ಮಾದಪ್ಪನ ಸನ್ನಿಧಾನದಲ್ಲಿ ನಡೆಯಬೇಕಿದ್ದ ಸಂಪುಟ ಸಭೆ 3ನೇ ಬಾರಿಗೆ ಮುಂದೂಡಿಕೆ?: ಕಾರಣವೇನು?
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಮೂರನೇ ಬಾರಿಗೆ ಮುಂದಕ್ಕೆ ಹೋಗಿದೆ. ಈಗಾಗಲೇ ಜಿಲ್ಲಾಡಳಿತ ಹಾಗೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ದತಾ ಕಾರ್ಯ ಜೋರಾಗಿ ನಡೆದಿತ್ತು.

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಫೆ.12): ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಮೂರನೇ ಬಾರಿಗೆ ಮುಂದಕ್ಕೆ ಹೋಗಿದೆ. ಈಗಾಗಲೇ ಜಿಲ್ಲಾಡಳಿತ ಹಾಗೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ದತಾ ಕಾರ್ಯ ಜೋರಾಗಿ ನಡೆದಿತ್ತು. ಮೂರನೇ ಬಾರಿಗೆ ಸಂಪುಟ ಸಭೆಯ ಬದಲಾದ ಬೆನ್ನಲ್ಲೇ ಸಚಿವ ಸಂಪುಟ ಸಭೆ ಚಾಮರಾಜನಗರದಲ್ಲಿ ನಡೆಯುತ್ತಾ ಅಥವಾ ನಡೆಯೊದಿಲ್ವಾ ಅನ್ನೋ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗ್ತಿದೆ.ಈ ಕುರಿತು ಒಂದು ಸ್ಟೋರಿ ನೋಡಿ.
ಗಡಿ ಜಿಲ್ಲೆ ಚಾಮರಾಜನಗರ ಹೇಳಿ ಕೇಳಿ ಮೊದಲೇ ಹಿಂದುಳಿದ ಜಿಲ್ಲೆ.ಮೂಲಭೂತ ಸೌಕರ್ಯದ ಕೊರತೆ ಸಾಕಷ್ಟಿದೆ.ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಚಾಮರಾಜನಗರದಲ್ಲಿ ಸಚಿವ ಸಂಪುಟ ನಡೆಸಲು ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ಈಗಾಗಲೇ ಮೂರು ಬಾರಿ ದಿನಾಂಕ ಕೂಡ ನಿಗದಿಯಾಗಿತ್ತು. ಆದ್ರೆ ಮೂರು ಬಾರಿಯೂ ಕೂಡ ದಿನಾಂಕ ಬದಲಾಗುತ್ತಲೇ ಇದೆ.ಜಿಲ್ಲೆಯ ಪವಿತ್ರ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. ಜನರು ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ನಿರೀಕ್ಷೆ ಹೊಂದಿದ್ದರು. ಅಲ್ಲದೇ ಜಿಲ್ಲೆಯ ಅಭಿವೃದ್ಧಿ ಸಂಬಂಧ ಈ ಒಂದು ಕ್ಯಾಬಿನೆಟ್ ಸಭೆ ವೇಳೆ ವಿಶೇಷ ಪ್ಯಾಕೇಜ್ ಘೋಷಿಸುವ ಬಗ್ಗೆ ಜನರಲ್ಲಿ ಭರವಸೆಯಿತ್ತು.
ಆದ್ರೆ ಇದೀಗಾ ಮೂರನೇ ಬಾರಿಗೆ ಸಚಿವ ಸಂಪುಟ ಮುಂದೂಡಿಕೆಯಾಗಿರುವುದರಿಂದ ಜಿಲ್ಲೆಗೆ ಸಾಕಷ್ಟು ಅನುದಾನ ಕೊಡುವ ಅನಿವಾರ್ಯತೆ ಎದುರಾಗುವ ದೃಷ್ಟಿಯಿಂದ ಸರ್ಕಾರ ಪದೇ ಪದೇ ದಿನಾಂಕ ಬದಲಾವಣೆ ಮಾಡ್ತಿದೆ. ಇದು ಸರ್ಕಾರ ಚಾಮರಾಜನಗರ ಜಿಲ್ಲೆಯ ಜನರಿಗೆ ಮಾಡ್ತಿರುವ ಮೋಸ ಅಂತಾ ಸಾರ್ವಜನಿಕರು, ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಫೆ 16 ರಂದು ಚಾಮರಾಜನಗರದಲ್ಲಿ ಸಮಾವೇಶ ಹಾಗೂ ಫೆ 17 ರಂದು ಸಚಿವ ಸಂಪುಟ ಸಭೆ ನಡೆಸಲು ದಿನಾಂಕ ಕೂಡ ಪೈನಲ್ ಆಗಿತ್ತು. ಇದಕ್ಕೆ ಮುಂಚೆ ಎರಡು ಬಾರಿ ದಿನಾಂಕ ಕೂಡ ಬದಲಾಗಿತ್ತು. ಇದು ಸೇರಿ ಮೂರನೇ ಬಾರಿಗೆ ದಿನಾಂಕ ಕೂಡ ಬದಲಾವಣೆಯಾಗಿದೆ.
ಗಾಂಜಾ ಸೇವನೆಯ ಅಡ್ಡೆ ಆಯ್ತಾ ಪಾಳು ಬಿದ್ದ ಶಿವನ ದೇವಾಲಯ?: ಇಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲ!
ಮತ್ತೇ ನಮಗೆ ಮಾರ್ಚ್ 8 ರಂದು ಸಚಿವ ಸಂಪುಟ ಸಭೆ ಹಾಗೂ ಮಾರ್ಚ್ 9 ರಂದು ಚಾಮರಾಜನಗರದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಚಾಮರಾಜನಗರ ಡಿಸಿ ಶಿಲ್ಪಾನಾಗ್ ತಿಳಿಸಿದ್ದಾರೆ. ಒಟ್ನಲ್ಲಿ ಚಾಮರಾಜನಗರಕ್ಕೆ ಬಂದ್ರೆ ಅಧಿಕಾರ ಹೋಗುತ್ತೆ ಎಂಬ ಭಯ ರಾಜ್ಯದ ಬಹುತೇಕ ಮುಖ್ಯಮಂತ್ರಿಗಳಿತ್ತು. ಆ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದ ಸಿಎಂ ಸಿದ್ದರಾಮಯ್ಯ ಸಾಕಷ್ಟು ಬಾರಿ ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದಾರೆ. ಪದೇ ಪದೇ ದಿನಾಂಕ ಬದಲಾಗುತ್ತಿರುವುದ್ಯಾಕೆ? ಬಜೆಟ್ ಅಧಿವೇಶನ ಮಾರ್ಚ್‌ನಲ್ಲಿ ನಡೆಯುವ ಸಾಧ್ಯತೆ ಹಿನ್ನಲೆ ಮುಂದೆ ನಿಗಧಿಯಾಗಿರುವ ದಿನಾಂಕದಲ್ಲಾದರೂ ಸಚಿವ ಸಂಪುಟ ನಡೆಯುತ್ತಾ ಅಥವಾ ಇಲ್ವಾ ಅನ್ನೋ ಜಿಜ್ಞಾಸೆ ಎಲ್ಲರನ್ನೂ ಕಾಡ್ತಿರೋದು ಮಾತ್ರ ಸುಳ್ಳಲ್ಲ.