ತೊಮ್ಮೆ ಆಕ್ಷನ್ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ. ಇನ್ನೂ ಶಾರುಖ್‌ಗೆ ಜೋಡಿಯಾಗಿ ನಯನತಾರಾ ನಟಿಸಿದ್ದಾರೆ. ಜೊತೆಗೆ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. 

ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ನಿರ್ದೇಶನದಲ್ಲಿ ಜವಾನ್ ಸಿನಿಮಾ ಮೂಡಿಬಂದಿದೆ. ಈ ಮೂಲಕ ಅಟ್ಲೀ ಬಾಲಿವುಡ್ ಗೆ ಕಾಲಿಟ್ಟಿದ್ದಾರೆ. ಜವಾನ್ ಸಿನಿಮಾಗಾಗಿ ಸೌತ್ ಸಿನಿಮಾರಂಗ ಕೂಡ ಕುತೂಹಲದಿಂದ ಕಾಯುತ್ತಿದೆ. ಅಂದಹಾಗೆ ಈ ಸಿನಿಮಾದಲ್ಲಿ ಬಹುತೇಕ ಸೌತ್ ಕಾಲಿದರಿದ್ದಾರೆ. ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ, ಪ್ರಿಯಮಣಿ, ವಿಜಯ್ ಸೇತುಪತಿ ಸೇರಿದಂತೆ ಅನೇಕರು ನಟಿಸಿದ್ದಾರೆ. 

Latest Videos

ಜವಾನ್ ಸಿನಿಮಾದ ಪ್ರಿವ್ಯೂ ರಿಲೀಸ್ ಆದ ಬೆನ್ನಲ್ಲೇ ಶಾರುಖ್ ಖಾನ್ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಅಭಿಮಾನಿಗಳ ಅನೇಕ ಪ್ರಶ್ನೆಗಳಿಗೆ ಶಾರುಖ್ ಉತ್ತರ ನೀಡಿದ್ದಾರೆ. ಅಂದಹಾದೆ ಜವಾನ್ ಸಿನಿಮಾಗಾಗಿ ಹೇಗೆಲ್ಲ ತಯಾರಿ ಮಾಡಿದ್ದಾರೆ ಎನ್ನುವುದನ್ನು ಶಾರುಖ್ ಖಾನ್ ಬಹಿರಂಗ ಪಡಿಸಿದ್ದಾರೆ. ಅಲ್ಲದೇ ರಾಕಿಂಗ್ ಸ್ಟಾರ್ ಯಶ್ ಸಿನಿಮಾವನ್ನು ನೋಡಿರುವುದಾಗಿ ಹೇಳಿದ್ದಾರೆ. 'ನಾನು ಅಟ್ಲೀ ಸಿನಿಮಾಗಳು, ವಿಜಯ್ ಸರ್, ಅಲ್ಲು ಅರ್ಜುನ್, ರಜನಿ ಸರ್, ಯಶ್ ಮತ್ತು ಇತರ ಹಲವಾರು ಸ್ಟಾರ್‌ಗಳ ಸಿನಿಮಾಗಳನ್ನು ಭಾಷೆ ಅರ್ಥಮಾಡಿಕೊಳ್ಳಲು ನೋಡಿದ್ದೇನೆ. ಬಳಿಕ ನನ್ನದೇ ಆದ ಪಾತ್ರಕ್ಕೂ ತಯಾರಿ ನಡೆಸಿದೆ' ಎಂದು ಹೇಳಿದ್ದಾರೆ.

I watched a lot of films of Atlee. Vijay sir. Allu Arjun ji. Rajni sir. Yash and loads of other stars to understand the language of expression for the world that was being created. And yes then prepped for my own character too. https://t.co/F23f2YY2sU

— Shah Rukh Khan (@iamsrk)

ಶಾರುಖ್​ ಖಾನ್​ ತಮ್ಮ ಚಿತ್ರಗಳ ಟಿಕೆಟ್​ ತಾವೇ ಖರೀದಿಸ್ತಾರಾ! ನಟ ಹೇಳಿದ್ದೇನು?

ಸದ್ಯ ರಿಲೀಸ್ ಆಗಿರುವ ಪ್ರಿವ್ಯೂ ನೋಡಿದ್ರೆ ಶಾರುಖ್ ಖಾನ್ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಇಲ್ಲಿ ವಿಲನ್ನಾ ಅಥವಾ ಹೀರೋನಾ ಎನ್ನುವುದು ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆಕ್ಷನ್ ದೃಶ್ಯಗಳು ಹೆಚ್ಚಾಗಿದ್ದು ಪಠಾಣ್ ಬಳಿಕ ಮತ್ತೆ ಶಾರುಖ್ ಮಾಸ್ ಲುಕ್ ನಲ್ಲೇ ದರ್ಶನ ನೀಡಿದ್ದಾರೆ. ಇನ್ನು ‘ಜವಾನ್’ ಸಿನಿಮಾದ ಟೈಟಲ್ ಹೇಳುವಂತೆ ಇದೊಂದು ಯೋಧನ ಕಥೆ. ನಯನತಾರಾ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಮಾಸ್ ಹಿಟ್ ಕೊಡೋಕೆ ಶಾರುಖ್ ಖಾನ್ ಅವರು ಸಿದ್ಧವಾಗಿದ್ದು ಅಟ್ಲಿ ಅವರ ನಿರ್ದೇಶನದ ಮೇಲೂ ಭರವಸೆ ಮೂಡಿದೆ.

'ಜವಾನ್' ಹೊಸ ಪೋಸ್ಟರ್ ಔಟ್: ಶಾರುಖ್ ಸಿನಿಮಾ ವಿರುದ್ಧ ಕನ್ನಡಿಗರ ಆಕ್ರೋಶ

ಸದ್ಯ ಟೀಸರ್ ಮತ್ತು ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಜವಾನ್ ಸಿನಿಮಾ ಸೆಪ್ಟಂಬರ್ ನಲ್ಲಿ ತೆರೆಗೆ ಬರುತ್ತಿದೆ. ಸೆಪ್ಟಂಬರ್ 7ಕ್ಕೆ ರಿಲೀಸ್ ಆಗುತ್ತಿದೆ. ಜವಾನ್ ಸಿನಿಮಾ ಪಠಾಣ್ ಚಿತ್ರವನ್ನು ಮೀರಿಸಿ ಅತೀ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸುತ್ತಾ ಕಾದುನೋಡಬೇಕಿದೆ.

click me!