ವೃಶ್ಚಿಕ : ಉನ್ನತ ಸ್ಥಾನಮಾನಕ್ಕೆ ಏರುವ ಯೋಗ ಈ ವರ್ಷದಲ್ಲಿದೆ

By Web DeskFirst Published Nov 8, 2018, 3:43 PM IST
Highlights

ವೃಶ್ಚಿಕ ರಾಶಿಗೆ ಈ ವರ್ಷ ಹೇಗಿದೆ ತಿಳಿಯಿರಿ ವರ್ಷದ ಭವಿಷ್ಯ

ವೃಶ್ಚಿಕ : ಉನ್ನತ ಸ್ಥಾನಮಾನಕ್ಕೆ ಏರುವ ಯೋಗ ಈ ವರ್ಷದಲ್ಲಿದೆ

ಶನಿಯ ಪ್ರಭಾವದಿಂದ ವಿಮುಖರಾಗಿ ಉನ್ನತ ಸ್ಥಾನಮಾನಕ್ಕೆ ಏರಲಿದ್ದೀರಿ. ಸರಕಾರಿ ಕ್ಷೇತ್ರದಲ್ಲಿ  ಸ್ಥಗಿತಗೊಂಡ ಮುಂಬಡ್ತಿಯನ್ನು ಶಿವನ ಉಪಾಸನೆಯಿಂದ ಸಮಾಧಾನ ಅಥವಾ ಮೇಲ್ದರ್ಜೆಗೆ ಏರಲಿದ್ದೀರಿ. 

ಹೈನುಗಾರಿಕೆ, ಕೃಷಿಯಿಂದ ಲಾಭ. ದೂರ ಪ್ರಯಾಣ ಸಾಧ್ಯತೆ. ಹೆಣ್ಣು ಮಕ್ಕಳ ಮಾತಿನಿಂದ ಉತ್ತಮವಾಗಲಿದೆ. ಮೌಖಿಕವಾದ ವಿಚಾರಗಳನ್ನು ಮನದಲ್ಲಿಯೇ ನಿಷ್ಕರ್ಷೆ ಮಾಡಿ ಲಾಭ ಪಡೆಯಲಿದ್ದೀರಿ. 

ಹಿರಿಯರ ಮಾರ್ಗದರ್ಶನದಿಂದ ಮನಸ್ಸಿಗೆ ಸಂತೋಷ. ವಿದೇಶದಲ್ಲಿರುವ ಬಂಧುಗಳು ಉದ್ಯೋಗವನ್ನು ಕೊಡಿಸಲುಬಹುದು ಅಥವಾ ವ್ಯವಹಾರಕ್ಕೆ ಅನುಕೂಲವಾಗಲು  ಸಹಾಯ ಸಾಧ್ಯತೆ.

 ಚಾಲಕರು ಮತ್ತು ಮಾಲೀಕರಿಗೆ ಅನುಕೂಲ. ವಾದ್ಯ, ಹಾಡುಗಾರಿಕೆಯಿಂದ ಅಭಿಮಾನಿಗಳನ್ನು ಗೆಲ್ಲುತ್ತೀರಿ. ಶಿಕ್ಷಕ ವೃತ್ತಿಯಲ್ಲಿ ಮುಂಬಡ್ತಿ  ವಿದ್ಯಾರ್ಥಿಗಳ ಜೀವನದಲ್ಲಿ ಸಂತೋಷ. ಭಾನುವಾರ ಬುಧವಾರ ಗುರುವಾರ ಹಸಿರು ಬಿಳಿ ಕಂದು ಬಣ್ಣದ ಬಟ್ಟೆ ಧರಿಸುವುದರಿಂದ ಮನಸ್ಸಿನ ಕಾರ್ಯಗಳು ನೆರವೇರಲಿದೆ. ಶುಕ್ರವಾರ ಬುಧವಾರ ಸೋಮವಾರ ಸಾಲ ಮಾಡಬೇಡಿ.

ಶುಭ ಸಂಖ್ಯೆ:  1 3 5 6

ವಿದ್ವಾನ್ ಕಮಲಾಕರ ಭಟ್

click me!