ಭೂಕಂಪದಿಂದ ದೇವಸ್ಥಾನಕ್ಕೇಕೆ ಹಾನಿಯಾಗುವುದಿಲ್ಲ?

By Web DeskFirst Published Oct 5, 2019, 3:06 PM IST
Highlights

ಪುರಾತನ ದೇವಾಲಯಗಳ ವಾಸ್ತು ಶಿಲ್ಪವೇ ಅದ್ಭುತ. ಸಾವಿರಾರು ವರ್ಷಗಳು ಕಳೆದರೂ, ಪ್ರಕೃತಿ ವಿಕೋಪ ಎದುರಾದರೂ ಸಾವಿರಾರು ದೇವಸ್ಥಾನಗಳು ಹಾಳಾಗದೇ ಉಳಿದಿರುವುದು ಹಿಂದಿನವರ ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಅಷ್ಟಕ್ಕೂ ಈ ದೇವಸ್ಥಾನಗಳೇಕೆ ಭೂ ಕಂಪನಕ್ಕೆ ಬೆದರೋಲ್ಲ?

 

ಭೂಕಂಪನ ಅಥವಾ ಇತರೆ ನೈಸರ್ಗಿಕ ವಿಕೋಪಗಳಿಂದಲೂ ಕಟ್ಟಡಗಳಿಗೆ ಆದರಲ್ಲಿಯೂ ಸುಲಭವಾಗಿ ದೇವಸ್ಥಾನಗಳಿಗೆ ಹಾನಿಯಾಗುವುದಿಲ್ಲ. ಭೂಕಂಪ, ಪ್ರವಾಹಗಳಾದಾಗ ಆಧುನಿಕ ಕಟ್ಟಡಗಳು ನೆಲಸಮವಾದರೂ ಪ್ರಾಚೀನ ದೇವಸ್ಥಾನಗಳು ಗಟ್ಟಿಯಾಗಿ ನಿಂತಿರುವುದನ್ನು ನಾವು ನೋಡಿದ್ದೇವೆ.

ಲೈಂಗಿಕತೆ-ಋತುಸ್ರಾವ-ಮಾತೃಯೋನಿ ಸ್ವರೂಪಿ ದೇವಿಗಿಲ್ಲಿ ಪೂಜೆ

 

ಉದಾಹರಣೆಗೆ, ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಮೇಘಸ್ಫೋಟ ಪ್ರವಾಹದಿಂದ ಏನೂ ಆಗಿಲ್ಲ. ನೇಪಾಳದ ಪಶುಪತಿನಾಥ ದೇವಾಲಯಕ್ಕೂ ಭೂಕಂಪನದಿಂದ ಏನೂ ಆಗಿರಲಿಲ್ಲ. ಇದಕ್ಕೇನು ಕಾರಣ? ದೇವರ ಶಕ್ತಿಯೇ ಅಥವಾ ಕಟ್ಟಡ ಹಿನ್ಯಾಸಕಾರರ ಜಾಣ್ಮೆಯೇ?

 

ದೇವರ ಶಕ್ತಿ ಕಾರಣವೋ ಅಲ್ಲವೋ ಗೊತ್ತಿಲ್ಲ. ಆದರೆ ಕಟ್ಟಡ ವಿನ್ಯಾಸಕಾರರ ಜಾಣ್ಮೆಯಂತೂ ಹೌದು. ಪ್ರಾಚೀನರು ದೇವಸ್ಥಾನ ನಿರ್ಮಿಸುವಾಗ ಅದರ ತಳಪಾಯವನ್ನು ವಿವಿಧ ತಂತ್ರಜ್ಞಾನಗಳನ್ನು ಬಳಸಿ ಕುಶನ್ ರೀತಿಯಲ್ಲಿ ನಿರ್ವಹಿಸಿ, ಭೂಮಿ ಕಂಪಿಸಿದಾಗ ಕಂಪನದ ಅಲೆಗಳು ಕಟ್ಟಡದವರೆಗೆ ತಲುಪುವಷ್ಟರಲ್ಲಿಯೇ ದುರ್ಬಲವಾಗುವಂತೆ ಮಾಡುತ್ತಿದ್ದರು.

ಶಿವನಿಗೆ ಬಿಲ್ವ ಪತ್ರೆ ಪೂಜೆ ಯಾಕೆ?

 

ಉದಾಹರಣೆಗೆ, ದಕ್ಷಿಣ ಭಾರತವನ್ನು ಆಳಿದ್ದ ಕಾಕತೀಯರು ಇದಕ್ಕೆ ಸ್ಯಾಂಡ್‌ಬಾಕ್ಸ್ ಎಂಬ ತಂತ್ರಜ್ಞಾನ ಬಳಸುತ್ತಿದ್ದರು. ಅಂದರೆ, ತಳಪಾಯದ ಕೆಳಗೆ ವಿಶಿಷ್ಟ ರೀತಿಯಲ್ಲಿ ಮರಳು ಒಯ್ಯುವುದು. ಇದೇ ರೀತಿ, ಕಟ್ಟಡದ ತಳಪಾಯಕ್ಕೆ ಬೆಲ್ಲ-ಬೆಣಚುಕಲ್ಲಿನ ಮಿಶ್ರಣ, ತಳಪಾಯದ ಬಂಡೆಗಳಿಗೆ ತೂತು ಕೊರೆದು ಬಿಸಿ ಕಬ್ಬಿಣದ ದ್ರವ ಹೊಯ್ಯುವುದು. ಭೂಕಂಪನಗಳಿಂದ ದೇವಸ್ಥಾನಗಳನ್ನು ರಕ್ಷಿಸುವುದು ಇದೇ ತಂತ್ರಜ್ಞಾನ.

ವೃಕ್ಷದಲ್ಲಿ ಬ್ರಹ್ಮ, ವಿಷ್ಣು, ಶಿವನನ್ನು ನೋಡುವ ಸಂಸ್ಕತಿ ನಮ್ಮದು

 

ದೇವಾಲಯದವನ್ನು ಬಂಡೆ ಮೇಲೆ ಕಟ್ಟುವುದಾದರೆ ಬಂಡೆಯಲ್ಲಿ ರಂಧ್ರ ಕೊರೆದು ಅದರಲ್ಲಿ ಕಾದ ಸೀಸ/ಕಬ್ಬಿಣವನ್ನು ಸುರಿದು, ಅದರಲ್ಲಿ ಕಬ್ಬಿಣದ ಸರಳನ್ನು ನೆಟ್ಟು, ಸರಳಿಗೆ ಹೊಂದುವ ಕಲ್ಲುಗಳನ್ನು ಹೊಂದಿಸಿ ಕಟ್ಟಡವನ್ನು ನಿರ್ವಹಿಸುತ್ತಿದ್ದರು. ತಳಪಾಯ ರಚನೆಯಲ್ಲಿ ಮಾರ್ಟಿಸ್-ಟೆನನ್ ಜಾಯಿಂಟ್ ಎಂದು ಈಗಿನ ವಾಸ್ತುವಿನಲ್ಲಿ ಬಳಸುವ ವಿಧಾನವನ್ನು ಪ್ರಾಚೀನ ಆಲಯಗಳಲ್ಲಿ ಬಳಸುತ್ತಿದ್ದರು. ಇದರ ಸುಧಾರಿತ ರೂಪ ಮಾರ್ಟಿಸನ್-ಟೆನನ್ ಜಾಯಿಂಟ್ ಜೊತೆಯಲ್ಲಿ ಒಂದು ಲೋಹದ ಸರಳನ್ನು ಬಳಸುವುದು. ಲ್ಯಾಪ್ ಜಾಯಿಂಟ್ ಎನ್ನುವ ತಂತ್ರವನ್ನು ಬಳಸುವುದು ಇತ್ಯಾದಿ. ಪ್ರಾಚೀನ ಭಾರತೀಯ ಶಿಲ್ಪಿಗಳ ಇಂಜಿನಿಯರಿಂಗ್ ಜಾಣ್ಮೆಯೇ ದೇವಾಲಯಗಳು ಇಂದಿನವರೆಗೂ ಉಳಿದು ಬರಲು ಪ್ರಮುಖ ಕಾರಣ. 

ಮಹಾಬಲ ಸೀತಾಳಬಾವಿ

click me!