ಉದ್ಯೋಗಿಗಳ ಪಾಲಿಗೆ ಕಹಿಯಾದ 'ಪಾರ್ಲೆ-ಜಿ': 10 ಸಾವಿರ ಮಂದಿಗೆ ಗೇಟ್ ಪಾಸ್?

By Web DeskFirst Published Aug 21, 2019, 4:24 PM IST
Highlights

ಡೋಲಾಯಮಾನ ಪಾರ್ಲೆ| ಆರ್ಥಿಕ ಹಿಂಜರಿತ, GST ಎಫೆಕ್ಟ್‌, ಉದ್ಯೋಗಿಗಳ ಪಾಲಿಗೆ ಕಹಿಯಾದ ಪಾರ್ಲೆ ಜಿ| 10 ಸಾವಿರ ಮಂದಿಗೆ ಗೇಟ್‌ಪಾಸ್‌| 

ಬೆಂಗಳೂರು[ಆ.21]: ಭಾರತದ ಅತಿದೊಡ್ಡ ಬಿಸ್ಕೆಟ್ ತಯಾರಕ ಕಂಪೆನಿ ಪಾರ್ಲೆ ಪ್ರಾಡಕ್ಸ್ಟ್ ಪ್ರೈವೇಟ್ ಲಿಮಿಟೆಡ್ ಆರ್ಥಿಕ ಹಿಂಜರಿತ್ತಕ್ಕೊಳಗಾಗಿದೆ. ಗ್ರಾಮೀಣ ಭಾಗದಲ್ಲಿ ಬೇಡಿಕೆ ಕಡಿಮೆಯಾದ ಹಿನ್ನೆಲೆ ಕಂಪೆನಿ ಬಿಸ್ಕೆಟ್ ಉತ್ಪಾದನೆ ಕಡಿತಗೊಳಿಸಲು ಚಿಂತನೆ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಹೀಗಾದರೆ ಇಲ್ಲಿ ಉದ್ಯೋಗದಲ್ಲಿರುವ ಸುಮಾರು 10,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವುದಲ್ಲಿ ಅನುಮಾನವಿಲ್ಲ.

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಕತೆಯಾಗಿರುವ ಭಾರತದಲ್ಲಿ ಆರ್ಥಿಕ ಪರಿಸ್ಥಿತಿ ದಿನೇ ದಿನೇ ಕುಂಠಿತಗೊಳ್ಳುತ್ತಿದೆ. ಈಗಾಗಲೇ ಆಟೋ ಮೊಬೈಲ್ ಹಾಗೂ ಟೆಕ್ಸ್ ಟೈಲ್ ಇಂಡಸ್ಟ್ರಿಗಳು ಆರ್ಥಿಕ ಹೊಡೆತಕ್ಕೆ ನಲುಗಿ ತಮ್ಮ ಉತ್ಪಾದನೆ ಕಡಿತಗೊಳಿಸಲು ನಿರ್ಧರಿಸಿವೆ. ಸದ್ಯ ಪಾರ್ಲೆರ ಕಂಪೆನಿಯೂ ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿದೆ.

ಪಾರ್ಲೆ ಕಂಪೆನಿಯು ಬಿಸ್ಕೆಟ್ ಮಾರಾಟದಲ್ಲಿ ಕುಡಿತ ಕಂಡಿದೆ, ಹೀಗಿರುವಾಗ ತನ್ನ ಉತ್ಪಾದನೆ ಕಡಿತಗೊಳಿಸಲು ಮುಂದಾಗಬಹುದು. ಕೇಂದ್ರ ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸದಿದ್ದರೆ ಉದ್ಯೋಗ ಕಡಿತಗೊಳಿಸುವುದು ಅನಿವಾರ್ಯ. ಹೀಗಾದರೆ 8,000 ರಿಂದ 10,000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಬಹುದು. ಎಂದು ಪಾರ್ಲೆ ಕಂಪೆನಿಯ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ. ಸದ್ಯ ಪಾರ್ಲೆ ಕಂಪೆನಿಯಲ್ಲಿ 1 ಲಕ್ಷ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುವುದು ಉಲ್ಲೇಖನೀಯ.

ಇನ್ನು ಈ ಹಿಂದೆ, ಅಂದರೆ 2017ರಲ್ಲಿ GST ಜಾರಿಗೊಳಿಸಿದ ಸಂದರ್ಭ ಕಂಪೆನಿಗೆ ಬಹುದೊಡ್ಡ ಹೊಡೆತ ಬಿದ್ದಿತ್ತು. ಅಂದು ತೆರಿಗೆ ಹೆಚ್ಚಾದ ಪರಿಣಾಮ ಗ್ರಾಮೀಣ ಭಾಗಗಳಲ್ಲಿ ಬೇಡಿಕೆ ಕಡಿಮೆಯಾಗಿತ್ತು, ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

click me!