ಒಳಗಿರುವ ಚಿದಂಬರಂ ಆಸ್ತಿ ಎಷ್ಟು?: ಹೊರಗಿರುವುದು ತುಂಬಿ ತುಳುಕುವಷ್ಟು!

By Web Desk  |  First Published Aug 22, 2019, 4:29 PM IST

INX ಮಿಡಿಯಾ ಹೌಸ್ ಪ್ರಕರಣ ಹಿನ್ನೆಲೆ| ಸಿಬಿಐ ವಶದಲ್ಲಿ ಮಾಜಿ ಕೇಂದ್ರ ಗೃಹ ಸಚಿವ ಪಿ ಚಿದಂಬರಂ| ಪಿ ಚಿದಂಬರಂ ಕುಟುಂಬದ ಆಸ್ತಿ ಮೌಲ್ಯವೆಷ್ಟು ಗೊತ್ತಾ?| ವೃತ್ತಿಯಿಂದ ಸುಪ್ರೀಂಕೋರ್ಟ್ ವಕೀಲರಾಗಿರುವ ಪಿ.ಚಿದಂಬರಂ ಆಸ್ತಿ ವಿವರ| ಮದ್ರಾಸ್ ಹೈಕೋರ್ಟ್‌ನಲ್ಲಿ ವಕೀಲೆಯಾಗಿರುವ ಚಿದಂಬರಂ ಪತ್ನಿ ಆಸ್ತಿ ಮೌಲ್ಯ ಎಷ್ಟು?| ಚಿದಂಬಂ ಪುತ್ರ ಕಾರ್ತಿ ಚಿದಂಬರಂ ಕೂಡ ಕೋಟಿ ಕೋಟಿ ರೂ. ಮೌಲ್ಯದ ಆಸ್ತಿಯ ಒಡೆಯ|


ನವದೆಹಲಿ(ಆ.22): INX ಮಿಡಿಯಾ ಹೌಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಗೃಹ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿದೆ.

ಸದ್ಯ ಚಿದಂಬರಂ ಅವರನ್ನು ವಿಚಾರಣೆಗೊಳಪಡಿಸಿರುವ ಸಿಬಿಐ ಅಧಿಕಾರಿಗಳು, ಅವರನ್ನು 15 ದಿನಗಳ ಕಾಲ ವಶಕ್ಕೆ ಪಡೆಯಲು ಸಿಬಿಐ ನ್ಯಾಯಾಲಯವನ್ನು ಕೋರಲಿದ್ದಾರೆ.

Latest Videos

undefined

ಈ ಮಧ್ಯೆ ಪಿ.ಚಿದಂಬರಂ ಮತ್ತು ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ ಎಂಬುದರ ಕುರಿತು ಜನರಲ್ಲಿ ಕುತೂಹಲ ಮನೆ ಮಾಡಿದೆ. ಇದೇ ಪ್ರಕರಣದಲ್ಲಿ ಈ ಹಿಂದೆ ಸಿಬಿಐನಿಂದ ವಿಚಾರಣೆಗೊಳಪಟ್ಟಿದ್ದ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಆಸ್ತಿ ಮೇಲೂ ಜನರ ಕಣ್ಣು ಬಿದ್ದಿದೆ.

ಚಿದಂಬರಂ ಆಸ್ತಿ:

2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್'ನಲ್ಲಿ ಚಿದಂಬಂರಂ ತಮ್ಮ ಮತ್ತು ತಮ್ಮ ಪತ್ನಿಯ ಒಟ್ಟು ಆಸ್ತಿಯ ಮೌಲ್ಯ ಒಟ್ಟು 95.66 ರೂ. ಎಂದು ಘೋಷಿಸಿದ್ದರು. ಚಿದಂಬರಂ ತಮಗೆ 5.7 ಕೋಟಿ ರೂ. ಸಾಲ ಇರುವುದಾಗಿ ತಿಳಿಸಿದ್ದರು.

ಚಿದಂಬರಂ ಹೆಸಸರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 25.73 ಕೋಟಿ ರೂ. ಠೇವಣಿ ಇದ್ದು, ಕೈಯಲ್ಲಿ 5 ಲಕ್ಷ ರೂ. ಹಣವಿತ್ತು. ಹಣ, ಡಿಪಾಸಿಟ್, ಮ್ಯೂಚುವಲ್ ಫಂಡ್ಸ್ ಸೇರಿದಂತೆ ಒಟ್ಟು 54.30 ಕೋಟಿ ರೂ. ಚರಾಸ್ತಿಯ ಒಡೆಯ ಚಿದಂಬರಂ. ಅಲ್ಲದೇ 41.35 ಕೋಟಿ ರೂ. ಸ್ಥಿರಾಸ್ತಿಯನ್ನು ಚಿದಂಬರಂ ಹೊಂದಿದ್ದಾರೆ.

2014ರ ಆಸ್ತಿ ಘೋಷಣೆಯಂತೆ ವೃತ್ತಿಯಿಂದ ಸುಪ್ರೀಂಕೋರ್ಟ್ ವಕೀಲರಾಗಿರುವ ಚಿದಂಬರಂ, 87,232 ರೂ. ಮೌಲ್ಯದ 32 ಗ್ರಾಂ ತೂಕದ ಚಿನ್ನದ ಒಡೆಯ. ಅಲ್ಲದೇ 3.25 ಕ್ಯಾರೆಟ್‌ನ 97,500 ರೂ. ಮೌಲ್ಯದ ವಜ್ರದ ಉಂಗುರ ಹೊಂದಿದ್ದಾರೆ.

ಅದರಂತೆ ಮದ್ರಸ್ ಹೈಕೋರ್ಟ್‌ನಲ್ಲಿ ವಕೀಲೆಯಾಗಿರುವ ಚಿದಂಬರಂ ಪತ್ನಿ 39 ಲಕ್ಷ ರೂ. ಮೌಲ್ಯದ 1.437 ಗ್ರಾಂ ಚಿನ್ನ, 20 ಲಕ್ಷ ರೂ. ಮೌಲ್ಯದ 52 ಕೆಜಿ ಬೆಳ್ಳಿ ಹಾಗೂ 23 ಲಕ್ಷ ರೂ. ಮೌಲ್ಯದ 76.61 ಕ್ಯಾರೆಟ್ ವಜ್ರದ ಆಭರಣ ಹೊಂದಿದ್ದಾರೆ.

ಪುತ್ರ ಕಾರ್ತಿ ಚಿದಂಬರಂ ಆಸ್ತಿ ವಿವರ:

ಇನ್ನು ಚಿದಂಬರಂ ಪುತ್ರ, ಶಿವಗಂಗಾ ಕ್ಷೇತ್ರದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೂಡ ಕೋಟಿ ಕೋಟಿ ರೂ. ಮೌಲ್ಯದ ಆಸ್ತಿ ಒಡೆಯ. 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ, ಕಾರ್ತಿ ಚಿದಂಬರಂ ಒಟ್ಟು 79.37 ಕೋಟಿ ರೂ. ಮೌಲ್ಯದ ಒಡೆಯ.

ಒಟ್ಟು 17.69 ಕೋಟಿ ರೂ. ಸಾಲ ಹೊಂದಿರುವ ಕಾರ್ತಿ, 26 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 7 ಕೋಟಿ ರೂ. ಮೌಲ್ಯದ ಬ್ಯಾಂಕ್ ಡೆಪಾಸಿಟ್ ಹೊಂದಿದ್ದಾರೆ. ಅಲ್ಲದೇ 45.85 ಕೋಟಿ ರೂ. ಮೌಲ್ಯದ ಸ್ಥಿರಸ್ತಿಯನ್ನು ಹೊಂದಿದ್ದಾರೆ.

click me!