Zodiac

(Search results - 96)

Krishna Janmashtami, Zodiac,  signs

Festivals10, Aug 2020, 5:23 PM

ಶ್ರೀಕಷ್ಣ ಜನ್ಮಾಷ್ಟಮಿಯಂದು ಈ 5 ರಾಶಿಯವರ ಅದೃಷ್ಟ ಬದಲಾಗತ್ತೆ…!

ಶ್ರೀಕೃಷ್ಣ ಜನ್ಮಾಷ್ಟಮಿ ಇದೇ ಮಂಗಳವಾರ ಆಚರಿಸಲ್ಪಡುತ್ತಿದೆ. ಕೃಷ್ಣಾ ಎನಬಾರದೇ, ಕೃಷ್ಣನ ನೆನೆದರೆ ಕಷ್ಟವೊಂದಿಷ್ಟಿಲ್ಲ…. ಹೀಗೆ ಸಾಗುವ ಹಾಡುಗಳ ಸಾಲುಗಳು ನೆನಪಿಲ್ಲವೇ..? ಹಾಗೆಯೇ ಕೃಷ್ಣ ಪರಮಾತ್ಮನನ್ನು ನೆನೆದರೆ ಎಂಥ ಕಷ್ಟಗಳೇ ಇರಲಿ ಅವುಗಳು ಮಂಜಿನಂತೆ ಕರಗಿಹೋಗುತ್ತದೆ. ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಯು ಕೆಲವು ರಾಶಿಯವರಿಗೆ ಅದೃಷ್ಟ ತಂದು ಕೊಡಲಿದೆ. ಹಾಗಾದರೆ ಯಾವುವು ಆ ರಾಶಿಗಳು ಎಂಬ ಬಗ್ಗೆ ನೋಡೋಣ…

astrology zodiac sign

Festivals8, Aug 2020, 4:49 PM

ಈ ರಾಶಿಯವರು ಕಿರಿಕ್‌ ಮಾಡೋ ಸಹೋದ್ಯೋಗಿಗಳಾಗಿರ್ತಾರೆ!

ಕೆಲವು ಸಹೋದ್ಯೋಗಿಗಳು ಹಾಗಿರಲು ಕಾರಣ ಏನು ಎಂಬುದು ನಿಮ್ಮ ತಲೆ ಕೊರೆಯುತ್ತ ಇರಬಹುದು. ಅದಕ್ಕೆ ಕಾರಣವನ್ನು ಅವರ ಜನ್ಮರಾಶಿಯಲ್ಲಿ ಕಾಣಬಹುದು.

Astrology Colors horoscope zodiac sign

Festivals6, Aug 2020, 3:46 PM

ಈ ರಾಶಿಯವರಿಗೆ ಈ ಬಣ್ಣಗಳು ಅದೃಷ್ಟ ತರುತ್ತವೆ..!

ಇಲ್ಲಿ ನಮಗೆ ಇಷ್ಟವಾಗುವ ಬಣ್ಣ ಒಂದೋ ಎರಡೋ ಇರಬಹುದು. ಆದರೆ, ಆ ಬಣ್ಣ ನಮಗೆ ಒಪ್ಪುತ್ತದೆಯೇ? ಅದೃಷ್ಟ ತಂದುಕೊಡುತ್ತದೆಯೇ? ಎಂಬ ಬಗ್ಗೆ ತಿಳಿದುಕೊಂಡಿರುವುದಿಲ್ಲ. ನಿಮಗೆ ಗೊತ್ತಿರಲಿ ಕೆಲವು ಬಣ್ಣಗಳು ರಾಶಿಚಕ್ರಗಳಿಗನುಸಾರವಾಗಿ ಅದೃಷ್ಟವನ್ನು ತಂದುಕೊಟ್ಟರೆ, ಮತ್ತೆ ಕೆಲವು ಬಣ್ಣಗಳು ದುರದೃಷ್ಟವನ್ನು ಹೊತ್ತು ತರುತ್ತವೆ ಎಂದು ಹೇಳಲಾಗುತ್ತದೆ. ಹೀಗಾಗಿ ಬಣ್ಣಗಳ ಆಯ್ಕೆಯಲ್ಲಿ ತುಸು ಜಾಗ್ರತೆ ವಹಿಸುವುದು ಒಳ್ಳೆಯದು. ಹಾಗಾದರೆ ಯಾವ ರಾಶಿಯವರಿಗೆ ಯಾವ ಬಣ್ಣ ಅದೃಷ್ಟ ತರುತ್ತದೆ ಎಂಬುದರ ಬಗ್ಗೆ ನೋಡೋಣ.

Shiva, Mahadeva

Festivals4, Aug 2020, 7:19 PM

ಮನೋಭಿಲಾಷೆ ಫಲಿಸಲು ರಾಶಿಗನುಗುಣವಾಗಿ ಇವುಗಳಿಂದ ರುದ್ರಾಭಿಷೇಕ ಮಾಡಿ..!

ಶಿವನಿಗೆ ರುದ್ರಾಭಿಷೇಕವನ್ನು ಮಾಡಿದಲ್ಲಿ ಅಥವಾ ಮಾಡಿಸಿದಲ್ಲಿ ಸಕಲ ಪಾಪಗಳಿಂದ ಮುಕ್ತಿ ಹೊಂದಬಹುದಾಗಿದೆ. ರುದ್ರಾಭಿಷೇಕದಿಂದ ಶಿವನ ಕೃಪೆ ದೊರಕುವುದಲ್ಲದೇ ಅನೇಕ ರೀತಿಯ ಲಾಭಗಳನ್ನು ಪಡೆಯಬಹುದಾಗಿದೆ. ಶಿವ ಬೇಗ ಒಲಿಯುತ್ತಾನೆ ಎಂಬ ಮಾತಿದೆ, ಹಾಗೆಯೇ ಶಿವನ ಆರಾಧನೆಗೆ ಪ್ರಶಸ್ತವಾದ ಶ್ರಾವಣ ಮಾಸದಲ್ಲಿ ರುದ್ರಾಭಿಷೇಕವನ್ನು ಮಾಡಿ ಶಿವನ ಒಲುಮೆಗೆ ಪಾತ್ರರಾಗಬಹುದಾಗಿದೆ. ರುದ್ರಾಭಿಷೇಕದಲ್ಲಿ ನಾನಾ ಪ್ರಕಾರಗಳಿವೆ, ಎಲ್ಲವೂ ಶಿವನಿಗೆ ಪ್ರಿಯವೇ ಆಗಿದೆ. ಇಲ್ಲಿ ರುದ್ರಾಭಿಷೇಕದ ಮಹತ್ವವನ್ನು ಮತ್ತು ಯಾವ ರಾಶಿಯವರು ಯಾವ ರೀತಿಯ ರುದ್ರಾಭಿಷೇಕ ಮಾಡಿದರೆ ಪರಶಿವನ ಒಲುಮೆಗೆ ಬೇಗ ಪಾತ್ರರಾಗಬಹುದು ಎನ್ನುವ ಬಗ್ಗೆ ತಿಳಿಯೋಣ.

ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ವಿದ್ಯಾರ್ಥಿ ಓದುತ್ತಾನೋ, ಇಲ್ಲವೋ ಎಂಬುದನ್ನು ಪತ್ತೆ ಹಚ್ಚಬಹುದು. ಯಾವ ರಾಶಿಯವರು, ಹೇಗಿರುತ್ತಾರೆ?

Festivals4, Aug 2020, 3:23 PM

ನೀವೆಂಥಾ ವಿದ್ಯಾರ್ಥಿ ಅನ್ನೋದನ್ನು ರಾಶಿಯೇ ಹೇಳುತ್ತೆ!

ನಿಮಗೆ ಓದೋದಂದ್ರೆ ಇಷ್ಟನಾ, ಕಷ್ಟನಾ, ಪುಸ್ತಕ ನೋಡಿದ್ರೆ ನಿದ್ರೆ ಬರುತ್ತಾ ಅಥವಾ ಭವಿಷ್ಯ ಕಾಣಿಸುತ್ತಾ, ಕ್ಲಾಸಿನಲ್ಲಿ ಕೊನೆ ಬೆಂಚಿನ ಹುಡುಗನೋ ಅಥವಾ ಪ್ರಶ್ನೆಗಳಿಗೆಲ್ಲ ಫಟಾಫಟ್ ಉತ್ತರಿಸೋ ಛಾತಿಯವನೋ ಇತ್ಯಾದಿ ಇತ್ಯಾದಿ ನಿಮ್ಮ ವಿದ್ಯಾರ್ಥಿ ವರ್ತನೆಗಳಿಗೂ ನಿಮ್ಮ ರಾಶಿಗೂ ಸಂಬಂಧವಿದೆ. ಯಾವ ರಾಶಿಯ ವಿದ್ಯಾರ್ಥಿ ಹೇಗಿರುತ್ತಾನೆ ಅನ್ನೋದು ಇಲ್ಲಿದೆ.

Raksha Bandhan

Festivals2, Aug 2020, 1:33 PM

ರಕ್ಷಾ ಬಂಧನದಲ್ಲಿ ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಟ್ಟಬೇಕು..?

ತನ್ನ ಸಹೋದರಿನಿಗೆ ಒಳ್ಳೆಯದಾಗಲಿ, ಅವನ ಭವಿಷ್ಯ ಪ್ರಜ್ವಲಿಸಲಿ ಎಂಬ ನಿಟ್ಟಿನಲ್ಲಿ ಅತ್ಯಂತ ಪ್ರೀತಿಯಿಂದ ತಂಗಿ ಬಂದು ಕಟ್ಟುವ ರಾಖಿ ಹಬ್ಬಕ್ಕೆ ಅದರದೇ ಆದ ಮಹತ್ವವಿದೆ. ಇಲ್ಲಿ ಬಾಂಧವ್ಯಗಳ ಬೆಸುಗೆಯಾಗುವುದಲ್ಲದೆ, ಅಣ್ಣ-ತಂಗಿಯರ ಸಂಬಂಧ ಗಟ್ಟಿಗೊಳ್ಳುತ್ತಲೇ ಹೋಗುತ್ತದೆ. ಜೊತೆಗೆ ಅಣ್ಣ ಸಹ ತಂಗಿಯ ರಕ್ಷಣೆಗೆ ನಿಲ್ಲುತ್ತೇನೆ ಎಂಬ ಅಭಯವನ್ನೂ ಇದೇ ಸಂದರ್ಭದಲ್ಲಿ ಆಶೀರ್ವಾದ ರೂಪದಲ್ಲಿ ನೀಡುತ್ತಾನೆ. ಈ ರಾಖಿ ಹಬ್ಬವು ಪ್ರತಿ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲ್ಪಡುತ್ತದೆ. ಈ ಬಾರಿ ಇದೇ ಸೋಮವಾರ (03-08-2020) ದಂದು ಆಚರಿಸಲ್ಪಡುತ್ತಿದೆ. ಅಂದಹಾಗೆ ಯಾವ ರಾಶಿಯ ಸಹೋದರನಿಗೆ ಯಾವ ಬಣ್ಣದ ರಾಖಿ ಕಟ್ಟಿದರೆ ಒಳಿತಾಗಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

varamahalakshmi new

Festivals31, Jul 2020, 7:11 PM

ಈ ರಾಶಿಯ ವ್ಯಕ್ತಿಗಳಿಗೆ ಖ್ಯಾತಿಲಕ್ಷ್ಮೀ ಬಲುಬೇಗ ಒಲಿಯುತ್ತಾಳೆ!

ಕೆಲವರು ನಿಸ್ವಾರ್ಥ ರೀತಿಯಿಂದ ಎಷ್ಟೋ ವರ್ಷ ದುಡಿದರೂ ಇದ್ದಲ್ಲೇ ಇರುತ್ತಾರೆ. ಆರಕ್ಕೇರುವುದಿಲ್ಲ, ಮೂರಕ್ಕಿಳಿಯುವುದಿಲ್ಲ. ಕೆಲವರು ದಿಡೀರನೆ ಖ್ಯಾತಿ ಪಡೆಯುತ್ತಾರೆ. ಇದರಲ್ಲಿ ಅವರವರ ಜನ್ಮರಾಶಿಯ ಪಾತ್ರವೆಷ್ಟು ಅಂತ ಈಗ ತಿಳಿಯೋಣ.

Zodiac sign

Festivals30, Jul 2020, 9:40 AM

ಈ ಐದು ರಾಶಿಯವರು ನೆಚ್ಚಿನ ಮಡದಿಯಾಗುತ್ತಾರೆ!

ಗಂಡನನ್ನು ತುಂಬಾ ಪ್ರೀತಿ ಮಾಡೋ, ಚೆನ್ನಾಗಿ ನೋಡಿಕೊಳ್ಳೋ, ಅರ್ಥ ಮಾಡಿಕೊಂಡು ಸಂಸಾರವನ್ನು ನಿಭಾಸಿಕೊಂಡು ಹೋಗುವಂತಹ ಹೆಣ್ಣು ಬಾಳ ಸಂಗಾತಿಯಾಗಿ ಎಲ್ಲರಿಗೂ ಬೇಕು ಎಂಬ ಆಸೆ ಇರುತ್ತದೆ, ಈ ಪ್ರಕಾರವೇ ಹೆಣ್ಣು ನೋಡುವ ಪ್ರಕ್ರಿಯೆಯೂ ಆಗುತ್ತದೆ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯ ಹೆಣ್ಣುಮಕ್ಕಳನ್ನು ವಿವಾಹವಾದರೆ ಅವರು ಪತಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆಂದು ಹೇಳಲಾಗಿದೆ. ಹಾಗಾದರೆ ಆ ರಾಶಿಗಳು ಯಾವುವು ಎಂಬ ಬಗ್ಗೆ ನೋಡೋಣ ಬನ್ನಿ…

• People of these 6 zodiac signs make the most loyal partners in a relationship

Festivals28, Jul 2020, 6:53 PM

ಈ ರಾಶಿಯವರಿಗೆ ಸಂಬಂಧದಲ್ಲಿ ಅಭದ್ರತೆ ಹೆಚ್ಚು, ನಿಮ್ಮ ರಾಶಿ ಇದೆಯಾ?

ಮನುಷ್ಯ ಸಂಘ ಜೀವಿ, ಹುಟ್ಟಿನಲ್ಲಿ ಅಪ್ಪ-ಅಮ್ಮ, ಸಹೋದರ, ಸಹೋದರಿ, ಬೆಳೆಯುತ್ತಾ ಸ್ನೇಹಿತರು, ಬಳಿಕ ಸಂಗಾತಿ ಹೀಗೆ ಜೊತೆಗಾರರು ಇರಲೇಬೇಕು. ಸಂಗಾತಿಗಳಾದ ಮೇಲಂತೂ ಪರಸ್ಪರ ಸಾಮರಸ್ಯ ಇರಲೇಬೇಕು. ಆದರೆ, ಕೆಲವೊಮ್ಮೆ ಎಷ್ಟೇ ಸಾಮರಸ್ಯವಾಗಿದ್ದರೂ ಅಭದ್ರತಾ ಭಾವ ಕಾಡುತ್ತಲೇ ಇರುತ್ತದೆ. ಇದಕ್ಕೆ ರಾಶಿ ಚಕ್ರದ ಪ್ರಭಾವವೂ ಇರುತ್ತದೆ. ಒಂದೊಂದು ರಾಶಿಯವರಿಗೆ ಒಂದೊಂದು ರೀತಿಯ ಅಭದ್ರತಾ ಭಾವ ಇರುತ್ತದೆ. ಹಾಗಾಗಿ ನಿಮ್ಮ ರಾಶಿಗನುಗುಣವಾಗಿ ಯಾವ ರೀತಿ ಅಭದ್ರತೆ ಕಾಡುತ್ತದೆ ಎಂಬುದನ್ನು ನೋಡೋಣ ಬನ್ನಿ…

Astrology horoscope  depression

Festivals27, Jul 2020, 5:54 PM

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಸೋಮಾರಿತನ ಎಂಬುದು ಕೆಲವರು ರೂಢಿಸಿಕೊಂಡರೆ ಮತ್ತೆ ಕೆಲವರಿಗೆ ಗ್ರಹಗತಿಗಳಿಂದ ಉಂಟಾಗುತ್ತದೆ. ಕೆಲವು ರಾಶಿಯವರು ಏನಾದರೂ ಮಾಡಬೇಕು ಎಂಬ ಬಗ್ಗೆ ಯೋಚನೆ ಮಾಡುವಷ್ಟೂ ಚಟುವಟಿಕೆಯಿಂದಿರದೇ, ಅಷ್ಟರಮಟ್ಟಿಗೆ ಸೋಮಾರಿಗಳಾಗಿರುತ್ತಾರೆ. ಇದಕ್ಕೂ ರಾಶಿ ಚಕ್ರ ಕಾರಣವಾಗಿರುತ್ತದೆ. ಈ ಐದು ರಾಶಿಯವರು ಬಹಳ ಸೋಮಾರಿಗಳಾಗಿದ್ದು, ಯಾವ ಯಾವ ರಾಶಿಯವರು ಎಂಬುದರ ಬಗ್ಗೆ ಗಮನಹರಿಸೋಣ.

problem zodiac

Festivals23, Jul 2020, 6:33 PM

ಯಾವ ರಾಶಿಗೆ ಯಾವಾಗ ಆರೋಗ್ಯ ಸಮಸ್ಯೆ ಯಾವಾಗ ಬರುತ್ತೆ?

ನಿಮ್ಮ ಜನ್ಮರಾಶಿಯಲ್ಲಿ ಅನುಗ್ರಹಕಾರಕ ಗ್ರಹಗಳು ದುರ್ಬಲವಾಗಿದ್ದಾಗ, ನಿಮ್ಮ ಜನ್ಮಲಗ್ನದಿಂಧ ಅವು ದೂರವಿದ್ದಾಗ ನಿಮಗೆ ರೋಗನಿರೋಧಕ ಶಕ್ತಿ ಕುಂದುತ್ತದೆ.

• Money Zodiac sign

Festivals20, Jul 2020, 2:53 PM

ಚಿಕ್ಕ ವಯಸ್ಸಿನಲ್ಲಿಯೇ ಧನವಂತರಾಗುವ ಅದೃಷ್ಟ ಈ ರಾಶಿಯವರಿಗಿದೆ!

ರಾಶಿಚಕ್ರದಲ್ಲಿ ಪ್ರತಿ ರಾಶಿಯಲ್ಲೂ ಒಂದೊಂದು ವಿಶೇಷತೆ ಇರುತ್ತದೆ. ರಾಶಿ ಮತ್ತು ಅಧಿಪತಿ ಗ್ರಹದ ಆಧಾರದ ಮೇಲೆ ರಾಶಿಯ ಸ್ವಭಾವಗುಣಗಳನ್ನು, ಅದೃಷ್ಟ ಯೋಗಗಳನ್ನು ತಿಳಿಯಬಹುದು. ಧನ ಸಮೃದ್ಧಿ, ಅದೃಷ್ಟ, ಬುದ್ಧಿವಂತಿಕೆ, ಪ್ರಾಮಾಣಿಕತೆ, ಪರಿಶ್ರಮ ಹೀಗೆ ಹಲವು ಗುಣಗಳಲ್ಲಿ ಕೆಲವು ರಾಶಿಯವರು ಭಾಗ್ಯಶಾಲಿಗಳಾಗಿರುತ್ತಾರೆ. ಕೆಲವು ರಾಶಿಯವರು ಉತ್ತಮ ವಾಗ್ಮಿಗಳಾದರೆ, ಕೆಲವರು ಚತುರತೆಯನ್ನು ಹೊಂದಿರುತ್ತಾರೆ. ಹಾಗೆಯೇ ಈ ಕೆಲವು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಧನವಂತರಾಗುವ ಅದೃಷ್ಟವನ್ನು ಹೊಂದಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಆ ರಾಶಿಗಳ ಬಗ್ಗೆ ತಿಳಿಯೋಣ..

Zodiac sign astrology

Festivals18, Jul 2020, 7:51 PM

ಈ ಐದು ರಾಶಿಯವರ ಹೆಂಡತಿಯರು ಅದೃಷ್ಟವಂತರು..!

ಮದುವೆಗೆ ಮುಂಚೆಯೇ ಭಾವಿ ಪತಿ ತಮ್ಮನ್ನು ಜೀವನ ಪರ್ಯಂತ ಪ್ರೀತಿ ಮಾಡುತ್ತಾನೋ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತದೆ. ಎಲ್ಲರ ಬಗ್ಗೆ ತಿಳಿಯದಿದ್ದರೂ ಈ 5 ರಾಶಿಯ ಹುಡುಗರ ಕೈಹಿಡಿಯುವವ ಯುವತಿಯರು ಮಾತು ಪುಣ್ಯ ಮಾಡಿರುವವರು. ಈ ಐದು ರಾಶಿಯವರು ತಮ್ಮ ಮಡದಿಯರನ್ನು ಬಹಳವೇ ಪ್ರೀತಿ ಮಾಡುತ್ತಾರಂತೆ..! ಹಾಗಾದರೆ ಯಾವುವು ಆ ರಾಶಿಗಳು ಎಂಬುದನ್ನು ನೋಡೋಣ…

According to your Zodiac sign this day is good for doing vrat

Festivals18, Jul 2020, 4:32 PM

ನಿಮ್ಮ ರಾಶಿ ನೋಡಿ ವಾರದ ಈ ದಿನವೇ ವ್ರತ ಮಾಡಿ..!

ಪ್ರತಿ ರಾಶಿಗೆ ಅದರದ್ದೇ ಆದ ಗುಣ ಸ್ವಭಾವಗಳಿರುವಂತೆ, ಪ್ರತಿ ರಾಶಿಯವರು ಆರಾಧಿಸಬೇಕಾದ ದೇವರುಗಳು ಬೇರೆ ಬೇರೆ. ಆಯಾ ದೇವರಿಗೆ ಅನುಗುಣವಾಗಿ ಪೂಜೆ, ಮಂತ್ರ, ಉಪಾಸನಾ ಕ್ರಮ ಭಿನ್ನವಾಗಿರುತ್ತದೆ. ಹಾಗೆಯೇ ಪ್ರತಿ ರಾಶಿಯವರಿಗೆ ಶ್ರೇಯಸ್ಸಾಗುವ ದಿನದಂದು ವ್ರತವನ್ನು ಮಾಡಿದರೆ ಶೀಘ್ರ ಫಲಪ್ರಾಪ್ತಿಯಾಗುತ್ತದೆ. ಆಯಾ ರಾಶಿಯವರು ಯಾವ ದಿನದಂದು ವ್ರತ, ಉಪಾಸನೆಗಳನ್ನು ಮಾಡಿದರೆ ಉತ್ತಮ, ಯಶಸ್ಸು, ಕೀರ್ತಿ ಮತ್ತು ಸಮೃದ್ಧಿ ಲಭಿಸುತ್ತದೆ ಎನ್ನುವುದನ್ನು ನೋಡೋಣ.

• Festivals16, Jul 2020, 3:22 PM

ಸೂರ್ಯ ಕಟಕ ರಾಶಿಗೆ ಪ್ರವೇಶ: ನಿಮ್ಮ ಅದೃಷ್ಟ ಹೇಗಿದೆ?

ದಕ್ಷಿಣಾಯನದಲ್ಲಿ ಸೂರ್ಯನ ಚಲನೆ ಕಟಕ ರಾಶೀಯಲ್ಲಿ ಇರುವುದರಿಂದ ಹಲವು ರಾಶಿಗಳ ಅದೃಷ್ಟದಲ್ಲಿ ಏರುಪೇರು ಆಗಲಿದೆ