ಮಿಥುನ : ಆರೋಗ್ಯ ಕಾಳಜಿ ಈ ವರ್ಷದಲ್ಲಿ ಮುಖ್ಯ

By Web DeskFirst Published Nov 8, 2018, 2:59 PM IST
Highlights

ವಿದ್ವಾನ್ ಕಮಲಾಕರ ಭಟ್ ಅವರ ದೀಪಾವಳಿ ವಾರ್ಷಿಕ ಭವಿಷ್ಯದ ಪ್ರಕಾರ ಮಿಥುನ ರಾಶಿ ವಾರ್ಷಿಕ ಫಲ ಹೇಗಿದೆ. 

ರಾಜಕೀಯದಲ್ಲಿ ಅಧಿಕಾರದಲ್ಲಿ ಇರುವವರಿಗೆ ತೊಂದರೆ ಸಾಧ್ಯತೆ. ಕಾಯಿಲೆಗಳ ಉಲ್ಭಣವಾಗಲಿದ್ದು, ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು. ವಿದೇಶಗಳಿಂದ ಬರಬೇಕಾದ ಹಣ ವಾಪಸ್ಸಾಗಿದ್ದು, ಸರಿಯಾದ ಹೂಡಿಕೆಯಿಂದ ಲಾಭ ದೊರಕಲಿದೆ. 

ವಿದ್ಯಾರ್ಥಿಗಳು ಕಂಡ ಕನಸು ನನಸಾಗಿದ್ದು, ಅನುಕೂಲಕರ ಸ್ಥಿತಿ ನಿರ್ಮಾಣವಾಗಲಿದೆ. ಸರಕಾರಿ ಉದ್ಯೋಗದಲ್ಲಿ ಕೆಲವರಿಗಷ್ಟೇ ಅವಕಾಶ ಲಾಭ . ಸ್ತ್ರೀ ಸಂಬಂಧಿ ವಿಚಾರಗಳಲ್ಲಿ ಜಾಗ್ರತೆ ಅಗತ್ಯ. ಹಿರಿಯರು ಧಾರ್ಮಿಕ ಕಾರ್ಯಗಳಲ್ಲಿ ತೊಡಗುವ ಲಕ್ಷಣಗಳಿವೆ. 

ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ಕಪ್ಪು ಹಳದಿ ಬಣ್ಣಗಳಿಂದ ದೂರವಿರಿ. ಚಿತ್ರೋದ್ಯಮ ನಾಟಕ ಇನ್ನಿತರೆ ಕಲಾತ್ಮಕ ಅವಕಾಶಗಳು ಲಭಿಸಲಿದೆ. ಪ್ರಯಾಣದಿಂದ ಖರ್ಚು ಸಾಧ್ಯತೆ. ಕೈಗಾರಿಕೆ ಹಾಗೂ ತಾಂತ್ರಿಕ ವ್ಯವಸ್ಥೆಗಳಲ್ಲಿ ಲಾಭ. ಮೇ ನಂತರ ಪತ್ರಿಕಾ ರಂಗದಲ್ಲಿ ಮುನ್ನಡೆ. 
ಸಾಮಾಜಿಕ ಕಳಕಳಿ ಹೊಂದಿರುವವರಿಗೆ ಗೌರವ ಸಿಗಲಿದೆ. ಉನ್ನತ ವ್ಯಾಸಂಗಕ್ಕೆ ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಿಗಲಿದೆ. ಮಂಗಳವಾರ, ಗುರುವಾರ ಶುಭದಿನ.

ಶುಭ ಸಂಖ್ಯೆ: 1 2 7 9

ವಿದ್ವಾನ್ ಕಮಲಾಕರ ಭಟ್

click me!