
ನವದೆಹಲಿ[ಆ.22]: ವಿದೇಶೀ ಪ್ರವಸ ಬಹಳಷ್ಟು ದುಬಾರಿ ಅಂತಾರೆ, ವಿಮಾನ ಯಾನಕ್ಕಾಗಿ ಭಾರೀ ಮೊತ್ತ ತೆರಬೇಕಾಗುತ್ತದೆ. ಆದರೀಗ ಭಾರತೀಯರಿಗಾಗಿ ಏರ್ ಲೈನ್ಸ್ ವಿಶೇಷ ಆಫರ್ ಒಂದನ್ನು ಘೋಷಿಸಿದೆ. ಈ ಮೂಲಕ ಭಾರತೀಯ ಪ್ರಯಾಣಿಕರು ಕೇವಲ 9 ರೂಪಾಯಿಗೆ ವಿದೇಶ ಪ್ರವಾಸ ಕೈಗೊಳ್ಳಬಹುದು.
ವಿಯೆಟ್ನಾಂನ ವಿಯತ್ ಜೆಟ್ ಏರ್ ಲೈನ್ಸ್ ಭಾರತೀಯರಿಗಾಗಿ ಅದ್ಭುತ ಆಫರ್ ಒಂದನ್ನು ನೀಡಿದೆ. ಇದು ಕೇವಲ 9 ರೂಪಾಯಿಯಿಂದ ತನ್ನ ಟಿಕೆಟ್ ಆರಂಭಿಸುತ್ತಿದ್ದು, ಭಾರತ ಹಾಗೂ ವಿಯೆಟ್ನಾಂ ನಡುವೆ ನೇರ ವಿಮಾನ ಯಾನ ಆರಂಭಿಸುತ್ತಿದೆ. ಇದೇ ಕಾರಣದಿಂದ ಈ ಆಫರ್ ಘೋಷಿಸಿದೆ. ಇಷ್ಟೇ ಅಲ್ಲದೇ ಈ ವಿಮಾನದಲ್ಲಿ ಸೇವೆ ಸಲ್ಲಿಸುವ ಕೆಲ ಗಗನಸಖಿಯರು 'ಬಿಕಿನಿ'ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಹೊಸದಾಗಿ ಆರಮಭಗೊಳ್ಳಲಿರುವ ಈ ಏರ್ ಲೈನ್ಸ್ ನ್ನು 'ಬಿಕಿನಿ ಏರ್ ಲೈನ್ಸ್' ಎಂದೂ ಕರೆಯುತ್ತಾರೆ.
ಭಾರತದಲ್ಲಿ ಶೀಘ್ರದಲ್ಲೇ ಬಿಕಿನಿ ಏರ್’ಲೈನ್ ಆರಂಭ?
ಹೋ ಚೀ ಮಿನ್ಹ್ ಸಿಟಿ ಹಾಗೂ ಹನೋಯಿಯಿಂದ ಭಾರತಕ್ಕೆ ನೇರ ವಿಮಾನ ಯಾನ ಆರಂಭಿಸಲಿರುವ ಈ ಏರ್ ಲೈನ್ಸ್, ಸೂಪರ್ ಸೇವಿಂಗ್ ಟಿಕೆಟ್ ಎಂಬ ಸ್ಕೀಂನಡಿ 3 ದಿನಗಳ[ಆಗಸ್ಟ್ 20 ರಿಂದ 22ರವರೆಗೆ] ಬುಕ್ಕಿಂಗ್ ಸ್ಟಾರ್ಟ್ ಮಾಡಿದೆ. ಈ ಮೂರು ದಿನಗಳಲ್ಲಿ ಟಿಕೆಟ್ ಬುಕ್ ಮಾಡಿದರೆ ಕೇವಲ 9 ರೂಪಾಯಿಗೆ ನೀವು ವಿದೇಶೀ ಪ್ರಯಾಣ ಮಾಡಬಹುದು.
ಆಫರ್ ಇಲ್ಲದೇ ದೆಹಲಿಯಿಂದ ಹೋ ಚೀ ಮಿನ್ಹ್ ಸಿಟಿಯ ಟಿಕೆಟ್ 4200 ರೂಪಾಯಿ ನಿಗದಿಪಡಿಸಲಾಗಿದೆ. ಟಿಕೆಟ್ ಬುಕ್ ಮಾಡಿದರೆ ಡಿಸೆಂಬರ್ 6 ರಿಂದ ಭಾರತೀಯರು ಪ್ರಯಾಣ ಮಾಡಬಹುದು. ನವದೆಹಲಿಯಿಂದ
ಹೋ ಚೀ ಮಿನ್ಹ್ ಸಿಟಿಗೆ ವಾರದ 4 ದಿನ ಅಂದರೆ, ಸೋಮವಾರ, ಬುಧವಾರ, ಶುಕ್ರವಾರ ಹಾಗು ರವಿವಾರ ವಿಮಾನಗಳು ಸಂಚರಿಸಲಿವೆ.
ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ?
ವಿಮಾನ ಟಿಕೆಟ್ ಬುಕ್ ಮಾಡಲು ಅಧಿಕೃತ ವೆಬ್ ಸೈಟ್ www.vietjetair.com ಅಥವಾ ಮೊವೈಲ್ ನಿಂದಾದರೆ m.vietjetair.com ಹಾಗೂ ಆ್ಯಪ್ ನಿಂದಾದರೆ Vietjet Air ಗೆ ಟಿಕೆಟ್ ಕಾಯ್ದುಇರಿಸಬಹುದು. ಇಲ್ಲಿ ವನ್ ವೇ ಅಥವಾ ರೌಂಡ್ ಟ್ರಿಪ್ ಆಯ್ಕೆ ತೋರಿಸುತ್ತದೆ. ಇದನ್ನು ಸೆಲೆಕ್ಟ್ ಮಾಡಿದ ಬಳಿಕ ವಿವರಗಳನ್ನು ನೀಡಬೇಕು. ಬಳಿಕ ಹಣ ಪಾವತಿಸಿ ಟಿಕೆಟ್ ಬುಕ್ ಮಾಡಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.